- Home
- Technology
- What's New
- ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ವಿಶ್ವದೆಲ್ಲೆಡೆ YouTube ಡೌನ್
ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ವಿಶ್ವದೆಲ್ಲೆಡೆ YouTube ಡೌನ್
ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ಬಳಕೆದಾರರು ಕ್ರಿಯೇಟರ್ಸ್ ಪರದಾಡಿದ್ದಾರೆ. ಇಂದು ಬೆಳಗ್ಗೆಯಿಂದ ಹಲೆವೆಡೆ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಸಾಧ್ಯಾವಾಗುತ್ತಿಲ್ಲ. ನೀವು ಈ ಸಮಸ್ಯೆ ಎದುರಿಸುತ್ತಿದ್ದೀರಾ? ಏನು ಮಾಡಬೇಕು?

ಯೂಟ್ಯೂಬ್ ಡೌನ್
ವಿಶ್ವದೆಲ್ಲೆಡೆ ಯೂಟ್ಯೂಬ್ ಡೌನ್ ಆಗಿದೆ. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಬಳಕೆದಾರರು, ಕಂಟೆಂಟ್ ಕ್ರಿಯೇಟರ್ಸ್ ಪರದಾಡಿದ್ದಾರೆ. ವಿಶ್ವಾದ್ಯಂತ ಬರೋಬ್ಬರಿ 3.2 ಲಕ್ಷ ಬಳಕೆದಾರರ ಯೂಟ್ಯೂಬ್ ಸಮಸ್ಯೆ ಎದುರಿಸಿದ್ದಾರೆ. ಈ ಕುರಿತು ಡೌನ್‌ಡಿಟೆಕ್ಟರ್ (Downdetector.com) ವರದಿ ಮಾಡಿದೆ.
ಯೂಟ್ಯೂಬ್ ಟಿವಿ ಸಮಸ್ಯೆ
ವಿಶ್ವೆದೆಲ್ಲೆಡೆ ಯ್ಯೂಟ್ಯೂಬ್ ಬಳಕೆದಾರರು ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಯೂಟ್ಯೂಬ್ ಟಿವಿಯಲ್ಲಿ ಸಮಸ್ಯೆ ಇದೆ ಎಂದು 8,923 ಬಳೆಕೆದಾರರು ವರದಿ ಮಾಡಿದ್ದಾರೆ. ಇನ್ನು ಗೂಗಲ್‌ನಲ್ಲಿ 2,694 ಬಳಕೆದಾರರು ಸಮಸ್ಯೆ ಇದೆ ಎಂದಿದ್ದಾರೆ.
ಹಳೇ ವಿಡಿಯೋಗಳು ಕಾಣಿಸುತ್ತಿದೆ
ಯೂಟ್ಯೂಬ್ ಸಮಸ್ಯೆಯಿಂದ ಹಳೇ ವಿಡಿಯೋಗಳೇ ಕಾಣಿಸುತ್ತಿದೆ. ಈ ಕುರಿತು ಬಳಕೆದಾರರು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶದ ಜೊತೆಗೆ ಮೀಮ್ಸ್ ಹರಿದಾಡುತ್ತಿದೆ. ಹಳೇ ವಿಡಿಯೋ ನೋಡಿ ಸಮಯ ಕಳೆಯತ್ತಿದ್ದೇನೆ ಎಂದು ಹಲವರು ಹೇಳಿದ್ದಾರೆ. ಇತ್ತ ಯೂಟ್ಯೂಬ್‌ಗೆ ಪರ್ಯಾಯವಾಗಿ ಏನೂ ಇಲ್ಲವೆ, ಎಲಾನ್ ಮಸ್ಕ್ ಒಂದು ಪ್ರಯತ್ನ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ಗೂಗಲ್ ಪ್ರತಿಕ್ರಿಯೆ ಏನು?
ಡೌನ್‍ಡಿಟೆಕ್ಟರ್ ಯೂಟ್ಯೂಬ್ ಡೌನ್ ಕುರಿತು ವರದಿ ಮಾಡಿದೆ. ಯೂಟ್ಯೂಬ್ ತಾಂತ್ರಿಕ ಸಮಸ್ಯೆ ಎದುರಿಸಿದೆ ಎಂದು ಯೂಟ್ಯೂಬ್ ಹೇಳಿದೆ. ತಾಂತ್ರಿಕ ತಂಡ ಸಮಸ್ಯೆ ಬಗೆಹರಿಸುತ್ತಿದೆ. ಯೂಟ್ಯೂಬ್ ಕಿಡ್ಸ್, ಮ್ಯೂಸಿಕ್ ಸೇರಿದಂತೆ ಕೆಲ ಪ್ಲಾಟ್‌ಫಾರ್ಮ್ ಸಮಸ್ಯೆ ಸರಿಯಾಗಿದೆ. ಶೀಘ್ರದಲ್ಲೇ ಸಂಪೂರ್ಣ ಸಮಸ್ಯೆ ಬಗೆಹರಿಯಲಿದೆ ಎಂದಿದೆ.
ಯೂಟ್ಯೂಬ್ ಡೌನ್ ಆದಾಗ ಏನು ಮಾಡಬೇಕು?
ಯೂಟ್ಯೂಬ್ ಡೌನ್ ಆದರೆ ಬಳಕೆದಾರರು, ಕಂಟೆಂಟ್ ಕ್ರಿಯೇಟರ್ಸ್ ಏನೂ ಮಾಡಲು ಸಾಧ್ಯವಿಲ್ಲ. ಗೂಗಲ್ ತಾಂತ್ರಿಕ ಸಮಸ್ಯೆ ಬಗೆಹರಿಸಿದ ಬಳಿಕವೇ ಸಮಸ್ಯೆ ಪರಿಹಾರವಾಗಲಿದೆ. ಹಲವು ಬಾರಿ ಯೂಟ್ಯೂಬ್ ಲಾಗಿನ್ ಕೇಳಲಿದೆ. ಪಾಸ್‌ವರ್ಡ್ ರಾಂಗ್ ಎಂದು ಹೇಳಲಿದೆ. ಹೀಗಾಗಿ ತಾಳ್ಮೆಯಿಂದ ಇರಬೇಕೆ ಹೊರತು ಬೇರೆ ಯಾವ ದಾರಿಯೂ ಉಳಿದಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

