ಬಿಗ್ ಬಾಸ್ ಮನೆಗೆ ಯಾವತ್ತೂ ಕಾಲಿಡುವುದಿಲ್ಲವೆಂದ ನಿಶಾ ಯೋಗೇಶ್ವರ್!
ರಾಜ್ಯದ ಖ್ಯಾತ ನಟ ಹಾಗೂ ರಾಜಕಾರಣಿ ಸಿ.ಪಿ. ಯೋಗೇಶ್ವರ ಅವರ ಪುತ್ರಿ ಸಮಾಜ ಸೇವಕಿ ನಿಶಾ ಯೋಗೇಶ್ವರ್ ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು (ಆ.26): ನಟ ಹಾಗೂ ರಾಜಕಾರಣಿ ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ ಅವರ ಪುತ್ರಿ ನಿಶಾ ಯೋಗೇಶ್ವರ ಅವರು ಕನ್ನಡ ಬಿಗ್ ಬಾಸ್ ಸೀಸನ್ -11ರಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣವನ್ನು ನೀಡಿರುವ ನಿಶಾ ಯೋಗೇಶ್ವರ್ ಅವರು ನಾನು ಎಂದಿಗೂ ಬಿಗ್ ಬಾಸ್ ಮನೆಗೆ ಕಾಲಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ರೀಲ್ಸ್ ಮಾಡಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಇ ಭಾಗವಹಿಸುವ ಬಗ್ಗೆ ಮಾತನಾಡುತ್ತಾ, 'ಬಿಗ್ ಬಾಸ್ ಒಂದು ಖ್ಯಾತ ರಿಯಾಲಿಟಿ ಶೋ ಆಗಿದೆ. ಪ್ರತಿ ಬಾರಿ ಕನ್ನಡದ ಬಿಗ್ ಬಾಸ್ ಶೋ ಆರಂಭವಾಗುವ ಮುನ್ನ ಹಲವಾರು ಬಾರಿ ನನ್ನ ಹೆಸರು ಕೂಡ ಭಾಗವಹಿಸುತ್ತಾರೆ ತಳುಕು ಹಾಕಲಾಗುತ್ತಿದೆ. ಹೀಗಾಗಿ, ಯಾವಾಗಲೂ ಬಿಗ್ ಬಾಸ್ ಸೀಸನ್ ಆರಂಭವಾಗುವ ಮುನ್ನ ಹಲವರು ಕಂಗ್ರಾಟ್ಸ್ ಮೇಡಂ ನೀವು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಕ್ಕೆ ಎಂದು ವಿಶ್ ಮಾಡುತ್ತಾರೆ. ಆದರೆ, ನನ್ನ ಬಗ್ಗೆ ಎಲ್ಲೋ ಒಂದು ಕಡೆ ತಪ್ಪು ಸಂದೇಶ ಹರಡುತ್ತಲೇ ಇರುತ್ತದೆ. ಇದು ಮೊದಲನೇ ಬಾರಿಯೇನಲ್ಲ. ಪ್ರತಿ ಸೀಸನ್‌ನಲ್ಲೂ ನನ್ನ ಹೆಸರು ಮುನ್ನೆಲೆಗೆ ಬರುತ್ತದೆ. ಅದಕ್ಕೆ ಈ ಬಾರಿ ಬಿಗ್ ಬಾಸ್ ಸ್ಪರ್ಧೆ ಕುರಿತು ಸ್ಪಷ್ಟನೆಯನ್ನು ಕೊಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸುವರ್ಣನ್ಯೂಸ್ ಮುಖ್ಯಸ್ಥ ಅಜಿತ್ ಬಿಗ್‌ಬಾಸ್‌ಗೆ ಹೋಗುತ್ತಾರಾ? ಸೋಷಿಯಲ್ ಮೀಡಿಯಾ ಹೇಳೋದೇನು?
ನನಗೆ ಯಾವತ್ತೂ ಬಿಗ್ ಬಾಸ್ ಸ್ಪರ್ಧೆಯ ಬಗ್ಗೆ ಆಸಕ್ತಿ ಇರಲಿಲ್ಲ. ಇನ್ನುಮುಂದೆಯೂ ನನಗೆ ಯಾವತ್ತೂ ನನಗೆ ಸ್ಪರ್ಧೆಯ ಬಗ್ಗೆ ಆಸಕ್ತಿಯೂ ಬರುವುದಿಲ್ಲ. ನನ್ನ ಹಾದಿಯೇ ಸಂಪೂರ್ಣವಾಗಿ ವಿಭಿನ್ನವಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಎಂದು ನಾನೆಂದಿಗೂ ಆಸಕ್ತಿ ತೋರಿಸಿಲ್ಲ. ಆದರೆ, ಯಾವಾಗಲೂ ಈ ಸುದ್ದಿಯನ್ನು ಸತ್ಯವೋ, ಸುಳ್ಳೋ ಎಂಬುದನ್ನು ಒಂದಿನಿತೂ ಸ್ಪಷ್ಟನೆಯನ್ನು ತೆಗೆದುಕೊಳ್ಳದೇ, ಟಿವಿಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನಾನೊಬ್ಬ ಬಿಗ್ ಬಾಸ್ ಸ್ಪರ್ಧಿ ಎಂದು ಪ್ರಚಾರವನ್ನು ಮಾಡುತ್ತಾರೆ. ಆದರೆ, ಅದನ್ನು ಯಾಕೆ ಮಾಡುತ್ತಾರೆ, ಯಾರು ಮಾಡಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದ್ದರಿಂದ ನಾನು ನನ್ನದೇ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಜನರಿಗೆ ಸ್ಪಷ್ಟನೆಯನ್ನು ಕೊಡಬೇಕು ಎಂದು ಬಂದಿದ್ದೇನೆ.
ನಾನು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ. ಈ ಸೀಸನ್ ಮಾತ್ರವಲ್ಲದೇ ಮುಂದಿನ ಯಾವುದೇ ಬಿಗ್ ಬಾಸ್ ಸೀಸನ್‌ಗಳಲ್ಲಿ ಸ್ಪರ್ಧೆಯಾಗಿ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಇನ್ನು ನನ್ನ ಆಲೋಚನೆ, ನಾನು ಹೋಗುವ ದಾರಿಯೇ ಬದಲಿಯಾಗಿದ್ದು, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಈ ಕುರಿತ ಮಾಹಿತಿಗೆ ಇಲ್ಲಿದೆ ಅಧಿಕೃತ ಲಿಂಕ್ : https://www.facebook.com/reel/432554883140648
ನಾನು ಏಕಲವ್ಯ, ರಜನಿಕಾಂತ್ ದ್ರೋಣಾಚಾರ್ಯ: ಯೋಗಿಯಂತಹ ವ್ಯಕ್ತಿ ಜತೆ ನಟಿಸೋ ಭಾಗ್ಯ ಸಿಕ್ಕಿದೆ ಎಂದ ಉಪೇಂದ್ರ
ಇನ್ನು ಇತ್ತೀಚಿನ ಕೆಲವು ದಿನಗಳಿಂದ ಸುವರ್ಣ ನ್ಯೂಸ್ ಕನ್ನಡ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್ ಅವರು ಕೂಡ ಕನ್ನಡ ಬಿಗ್ ಬಾಸ್ ಸೀಸನ್ -11ರಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸ್ವತಃ ಅಜಿತ್ ಹನಮಕ್ಕನವರ್ ಅವರು ಈವರೆಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಬಿಗ್ ಬಾಸ್ ತಂಡದಿಂದ ತಮ್ಮನ್ನು ಸಂಪರ್ಕ ಮಾಡಿದ್ದಾರೋ ಅಥವಾ ಇಲ್ಲವೆಂಬುದೂ ತಿಳಿದುಬಂದಿಲ್ಲ. ಆದರೆ, ಅಜಿತ್ ಅವರು ತಮ್ಮ ಫಾಲೋವರ್ಸ್‌ಗೆ ಪೋಲ್ ಹಾಕಿದ್ದು, ಎರಡು ಪ್ರಶ್ನೆಗಳನ್ನಿಟ್ಟಿದ್ದಾರೆ. ಈ ಸುದ್ದಿ ಸತ್ಯ ಅಂತ ಎಷ್ಟು ಜನರಿಗೆ ಅನ್ನಿಸತ್ತೆ..? ಸತ್ಯ ಆಗಿರ್ಲಿ ಅಂತ ಯಾರ್ಯಾರಿಗೆ ಅನ್ನಿಸತ್ತೆ. .? ಎಂದು ಕೇಳಿದ್ದಾರೆ.