- Home
- Entertainment
- TV Talk
- Tejaswini Achar Weds Virat: ಸೀರಿಯಲ್ನಲ್ಲಿ ಲವ್- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು
Tejaswini Achar Weds Virat: ಸೀರಿಯಲ್ನಲ್ಲಿ ಲವ್- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು
ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಆಚಾರ್ ಅವರು ಸಹನಟ ವಿರಾಟ್ ವತ್ಸಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಸಂಘರ್ಷ' ಧಾರಾವಾಹಿಯ ಸೆಟ್‌ನಲ್ಲಿ ಪ್ರೀತಿಸಿ, ಇದೀಗ ದಾವಣಗೆರೆಯಲ್ಲಿ ವಿವಾಹವಾಗಿದ್ದಾರೆ. ಈ ಜೋಡಿ 'ರಾಧಿಕಾ' ಧಾರಾವಾಹಿಯಲ್ಲಿಯೂ ಒಟ್ಟಿಗೆ ನಟಿಸಿದ್ದರು.

ತೇಜಸ್ವಿನಿ ಆಚಾರ್ ಮದುವೆ
ಕನ್ನಡ ಕಿರುತೆರೆ ನಟಿ, ಮೈಸೂರಿನ ಬೆಡಗಿ ನಟಿ ತೇಜಸ್ವಿನಿ ಆಚಾರ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೀರಿಯಲ್ ನಟ ವಿರಾಟ್ ವತ್ಸಲ್ ಜೊತೆ ನಿನ್ನೆ ಅಂದರೆ ಫೆಬ್ರುವರಿ 10ರಂದು ನಟಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಸಂಘರ್ಷದಿಂದ ಪ್ರೀತಿ
ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ ಜೊತೆಯಾಗಿ ನಟಿಸಿದ್ದರು. ಈ ಸೀರಿಯಲ್ ಶೂಟ್ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಈಗ ಈ ಜೋಡಿ ಸಪ್ತಪದಿ ತುಳಿದಿದೆ.
ರಾಧಿಕಾದಲ್ಲಿಯೂ ಜೋಡಿಯ ನಟನೆ
ಸಂಘರ್ಷದ ಬಳಿಕ, ‘ರಾಧಿಕಾ’ ಧಾರಾವಾಹಿಯಲ್ಲಿ ಜೋಡಿಯಾಗಿ ಮತ್ತೆ ನಟಿಸಿದರು. ಈ ಧಾರಾವಾಹಿ ಇಬ್ಬರ ನಡುವಿನ ಪ್ರೀತಿ, ಸ್ನೇಹ, ಬಾಂಧವ್ಯವನ್ನ ಮತ್ತಷ್ಟು ಗಟ್ಟಿಮಾಡಿತ್ತು. ಸೀರಿಯಲ್ ಜೊತೆ ಜೊತೆಗೆ ರಿಯಲ್ ಬದಕಿನಲ್ಲೂ ಜೊತೆಯಾದರು.
ಹೆಸರು ಬದಲಾವಣೆ
ಶ್ರುತಿ ನಾಯ್ಡು ಅವರು ನಿರ್ಮಿಸಿದ 'ಮಹಾನದಿ' ಧಾರಾವಾಹಿ ಮೂಲಕ ನಟಿ ತೇಜಸ್ವಿನಿ ಜನಪ್ರಿಯತೆ ಪಡೆದರು. ಅಲ್ಲಿಂದ ಅವರು ತಮ್ಮ ಹೆಸರನ್ನು ತೇಜಸ್ವಿನಿ ಶೇಖರ್ರಿಂದ ತೇಜಸ್ವಿನಿ ಆಚಾರ್ ಎಂದು ಬದಲಾಯಿಸಿಕೊಂಡರು.
ವಿವಿಧ ಭಾಷೆಗಳಲ್ಲಿ ನಟಿ ನಟನೆ
ಅಂದಹಾಗೆ ನಟಿ, ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗಳ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರೆ, ವಿರಾಟ್ ಕೂಡ ಸಂಘರ್ಷ, ರಾಧಿಕಾ, ನನ್ನ ದೇವರು ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆ ಜೊತೆಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಾರೆ. ರಂಗಭೂಮಿ ಹಿನ್ನಲೆಯ ಕುಟುಂಬದಿಂದ ಬಂದ ವಿರಾಟ್ ಅವರು ಅಭಿನಯದ ಜೊತೆಗೆ ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
ಹಲವರು ಸಾಕ್ಷಿ
ವಿರಾಟ್ ಅವರ ಊರಾದ ದಾವಣಗೆರೆಯಲ್ಲಿ ಮದುವೆ ನಡೆದಿದೆ. ಇವರ ಮದುವೆಗೆ ಕಿರುತೆರೆ ನಟರು ಸೇರಿದಂತೆ ಹಲವು ಬಂದು ಆಶೀರ್ವದಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

