‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಟ್ರೋಫಿ ಯಾರ ಪಾಲಾಗುತ್ತದೆ ಎಂಬ ಕುತೂಹಲ ಜೋರಾಗ್ತಿದೆ. ಈಗ ಭವ್ಯಾ ಗೌಡಗೆ ಖ್ಯಾತ ನಟಿ ಹಾಗೂ ಅವರ ಪತಿ ಶುಭಾಶಯ ತಿಳಿಸಿ, ಮತಯಾಚನೆ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಇನ್ನೇನು ಗ್ರ್ಯಾಂಡ್ ಫಿನಾಲೆ ಆರಂಭವಾಗಿ ಯಾರು ವಿನ್ ಆಗ್ತಾರೆ ಎನ್ನೋದು ರಿವೀಲ್ ಆಗಬೇಕಿದೆ. ಭವ್ಯಾ ಗೌಡ ಅವರು ಕೂಡ ಆಟದ ಓಟದಲ್ಲಿದ್ದಾರೆ. ಈಗ ಕನ್ನಡ ಚಿತ್ರರಂಗದ ಖ್ಯಾತ ಜೋಡಿಯೊಂದು ಭವ್ಯಾ ಗೌಡಗೆ ಮತ ಹಾಕಿ ಎಂದು ಮನವಿ ಮಾಡಿದೆ.
ನಟಿ ಅಮೂಲ್ಯ ಹೇಳಿದ್ದೇನು?
“ಭವ್ಯಾ ಗೌಡ ಅವರನ್ನು ಕಳೆದ ಎಂಟು ವರ್ಷಗಳಿಂದ ನೋಡುತ್ತಿದ್ದೇನೆ. ಜಗದೀಶ್ ಅವರನ್ನು ಮದುವೆಯಾದನಂತರ ಭವ್ಯಾ ಅವರ ಪರಿಚಯ ಆಯ್ತು. ಭವ್ಯಾ ಗೌಡ ಸಹೋದರಿಯರು ತುಂಬ ಫೋಕಸ್ ಆಗಿದ್ದು, ಶ್ರಮ ಹಾಕುತ್ತಾರೆ. ಒಳ್ಳೆ ಕೆಲಸ ಮಾಡಬೇಕು, ಮನೆಗೆ ಶಕ್ತಿ ಆಗಬೇಕು ಎನ್ನುವ ಆಸೆ ಹೊಂದಿದ್ದಾರೆ. ಆ ಆಸೆ ನೆರವೇರಲಿ, ನನ್ನ ಕಡೆಯಿಂದ ಶುಭವಾಗಲಿ. ಎಲ್ಲರೂ ಮತ ಹಾಕಿ” ಎಂದು ಅಮೂಲ್ಯ ಅವರು ಹೇಳಿದ್ದಾರೆ. ಈ ವಿಡಿಯೋವನ್ನು ಭವ್ಯಾ ಗೌಡ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಕರ್ನಾಟಕದಲ್ಲಿದ್ರೂ ನಾಡಗೀತೆ ಕಲಿತಿಲ್ಲ: ಯಮುನಾ ಆರೋಪಕ್ಕೆ ಗೌತಮಿ ತಿರುಗೇಟು
ಜಗದೀಶ್ ಆರ್ ಚಂದ್ರ ಹೇಳಿದ್ದೇನು?
“ಸಂಬಂಧದಲ್ಲಿ ನನಗೆ ಭವ್ಯಾ ಗೌಡ ತಂಗಿ ಆಗಬೇಕು. ಧಾರಾವಾಹಿ ಇರಬಹುದು ಅಥವಾ ಈಗ ಬಿಗ್ ಬಾಸ್ ಶೋ ಇರಬಹುದು, ತನ್ನ ಶ್ರಮದಿಂದಲೇ ಅವಳು ಇಲ್ಲಿಯವರೆಗೆ ಬಂದಿದ್ದಾಳೆ. ಬಿಗ್ ಬಾಸ್ ಶೋನಲ್ಲಿ ಮಹಿಳೆ ಗೆದ್ದು ಬಹಳ ಸಮಯ ಆಯ್ತು. ಈಗ ಭವ್ಯಾ ಗೆಲ್ಲಬೇಕು ಅಂತ ಆಶಿಸುವೆ. ನಿಮ್ಮೆಲ್ಲರ ಆಶೀರ್ವಾದ ಹೀಗೆ ಮುಂದುವರೆಯಲಿ. ಭವ್ಯಾಗೆ ಮತ ಹಾಕಿ ಅಂತ ಅವಳ ಕುಟುಂಬದವರ ಪರವಾಗಿ ನಾನು ಮತ ಯಾಚಿಸುವೆ” ಎಂದು ಜಗದೀಶ್ ಅವರು ಹೇಳಿದ್ದಾರೆ.
ಕಲಾವಿದರಿಂದಲೂ ಮತಯಾಚನೆ!
ತೆಲುಗು ನಟ ಅರ್ಜುನ್ ಅಂಬಾಟಿ ಕೂಡ ಕನ್ನಡದಲ್ಲಿ ಮಾತನಾಡಿದ್ದು, ಭವ್ಯಾ ಗೌಡಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದ್ದಾರೆ. ಅರ್ಜುನ್ ಅವರು ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ಇನ್ನು ತೆಲುಗು ಬಿಗ್ ಬಾಸ್ 8 ವಿಜೇತ ನಿಖಿಲ್ ಮಲಯಾಕ್ಕಲ್ ಅವರು ಕೂಡ ಭವ್ಯಾಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ʼಗೀತಾʼ ಧಾರಾವಾಹಿ ನಟ ಧನುಷ್ ಗೌಡ, ಬಿಗ್ ಬಾಸ್ ಖ್ಯಾತಿಯ ಸಿರಿ, ರಾಮಾಚಾರಿ ಧಾರಾವಾಹಿ ಖ್ಯಾತಿಯ ರಿತ್ವಿಕ್ ಕೃಪಾಕರ್, ನಟಿ ಆಶಿತಾ, ರಕ್ಷಕ್ ಬುಲೆಟ್, ಜಾಹ್ನವಿ ರಾಯಲ, ಪವಿ ಪೂವಪ್ಪ, ಅಭಿಷೇಕ್ ಶ್ರೀಕಾಂತ್, ಕಾವ್ಯಾ ಶೈವ, ವಾಣಿಶ್ರೀ ಅವರು ಭವ್ಯಾ ಗೌಡಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.
BBK 11: ತ್ರಿವಿಕ್ರಮ್ ಪಕ್ಕಾ ಮಾಸ್ಟರ್‌ಮೈಂಡ್; ಉದಾಹರಣೆ ಸಮೇತ ಬಿಚ್ಚಿಟ್ಟ ಧನರಾಜ್!
ಯಾರು ಗೆಲ್ತಾರೆ?
ಜನವರಿ 26ರಂದು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆ ನಡೆಯುವುದು. ಕಿಚ್ಚ ಸುದೀಪ್ ಅವರು ಮಾಡುವ ಕೊನೆಯ ʼಬಿಗ್ ಬಾಸ್ʼ ಶೋ ನಿರೂಪಣೆ ಇದಾಗಿರಲಿದೆ. ಹೀಗಾಗಿ ವೀಕ್ಷಕರಿಗೂ, ಕಿಚ್ಚ ಸುದೀಪ್ ಅವರಿಗೂ ಇದು ಭಾವುಕ ಕ್ಷಣ ಎನ್ನಬಹುದು. ಅಂದಹಾಗೆ ಮೋಕ್ಷಿತಾ ಪೈ, ರಜತ್, ಹನುಮಂತ, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು ಅವರಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಹಾಗೂ ಆಟ ಶುರುವಾಗಿ ಕೆಲ ವಾರಗಳ ನಂತರ ಎಂಟ್ರಿ ಕೊಟ್ಟಿದ್ದ ಹನುಮಂತ ಅವರು ಗ್ರ್ಯಾಂಡ್ ಫಿನಾಲೆ ಮೆಟ್ಟಿಲೇರಿರೋದು ದಾಖಲೆ ಎನ್ನಬಹುದು. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿಗಳು ಸಹಜವಾಗಿ ಫಿನಾಲೆವರೆಗೆ ದೊಡ್ಮನೆಯಲ್ಲಿದ್ದದ್ದು ತುಂಬ ಅಪರೂಪ. ಹೀಗಾಗಿ ಈ ಬಾರಿ ವೈಲ್ಡ್‌ಕಾರ್ಡ್ ಸ್ಪರ್ಧಿಗಳು ಈ ಬಾರಿ ಟ್ರೋಫಿ ಗೆಲ್ಲುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
