ಲಕ್ಷ್ಮೀ ಬಾರಮ್ಮದ ಭೂಮಿ ಗಗನ್ ಜೊತೆ ಲವ್ವಿ ಡವ್ವಿ, ವೈಷ್ಣವ್‌ನ ಮರೆತೇ ಬಿಟ್ರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್
ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಮುದ್ದಿನ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ಸುರೇಶ್, ತೆಲುಗು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ಅವರ ಜೋಡಿ ಕನ್ನಡದ ನಟ ಅಭಿನವ್ ಜೊತೆ ಇದೆ. ಈ ಬೆಳವಣಿಗೆ ಅವರ ಕನ್ನಡ ಅಭಿಮಾನಿಗಳಿಗೆ ಸಂತಸ ತಂದಿಲ್ಲ.
ವೈಷ್ಣವ್ ಬಾಯಲ್ಲಿ ಮುದ್ದಾಗಿ ಮಹಾಲಕ್ಷ್ಮೀ ಅಂತ ಕರೆಸಿಕೊಳ್ತಿದ್ದ ಹುಡುಗಿಗೆ ಏಕ್‌ದಂ ಮನಸ್ಸು ಬದಲಾಗಿದೆಯಾ? ಹೀಗೊಂದು ಪ್ರಶ್ನೆ ಮಾಡ್ತಿರೋದು ಕಲರ್ಸ್ ಕನ್ನಡದ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಫ್ಯಾನ್ಸ್. ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಏನಕ್ಕೆ ಬಂತು ಅಂದ್ರೆ ಅದಕ್ಕೂ ಒಂದು ರೀಸನ್ ಇದೆ. ಆ ರೀಸನ್ ಸಖತ್ ಇಂಟರೆಸ್ಟಿಂಗ್ ಆಗಿಯೂ ಇದೆ. ಹೀಗಾಗಿಯೇ ಸೋಷಿಯಲ್ ಮೀಡಿಯದಲ್ಲಿ ಈ ವಿಚಾರ ಸದ್ಯ ಸಖತ್ ಚರ್ಚೆಯಲ್ಲಿದೆ.
ಅಂದಹಾಗೆ ಕನ್ನಡದ ನಟಿಯರು ಸೌತ್ ಇಂಡಿಯನ್ ಮನರಂಜನಾ ಇಂಡಸ್ಟ್ರಿಯಲ್ಲಿ ಅತ್ಯಧಿಕ ಅವಕಾಶ ಪಡೆಯುವವರು ಅಂತಲೇ ಫೇಮಸ್. ಇದಕ್ಕೆ ಸಾಕ್ಷಿ ಅನ್ನೋ ಹಾಗೆ ತೆಲುಗು, ತಮಿಳು ಸಿನಿಮಾ, ಸೀರಿಯಲ್‌ಗಳಲ್ಲೆಲ್ಲ ಕನ್ನಡ ಹುಡುಗಿಯರದೇ ಕಮಾಲ್. ಹಾಗಂತ ಹುಡುಗರು ಏನೂ ಹಿಂದೆ ಬಿದ್ದಿಲ್ಲ. ಕನ್ನಡದ ಸಾಕಷ್ಟು ಪ್ರತಿಭೆಗಳು ಬೇರೆ ಭಾಷೆಗಳ ಕಿರುತೆರೆಯಲ್ಲಿ ನಟನಾ ಕೌಶಲ ತೋರಿಸುತ್ತಿದ್ದಾರೆ. ಆದರೆ ಇವರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದಿಲ್ಲ. ಇರಲಿ, ಈಗ ಹೇಳಲು ಹೊರಟಿರೋದು ಭೂಮಿಕಾ ರಮೇಶ್ ಅನ್ನೋ ಸಜ್ಜನಿಕೆಯ ಹುಡುಗಿ ಬಗ್ಗೆ.
ಈಕೆ ಮೈಸೂರಿನ ಅಪ್ಪಟ ಕನ್ನಡದ ಹುಡುಗಿ. ನಟನೆಗೂ ಸೈ, ಡ್ಯಾನ್ಸ್‌ಗೂ ಜೈ ಅಂತಿರೋಳು. ಈ ಹುಡುಗಿ ನಟನಾ ರಂಗಕ್ಕೆ ಬಂದಿದ್ದು 'ಲಕ್ಷ್ಮೀ ಬಾರಮ್ಮಾ' ಸೀರಿಯಲ್ ಮೂಲಕ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್‌ನಲ್ಲಿ ಈಕೆ ಅಕ್ಕ ಭಾಗ್ಯಾಳ ಪಾಲಿಗೆ ಮುದ್ದಿನ ಲಡ್ಡು. ತನ್ನ ತಂಗಿಗೆ ಶ್ರೀರಾಮಚಂದ್ರನಂಥಾ ಹುಡುಗನನ್ನು ಹುಡುಕ್ತೀನಿ ಅಂತ ಭಾಗ್ಯ ಹುಡುಕಿದ್ದು ವೈಷ್ಣವ್ ಎಂಬ ಗಾಯಕನನ್ನು. ಈತನೋ ಮೊದಲೇ ಬೇರೆ ಹುಡುಗಿ ಜೊತೆ ಪ್ರೀತಿಯಲ್ಲಿ ಬಿದ್ದವನು. ಆದರೆ ಪರಿಸ್ಥಿತಿಯ ದಾಳಿಗೆ ಸಿಕ್ಕಿ ಬ್ರೇಕಪ್ ಆಗಿ ಲಕ್ಷ್ಮೀ ಬದುಕಿಗೆ ಬಂದವನು. ಈ ವೈಷ್ಣವ್ ಮತ್ತು ಲಕ್ಷ್ಮೀ ಜೋಡಿಗೆ ತುಂಬ ಜನ ಫ್ಯಾನ್ಸ್ ಇದ್ದಾರೆ.
ಅಪರೂಪಕ್ಕೆ ಒಟ್ಟಾಗಿ ಕಾಣಿಸಿಕೊಂಡ ಇಶಿತಾ-ಮುರುಗಾ; ಬೀದಿ ಬೀದಿ ಸುತ್ತೋದೇ ಆಯ್ತು ಎಂದು ಬೈದ ನೆಟ್ಟಿಗರು!
ಆದರೆ ಈ ನಡುವೆ ಇನ್ನೊಂದು ಬೆಳವಣಿಗೆ ಆಗಿದೆ. ಭೂಮಿಕಾಗೆ ತೆಲುಗಿನ ಸೀರಿಯಲ್ ಒಂದರಲ್ಲಿ ನಾಯಕಿಯಾಗಿ ನಟಿಸೋ ಅವಕಾಶ ಬಂದಿದೆ. ಭೂಮಿಕಾ ಎರಡೂ ಭಾಷೆಯಲ್ಲಿ ನಟಿಸಲು ಓಕೆ ಅಂದಿದ್ದಾರೆ. ಜೀ ತೆಲುಗಿನಲ್ಲಿ ಪ್ರಸಾರ ಆಗ್ತಿರೋ ಆ ಸಿರಿಯಲ್‌ನ ಮಜಾ ಅಂದರೆ ಅದರ ಹೀರೋ ಕೂಡ ಕನ್ನಡದ ಹುಡುಗ. ಆತ ಮತ್ಯಾರೂ ಅಲ್ಲ, ನನ್ನರಸಿ ರಾಧೆ ಸೀರಿಯಲ್‌ನ ಅಗಸ್ತ್ಯ ಅಂತಲೇ ಫೇಮಸ್ ಆಗಿರೋ ಅಭಿನವ್. ಕನ್ನಡದಲ್ಲಿ ಲಕ್ಷ್ಮೀ ವೈಷ್ಣವ್ ಫೇಮಸ್ ಆದ್ರೆ, ತೆಲುಗು ಕಿರುತೆರೆಯಲ್ಲಿ ಭೂಮಿ ಗಗನ್ ಜೋಡಿ ಸಖತ್ ಫೇಮಸ್. ಲಕ್ಷ್ಮೀ ಬಾರಮ್ಮದ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ಸುರೇಶ್ ಈ ತೆಲುಗು ಸೀರಿಯಲ್‌ನ ಭೂಮಿ. ನನ್ನರಸಿ ರಾಧೆ ಸೀರಿಯಲ್‌ನ ಅಗಸ್ತ್ಯನೇ ಆ ಸೀರಿಯಲ್‌ನ ಗಗನ್.
ತುಂಬು ಗರ್ಭಿಣಿ ನೇಹಾಗೆ ಸಿಹಿಕಹಿ ಚಂದ್ರು ಸ್ಪೆಷಲ್ ದಡ್ ಬಡ್ ದೋಸೆ! ಫಟಾಫಟ್ ದೋಸೆ ನೀವೂ ಮಾಡಿ ನೋಡಿ...
ಈಗ ಸೋಷಿಯಲ್ ಮೀಡಿಯಾದಲ್ಲಿ ಭೂಮಿಕಾ ತೆಲುಗು ಸೀರಿಯಲ್‌ನ ಪ್ರೋಮೋ ಆಗಾಗ ಪೋಸ್ಟ್ ಮಾಡ್ತಿರುತ್ತಾರೆ. ಜೊತೆಗೆ ಆ ಸೀರಿಯಲ್‌ನ ಅವರ ಪೇರ್ ಅಭಿನವ್ ಜೊತೆಗಿನ ರೀಲ್ಸ್, ವೀಡಿಯೋಗಳನ್ನೂ ಅವರ ಇನ್‌ಸ್ಟಾ ಪೇಜ್‌ನಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಇದು ಅವರ ಕನ್ನಡ ಫ್ಯಾನ್ಸ್‌ಗೆ ನುಂಗಲಾರದ ತುತ್ತಾಗಿದೆ. 'ಭೂಮಿ, ಅಭಿನವ್ ಬಂದ್ಮೇಲೆ ವೈಷ್ಣವ್‌ನ ಮರೆತು ಬಿಟ್ಯಾ?' ಅಂತ ನೆಟ್ಟಿಗರು ಕೊಂಕು ಪ್ರಶ್ನೆ ಮಾಡ್ತಿದ್ದಾರೆ. ಇದಕ್ಕೆ ಭೂಮಿಕಾ ಯಾವುದೇ ರೀತಿಯ ಉತ್ತರ ನೀಡೋದಕ್ಕೆ ಹೋಗಿಲ್ಲ. ಸೋ, ಅವರ ಈ ಸೈಲೆನ್ಸ್ ಲಕ್ಷ್ಮೀ ಬಾರಮ್ಮಾ ಫ್ಯಾನ್ಸ್‌ಗೆ ಸಹಿಸೋದಕ್ಕೆ ಆಗ್ತಿಲ್ಲ. ಅದಕ್ಕೆ ತಕ್ಕಂತೆ ಅವರು ಕಾಮೆಂಟ್ ಮಾಡ್ತನೇ ಇದ್ದಾರೆ. ಆದರೆ ಭೂಮಿಕ ರೀಸೆಂಟಾಗಿ ಅಭಿನವ್ ಜೊತೆಗಿನ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿದ್ರೆ ಯಾರಿಗಾದ್ರೂ ಸಣ್ಣ ಡೌಟ್ ಬಂದೇ ಬರುತ್ತೆ.