ಜೀ ಕನ್ನಡದ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಆನಂದ್‌ನ ಪಾತ್ರಕ್ಕೆ ಅಪಾಯ ಎದುರಾಗಿದ್ದು, ಗೌತಮ್‌ನ ಸಹೋದರ ಜಯದೇವ್ ಆನಂದ್‌ನ ಮೇಲೆ ಹಲ್ಲೆ ಮಾಡಿಸಿದ್ದಾನೆ. ಈ ಹಿನ್ನೆಯಲ್ಲಿ ವೀಕ್ಷಕರು ಸಖತ್ ಶಾರ್ಪ್ ಮತ್ತು ಮುಂದೇನಾಗಬಹುದು ಎಂದು ಈಗಾಗಲೇ ಊಹಿಸಲು ಶುರು ಮಾಡಿದ್ದಾರೆ. ಆದರೆ ಸೀರಿಯಲ್‌ ತಂಡ ಮಾತ್ರ ವೀಕ್ಷಕರ ಊಹೆಗಳಿಗೆ ತಕ್ಕಂತೆ ಚಮಕ್ ಕೊಡುವ ಯೋಜನೆಯಲ್ಲಿ ಇದ್ದಾರೆ.

ಜೀ ಕನ್ನಡದ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಬಿಲಿಯನೇರ್‌ ಗೌತಮ್ ದಿವಾನ್‌ನ ಜೀವದ ಗೆಳೆಯ ಆನಂದ್ ಡೇಂಜರ್‌ನಲ್ಲಿದ್ದಾನೆ. ತನ್ನೆಲ್ಲ ಗುಟ್ಟು ಆನಂದ್‌ಗೆ ಗೊತ್ತಾಗಿದೆ ಅನ್ನೋ ಕಾರಣಕ್ಕೆ ಗೌತಮ್‌ ಸಹೋದರ ಜಯದೇವ್, ಆನಂದ್‌ನ ಕೊಲೆ ಮಾಡಿಸಲು ಮುಂದಾಗಿದ್ದಾನೆ. ಆನಂದ್‌ ತನ್ನ ಹೆಂಡ್ತಿಗೆ ಬಾಯ್‌ ಮಾಡಿ ಇನ್ನೇನು ಆಫೀಸ್‌ಗೆ ಹೋಗಲು ಕಾರ್‌ ಹತ್ತಬೇಕು ಅನ್ನುವಷ್ಟರಲ್ಲಿ ವೇಗವಾಗಿ ಬಂದ ಗಾಡಿಯೊಂದು ಆನಂದ್‌ಗೆ ಢಿಕ್ಕಿ ಹೊಡೆದಿದೆ. ಇದನ್ನೆಲ್ಲ ಅವನ ಹೆಂಡ್ತಿ ನೋಡ್ತನೇ ಇದ್ದಾಳೆ. ಗಾಡಿ ಗುದ್ದಿದ ರಭಸಕ್ಕೆ ಆನಂದ್ ನೆಲದ ಮೇಲೆ ಬಿದ್ದಿದ್ದಾನೆ. 'ಜೈದೇವ್ ಮುಖವಾಡ ಕಳಚೋ ಮೊದಲೇ ಅಪಾಯಕ್ಕೆ ಸಿಲುಕಿದ್ದಾನೆ ಆನಂದ್‌' ಅನ್ನೋ ಕ್ಯಾಪ್ಶನ್‌ನಡಿ ಜೀ ಕನ್ನಡ ಈ ಸೀರಿಯಲ್ ಪ್ರೋಮೋ ಪ್ರಸಾರ ಮಾಡಿದೆ. ಸೋ ನ್ಯಾಚುರಲೀ ಈಗ ವೀಕ್ಷಕರ ಮುಂದಿರುವ ದೊಡ್ಡ ಪ್ರಶ್ನೆ ಏನಪ್ಪಾ ಅಂದರೆ ಆನಂದ್ ಬದುಕ್ತಾನಾ? ಇಲ್ಲವಾ? ಅನ್ನೋದು. ಜಯದೇವ್ ಈ ಹಿಂದೆ ಪಾರ್ಥನನ್ನು ಕೊಲೆ ಮಾಡಲು ನೋಡಿದ್ದ, ಆದರೆ ಗೌತಮ್ ಪಾರ್ಥನನ್ನು ಬಚಾವ್ ಮಾಡಿದ್ದ. ಈಗ ಜಯದೇವ್ ಕರ್ಮಕಾಂಡ ಎಲ್ಲವೂ ಆನಂದ್‌ಗೆ ಗೊತ್ತಾಗಿದೆ. ಎಲ್ಲ ವಿಷಯ ಗೌತಮ್‌ಗೆ ಗೊತ್ತಾಗಬಾರದು ಅಂತ ಜಯದೇವ್ ಆನಂದ್‌ ಕೊಲೆ ಮಾಡಲು ಮುಂದಾಗಿದ್ದಾನೆ. 

ಮಜಾ ಅಂದರೆ ಈ ಸೀರಿಯಲ್ ವೀಕ್ಷಕರು ಸಖತ್ ಶಾರ್ಪ್. ಅವರು ಮೊದಲೇ ಇದನ್ನೆಲ್ಲ ಗೆಸ್ ಮಾಡಿ ಬಿಟ್ಟಿದ್ದಾರೆ. ಈ ಪ್ರೋಮೋ ಬರ್ತಿದ್ದ ಹಾಗೆ 'ಈಗ ಆನಂದ್ ಕೋಮಾಕ್ಕೆ ಹೋಗೋದು ಗ್ಯಾರಂಟಿ' ಅನ್ನೋ ಮಾತನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಹಾಕಿದ್ದಾರೆ. ಈ ಸೋಷಿಯಲ್ ಮೀಡಿಯಾ ಬಂದಮೇಲೆ ಸೀರಿಯಲ್ ಟೀಮ್‌ಗೆ ಈ ಪ್ರೋಮೋಗಳು, ಕಾಮೆಂಟ್‌ಗಳೆಲ್ಲ ಪಾಸಿಟಿವ್ ನೆಗೆಟಿವ್ ಎರಡೂ ಆಗಿ ಪರಿಣಾಮ ಬೀರ್ತಿವೆ. ಒಂದು ಕಡೆ ವೀಕ್ಷಕರ ಗೆಸ್‌ ಏನಿದೆಯೋ ಅದಕ್ಕೆ ವಿರುದ್ಧವಾದ ಕಥೆ ಅವರಿಂದ ಬರಬೇಕು. ಗೆಸ್‌ ಮಾಡಿದಂತೆ ಕಥೆ ಬಂದರೆ ಅದರಲ್ಲೊಂದು ಸಸ್ಪೆನ್ಸ್ ಇರೋದಿಲ್ಲ. ಆದರೆ ಅಲ್ಲೊಂದು ಚಮಕ್‌ ಕೊಡಲೇ ಬೇಕಾಗುತ್ತದೆ. ಆದರೆ ಎಲ್ಲವನ್ನೂ ಗೆಸ್‌ ಮಾಡೋ ಈ ವೀಕ್ಷಕರಿಗೆ ಚೆನ್ನಾಗಿ ನಾಟೋ ಹಾಗೆ ಚಮಕ್ ಕೊಡೋದು ಅಷ್ಟು ಈಸಿ ಅಲ್ಲ.

Ramachari Serial: ರಾಮಾಚಾರಿಗೆ ರಾಕಿ ಕಟ್ಟಿದ ರೀಲ್ ಲೈಫ್ ತಂಗಿ, ಗಿಫ್ಟ್ ಕೊಟ್ಟಿದ್ದಕ್ಕೆ ಫುಲ್ ಖುಷ್!

ಸದ್ಯ ಈ ಪ್ರೋಮೋಗೆ ಥರಾವರಿ ಕಾಮೆಂಟ್‌ಗಳು ಬಂದಿವೆ. ಹೆಚ್ಚಿನವರು ಇದನ್ನು ಮೊದಲೇ ಗೆಸ್ ಮಾಡಿದ್ವಿ. ಈಗ ಆನಂದ್ ಕೋಮಾಕ್ಕೆ ಹೋಗ್ತಾನೆ, ನೋಡಿ ಎಂದು ಕೆಲವೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಆದರೆ ಕೆಲವರಿಗೆ ಆನಂದ್ ಪಾತ್ರವನ್ನೇ ಕೊನೆ ಮಾಡ್ತಾರ ಅನ್ನೋ ಭಯ ಶುರುವಾಗಿದೆ. ಆನಂದ್ ಪಾತ್ರವನ್ನು ಕೊನೆ ಮಾಡಿದ್ರೆ ಈ ಸೀರಿಯಲ್‌ಗೆ ಬೆಲೆನೇ ಇರಲ್ಲ ಅಂತೊಬ್ರು ಭಯದಲ್ಲಿ ಕಾಮೆಂಟ್ ಮಾಡಿದ್ದಾರೆ. 'ಆನಂದ ಗೆ ಕೋಮಾ ಗೆ ಕಳುಸ್ತಾರೆ ಡೈರೆಕ್ಟರ್ ಪಕ್ಕಾ ಮತ್ತೆ ವಿಲನ್ ಗಳ ಆರ್ಭಟ , ಭೂಮಿ ಪೂರ್ತಿ ಸೈಲೆಂಟ್, ಡುಮ್ಮ ಸರ್ ಕುಟುಂಬ ಕಾಪಾಡೊದು ಅಷ್ಟೆ, ಶಾಕುಂತಲ ಅಕ್ಕ ತಂಗಿ ಮಧ್ಯ ಜಗಳ ತರೋದು ಅಷ್ಟೆ ....ಬರ್ತಾ ಈ ಧಾರಾವಾಹಿಯನ್ನ ಹಾಳು ಮಾಡ್ತಾ ಇದ್ದಾರೆ ಮುಂಚೆ ಇದ್ದ ಹಾಗೆ ಇಲ್ಲ' ಅನ್ನೋ ಕಾಮೆಂಟ್ ಅನ್ನು ಮತ್ತೊಬ್ಬರು ಬಹಳ ಗರಂ ಆಗಿ ಪೋಸ್ಟ್ ಮಾಡಿದ್ದಾರೆ. 


ಸೀತಾರಾಮ ಸೀರಿಯಲ್‌: ವೀಕ್ಷಕರ ತಲೆಗೆ ಹುಳ ಬಿಡ್ತಿರೋ ಡಾ ಮೇಘಶ್ಯಾಮ್! ಇಲ್ಲೊಂದು ಸಮಸ್ಯೆ ಇದೆ ಅಂತಿರೋದ್ಯಾಕೆ ನೆಟ್ಟಿಗರು?

ಒಟ್ಟಾರೆ ಮುಂದಾಗೋದನ್ನು ವೀಕ್ಷಕರು ಮೊದಲೇ ಗೆಸ್ ಮಾಡಿದ್ದಾರೆ. ಈ ಸೀರಿಯಲ್ ಟೀಮ್‌ ಯಾವ ಕಾರ್ಡ್ ಪ್ಲೇ ಮಾಡುತ್ತೆ ಅನ್ನೋದೆ ಸದ್ಯದ ಕುತೂಹಲ. ಈ ಸೀರಿಯಲ್‌ನಲ್ಲಿ ಜೈದೇವ್ ಪಾತ್ರವನ್ನು ರಣವ್ ನಟಿಸಿದ್ರೆ, ಆನಂದ್ ಪಾತ್ರದಲ್ಲಿ ಆನಂದ್ ನಟಿಸುತ್ತಿದ್ದಾರೆ.

View post on Instagram