ಶ್ರೀಲಂಕಾದ ಜೂಜು ಅಡ್ಡೆಯಿಂದ ಬಾತ್ರೂಮ್ ಸೇರಿದ ನಿವೇದಿತಾ: 'ಐ ಮಿಸ್ ಯು' ಎನ್ನುತ್ತಲೇ ಕೊಟ್ಟ ಪೋಸ್ಗೆ ಫ್ಯಾನ್ಸ್ ಸುಸ್ತು!
ಬಾತ್ರೂಮ್ ಬಟ್ಟೆಯಲ್ಲಿ ಬಂದು ಐ ಮಿಸ್ ಯೂ ಎಂದ ನಿವೇದಿತಾ ವಿಡಿಯೋ ಇನ್ನಿಲ್ಲದಂತೆ ಟ್ರೋಲ್ಗೆ ಒಳಗಾಗುತ್ತಿದೆ. ನೆಟ್ಟಿಗರು ಹೇಳ್ತಿರೋದೇನು?

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ, ಫಾರಿನ್ ಟೂರ್ ಸುತ್ತಿ, ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ, ವಾಪಸ್ ಮನೆಗೆ ಬಂದಂತಿದೆ. ದಿನದಿಂದ ದಿನಕ್ಕೆ ಈಕೆಯ ರೀಲ್ಸ್ ಹೆಚ್ಚುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್. ಟ್ರೋಲ್ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್ ಖುಷ್. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್, ನೆಗೆಟಿವ್ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.
ಇದಾಗಲೇ ಮಂಚದ ಮೇಲೆ, ಬಾತ್ರೂಮ್ನಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ನಿವೇದಿತಾ ರೀಲ್ಸ್ ಮಾಡಿದ್ದು ಆಗಿದೆ. ಇದೀಗ ಬಾತ್ರೂಮ್ ಡ್ರೆಸ್ ಹಾಕಿಕೊಂಡು ಬಂದು ರೀಲ್ಸ್ ಮಾಡಿದ್ದಾರೆ. ಫೋನ್ನಲ್ಲಿ ಐ ಮಿಸ್ ಯೂ ಎನ್ನುವ ಹಿನ್ನೆಲೆ ಮ್ಯೂಸಿಕ್ ಜೊತೆ, ಅಲ್ಲಿಯೇ ಬಾತ್ರೂಮ್ ಬಟ್ಟೆ ತೆಗೆದು ಬೇರೆ ಬಟ್ಟೆ ತೊಟ್ಟು ರೀಲ್ಸ್ ಮಾಡಿದರು. ಬಾತ್ರೂಮ್, ಬೆಡ್ರೂಮ್ ಬಿಟ್ಟು ಬೇರೆ ಯಾವ ರೂಮೂ ಕಾಣಿಸಲ್ವಾ ಎಂದು ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ಬಾತ್ರೂಮ್ ಬಟ್ಟೆ ಹಾಕಿದ್ದು ಯಾಕೆ, ನಂತರ ಅದನ್ನು ಬದಲಾಯಿಸಿದ್ದು ಯಾಕೆ ಎನ್ನುವುದು ಮತ್ತೆ ಕೆಲವರ ಪ್ರಶ್ನೆ. ಬದಲಾಯಿಸುವಾಗ ತೋರಿಸೋದೊಂದೇ ಬಾಕಿ ಇದೆ ನೋಡು, ಮುಂದೆ ಅದು ಕೂಡ ಮಾಡಿದ್ರೂ ಆಶ್ಚರ್ಯ ಇಲ್ಲ ಎಂದು ನಿವೇದಿತಾ ಕಾಲೆಳೆಯುತ್ತಿದ್ದಾರೆ ಮತ್ತೆ ಕೆಲವರು!
ಶ್ರೀಲಂಕಾದ ಪಬ್ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ! ಅಲ್ಲಿದ್ದೋರು ಕೇಳಿದ್ದೇನು ನೋಡಿ..
ಹೀಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ನಿವೇದಿತಾ ಗೌಡ, ಈಗ ಎಲ್ಲಾ ಹಂತವನ್ನೂ ಮೀರಿ ಹೋಗಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೊಂಬೆಯಂತೆ ಮುದ್ದುಮುದ್ದಾಗಿ, ಡಿಸೆಂಟ್ ಆಗಿದ್ದ ನಿವ್ವಿ ಇದ್ಯಾಕೆ ಬಿಕಿನಿ ಮಟ್ಟಿಗೆ ಇಳಿದಳು ಎಂದು ಕೇಳುವವರೇ ಎಲ್ಲಾ. ಕೆಲ ದಿನಗಳಿಂದ ಬಿಕಿನಿಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿಕೊಳ್ತಿರೋ ನಿವೇದಿತಾ, ಇದೀಗ ಮಂಚದ ಮೇಲೇರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ! ಇದನ್ನು ನೋಡಿದ ನೆಟ್ಟಿಗರು, ಫೋಟೋಶೂಟ್ ಮಾಡಿದ ಪುಣ್ಯಾತ್ಮ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ! ಹೋದಲ್ಲಿ, ಬಂದಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳಲು ಯಾವ ಫೋಟೋಗ್ರಾಫರ್ ಅನ್ನು ಅಪಾಯಿಂಟ್ ಮಾಡಿಕೊಂಡಿದ್ದಿ ಎಂದು ಕೇಳ್ತಿರೋ ನೆಟ್ಟಿಗರು, ಮಂಚದ ಫೋಟೋಶೂಟ್ ಸಮಯದಲ್ಲಿ ಮುಂದೆ ಇರೋದು ಯಾರು ಎಂದೆಲ್ಲಾ ಪ್ರಶ್ನಿಸಿದ್ದರು.
ಆದರೆ ಯಾರು ಏನೇ ಹೇಳಿದ್ರೂ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್ನಲ್ಲಿ ನಿವೇದಿತಾ ಅವರು ಡೀಸೆಂಟ್ ಆಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್ ವಿಡಿಯೋ ಶೇರ್ ಮಾಡುತ್ತಿದ್ದಾರೆ.
ಮಂಚದಲ್ಲಿನ ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?