ಶ್ರೀಲಂಕಾದ ಪಬ್ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ! ಅಲ್ಲಿದ್ದೋರು ಕೇಳಿದ್ದೇನು ನೋಡಿ..
ಶ್ರೀಲಂಕಾದ ಪಬ್ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಅಲ್ಲಿದ್ದೋರು ಕೇಳಿದ್ದೇನು ನೋಡಿ..

ನಿವೇದಿತಾ ಗೌಡ ಸದ್ಯ ಭಾರಿ ಡಿಮಾಂಡ್ ಇರುವ ನಟಿಯಾಗಿದ್ದಾರೆ. ಸಿನಿಮಾಗಳಿಂದ ಆಫರ್ ಇಲ್ಲದೇ ಹೋದರೂ ಸೋಷಿಯಲ್ ಮೀಡಿಯಾದ ಸ್ಟಾರ್ ಆಗಿದ್ದಾರೆ. ದಿನದಿಂದ ದಿನಕ್ಕೆ ಡ್ರೆಸ್ ಮೇಲಕ್ಕೆ ಹೋಗುತ್ತಿರುವ ನಡುವೆಯೇ, ಇದರಿಂದಲೇ ಟ್ರೋಲ್ ಆಗುತ್ತಿರುವ ನಿವೇದಿತಾ ಅವರನ್ನು ಶ್ರೀಲಂಕಾದ ಕೊಲೊಂಬೋದ ಪಬ್ನಲ್ಲಿ ಇದೀಗ ಅವರು ಕನ್ನಡಿಗರ ಜೊತೆ ಕನ್ನಡದಲ್ಲಿಯೇ ಸಂವಾದ ನಡೆಸಿದ್ದಾರೆ. ಶ್ರೀಲಂಕಾದ ಟೂರ್ ಪ್ಯಾಕೇಜ್ಗೆ ನಿವೇದಿತಾ ಅವರನ್ನು ರಾಯಭಾರಿಯನ್ನಾಗಿಸಿ, ಅವರನ್ನು ಕರೆದುಕೊಂಡು ಹೋಗಲಾಗಿದೆ. ಅಲ್ಲಿದ್ದವರ ಜೊತೆ ಕನ್ನಡದಲ್ಲಿಯೇ ಮಾತು ಆರಂಭಿಸಿದ್ದಾರೆ ನಟಿ. ನಿವೇದಿತಾ ಅವರನ್ನು ನೋಡುತ್ತಿದ್ದಂತೆಯೇ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಬಳಿಕ, ಹೇಗಿದ್ದಾರಾ ಎಲ್ಲರೂ ಎಂದು ಕನ್ನಡದಲ್ಲಿಯೇ ಮಾತನಾಡಿದ್ದಾರೆ ನಿವೇದಿತಾ.
ಬಳಿಕ ಅಲ್ಲಿದ್ದ ನಿರೂಪಕಿ, ಇವರಿಗೆ ಏನಾದರೂ ಪ್ರಶ್ನೆಗಳು ಇದ್ದರೆ ಕೇಳಿ ಎಮದಾಗ, ನಿಮ್ಮ ಮುಂದಿನ ಸಿನಿಮಾ ಯಾವುದು ಎಂದು ಅಲ್ಲಿದ್ದವರು ಪ್ರಶ್ನಿಸಿದ್ದಾರೆ. ಅದಕ್ಕೆ ನಿವೇದಿತಾ ಮುದ್ದು ರಾಕ್ಷಸಿ ಎಂದಿದ್ದಾರೆ. ಇದರಲ್ಲಿ ಹೀರೋ ಯಾರು ಎಂದಾಗ, ಹೀರೋ ಇಲ್ಲ. ನಾಯಕಿ ಮತ್ತು ವಿಲನ್ ಮಾತ್ರ ಇರೋದು. ತುಂಬಾ ಚೆನ್ನಾಗಿದೆ. ನೀವೆಲ್ಲರೂ ಈ ಚಿತ್ರವನ್ನು ನೋಡಿ ಎಂದಿದ್ದಾರೆ. ಅಲ್ಲಿಗೇ ವಿಡಿಯೋ ಕಟ್ ಆಗಿದೆ. ಅಲ್ಲಿದ್ದವರು ಮತ್ತಿನ್ನೇನು ಪ್ರಶ್ನೆ ಕೇಳಿದರು ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಮಂಚದಲ್ಲಿನ ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?
ಅಷ್ಟಕ್ಕೂ ನಿವೇದಿತಾ ಇತ್ತೀಚೆಗೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ನಿನ್ನೆಯಷ್ಟೇ ಈಕೆ, ಮಂಚದ ಮೇಲಿನ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಇನ್ನಿಲ್ಲದಂತೆ ಕಮೆಂಟ್ಸ್ ಬಂದಿದ್ದವು. ಪ್ರತಿದಿನವೂ ಒಂದಿಲ್ಲೊಂದು ಹಾಟ್ ಡ್ರೆಸ್ನಲ್ಲಿ ನಟಿ ಮಿಂಚುತ್ತಲೇ ಇದ್ದಾರೆ. ಕನ್ನಡದ ಉರ್ಫಿ ಜಾವೇದ್ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸನ್ನಿ ಲಿಯೋನ್, ರಾಖಿ ಸಾವಂತ್ ಇತ್ಯಾದಿಯಾಗಿಯೂ ಕಮೆಂಟ್ ಮಾಡುವಷ್ಟರ ಮಟ್ಟಿಗೆ ನಟಿಯ ಡ್ರೆಸ್ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ.
ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್. ಟ್ರೋಲ್ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್ ಖುಷ್. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್, ನೆಗೆಟಿವ್ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಅವರ ಪಾಲಿಗೆ ಸೇರಿದ್ದಾರೆ ನಿವೇದಿತಾ ಎನ್ನುವುದೇ ಈಕೆಯ ಫ್ಯಾನ್ಸ್ ಬೇಸರ.
ಪಾರದರ್ಶಕ ಡ್ರೆಸ್ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್: ನೆಟ್ಟಿಗರು ಸುಮ್ನೆ ಇರ್ತಾರಾ?