ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಯಲ್ಲಿ ರಿತ್ವಿಕ್‌ ಕೃಪಾಕರ್‌ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ರಾಮಾಚಾರಿ ಪಾತ್ರ ಹಾಕಿದ್ಮೇಲೆ ಅವರು ಕೆಲ ವಿಷಯಗಳಿಂದ ದೂರ ಆಗಿದ್ದಾರೆ.  

ʼರಾಮಾಚಾರಿʼ ಧಾರಾವಾಹಿಯಲ್ಲಿ ರಾಮಾಚಾರಿ ಪಾತ್ರ ನೋಡಿ ಅನೇಕರು, ಇವರು ರಿಯಲ್‌ ಲೈಫ್‌ನಲ್ಲಿ ಪುರೋಹಿತರಾಗಿರಬಹುದು, ಬ್ರಾಹ್ಮಣ ಆಗಿರಬಹುದು ಎಂದುಕೊಂಡಿದ್ದಾರಂತೆ. ಹೌದು, ಈ ವಿಷಯವನ್ನು ಸ್ವತಃ ರಿತ್ವಿಕ್‌ ಕೃಪಾಕರ್‌ ಅವರೇ ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಪಬ್ಲಿಕ್‌ ಲೈಫ್‌ನಲ್ಲಿ ಇದೆಲ್ಲ ಮಾಡಲ್ಲ! 
“ಅನೇಕರು ನನ್ನ ಬಳಿ ಬಂದು ನೀವು ಪುರೋಹಿತರಾ? ಬ್ರಾಹ್ಮಣರಾ? ಅಂತ ಪ್ರಶ್ನೆ ಮಾಡ್ತಾರೆ. ಈ ರೀತಿ ಪ್ರಶ್ನೆಗಳನ್ನು ಕೇಳ್ತಾರೆ ಅಂದ್ರೆ ಅಲ್ಲಿ ನಾನು, ನನ್ನ ನಟನೆ ಗೆದ್ದಿತು ಅಂತ ಅರ್ಥ. ಇದೇ ಕಾರಣಕ್ಕೆ ನಾನು ಸಾರ್ವಜನಿಕವಾಗಿ ಮಾಂಸಾಹಾರ ತಿನ್ನೋದಿಲ್ಲ, ಪಬ್‌ನಲ್ಲಿ ಹೋಗಿ ಕುಡಿಯೋದಿಲ್ಲ. ನಾನು ಡಯೆಟ್‌ ಮಾಡ್ತೀನಿ, ನಿತ್ಯವೂ ನನಗೆ ನಾನ್‌ವೆಜ್‌ ಬೇಕು. ಸೆಟ್‌ನಲ್ಲಾದರೂ ಕೂಡ ಎಲ್ಲೋ ಮೂಲೆಯಲ್ಲಿ ತಿನ್ನುತ್ತೇನೆ. ಫ್ರೆಂಡ್ಸ್‌ ಜೊತೆ ಪಬ್‌ನಲ್ಲಿ ಕೂರೋದು ಇಲ್ಲ. ವೀಕ್ಷಕರಿಗೆ ರಾಮಾಚಾರಿ ಹೀಗೆಲ್ಲ ಮಾಡ್ತಾನೆ ಅಂದ್ರೆ ಬೇಸರ ಆಗುತ್ತದೆ. ಅವರ ಭಾವನೆಗಳನ್ನು ನಾನು ಹಾಳು ಮಾಡಿದ ಹಾಗೆ ಆಗುತ್ತದೆ. ಅದು ನನಗೆ ಇಷ್ಟ ಇಲ್ಲ” ಎಂದು ರಿತ್ವಿಕ್‌ ಕೃಪಾಕರ್‌ ಹೇಳಿದ್ದಾರೆ.

ಮಹಿಮಾ, ಜೀವಾ ಬಳಿಕ ಮಲ್ಲಿ‌ ಪಾತ್ರಧಾರಿ ರಾಧಾ ಭಗವತಿನೂ ಅಮೃತಧಾರೆಗೆ ಗುಡ್ ಬೈ ಹೇಳ್ತಾರ??

ನನ್ನ ಧರ್ಮ ಬೇರೆ! 
“ನನ್ನ ಧರ್ಮವೇ ಬೇರೆ, ನನಗೆ ಬ್ರಾಹಣ ಸಂಪ್ರದಾಯ ಗೊತ್ತಿಲ್ಲ. ನಾನು ಸಹಕಲಾವಿದ ಹರೀಶ್‌ ಭಟ್‌ ಅವರ ಬಳಿ ಕೇಳಿ ಒಂದಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಉಪನಯನ ಆದವರು ಊಟ ಮಾಡೋವಾಗ ಚಿತ್ರಾಹುತಿ ನೀಡುತ್ತಾರೆ. ಇದನ್ನು ಕೂಡ ಮಾಡೋದು ಕಲಿತೆ. ನಿತ್ಯವೂ ಶ್ಲೋಕಗಳನ್ನು ಬಾಯಿಪಾಠ ಮಾಡಿ ಒಂದೇ ಒಂದು ಟೇಕ್‌ನಲ್ಲಿ ಒಂದೂವರೆ ಪೇಜ್‌ ಶ್ಲೋಕ ಹೇಳುತ್ತಿದ್ದೆ” ಎಂದು ರಿತ್ವಿಕ್‌ ಕೃಪಾಕರ್‌ ಹೇಳಿದ್ದಾರೆ. 

BBK 11: ಭವ್ಯಾ ಗೌಡ ಪರ ಸಂಬಂಧಿಯೂ ಆಗಿರೋ ಸ್ಟಾರ್‌ ನಟಿ ದನಿಯೆತ್ತಿದ್ರೆ, ಕನ್ನಡ ಮಾತಾಡಿದ ತೆಲುಗು ನಟ! ಯಾರದು?

ಜಿಮ್‌, ಡಯೆಟ್‌ ಬೇಕೇ ಬೇಕು! 
ರಿತ್ವಿಕ್‌ ಕೃಪಾಕರ್‌ ಅವರು “ನಾನು ನಿತ್ಯ ವರ್ಕೌಟ್ ಮಾಡಲೇಬೇಕು. ನಾನು ಒಂದು ಹೊತ್ತು ಅನ್ನ ತಿಂದರೂ ಅದನ್ನು ಕರಗಿಸಲು ಒಂದು ವಾರ ಬೇಕು. ನಾನು ಬೇಗ ದಪ್ಪ ಆಗೋದಕ್ಕೆ, ಆಹಾರದ ಕಡೆಗೆ ಸಿಕ್ಕಾಪಟ್ಟೆ ಗಮನ ಕೊಡ್ತೀನಿ. ನಮ್ಮ ಮನೆಯಿಂದ ಒಂದೂವರೆ ಕಿಮೀ ದೂರ ಜಿಮ್‌ಗೆ ನಾನು ಬೈಕ್‌ನಲ್ಲಿ ಹೋಗುತ್ತೇನೆ, ಅದಕ್ಕೋಸ್ಕರ ನಾನು ಕಾರ್‌ ಬಳಸೋದಿಲ್ಲ. ದಾರಿ ಮಧ್ಯೆ ಸಾಕಷ್ಟು ಜನರು ಸೆಲ್ಫಿ ಕೇಳ್ತಾರೆ, ನಮ್ಮ ಸೀರಿಯಲ್‌ ಬಗ್ಗೆ ಮಾತಾಡ್ತಾರೆ, ಇದೆಲ್ಲ ಖುಷಿ ಕೊಡುತ್ತದೆ” ಎಂದು ಹೇಳಿದ್ದಾರೆ.

ಸೀರಿಯಲ್‌ಗಾಗಿ ತಲೆ ಬೋಳಿಸಿದ ಚಾರು; ಜನರು ಬಾಯಿಗೆ ಬಂದಂತೆ ಬೈದ ಘಟನೆ ಬಿಚ್ಚಿಟ್ಟ ಮೌನ ಗುಡ್ಡೆಮನೆ

ತುಂಬ ವಿಭಿನ್ನತೆ ಇದೆ
“ರಾಮಾಚಾರಿ ಧಾರಾವಾಹಿಯಲ್ಲಿ ಪುರೋಹಿತನಾಗಿ ಮದುವೆ ಮಾಡಿಸಿದ್ದೇನೆ, ಲೇಡಿ ಗೆಟಪ್‌ ಹಾಕಿದ್ದೇನೆ, ಡಬಲ್‌ ಶೇಡ್‌ ಮಾಡಿದ್ದೇನೆ, ಡ್ಯಾನ್ಸ್‌ ಮಾಡಲು ಅವಕಾಶ ಸಿಕ್ಕಿದೆ. ಒಟ್ಟಿನಲ್ಲಿ ನಿರ್ದೇಶಕರು ನನಗೆ ಬೇಕಾದಂತಹ ವಿಷಯಗಳನ್ನು ಸೇರಿಸಿ ಸ್ಕ್ರಿಪ್ಟ್‌ ಕೂಡ ರೆಡಿ ಮಾಡಿಸಿದ್ದಾರೆ. ಈ ಅವಕಾಶ ಎಲ್ಲರಿಗೂ ಸಿಗೋದಿಲ್ಲ” ಎಂದು ರಿತ್ವಿಕ್‌ ಕೃಪಾಕರ್‌ ಹೇಳಿದ್ದಾರೆ.

ಅಂದಹಾಗೆ ನನಗೆ ಇನ್ನೂ 26 ವರ್ಷ ವಯಸ್ಸು. ಎಲ್ಲೇ ಹೋದರೂ ಚಾರು ಮೇಡಂ ಎಲ್ಲಿ? ಕರೆದುಕೊಂಡು ಬಂದಿಲ್ವಾ? ನಿಮಗೆ, ಚಾರು ಮೇಡಂಗೆ ಯಾವಾಗ ಮಕ್ಕಳಾಗತ್ತೆ ಅಂತ ಪ್ರಶ್ನೆ ಮಾಡ್ತಾರೆ ಎಂದು ರಿತ್ವಿಕ್‌ ಕೃಪಾಕರ್‌ ಹೇಳಿದ್ದಾರೆ. 

YouTube video player