ಎರಡು ವರ್ಷಗಳ ಕಾಲ ಟಿಆರ್‌ಪಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ 'ಪುಟ್ಟಕ್ಕನ ಮಕ್ಕಳು' ಸೀರಿಯಲ್, ಇತ್ತೀಚಿನ ಸಮಯ ಬದಲಾವಣೆಯ ನಂತರ ಟಾಪ್‌ ಲಿಸ್ಟ್ ನಿಂದ ಕೆಳಗಿಳಿದಿದೆ. ಈ ಬದಲಾವಣೆ ವೀಕ್ಷಕರಿಗೆ ಸರಿ ಹೊಂದುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಶುರುವಾಗಿ ಎರಡು ವರ್ಷಕ್ಕೂ ಹೆಚ್ಚು ಕಾಲವಾಯಿತು. ಈ ಸೀರಿಯಲ್‌ ಬಂದ ಲಾಗಾಯ್ತಿನಿಂದ ಯಾವತ್ತೂ ಟಿಆರ್‌ಪಿ ರೇಸ್‌ನಲ್ಲಿ ಹಿಂದುಳಿದದ್ದಿಲ್ಲ. ನಂ.1 ತಪ್ಪಿದರೆ ಎರಡು ಅಥವಾ ಮೂರನೇ ಸ್ಥಾನ. ಅದರಿಂದಾಚೆ ಹೋದ ಉದಾಹರಣೆಯೇ ಇಲ್ಲ. ಇದಕ್ಕೆ ಸಿಕ್ಕಿರೋ ಸ್ಲಾಟ್ ಬಹಳ ಚೆನ್ನಾಗಿತ್ತು. ಅದಕ್ಕೆ ತಕ್ಕ ನಟನೆ, ಗಟ್ಟಿ ಕಥೆ, ಒಳ್ಳೆಯ ಕಾನ್ಸೆಪ್ಟ್‌ ಎಲ್ಲವೂ ಈ ಸೀರಿಯಲ್‌ನಲ್ಲಿತ್ತು. ಹಳ್ಳಿಯಲ್ಲಿ ಮೆಸ್‌ ನಡೆಸೋ ಮೂರು ಹೆಣ್ಣುಮಕ್ಕಳ ಒಂಟಿ ತಾಯಿ ಪುಟ್ಟಕ್ಕ ಮತ್ತವಳ ಸಂಸಾರ, ಮಕ್ಕಳ ಬದುಕು ಇತ್ಯಾದಿಗಳ ಸುತ್ತ ಈ ಸೀರಿಯಲ್ ಇತ್ತು. ಗ್ರಾಮೀಣ ಭಾಗ ಹಾಗೂ ಸಿಟಿ ಸೆಂಟರ್‌ಗಳಲ್ಲಿ ಇದಕ್ಕೆ ಉತ್ತಮ ಟಿಆರ್‌ಪಿ ಇತ್ತು. ಇತ್ತೀಚೆಗೆ ಈ ಸೀರಿಯಲ್‌ನ ಸಮಯ ಬದಲಾಯ್ತು. ಈ ಸೀರಿಯಲ್ ಜಾಗಕ್ಕೆ 'ಅಣ್ಣಯ್ಯ' ಅನ್ನೋ ಅಣ್ಣನ ಪ್ರಾಮುಖ್ಯತೆ ಹೇಳುವ ಸಿನಿಮೀಯ ಶೈಲಿಯ ಸೀರಿಯಲ್‌ ಬಂತು. ಅದರ ಪರಿಣಾಮ ಈ ಸೀರಿಯಲ್ ಸಮಯ ಬದಲಾಯ್ತು. ಈ ಹಿಂದೆ 7.30ಗೆ ಪ್ರಸಾರ ಆಗುತ್ತಿದ್ದ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌, ಕಳೆದೊಂದು ವಾರದಿಂದ 6.30ಕ್ಕೆ ಪ್ರಸಾರವಾಗ್ತಿದೆ. ಈ ಟೈಮಿಂಗ್‌ ಯಾಕೋ ಈ ಸೀರಿಯಲ್ ವೀಕ್ಷಕರಿಗೆ ಸೆಟ್ ಆದ ಹಾಗಿಲ್ಲ. ಪರಿಣಾಮ ಸೀರಿಯಲ್‌ ಟಿಆರ್‌ಪಿಯ ಟಾಪ್‌ ಲಿಸ್ಟ್ ನಿಂದಲೇ ಮಂಗಮಾಯವಾಗಿದೆ.

Amrutadhare Serial: ಮುಂಚೆಯೇ ಗೆಸ್‌ ಮಾಡಿದ್ರು ವೀಕ್ಷಕರು, ಆನಂದ್ ಕೋಮಾಕ್ಕೆ ಹೋಗೋದು ಗ್ಯಾರಂಟಿ!

 ಇನ್ನು ಈ ವಾರದ ಕನ್ನಡ ಸೀರಿಯಲ್‌ಗಳ ಟಿಆರ್‌ಪಿ ಲಿಸ್ಟ್ ಅನ್ನು ಗಮನಿಸಿದರೆ ಕಳೆದ ಎರಡು ವರ್ಷಗಳಿಂದ ‘ಪುಟ್ಟಕ್ಕನ ಮಕ್ಕಳು’ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿತ್ತು. ಹೊಸದಾಗಿ ‘ಲಕ್ಷ್ಮೀ ನಿವಾಸ’ ಸೀರಿಯಲ್‌ ಶುರುವಾದಾಗಲೂ ಈ ಸೀರಿಯಲ್ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿತ್ತು. ಆದರೆ ರಾತ್ರಿ 7.30ಗೆ ಪ್ರಸಾರ ಆಗುತ್ತಿದ್ದ ಈ ಸೀರಿಯಲ್‌ನ ಟೈಮಿಂಗ್ ಬದಲಾಯಿಸಿದ ನಂತರದಲ್ಲಿ ಇದು ಮಾತ್ರವಲ್ಲದೇ ಬೇರೆ ಧಾರಾವಾಹಿಗಳ ಟಿಆರ್‌ಪಿ ಕೂಡ ಬದಲಾಗಿದೆ. ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಆಗ್ತಿದ್ದ ಟೈಮ್‌ಗೆ ‘ಅಣ್ಣಯ್ಯ’ ಸೀರಿಯಲ್‌ ಪ್ರಸಾರ ಆಗ್ತಿದೆ. ವಿಕಾಶ್ ಉತ್ತಯ್ಯ, ನಾಗಶ್ರೀ, ನಾಗೇಂದ್ರ ಶಾ, ನಿಶಾ ರವಿಕೃಷ್ಣನ್ ನಟಿಸುತ್ತಿರುವ ಈ ಹೊಸ ಧಾರಾವಾಹಿಗೆ 7 ಟಿಆರ್‌ಪಿ ಸಿಕ್ಕಿದೆ. ನಂಬರ್‌ 1 ಟಿಆರ್‌ಪಿ ಪಡೆಯುತ್ತಿದ್ದ ಸೀರಿಯಲ್‌ ಪ್ಲೇಸ್‌ಗೆ ಬಂದರೂ ಇದಕ್ಕೆ ಮೊದಲ ಸ್ಥಾನ ಬಂದಿಲ್ಲ. ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ನಂ 1 ಸ್ಥಾನ ಪಡೆದಿದೆ. ಇದು 7.3 ಟಿಆರ್‌ಪಿ ಪಡೆದು, ನಂ 1 ಆಗಿ ಹೊರಹೊಮ್ಮಿದೆ. ಅಣ್ಣಯ್ಯನಿಗೆ ಸೆಕೆಂಡ್‌ ಪ್ಲೇಸ್ ಬಂದಿದೆ. ಇನ್ನು ‘ಶ್ರಾವಣಿ ಸುಬ್ರಹ್ಮಣ್ಯ’ ಸೀರಿಯಲ್‌ 6.9 ಟಿಆರ್‌ಪಿ ಬಂದಿದೆ. ಜೀ ಕನ್ನಡದ ‘ಸೀತಾರಾಮ’ ಸೀರಿಯಲ್‌ಗೆ 6.2, ‘ಅಮೃತಧಾರೆ’ ಧಾರಾವಾಹಿಗೆ 6 ಟಿಆರ್‌ಪಿ ಸಿಕ್ಕಿದೆ.


ನೇಹಾ ಗೌಡ ಸೀಮಂತಕ್ಕೆ ಪತಿ ಚಂದು ಜೊತೆ ಹೊಟ್ಟೆ ಹೊತ್ತು ಬಂದ ಚಿನ್ನು ಉರಫ್ ಕವಿತಾ!

ಈ ಬಾರಿ ಮದುವೆಯ ಇಂಟರೆಸ್ಟಿಂಗ್‌ ಎಪಿಸೋಡ್‌ಗಳಿದ್ದ ಕಾರಣಕ್ಕೆ ‘ರಾಮಾಚಾರಿ’ ಸೀರಿಯಲ್‌ 6.4 ಟಿಆರ್‌ಪಿ ಪಡೆದಿದೆ. ಹೈಡ್ರಾಮಾವಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ಗೆ 6.3 ಟಿಆರ್‌ಪಿ ಬಂದಿದೆ. ಇನ್ನು ಈ ಹಿಂದೆ ನಂ. 1 ಸ್ಥಾನದಲ್ಲಿದ್ದ 'ಪುಟ್ಟಕ್ಕನ ಮದುವೆ' ಸೀರಿಯಲ್‌ ರೇಟಿಂಗ್‌ ಈ ಬಾರಿ 5.2 ಕ್ಕೆ ಇಳಿದಿದೆ. ಇದು ನಿರೀಕ್ಷಿತವೇ ಆಗಿತ್ತು. ಆದರೂ ತಮ್ಮ ನೆಚ್ಚಿನ ಸೀರಿಯಲ್‌ ಟೈಮಿಂಗ್ ಬದಲಿಸಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಆದರೆ ಇದರ ಕಥೆ ಕಥೆ ಚೆನ್ನಾಗಿರುವ ಕಾರಣ ಇದಕ್ಕೆ ಮುಂದೆ ಉತ್ತಮ ಟಿಆರ್‌ಪಿ ಪಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

View post on Instagram