ಮೀಸೆ ತೆಗೆಯಲ್ಲ ಅಂದ್ಬಿಟ್ಟು ಅರ್ಜುನ ರೋಲ್ ಕಳ್ಕೊಂಡೆ; ಮಹಾಭಾರತದ ಕರ್ಣ!

ನಾನು ಮೀಸೆ ತೆಗೆದರೆ ನನ್ನ ಮುಖದ ಬ್ಯಾಲೆನ್ಸ್ ಹೋಗುತ್ತದೆ, ನಾನು ಚೆಂದ ಕಾಣುವುದಿಲ್ಲ ಎಂದಿಬಿಟ್ಟೆ. ತಕ್ಷಣ ಬಿಅರ್ ಚೋಪ್ರಾ ಸರ್ 'ನೀನೊಬ್ಬ ನಟನಾ? ಅರ್ಜುನ್ ಪಾತ್ರ ಮಾಡುವುದಿಲ್ಲ, ಮೀಸೆ ತೆಗೆಯಲಾರೆ ಎನ್ನುತ್ತೀಯಲ್ಲ. ಅಲ್ಲಿ ಆಫೀಸ್ ಡೋರ್ ತೆಗೆದಿದೆ, ಹೊರಕ್ಕೆ ಹೋಗಿ, ಮತ್ತೆ ಬರಬೇಡಿ' ಅಂದುಬಿಟ್ಟರು.

Mahabharata artist pankaj dheer says he was selected for Arjun role before Karna srb

1988 ರಲ್ಲಿ ತೆರೆಗೆ ಬಂದಿದ್ದ ಮಹಾಭಾರತ ಟಿವಿ ಸೀರಿಯಲ್ ಆ ಕಾಲದಲ್ಲಿ ಭಾರೀ ಪ್ರಸಿದ್ಧಿ ಪಡೆದಿತ್ತು. ಬಿಆರ್ ಚೋಪ್ರಾ ನಿರ್ಮಾಣ ಹಾಗೂ ಅವರ ಮಗ ರವಿ ಚೋಪ್ರಾ ನಿರ್ದೇಶನದ ಈ ಸೀರಿಯಲ್ ಹೊಸ ಇತಿಹಾಸವನ್ನು ಸೃಷ್ಟಿಸಿ ಎಂದೆಂದೂ ಅಜರಾಮರ ಎಂಬಂತಾಗಿದೆ. ಈ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯೊಬ್ಬರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಸೀರಿಯಲ್‌ನ ಕಾಸ್ಟಿಂಗ್ ವೇಳೆ ಆಸಕ್ತಿಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಷಯ ಕೇಳಿದರೆ ಎಂಥವರಿಗೂ ಒಮ್ಮೆ ಶಾಕ್ ಆಗದೇ ಇರದು. 

ಬಿಆರ್ ಚೋಪ್ರಾ ಆಫೀಸಿನಲ್ಲಿ ಮಹಾಭಾರತ ಸೀರಿಯಲ್ ಕಾಸ್ಟಿಂಗ್ ಮಾಡುವ ವೇಳೆ ಡೈಲಾಗ್ ಕೊಟ್ಟು ಅಡಿಶನ್ ಮಾಡುವ ವೇಳೆ ನನ್ನನ್ನು ಅರ್ಜುನ್ ಪಾತ್ರಕ್ಕೆ ಕಾಂಟ್ರಾಕ್ಟ್ ಮಾಡಿ ಸಹಿ ಹಾಕಿಸಿಕೊಂಡರು. ಆದರೆ, ಬಿಆರ್ ಚೋಪ್ರಾ ಅವರು ಒಮ್ಮೆ ಆಫೀಸಿಗೆ ಕರೆದಾಗ ಅರ್ಜುನ್ ಪಾತ್ರ ಮಾಡುತ್ತಿರುವಾಗ ಬೃಹನ್ನಳೆಯಾಗಿಯೂ ಸ್ವಲ್ಪ ಕಾಲ ನಟಿಸಬೇಕಾಗುತ್ತದೆ. ಆ ಕೆಲವು ಸಂಚಿಕೆಗಳಲ್ಲಿ ನಾನು ಮೀಸೆ ತೆಗೆಯಬೇಕಾಗುತ್ತದೆ ಎಂದು ಹೇಳಿದರು. ನಾನು ತಕ್ಷಣ ನಾನು ಅರ್ಜನನ ಪಾತ್ರವನ್ನು ಮಾಡುವುದಿಲ್ಲ ಎಂದು ಬಿಟ್ಟೆ. 

ಫಸ್ಟ್‌ ನೈಟ್ ಮಂಚದ ಮೇಲೆ ಆಕಾಶ್ ಜತೆ ಮೈಮರೆತ ಪುಷ್ಪಾ; ಸಡನ್ನಾಗಿ ಆಕಾಶ್ ಮಾಡಿದ್ದು ನೋಡಿ ಶಾಕ್!

ನಾನು ಮೀಸೆ ತೆಗೆದರೆ ನನ್ನ ಮುಖದ ಬ್ಯಾಲೆನ್ಸ್ ಹೋಗುತ್ತದೆ, ನಾನು ಚೆಂದ ಕಾಣುವುದಿಲ್ಲ ಎಂದಿಬಿಟ್ಟೆ. ತಕ್ಷಣ ಬಿಅರ್ ಚೋಪ್ರಾ ಸರ್ 'ನೀನೊಬ್ಬ ನಟನಾ? ಅರ್ಜುನ್ ಪಾತ್ರ ಮಾಡುವುದಿಲ್ಲ, ಮೀಸೆ ತೆಗೆಯಲಾರೆ ಎನ್ನುತ್ತೀಯಲ್ಲ. ಅಲ್ಲಿ ಆಫೀಸ್ ಡೋರ್ ತೆಗೆದಿದೆ, ಹೊರಕ್ಕೆ ಹೋಗಿ, ಮತ್ತೆ ಬರಬೇಡಿ' ಅಂದುಬಿಟ್ಟರು. ಬಳಿಕ ನಾನು ಅದೇ ಸ್ಟೂಡಿಯೋಕ್ಕೆ ಡಬ್ಬಿಂಗ್ ಮಾಡಲು 6 ತಿಂಗಳು ಹೋಗುತ್ತಲೇ ಇದ್ದೆ. ಆಗ ಒಮ್ಮೆ ನನ್ನನ್ನು ಆಫೀಸ್ ಒಳಕ್ಕೆ ಕರೆದು 'ನೀವು ಕರ್ಣನ ಪಾತ್ರವನ್ನು ಮಾಡುತ್ತೀರಾ' ಎಂದು ಕೇಳಿದರು. ಮೀಸೆ ತೆಗೆಯಬೇಕಿಲ್ಲ ಎಂದರೆ ಮಾಡುತ್ತೇನೆ' ಎಂದೆ. 

ಸಂಗೀತಾಗೆ ನಮ್ಮನೆ ನಾಯಿ ಮರಿ ಎಂದ್ರು ತುಕಾಲಿ ಸಂತು; ಕಾರ್ತಿಕ್ ನೋಡಿ 'ಅಯ್ಯೋ ಪಾಪ' ಎನ್ನುತ್ತಿರುವ ನೆಟ್ಟಿಗರು

'ಸರಿ, ಮೀಸೆ ತೆಗೆಯುವ ಅಗತ್ಯವಿಲ್ಲ, ಮಾಡು' ಎಂದರು ಬಿಆರ್ ಚೋಪ್ರಾ ಸರ್. ಹೀಗೆ ಅರ್ಜುನ್ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದ ನಾನು ಕರ್ಣನ ಪಾತ್ರ ಮಾಡಿದೆ. ಇದಕ್ಕೆ 'ಡೆಸ್ಟಿನಿ' ಎನ್ನುತ್ತಾರೆ. ನನಗೆ ಕರ್ಣನ ಪಾತ್ರ ಮಾಡುವುದು ಬರೆದಿತ್ತು, ಆ ಕಾರಣಕ್ಕೇ ಅರ್ಜುನ ಆಗಲು ಸಾಧ್ಯವಾಗಲಿಲ್ಲ ಎಂದುಕೊಳ್ಳುತ್ತೇನೆ ನಾನು. ಮೀಸೆ ತೆಗೆಯಬಾರದೆಂಬ ನನ್ನ ನಿರ್ಧಾರ ಅಂದು ನನಗೆ ಗ್ರೇಟ್ ಅನ್ನಿಸಿತ್ತು. ಆಗ ನನಗೆ ಅಷ್ಟೇ ಜ್ಞಾನ ಇತ್ತು. ಆದರೆ, ಈಗ ಯೋಚಿಸಿದರೆ ಆ ಬಗ್ಗೆ ನನಗೆ ತುಂಬಾ ನೋವಾಗುತ್ತದೆ' ಎಂದಿದ್ದಾರೆ ಅಂದಿನ ಮಹಾಭಾರತದ ಕರ್ಣ ಪಾತ್ರಧಾರಿ 'ಪಂಕಜ್ ಧೀರ್'. 

Latest Videos
Follow Us:
Download App:
  • android
  • ios