Niranjan Deshpande ಹುಟ್ಟುಹಬ್ಬದ ದಿನವೇ ಮೂಗು ಚುಚ್ಚುಸಿಕೊಂಡು ಗಿಫ್ಟ್‌ ಕೊಟ್ಟ ಪತ್ನಿ

ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿರಂಜನ್. ಪತ್ನಿ ಕೊಟ್ರು ಸರ್ಪ್ರೈಸ್‌ ಗಿಫ್ಟ್‌...

Niranjan deshpande celebrates birthday wife gets nose pierced vcs

ಕನ್ನಡ ಚಿತ್ರರಂಗದ ಅದ್ಬುತ ನಟ, ಕಿರುತೆರೆ ನಿರೂಪಕ ನಿರಂಜನ್ ದೇಶಪಾಂಡೆ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಕಲರ್ಸ್‌ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಗಳ ಜೊತೆ ಆಚರಿಸಿಕೊಂಡಿದ್ದಾರೆ. ನಿರಂಜನ್ ಪತ್ನಿ ಯಶಸ್ವಿನಿ ಕೂಡ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರತೆರೆಗೆ ಕಾಲಿಟ್ಟಿರುವ ಕಾರಣ ಇಬ್ಬರೂ ಸೆಲೆಬ್ರಿಟಿಗಳಾಗಿದ್ದಾರೆ. ಪತಿ ಬರ್ತಡೇಗೆ ಏನಾದರೂ ವಿಶೇಷ ಗಿಫ್ಟ್‌ ಕೊಡಬೇಕು ಎಂದು ಯಶಸ್ವಿನಿ ಹೊಸ ಪ್ರಯತ್ನ ಮಾಡಿದ್ದಾರೆ.

'ನಿಮ್ಮ ಹತ್ತಿರವಾಗಿರುವ ಇನ್ನೊಬ್ಬ ವ್ಯಕ್ತಿಯಿಂದ ಒಂದು ವಿಶ್ ಜೊತೆಗೆ ಒಂದು ಸ್ಪೆಷಲ್ ಗಿಫ್ಟ್ ಗಾಬರಿ ಅಗಬೇಡಿ ದಯವಿಟ್ಟು ನೋಡಿ' ಎಂದು ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಒಂದು ವಿಡಿಯೋ ಪ್ಲೇ ಮಾಡಲಾಗುತ್ತದೆ. ಆ ವಿಡಿಯೋದಲ್ಲಿ ನಿರಂಜನ್ ಪತ್ನಿ ಮಾಡಿರುವ ವಿಶ್ ಪ್ರಸಾರವಾಗುತ್ತದೆ.

ಫೇಸ್‌ಬುಕ್‌ ಲವ್‌; ಕಷ್ಟ ದಿನಗಳ ಬಗ್ಗೆ Niranjan Deshpande ಮಾತು

'ಹಾಯ್ ಪಾಂಡೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸ್ಪೆಷಲ್ ದಿನ ನಾನು ನಿನಗೆ ತುಂಬಾ ಇಷ್ಟ ಆಗುವಂತ ಕೆಲಸ ಮಾಡಿದ್ದೀನಿ. ತುಂಬಾ ವರ್ಷಗಳಿಂದ ನೀನು ಈ ಆಸೆನ ನನ್ನ ಜೊತೆ ಹಂಚಿಕೊಂಡು ನನ್ನನ್ನು ಕೇಳುತ್ತಿರುವೆ. ಮೂಗು ಚುಚ್ಚಿಸಿಕೋ ತುಂಬಾ ಮುದ್ದು ಮುದ್ದಾಗಿ ಕಾಣಿಸುತ್ತೆ ಚೆನ್ನಾಗಿ ಕಾಣಿಸುತ್ತೀಯಾ ಹಾಗೆ ಹೀಗೆ ಅಂತ ನನಗೆ ತುಂಬಾ ಭಯ ಇತ್ತು ಈಗಲೂ ಇದೆ ಏನಾಗುತ್ತೆ ಏನೋ ಗೊತ್ತಿಲ್ಲ ನಿನಗೋಸ್ಕರ ನಿನ್ನ ಬರ್ತಡೇ ಗೋಸ್ಕರ ನೀನು ಖುಷಿ ಖೂಷಿಯಾಗಿರುವುದಕ್ಕೆಂದು ನಾನು ಇವಾಗ ಒಂದು ಕೆಲಸ ಮಾಡುತ್ತಿರುವೆ.' ಎಂದು ವಿಡಿಯೋದಲ್ಲಿ ಯಶಸ್ವಿನಿ ಮಾತನಾಡಿದ್ದಾರೆ. 

 

'ಮೂಗು ಚುಚ್ಚಿಸಿಕೊಳ್ಳುತ್ತಿರುವೆ. ನನಗೆ ಇರುವುದು ಒಂದೇ ಒಂದು ಮೂಗು ನನ್ನ ಗಂಡನಿಗೋಸ್ಕರ ಚುಚ್ಚಿಸಿಕೊಳ್ಳುತ್ತಿರುವೆ. ನಿಜ ಭಯ ಅಗುತ್ತಿದೆ. ನೋಡಿ ಎಷ್ಟು ನೋವಾಗುತ್ತಿದೆ. ಈ ಮೂಗು ನಿನಗೋಸ್ಕರ ಈ ಮೂಗು ಬೊಟ್ಟು ನಿನಗೋಸ್ಕರ. ಹ್ಯಾಪಿ ಬರ್ತಡೇ ಪಾಂಡೆ' ಎಂದು ಯಶಸ್ವಿನಿ ವಿಡಿಯೋದಲ್ಲಿ ಹೇಳಿದ ಕೆಲವೇ ಕ್ಷಣಗಳಲ್ಲಿ ವೇದಿಕೆ ಮೇಲೆ ಬರುತ್ತಾರೆ.

'ನನ್ನ ಹೆಂಡತಿ ಮೂಗು ಚುಚ್ಚಿಸಿಕೊಂಡಿರುವುದು ನನ್ನ ಬರ್ತಡೇ ಗಿಫ್ಟ್‌ ಹೇಗಾಯ್ತು ಅಂತ ಯೋಚನೆ ಮಾಡುತ್ತಿರುವೆ. ಚುಚ್ಚಿಸಿಕೊಡಿರುವುದು ಅವಳು ಮೂಗು ಬೊಟ್ಟು ಅವಳದ್ದು. ನನಗೆ ಏನು ಸಿಗ್ತು' ಎಂದು ನಿರಂಜನ್ ಹೇಳಿದಕ್ಕೆ ಸೃಜನ್ ಟಾಂಗ್ ಕೊಡುತ್ತಾರೆ. 'ಚುಚ್ಚಿಸಿಕೊಂಡಿದ್ದು ಅವಳು ಮೂಗು ಬೊಟ್ಟು ಅವಳದ್ದು ಬಟ್ ಇದೆಲ್ಲಾ ನಿನಗೋಸ್ಕರ' ಎಂದು ಸೃಜನ್ ಹೇಳುತ್ತಾರೆ.

ನನ್ನ ಗಂಡ ಸೆಟ್ ಮಾತ್ರವಲ್ಲ ಮನೆಯಲ್ಲೂ ನನಗೆ ಆಕ್ಟಿಂಗ್ ಪಾಠ ಮಾಡ್ತಾನೆ: ಯಶಸ್ವಿನಿ

'ನನ್ನ ಹೆಂಡತಿ ಈ ರೀತಿ ಸಾಹಸ ಮಾಡುತ್ತಾಳೆ ಎಂದು ಗೊತ್ತಿರಲಿಲ್ಲ ನಿಜ ಚೆನ್ನಾಗಿದೆ ಮುದ್ದಾಗಿ ಕಾಣಿಸುತ್ತಿರುವೆ ಕಣ್ಣಲ್ಲಿ ನೀರು ಬಂದಿದೆ. ನನ್ನ ಬಹಳ ವರ್ಷಗಳ ಆಸೆ ಇದು ಆದರೆ ನನಗೋಸ್ಕರ ನೀನು ಇಷ್ಟೊಂದು ನೋವು ತೆಗೆದುಕೊಂಡೆ ಅಂತ ಬಹಳ ಬೇಸರ ಆಗ್ತಿದೆ.' ಎಂದು ನಿರಂಜನ್ ಸಂತಸ ವ್ಯಕ್ತ ಪಡಿಸಿದ್ದಾರೆ.

'ಎಷ್ಟೊಂದು ಚಾನೆಲ್‌ಗಳಲ್ಲಿ ಎಲ್ಲರ ಬರ್ತಡೇ ಸೆಲೆಬ್ರೇಟ್ ಮಾಡಿದ್ವಿ ಮಜಾ ಅಂದ್ರೆ ನಮ್ಮ ವಂಶಿ ಯು-ಕೆಜಿ ಅಥವಾ ಎಲ್‌ಕೆಜಿ ಪಾಸ್ ಅಗಿರುವುದಕ್ಕೆ ಕೇಕ್ ಕಟ್ ಮಾಡಿಸಿದ್ದೀವಿ ಹೇಗೆ ಅಂದ್ರೆ ಎಲ್ಲರಿಗೂ ಮಾಡಿಸುತ್ತಿರುತ್ತೀವಿ ಆದರೆ ನಾವು ಇದೆಲ್ಲಾ ನಿರೀಕ್ಷೆ ಮಾಡುವುದಿಲ್ಲ ಏಕೆಂದರೆ ನಿರೂಪಕನಾಗಿ ನನ್ನ ಜೀವನ ಎಲ್ಲಾ ಬೇರೆ ಅವರಿಗೆ ಮಾಡಿಸುವುದೇ ಅವರನ್ನು ಗ್ರ್ಯಾಂಡ್ ಆಗಿ ಸ್ವಾಗತ ಮಾಡಿಕೊಳ್ಳುವುದು ಇದೇ ಈ ರೀತಿ ನನಗೆ ಮಾಡಿದ್ದಾಗ ನನಗೆ ಸ್ಪೆಷಲ್ ಫೀಲ್ ಆಗುತ್ತದೆ' ಎಂದು ನಿರಂಜನ್ ಭಾವುಕರಾಗಿದ್ದಾರೆ.

Latest Videos
Follow Us:
Download App:
  • android
  • ios