Asianet Suvarna News Asianet Suvarna News

ಅಬ್ಬಬ್ಬಾ, ಎಂಥಾ ಅಬ್ಸರ್ವೇಶನ್ನು! ಅಮೃತಧಾರೆಯ ಈ ನಟಿಗೆ ಕುತ್ತಿಗೇನೆ ಇಲ್ವಾ? ಈ ಥರ ಕಾಮೆಂಟ್ ಮಾಡ್ತಿರೋದು ಯಾರಿಗೆ?

 ಅಮೃತಧಾರೆ ಸೀರಿಯಲ್‌ನಲ್ಲಿ ಒಬ್ಬ ನಟಿಗೆ ಕುತ್ತಿಗೆನೇ ಇಲ್ವಂತೆ! ನೆಟ್ಟಿಗರು ಹೀಗೆ ಕಾಮೆಂಟ್ ಮಾಡ್ತಿರೋ ನಟಿ ಯಾರು ಗೊತ್ತಾ? ಅಷ್ಟಕ್ಕೂ ಹೀಗೆಲ್ಲ ಯಾಕೆ ಹೇಳ್ತಿದ್ದಾರೆ..

Netizens commenting on zee kannada amruthadhare serial diya character artist
Author
First Published Aug 27, 2024, 12:01 PM IST | Last Updated Aug 27, 2024, 2:26 PM IST

ಮೃತಧಾರೆ ಸೀರಿಯಲ್‌ ಇದೀಗ ಮತ್ತೊಂದು ಘಟ್ಟಕ್ಕೆ ಹೊರಳಿದೆ. ಈ ಮೊದಲು ಗೌತಮ್, ಭೂಮಿಕಾ ಜೊತೆಗಿನ ಲವ್‌ ಸ್ಟೋರಿ, ಶಕುಂತಲಾ ಮಾಡುವ ಹುನ್ನಾರಗಳ ಬಗ್ಗೆ ಈ ಸೀರಿಯಲ್ ಕಥೆ ಇತ್ತು. ಇದೀಗ ಅಕ್ಕ ತಂಗಿ ನಡುವಿನ ದ್ವೇಷದ ಕಥೆಯಾಗಿ ಟರ್ನ್ ತಗೊಳ್ತಿದೆ. ಇದರ ಹಿಂದಿನ ಸೂತ್ರಧಾರಿಯಾಗಿ ಶಕುಂತಲಾ ಇದ್ದಾಳೆ. ಇದರ ನಡುವೆ ಇನ್ನೊಂದು ಸ್ಟೋರಿಲೈನ್‌ ಓಪನ್ ಆಗಿದೆ. ಅದು ಜೈದೇವ್ ದಿಯಾ ಅಕ್ರಮ ಸಂಬಂಧ. ಇಷ್ಟಕ್ಕೂ ಈ ದಿಯಾ ಮತ್ಯಾರೂ ಅಲ್ಲ, ಗೌತಮ್, ಜೈದೇವ್ ತಂಗಿ ಅಶ್ವಿನಿಯ ಗೆಳತಿ.

ಒಮ್ಮೆ ಅವಳು ಅಶ್ವಿನಿ ಮನೆಗೆ ಬಂದಾಗ ಅಲ್ಲಿ ಆಗಷ್ಟೇ ಸ್ನಾನ ಮಾಡಿಕೊಂಡು ಬರೀ ಟವಲ್ ಸುತ್ತಿಕೊಂಡಿರೋ ಜೈದೇವ್‌ನನ್ನು ನೋಡ್ತಾಳೆ. ಆ ವೇಷದಲ್ಲಿ ಅಲ್ಲಿ ಅವನನ್ನು ನೋಡಿದವಳು ಸಾರಿ ಕೇಳಿ ನಾಚಿಕೊಂಡು ಹೊರಗಡೆ ಹೋಗುತ್ತಾಳೆ. ಅವನು ಅವಳನ್ನು ಕರೆಯುತ್ತಾನೆ. ನಂತರ ಡ್ರೆಸ್​ ಮಾಡಿಕೊಂಡು ಹೊರಗಡೆ ಬರುತ್ತಾನೆ. ಬಂದು ಅವಳನ್ನು ಮಾತಾಡಿಸುತ್ತಾನೆ. ಅಶ್ವಿನಿ ಎಲ್ಲಿ ಎಂದು ಕೇಳುತ್ತಾನೆ. ಅವಳು ಕಾಲ್​ನಲ್ಲಿ ಮಾತಾಡ್ತಾ ಇದ್ದಾಳೆ ಎಂದು ಹೇಳುತ್ತಾಳೆ. ಆಗ ಅವನು ಹೇಳ್ತಾನೆ ನಾನು ತುಂಬಾ ಸ್ಟ್ರೈಟ್​ ಫಾರ್ವರ್ಡ್​​​ ಎಂದು ಹೇಳುತ್ತಾನೆ, ಅವಳೊಟ್ಟಿಗೆ ಮಾತಿಗಿಳಿಯುತ್ತಾನೆ. ಆಗ ಅವಳು ಮಾತಾಡ್ತಾಳೆ ನಾನು ನಿಮ್ಮಂತ ಹುಡುಗರನ್ನು ತುಂಬಾ ಇಷ್ಟಪಡ್ತೀನಿ.

ಬ್ರಹ್ಮಗಂಟು ಸೀರಿಯಲ್: ದೀಪಾಗೊಂದು ಹೊಸ ಡ್ರೆಸ್ ಕೊಡ್ಸಿ, ತಲೆ ಚಿಟ್ಟು ಹಿಡೀತಿದೆ, ನೋಡಕ್ಕಾಗ್ತಿಲ್ಲ ಅಂತಿದ್ದಾರೆ ಫ್ಯಾನ್ಸ್

ಹೀಗೆ ಶುರುವಾದ ಜೈದೇವ್ ಮತ್ತು ದಿಯಾರ ಸ್ನೇಹ ಪ್ರೇಮಕ್ಕೆ ತಿರುಗೋದಕ್ಕೆ ಜಾಸ್ತಿ ಸಮಯ ಹಿಡಿಯಲ್ಲ. ಅದೇ ರೀತಿ ಇದು ಗೌತಮ್ ಕಣ್ಣಿಗೆ ಬೀಳೋದಕ್ಕೆ ಹೆಚ್ಚು ಕಾಲ ಬೇಕಾಗಲ್ಲ. ಗೌತಮ್ ದಿವಾನ್ ಹೆಸರಲ್ಲಿ ದುಬಾರಿ ಕಾರು ಕೊಳ್ಳೋದಕ್ಕೆ ಜೈದೇವ್ ಹೋಗ್ತಾನೆ. ತಾನು ಹೇಳದೇ ತನ್ನ ಹೆಸರಲ್ಲಿ ಯಾಕೆ ಕಾರು ರಿಜಿಸ್ಟರ್ ಆಗಿದೆ ಅಂತ ನೋಡೋದಕ್ಕೆ ಬಂದ ಗೌತಮ್‌ಗೆ ಶೋರೂಮ್‌ನಲ್ಲಿ ಜೈದೇವ್ ಮತ್ತ ದಿಯಾ ರೊಮ್ಯಾಂಟಿಕ್ ಆಗಿರೋದು ನೋಡಿ ಶಾಕ್ ಆಗುತ್ತೆ. 'ಬಂಗಾರದಂತಹ ಹೆಂಡತಿಯನ್ನು ಇಟ್ಟುಕೊಂಡು ಇಂತಹ ಕೆಲಸ ಮಾಡಲು ನಾಚಿಕೆ ಆಗೋಲ್ವ' ತಾನು ಜೈದೇವ್ ಕತ್ತಿನ ಪಟ್ಟಿ ಹಿಡಿದು ಕೇಳ್ಬೇಕು ಅಂದುಕೊಳ್ತಾನೆ ಗೌತಮ್. ಆದರೆ ಇದರಿಂದ ಈಗಿರುವ ಸಂಬಂಧ ಹಾಳಾಗಿ ಮನೆ ಎಲ್ಲ ಪಾಲಾಗಿ ಎಲ್ಲರೂ ಒಂದಾಗಿರಬೇಕು ಎಂಬ ತನ್ನ ತಂದೆಯ ಕನಸಿಗೆ ಎಲ್ಲಿ ಭಂಗ ಬರುತ್ತದೋ ಅಂತ ಸುಮ್ಮನಾಗ್ತಾನೆ.

ಇದರಿಂದ ಜೈದೇವ್ ಲೈಫ್ ಅಂತೂ ಬಿಂದಾಸ್ ಆಗಿ ನಡೆಯುತ್ತೆ. ಇನ್ನೊಂದು ಕಡೆ ತಾನು ತನ್ನ ತಮ್ಮ ಪಾರ್ಥನ ಕೊಲೆಗೆ ಮುಂದಾದ ಸತ್ಯ ತಿಳೀತು ಅಂತ ಆತ ಗೌತಮ್ ಗೆಳೆಯ ಆನಂದನನ್ನೇ ಮುಗಿಸೋದಕ್ಕೆ ಹೊರಟಿದ್ದಾನೆ. ಇದೀಗ ಆನಂದ್ ಕೋಮಾಗೆ ಹೋಗಿದ್ದಾನೆ. ಯಾರು ಮಾತನಾಡಿಸಿದ್ರೂ ರಿಯಾಕ್ಟ್ ಆಗದ ಆನಂದ್ ವಿಲನ್ ಜೈದೇವ್ ವಾಯ್ಸ್‌ಗೆ ಸಣ್ಣ ಚಲನೆ ತೋರಿಸಿದ್ದಾನೆ. ಮುಂದೆ ಈ ಕೇಡಿ ಏನ್ ಮಾಡ್ತಾನೋ ಗೊತ್ತಿಲ್ಲ.

ಲಕ್ಷ್ಮೀ ಬಾರಮ್ಮದ ಭೂಮಿ ಗಗನ್ ಜೊತೆ ಲವ್ವಿ ಡವ್ವಿ, ವೈಷ್ಣವ್‌ನ ಮರೆತೇ ಬಿಟ್ರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್

ಈಗ ಈತನ ಲವರ್ ದಿಯಾಗೆ ಈತನ ಬಗ್ಗೆ ಭಯ ಹುಟ್ಟಿದೆ. ಕೊಲೆಯಂಥಾ ಕೃತ್ಯಕ್ಕೆ ಮುಂದಾಗಿರೋ ಜೈದೇವ್‌ನಿಂದ ಆತನ ರಿಲೇಶನ್‌ಶಿಪ್‌ನಿಂದ ಪಾರಾದೋ ಬಗ್ಗೆ ಅವಳು ಯೋಚಿಸ್ತಿದ್ದಾಳೆ.

ಈ ಸ್ಟೋರಿ ಪ್ರೋಮೋಗೆ ರಿಯಾಕ್ಟ್ ಮಾಡಿರೋ ಕೆಲವರು ದಿಯಾ ಪಾತ್ರಧಾರಿಯ ಕತ್ತಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇವಳಿಗೆ ಕುತ್ತಿಗೆನೇ ಇಲ್ವಲ್ಲಾ ಗುರು ಅಂದುಬಿಟ್ಟಿದ್ದಾರೆ. ಈ ಬಾಡಿ ಶೇಮಿಂಗ್ ಅನ್ನೋದು ಸೋಷಿಯಲ್ ಮೀಡಿಯಾದ ಅವಿಭಾಜ್ಯ ಅಂಗದ ಥರ ಆಗಿಬಿಟ್ಟಿದೆ. ಅದರಲ್ಲೂ ನಟ ನಟಿಯರ ದೇಹದ ಬಗ್ಗೆ ಕಾಮೆಂಟ್ ಮಾಡೋದು ಇವರ ಖಯಾಲಿ ಆಗ್ಬಿಟ್ಟಿದೆ. ಇದೀಗ ದಿಯಾ ಪಾತ್ರಧಾರಿಯ ಕುತ್ತಿಗೆ ಬಗ್ಗೆ ಮಾಡಿರೋ ಕಾಮೆಂಟ್‌ಗೆ ಒಂದಿಷ್ಟು ಜನ ಗುಡ್ ಅಬ್ಸರ್ವೇಶನ್ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟಿದ್ದಾರೆ. ಇದೇನಾದ್ರೂ ಆ ನಟಿಗೆ ಗೊತ್ತಾದ್ರೆ ಆಕೆ ಹಿಂದಿನ ಕಾನ್ಫಿಡೆನ್ಸ್‌ನಿಂದ ಆಕ್ಟ್ ಮಾಡೋದಕ್ಕೆ ಆಗುತ್ತಾ ಅನ್ನೋದು ನಮ್ಮ ಮುಂದಿರೋ ಪ್ರಶ್ನೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios