ಜಾಗ ಬದಲಾದರೂ ತಿನ್ನೋದು ಅನ್ನಾನೇ ಅಲ್ವಾ; ಆಕಾಶ್ ಮಾತಿಗೆ ಕಕ್ಕಾಬಿಕ್ಕಿಯಾದ ಸ್ನೇಹಿತ!

 ಆಕಾಶ್ 'ಜಾಗ ಬದಲಾದರೂ ತಿನ್ನೋದು ಅನ್ನಾನೇ ಅಲ್ವಾ? ಎಲ್ಲಿ ತಿಂದ್ರೆ ಏನು? ನಾನು ಇಷ್ಟಪಟ್ಟು ಮದ್ವೆ ಆಗಿಲ್ಲ, ನಂಗೆ ಅವ್ಳು ನನ್ನ ಹೆಂಡ್ತಿ ಅಂತ ಅನ್ನಿಸ್ತಿಲ್ಲ. ನಂಗೆ ಇಷ್ಟ ಇಲ್ದೇ ಇರೋಳ ಜತೆ ನಾನು ಹೇಗೋ ಸಂಸಾರ ಮಾಡ್ಲಿ?' ಎಂದು ಕೇಳುತ್ತಾನೆ. 

Pushpa husband akash eats on roadside in Colors kannada serial brundavana srb

ಕಲರ್ಸ್ ಕನ್ನಡದ ಬೃಂದಾವನ ಸೀರಿಯಲ್‌ನಲ್ಲಿ ಅದ್ದೂರಿ ಮದುವೆ ಮುಗಿದಿದೆ. ಆದರೆ, ಮದುವೆ ಬಳಿಕ ಆಕಾಶ್ ಹೆಂಡ್ತಿ ಪುಷ್ಪಾ ಜೀವನದಲ್ಲಿ ಮಾತ್ರ ನೆಮ್ಮದಿ ಇಲ್ಲ ಎನ್ನುವಂತಾಗಿದೆ. ಗಂಡ ಆಕಾಶ್ ಫಸ್ಟ್ ನೈಟ್ ದಿನ ಕಾರ್ಪೆಟ್ ಮೇಲೆ ಮಲಗಿ ನಿದ್ರೆ ಹೋಗಿದ್ದಾನೆ. ಪುಷ್ಪಾ ಗಂಡನ ಪಕ್ಕದಲ್ಲಿ ಕುಳಿತು ರಾತ್ರಿ ಕಳೆದಿದ್ದಾಳೆ. ಮರುದಿನ ಆಕಾಶ್ ಸ್ನೇಹಿತನ ಜತೆ ಫುಟ್‌ಪಾತ್ ಮೇಲೆ ಬೈಕ್‌ನಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದರೆ ಇತ್ತ ಪುಷ್ಪಾ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ. ಅವಳನ್ನು ಮನೆಯವರು ಸಮಾಧಾನ ಮಾಡುತ್ತಿದ್ದಾಳೆ. 

ಆಕಾಶ್ ಬೀದಿಯಲ್ಲಿ ನಿಂತು ತಿಂಡಿ ತಿನ್ನುತ್ತಿದ್ದರೆ ಆತನ ಸ್ನೇಹಿತ 'ಅಲ್ವೋ ಆಕಾಶ್, ನೀನು ಹೀಗೆ ಫೂಟ್‌ ಪಾತ್‌ನಲ್ಲಿ ತಿನ್ನೋದು ನೋಡ್ತಿದ್ದರೆ ತುಂಬಾ ನೋವಾಗುತ್ತೆ ಕಣೋ. ಆಗರ್ಭ ಶ್ರೀಮಂತ್ರ ಮನೆ ಹುಡ್ಗ ನೀನು, ಹೀಗೆ ಅನಾಥ್ರ ತರ ರೋಡ್‌ಸೈಡ್ ತಿನ್ನೋದು ಅಂದ್ರೇನೋ? ನೀನು ಇಲ್ಲಿ ಬಂದು ತಿಂಡಿ ತಿಂತಾ ಇದೀಯ, ಅಲ್ಲಿ ಬಾಬಿ ನಿನ್ನ ಕಾಯ್ತಾ ಇರಲ್ವೋನೋ? ನಿನ್ ಬಿಟ್ಟು ಅವ್ಳು ಹೇಗೋ ತಿಂಡಿ ತಿಂತಾಳೆ? ನಿಂಗೆ ಇಷ್ಟ ಇಲ್ಲ ಅಂತಾದ್ರೂ ಅವ್ಳು ನಿನ್ ಇಷ್ಟ ಪಟ್ಟೇ ಮದ್ವೆ ಆಗಿದಾಳೆ. ಅವ್ಳಿಗೆ ಯಾಕೋ ಶಿಕ್ಷೆ ಕೊಡ್ತೀಯಾ?' ಎಂದು ಆಕಾಶ್‌ನನ್ನು ಕೇಳುತ್ತಾನೆ. 

ಅದಕ್ಕೆ ಆಕಾಶ್ 'ಜಾಗ ಬದಲಾದರೂ ತಿನ್ನೋದು ಅನ್ನಾನೇ ಅಲ್ವಾ? ಎಲ್ಲಿ ತಿಂದ್ರೆ ಏನು? ನಾನು ಇಷ್ಟಪಟ್ಟು ಮದ್ವೆ ಆಗಿಲ್ಲ, ನಂಗೆ ಅವ್ಳು ನನ್ನ ಹೆಂಡ್ತಿ ಅಂತ ಅನ್ನಿಸ್ತಿಲ್ಲ. ನಂಗೆ ಇಷ್ಟ ಇಲ್ದೇ ಇರೋಳ ಜತೆ ನಾನು ಹೇಗೋ ಸಂಸಾರ ಮಾಡ್ಲಿ?' ಎಂದು ಕೇಳುತ್ತಾನೆ. ಆಕಾಶ್ ಮಾತನ್ನು ಒಪ್ಪುತ್ತಲೇ ಸ್ನೇಹಿತ 'ನೀನು ಹೇಳೋದು ನಿನ್ನ ಆಂಗಲ್‌ನಿಂದ ಸರಿನೇ ಕಣೋ. ಆದ್ರೆ, ನೀನು ಮನೆಯವ್ರ ಒತ್ತಾಯಕ್ಕೆ ಮದ್ವೆ ಆಗಿದೀಯ. ಆದ್ರೆ ಇದ್ರಲ್ಲಿ ಅವ್ಳದ್ದು ಏನೂ ತಪ್ಪಿಲ್ಲ. 

ರಕ್ಕಸರು ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ; ಸೋತು ಶರಣಾದರಾ ಗಂಧರ್ವರು!

ನಿಂಗೆ ಈ ಮದ್ವೆ ಇಷ್ಟ ಇಲ್ಲ ಅಂತ ನೀನು ಮದ್ವೆ ಮೊದಲು ಅವ್ಳಿಗೆ ತಿಳಿಸೇ ಇಲ್ಲ. ನಿಂಗೆ ಇಷ್ಟ ಇಲ್ಲ ಅಂತ ಗೊತ್ತಿಲ್ದೇ ಅವ್ಳು ನಿನ್ನ ನಂಬಿಕೊಂಡು ಬಂದಿದಾಳೆ. ಪುಷ್ಪಾ ಏನೂ ತಪ್ಪು ಮಾಡದೇ ಶಿಕ್ಷೆ ಅನುಭವಿಸೋದು ಸರಿ ಅಲ್ಲ. ಯೋಚ್ನೆ ಮಾಡಿ ಸರಿಯಾದ ನಿರ್ಧಾರ ತಗೊಳ್ಳೊ' ಎಂದು ಆಕಾಶ್‌ಗೆ ಸ್ನೇಹಿತ ಹೇಳುತ್ತಾನೆ. ಅತ್ತ ಪುಷ್ಪಾ ಒಲ್ಲದ ಗಂಡನ ಮನೆಯಲ್ಲಿ ಜೀವನ ಮಾಡುವ ಶಿಕ್ಷೆಗೆ ಗುರಿಯಾಗಿದ್ದಾಳೆ. ಅವಳು ಯಾರಲ್ಲೂ ಏನನ್ನೂ ಹೇಳಿಕೊಳ್ಳುವ ಹಾಗಿಲ್ಲ. ಹೇಳಿದರೆ ಗಂಡನ ಮರ್ಯಾದೆ ಹೋಗುತ್ತೆ, ಹೇಳಿದರೆ ಮನೆ ರಣರಂಗ ಆಗುತ್ತೆ. 

ಮೀಸೆ ತೆಗೆಯಲ್ಲ ಅಂದ್ಬಿಟ್ಟು ಅರ್ಜುನ ರೋಲ್ ಕಳ್ಕೊಂಡೆ; ಮಹಾಭಾರತದ ಕರ್ಣ!

ಬೃಂದಾವನ ಸೀರಿಯಲ್‌ನಲ್ಲಿ ಮುಂದೇನಾಗುತ್ತೆ ಎಂಬುದನ್ನು ಸಂಚಿಕೆ ನೋಡುತ್ತಾ ಹೋಗಿ ತಿಳಿದುಕೊಳ್ಳಬೇಕಾಗಿದೆ. ಒಲ್ಲದ ಮದುವೆ ಸುಳಿಗೆ ಸಿಕ್ಕಿ ಸದ್ಯ ಆಕಾಶ್-ಪುಷ್ಪಾ ಇಬ್ಬರ ಜೀವನವೂ ಸೂತ್ರ ಕಿತ್ತ ಗಾಳಿಪಟ ಆಗಿದೆ. ಮುಂದೇನಾಗುವುದೆಂದು ಕಾದು ನೋಡಬೇಕು. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ರಾತ್ರಿ 8.00ಕ್ಕೆ ಬೃಂದಾವನ ಧಾರಾವಾಹಿ ಪ್ರಸಾರವಾಗುತ್ತಿದೆ. 

 

 

Latest Videos
Follow Us:
Download App:
  • android
  • ios