ಮಹಿಮಾ, ಜೀವಾ ಬಳಿಕ ಮಲ್ಲಿ ಪಾತ್ರಧಾರಿ ರಾಧಾ ಭಗವತಿನೂ ಅಮೃತಧಾರೆಗೆ ಗುಡ್ ಬೈ ಹೇಳ್ತಾರ??
ಅಮೃತಧಾರೆ ಧಾರಾವಾಹಿಯ ಸಾರಾ ಅಣ್ಣಯ್ಯ, ಶಶಿ ಹೆಗ್ಡೆ ಬಳಿಕ, ಇದೀಗ ಮಲ್ಲಿ ಪಾತ್ರಧಾರಿ ರಾಧಾ ಭಗವತಿ ಕೂಡ ಸೀರಿಯಲ್ ನಿಂದ ಹೊರ ಬರುವ ಸಂಶಯ ಮೂಡಿದೆ. ಅದಕ್ಕೆ ಕಾರಣ ಏನು ಗೊತ್ತಾ?

ಇತ್ತೀಚೆಗಷ್ಟೇ ಅಮೃತಧಾರೆ ಧಾರಾವಾಹಿಯಲ್ಲಿ (Amrithadhare Serial) ಮಹಿಮಾ ಹಾಗೂ ಜೀವಾ ಪಾತ್ರಧಾರಿಗಳ ಬದಲಾವಣೆಯಿಂದ ಜನರಿಂದ ಬೇಸರ ಮೂಡಿತ್ತು, ಇದೀಗ ಅಮೃತಧಾರೆಯ ಮತ್ತೊಬ್ಬ ನಟಿ ಕೂಡ ಸೀರಿಯಲ್ ಗುಡ್ ಬೈ ಹೇಳಿ, ಬೇರೊಂದು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುವ ಸಂಶಯ ವೀಕ್ಷಕರಲ್ಲಿ ಮೂಡಿದೆ.
ಆ ಪಾತ್ರಧಾರಿ ಬೇರಾರು ಅಲ್ಲ ಮಲ್ಲಿ ಎನ್ನುವ ಮುಗ್ಧ ಪಾತ್ರದ ಮೂಲಕ ಜನಮನ ಗೆದ್ದ ನಟಿ ರಾಧಾ ಭಗವತಿ (Radha Bhagavati) ಶೀಘ್ರದಲ್ಲೇ ಅಮೃತಧಾರೆ ಧಾರಾವಾಹಿಯಿಂದ ಹೊರನಡೆಯಲಿದ್ದಾರೆ ಎನ್ನುವ ಕುರಿತು ಸಂಶಯ ಮೂಡುತ್ತಿದೆ. ಇದಕ್ಕೆ ಕಾರಣವೂ ಇದೆ, ಅದು ಏನು ಅಂತ ತಿಳಿದುಕೊಳ್ಳಲು ಮುಂದೆ ಓದಿ.
ಅಮೃತಧಾರೆ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಹಿಮಾ ಹಾಗೂ ಜೀವಾ ಪಾತ್ರದಲ್ಲಿ ನಟಿಸಿದ್ದ ಸಾರಾ ಅಣ್ಣಯ್ಯ ಹಾಗೂ ಶಶಿ ಹೆಗ್ಡೆ ಕೂಡ ಜನಕ್ಕೆ ಇಷ್ಟವಾಗಿದ್ದರು. ಆದರೆ ಈಗ ಪಾತ್ರಧಾರಿಗಳು ಬದಲು ಜೊತೆಗೆ ಪಾತ್ರವೂ ಬದಲಾಗಿದೆ.
ಅದೇ ರೀತಿ ಈಗಷ್ಟೇ ಗಂಡನ ಮತ್ತೊಂದು ಮುಖವನ್ನು ಮಲ್ಲಿ ಅರಿತಿದ್ದಳು. ಒಂದು ಸಲ ಗಂಡ ಮಾಡಿದ ತಪ್ಪನ್ನು ಕ್ಷಮಿಸಿದ್ದ ಮಲ್ಲಿ, ಇದೀಗ ಮತ್ತೊಂದು ಸಲವೂ ತನಗೆ ಮೋಸ ಮಾಡ್ತಿದ್ದಾನೆ ಅನ್ನೋದನ್ನು ಪ್ರತ್ಯಕ್ಷ ಕಂಡ ನಂತರ ಮೊದಲಿಗೆ ಅತ್ತು ತನ್ನನ್ನು ತಾನು ಬೈದು ಕೊಂಡರೆ, ಕೊನೆಗೆ ಇಲ್ಲ ನಾನೇ ಬದಲಾಗಬೇಕು ಜೈದೇವ್ ಗೆ ಸರಿಯಾದ ಪಾಠ ಕಲಿಸಬೇಕು ಎಂದು ಅಂದುಕೊಂಡಿದ್ದರು.
ಇತ್ತೀಚೆಗೆ ಪ್ರಸಾರವಾದ ಪ್ರೊಮೋದಲ್ಲಿ ಮಲ್ಲಿ ಇದ್ದಕ್ಕಿದ್ದಂತೆ ತನ್ನ ತಾತನ ಮನೆಗೆ ಹೋಗಿದ್ದಾಳೆ. ಭೂಮಿಕಾ ಮಲ್ಲಿ ಜೊತೆ ಫೋನಲ್ಲಿ ಮಾತನಾಡುತ್ತಾ, ನೀನು ಅಲ್ಲಿ ಆರಾಮಾಗಿರು ಇಲ್ಲಿನ ಬಗ್ಗೆ ಟೆನ್ಶನ್ ಬೇಡ ಎಂದಿದ್ದಾಳೆ. ಅಂದರೆ ಸದ್ಯದಲ್ಲಿ ಮಲ್ಲಿ ಪಾತ್ರಧಾರಿ ಬದಲಾಗ್ತಾರೆ ಎನ್ನುವ ಸೂಚನೆ ಸಿಕ್ಕಿದೆ.
ಪಾತ್ರ ಬದಲಾವಣೆ ಬಗ್ಗೆ ಮತ್ತೆ ಸಂಶಯ ಮೂಡಲು ಮತ್ತೊಂದು ಕಾರಣ ಏನಂದರೆ ರಾಧಾ ಭಗವತಿ ಸದ್ಯದಲ್ಲಿ ಕಲರ್ಸ್ ನಲ್ಲಿ ಆರಂಭವಾಗಲಿರುವ ಭಾರ್ಗವಿ LLB (Bhargavi LLB) ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಸೀರಿಯಲ್ ಪ್ರೊಮೊ ಕೂಡ ಸದ್ದು ಮಾಡ್ತಿದೆ. ಹೊಸ ಸೀರಿಯಲ್ ನಲ್ಲಿ ನಾಯಕಿಯಾದರೆ ಖಂಡಿತವಾಗಿಯೂ ಮಲ್ಲಿ ಪಾತ್ರಕ್ಕೆ ರಾಧಾ ಗುಡ್ ಬೈ ಹೇಳೋದು ಖಚಿತಾ.
ಈ ಮೊದಲು ರಾಧಾ ಕಲರ್ಸ್ (Colors Kannada) ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿಯಲ್ಲಿ ತಂಗಿ ಶ್ರುತಿ ಪಾತ್ರದಲ್ಲಿ ನಟಿಸಿದ್ದರು. ಆ ಸೀರಿಯಲ್ ಅರ್ಧಕ್ಕೆ ಬಿಟ್ಟು ಅಮೃತಧಾರೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ನಾಯಕಿಯಾಗಿ ನಟಿಸುವ ಅವಕಾಶ ಬಂದಿದೆ, ಅಂದ್ರೆ ಖಂಡಿತವಾಗಿಯೂ ಇದು ಅವರಿಗೆ ಸಿಕ್ಕಂತಹ ಯಶಸ್ಸು.
ಇನ್ನು ರಾಧಾ ಭಗವತಿ ಕನ್ನಡ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚುತ್ತಿದ್ದು, ಒಂದ್ಸಲ ಮೀಟ್ ಮಾಡೋಣ, ಅಪಾಯವಿದೆ ಎಚ್ಚರಿಕೆ ಹಾಗೂ ವಸಂತಕಾಲದ ಹೂವುಗಳು ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಅಪಾಯವಿದೆ ಎಚ್ಚರಿಕೆ ಪ್ರೊಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.