ನಾನೇನಾದ್ರೂ ನಿನ್ನ ಮದ್ವೆಯಾಗಿದ್ರೆ... ನಿವೇದಿತಾ ಹೊಸ ರೀಲ್ಸ್​ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಮೊದಲಿಗಿಂತಲೂ ಹಾಟ್​ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ ನಿವೇದಿತಾ ಗೌಡ.  ದಿನವೂ ಹೊಸ ಹೊಸ ರೀಲ್ಸ್‌ ಮಾಡುತ್ತಿದ್ದಾರೆ.  ನೆಟ್ಟಿಗರು ಕೋಪದಿಂದ ಏನೆಲ್ಲಾ ಹೇಳ್ತಿದ್ದಾರೆ ನೋಡಿ...  
 

Nivedita Gowda has appeared in a hot avatar than before netizens reacts to reels suc

ಬಿಗ್​ಬಾಸ್​ನಿಂದಲೇ ಖ್ಯಾತಿ ಪಡೆದು, ಇದೀಗ ಡಿವೋರ್ಸ್ ಬಳಿಕ ಮತ್ತಷ್ಟು ಹೆಸರು ಮಾಡುತ್ತಿರುವವರೆಂದರೆ ನಿವೇದಿತಾ ಗೌಡ. ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ  ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  

ಅದೇನೇ ಇದ್ದರೂ, ನಿವೇದಿತಾಗೂ ಚೆನ್ನಾಗಿ ಗೊತ್ತು, ಟ್ರೋಲ್​ನಿಂದಲೇ ರೀಲ್ಸ್​ ಮಾಡುವವರ ಜೀವನ ಸಾಗುವುದು ಎನ್ನುವುದು. ಅದೇ ಕಾರಣಕ್ಕೆ ಹೆಚ್ಚಿನ ರೀಲ್ಸ್​ ತಾರೆಯರು ತಮಗೆ ಬಂದಿರುವ ಕೆಟ್ಟ ಕಮೆಂಟ್ಸ್​ಗಳನ್ನು ಡಿಲೀಟ್​ ಮಾಡುವುದಿಲ್ಲ. ಏಕೆಂದರೆ ಅದೇ ಅವರಿಗೆ ಜೀವನ. ಹೆಚ್ಚೆಚ್ಚು ಕೆಟ್ಟ ಕಮೆಂಟ್​  ಪಡೆದರೆ, ಹೆಚ್ಚೆಚ್ಚು ಜನಪ್ರಿಯರಾಗಬಹುದು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದೇ ರೀತಿಯ ಕಮೆಂಟ್​ ಮೂಲಕವೇ ಕೆಲವು ಜನಪ್ರಿಯ ರಿಯಾಲಿಟಿ ಷೋಗಳಲ್ಲಿಯೂ ತಮಗೆ ಸ್ಥಾನ ಸಿಕ್ಕು ಇನ್ನಷ್ಟು ಉತ್ತುಂಗಕ್ಕೆ ಏರಬಹುದು ಎನ್ನುವುದು ರೀಲ್ಸ್​ ತಾರೆಯರಿಗೆ ಚೆನ್ನಾಗಿ ಅರಿವಿದೆ. ಇನ್ನು ನಿವೇದಿತಾ ಅಂತೂ ಮೊದಲೂ ಇಂಥ ಕಮೆಂಟಿಗೆ ತಲೆ ಕೆಡಿಸಿಕೊಂಡವರಲ್ಲ, ಈಗಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್​ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್​

ಇದೀಗ ಎಕ್ಸ್​ಕ್ಯೂಸ್​ ಮೀ ಎನ್ನುತ್ತಾ ಇನ್ನೊಂದು ರೀಲ್ಸ್​ ಮಾಡಿದ್ದಾರೆ. ಮಾಮೂಲಿನಂತೆ ಈ ರೀಲ್ಸ್​ಗೂ ಚಂದನ್​ ಶೆಟ್ಟಿ ಹೆಸರು ಎಳೆದು ತರಲಾಗಿದೆ. ನೆಟ್ಟಿಗನೊಬ್ಬ ಚಂದನ್​ ಶೆಟ್ಟಿ ನಿನ್ನಂಥವಳನ್ನು ಮದ್ವೆಯಾಗಿ ಪಾಪ ಅದ್ಹೇಗೆ ನಾಲ್ಕು ವರ್ಷ ಸಂಸಾರ ಮಾಡಿದ್ನೋ ಗೊತ್ತಿಲ್ಲ, ನಾನೇನಾದ್ರೂ ಮದ್ವೆಯಾಗಿದ್ರೆ ನಾಲ್ಕೇ ದಿನಕ್ಕೆ ಡಿವೋರ್ಸ್​ ಕೊಟ್ಟು ಮನೆಯಿಂದ ಹೊರಹಾಕುತ್ತಿದ್ದೆ ಎಂದಿದ್ದಾರೆ. ಮತ್ತೆ ಕೆಲವರು ಇಂಥ ಹುಚ್ಚು ಇದ್ದವಳು ಮದುವೆಯಾಗಿ ಒಬ್ಬನ ಲೈಫ್​ ಯಾಕೆ ಹಾಳು ಮಾಡ್ಬೇಕಿತ್ತು ಕೇಳಿದ್ದಾರೆ. 

ಹೀಗೆ ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. 

ಚೆಲುವಾದ ಗೊಂಬೆ... ಚಂದನದ ಮಾಜಿ ಗೊಂಬೆ... ಎನ್ನುತ್ತಲೇ ಹಿಂದೆ ಇರೋದು ಯಾರ ಕೈ ಕೇಳೋದಾ ನೆಟ್ಟಿಗರು?

Latest Videos
Follow Us:
Download App:
  • android
  • ios