ಜೀ ಕನ್ನಡದ ಜನಪ್ರಿಯ 'ಕರ್ಣ' ಸೀರಿಯಲ್ ಟಿಆರ್‌ಪಿಯಲ್ಲಿ ಮುಂಚೂಣಿಯಲ್ಲಿದೆ. ಈ ಲೇಖನವು ಸೀರಿಯಲ್‌ನ ಶೂಟಿಂಗ್ ಸೆಟ್‌ನಲ್ಲಿ ಒಂದು ದಿನ ಹೇಗೆ ಕಳೆಯುತ್ತದೆ ಮತ್ತು ತೆರೆಮರೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದರ ಕುತೂಹಲಕಾರಿ ನೋಟವನ್ನು ನೀಡುತ್ತದೆ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ ಟಿಆರ್ಪಿಯಲ್ಲಿಯೂ ಟಾಪ್ ಸ್ಥಾನವನ್ನೇ ಪಡೆದುಕೊಂಡಿದೆ. ಇದನ್ನು ನೋಡುವ ದೊಡ್ಡ ವೀಕ್ಷಕ ವರ್ಗವೇ ಇದೆ. ಈ ಸೀರಿಯಲ್ ವೀಕ್ಷಕರನ್ನು ಅದೆಷ್ಟರ ಮಟ್ಟಿಗೆ ಹುಚ್ಚು ಹಿಡಿಸಿತ್ತು ಎಂದರೆ ಇದರಲ್ಲಿ ನಿತ್ಯಾ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ನಮ್ರತಾ ಗೌಡ (Namratha Gowda) ಅವರನ್ನು ವೀಕ್ಷಕರು ಬಾಯಿಗೆ ಬಂದ ಹಾಗೆ ಬೈದದ್ದು ಉಂಟು. ಈ ಸೀರಿಯಲ್ ಆರಂಭದಲ್ಲಿ ಅತಿ ಒಳ್ಳೆಯವನಾದ ಕರ್ಣನ ಮೇಲೆ ನಿತ್ಯಾ ದ್ವೇಷ ಕಾರುತ್ತಿದ್ದಳು. ಆತ ಎಷ್ಟೇ ಒಳ್ಳೆಯದನ್ನು ಬಯಸಿದರೂ ಅವನ ಬಗ್ಗೆ ತಪ್ಪು ತಿಳಿದುಕೊಂಡು ಸಿಕ್ಕಾಪಟ್ಟೆ ನಿಂದಿಸುತ್ತಿದ್ದಳು. ಎಲ್ಲರ ಎದುರು ಇನ್ಸಲ್ಟ್ ಮಾಡುತ್ತಿದ್ದಳು. ಇದೊಂದು ಸೀರಿಯಲ್ ರೋಲ್ ಎನ್ನುವುದನ್ನೂ ಗಮನಿಸಿದರೆ, ನಮ್ರತಾ ಗೌಡ ಅವರಿಗೆ ಅದೆಷ್ಟೋ ಮಂದಿ ವೈಯಕ್ತಿಯವಾಗಿ ನಿಂದಿಸಿದ್ದು ಉಂಟು.
ಸೀರಿಯಲ್ ಬಿಟ್ಟು ಹೋಗುವ ಮನಸ್ಸು...
ಈ ಪರಿಯ ನಿಂದನೆ ಕೇಳಿ ಒಂದು ಹಂತದಲ್ಲಿ ಸೀರಿಯಲ್ ಬಿಟ್ಟು ಹೋಗೋಣ ಎನ್ನುವ ಹಾಗೆ ಆಗಿತ್ತು ಎಂದು ಖುದ್ದು ನಟಿಯೇ ಹೇಳಿಕೊಂಡದ್ದು ಉಂಟು. ಆದರೆ, ಜನರು ಈ ಪರಿ ನಿಂದಿಸುತ್ತಾರೆ ಎಂದರೆ ಅದು ಆ ಪಾತ್ರಕ್ಕೆ ಆ ಪಾತ್ರಧಾರಿ ಮಾಡುತ್ತಿರುವ ನ್ಯಾಯವಾಗಿದೆ. ಅದೇನೇ ಇದ್ದರೂ ಇದೀಗ ನಿತ್ಯಾಳನ್ನು ವೀಕ್ಷಕರು ಒಪ್ಪಿಕೊಂಡಿದ್ದಾರೆ. ಆಕೆಯ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. ನಿತ್ಯಾ ಮತ್ತು ತೇಜಸ್ ಒಂದಾಗಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ. ಅದೇ ಇನ್ನೊಂದೆಡೆ, ನಿಧಿ ಮತ್ತು ಕರ್ಣನ ಲವ್ ಸ್ಟೋರಿಯನ್ನೂ ಜನರು ಇಷ್ಟಪಟ್ಟುಕೊಂಡಿದ್ದಾರೆ.
ಕರ್ಣ ಸೀರಿಯಲ್ ಸೆಟ್ ಹೇಗಿದೆ?
ಇಂತಿಪ್ಪ ಕರ್ಣ ಸೀರಿಯಲ್ (Karna Serial) ಶೂಟಿಂಗ್ ಸೆಟ್ ಹೇಗಿರುತ್ತದೆ? ಅಲ್ಲಿ ನಡೆಯುವುದು ಏನು? ಒಂದು ದಿನಕ್ಕೆ ಏನೆಲ್ಲಾ ನಡೆಯತ್ತೆ? ಹೇಗೆ ಶೂಟಿಂಗ್ ಮಾಡಲಾಗುತ್ತೆ ಎನ್ನುವ ಕುತೂಹಲ ಹಲವರಲ್ಲಿ ಇರುವುದು ಸಹಜವೇ. ಒಂದು ದಿನದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವ ಕುರಿತು the_____baboo_73 ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಒಂದು ದಿನದ ಶೂಟಿಂಗ್ ಬಗ್ಗೆ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ಕರ್ಣ ಸೀರಿಯಲ್‌ನ ಬಹುತೇಕ ಎಲ್ಲಾ ಕ್ಯಾರೆಕ್ಟರ್ಗಳನ್ನೂ ನೋಡಬಹುದಾಗಿದೆ.
ಶೂಟಿಂಗ್ ಎಂದರೆ ಸುಮ್ಮನಲ್ಲ
ಅಷ್ಟಕ್ಕೂ, ಒಂದು ಸೀರಿಯಲ್‌ನ ಒಂದೇ ಒಂದು ಸೀನ್ ಮಾಡುವಾಗಲೂ ಕೆಲವೊಮ್ಮೆ ಹಲವಾರು ಟೇಕ್ಗಳನ್ನು ತೆಗೆದುಕೊಳ್ಳುವುದು ಉಂಟು. ಆದ್ದರಿಂದ ಎಷ್ಟೋ ಬಾರಿ ದಿನಪೂರ್ತಿ ಶೂಟಿಂಗ್ ಮಾಡಿದರೂ ಕೆಲವೇ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಸಾಹಸಮಯ ದೃಶ್ಯಗಳಿಗೆ ಶೂಟಿಂಗ್ ಸೆಟ್ ಸಂಪೂರ್ಣವಾಗಿ ಬದಲಾಯಿಸಬೇಕಾಗುತ್ತದೆ. ಜನ ನಿಬಿಡ ಪ್ರದೇಶದಲ್ಲಿ ಶೂಟಿಂಗ್ ಮಾಡುವಾಗ, ಅಲ್ಲಿ ಇರುವ ಜನರನ್ನು, ಅಭಿಮಾನಿಗಳನ್ನು ತಡೆಯುವುದೇ ದೊಡ್ಡ ಸವಾಲು ಎನ್ನಿಸುತ್ತದೆ. ಬಹುತೇಕ ದೃಶ್ಯಗಳನ್ನು ಶೂಟಿಂಗ್ ಸೆಟ್‌ನಲ್ಲಿ, ಸ್ಟುಡಿಯೋ, ಅಥವಾ ಶೂಟಿಂಗ್ ಮನೆಗಳಲ್ಲಿಯೇ ತೆಗೆಯುವುದು ಇದ್ದರೂ, ಕೆಲವೊಮ್ಮೆ ಹೊರಾಂಗಣ ದೃಶ್ಯಗಳು ಅನಿವಾರ್ಯವಾಗುತ್ತವೆ. ಇವೆಲ್ಲವುಗಳ ಬಗ್ಗೆ ಚುಟುಕಾಗಿ ಈ ವಿಡಿಯೋದಲ್ಲಿ ಕರ್ಣ ಸೀರಿಯಲ್ ದೃಶ್ಯಗಳನ್ನು ನೋಡಬಹುದಾಗಿದೆ.


