ಗಂಡನನ್ನು ಮನೆಯಲ್ಲಿ ಬಿಟ್ಟು ಮಗಳ ಮನೆಯಲ್ಲಿಯೇ ಕಾಯಂ ಉಳಿಯುವುದು ಎಷ್ಟು ಸರಿ? ಭಾಗ್ಯಳ ಅಮ್ಮನಿಗೆ ಪ್ರಶ್ನೆ ಕೇಳ್ತಿದ್ದಾರೆ ನೆಟ್ಟಿಗರು!  

ಎಲ್ಲಾ ಕಷ್ಟಗಳನ್ನು, ಎದುರಾಗಿರುವ ಅಡೆತಡೆಗಳನ್ನು ಎದುರಿಸಿ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್​ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್​ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್​ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ.

ಇವೆಲ್ಲವುಗಳ ನಡುವೆಯೇ ತಾಂಡವ್​ನ ಆಟಾಟೋಪವೂ ಹೆಚ್ಚಾಗಿದೆ. ಭಾಗ್ಯಳ ಸಕ್ಸಸ್​ ಸಹಿಸದ ಆತ ಹೆಜ್ಜೆ ಹೆಜ್ಜೆಗೂ ಆಕೆಗೆ ಇನ್​ಸಲ್ಟ್​ ಮಾಡುವುದನ್ನು ಮಾತ್ರ ಬಿಡುತ್ತಿಲ್ಲ. ಇದೀಗ ಮಗಳ ಪರ ವಹಿಸಲು ಬಂದ ಸುನಂದಾ ಮೇಲೆ ತಾಂಡವ್​ ಸಿಟ್ಟು ತಿರುಗಿದೆ. ಬಿಟ್ಟಿ ಊಟ ತಿಂದು ನಮ್ಮ ಮನೆಯಲ್ಲಿಯೇ ಝಾಂಡಾ ಊರಿದ್ದೀರಲ್ಲ, ಎಷ್ಟು ಸರಿ ಎಂದು ಕೇಳಿದ್ದಾನೆ. ಇದರಿಂದ ಭಾಗ್ಯ ಸೇರಿದಂತೆ ಮನೆಯವರಿಗೆಲ್ಲರಿಗೂ ಶಾಕ್​ ಆಗಿದೆ. ಇಷ್ಟಕ್ಕೇ ಮುಗಿದಿಲ್ಲ ತಾಂಡವ್​ ಮಾತು. ಬಾಯಿಗೆ ಬಂದ ರೀತಿಯಲ್ಲಿ ಅತ್ತೆಗೆ ಬೈದಿದ್ದಾನೆ. ಅಮ್ಮನಿಗೆ ಬೈದರೆ ಯಾವ ಮಗಳೂ ಸಹಿಸಲ್ಲ ಎನ್ನುವುದು ಅವನಿಗೂ ಚೆನ್ನಾಗಿ ಗೊತ್ತು. ಇದೇ ಕಾರಣಕ್ಕೆ ಪತ್ನಿ ಭಾಗ್ಯ ಸದ್ಯ ಇರುವ ಸ್ಥಿತಿಯಲ್ಲಿ, ಅವಳಿಗೆ ಏನೂ ಹೇಳಿದರೂ ಪ್ರಯೋಜನವಿಲ್ಲ ಎಂದು ಅತ್ತೆಯ ಮೇಲೆ ರೇಗಾಡಿದ್ದಾನೆ.

ಒರಳು ಕಲ್ಲಲ್ಲಿ ರುಬ್ಬಿ ತಿನ್ನೋ ರುಚಿ, ಬುತ್ತಿ ಹಿಡಿದು ಹೊಲಕ್ಕೆ ಹೋಗೋ ಖುಷಿ ಇದ್ಯಲ್ಲಾ.... ಆಹಾಹಾ...

ನೀನು ಸರಿಯಿದ್ದರೆ ಸುನಂದಾ ಈ ಮನೆಯಲ್ಲಿ ಇರುತ್ತಿರಲಿಲ್ಲ. ಮಗಳ ಚಿಂತೆಯಿಂದ ಅವಳು ಇದ್ದಾಳೆ ಎಂದು ಕುಸುಮಾ ಮಗನಿಗೇ ತಿರುಗೇಟು ನೀಡಿದ್ದಾಳೆ. ತಾಂಡವ್​ನ ಈ ಮಾತುಗಳಿಗೆ ಪರ-ವಿರೋಧಗಳ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ. ತಾಂಡವ್​ದು ಅತಿಯಾಯ್ತು ಎಂದು ಹೇಳುವ ವರ್ಗವಿದ್ದರೂ, ಅದಕ್ಕಿಂತ ಹೆಚ್ಚಾಗಿ ಈ ಬಾರಿ ಯಾಕೋ ತಾಂಡವ್​ ಪರ ಬ್ಯಾಟಿಂಗ್​ ಬೀಸುತ್ತಿದ್ದಾರೆ ಹಲವರು.

ಅಷ್ಟಕ್ಕೂ ಸುನಂದಾ ತನ್ನ ಗಂಡನನ್ನು ಬಿಟ್ಟು ಮಗಳ ಮನೆಯಲ್ಲಿ ಇಷ್ಟು ದಿನ ಇದ್ದದ್ದು ಸರಿಯಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಮಗಳ ಮನೆಗೆ ಬಂದು ಹೋದರೆ ಚೆಂದ, ಒಂದಷ್ಟು ದಿನ ಇದ್ದರೂ ಒಳ್ಳೆಯದೇ. ಇನ್ನು ಒಂಟಿಯಾಗಿ ಇದ್ದಾಗ ಬಂದರೂ ಪರವಾಗಿಲ್ಲ. ಆದರೆ ಮನೆಯಲ್ಲಿ ಗಂಡನನ್ನು ಕಡೆಗಣಿಸಿ ಮಗಳ ಮನೆಯಲ್ಲಿಯೇ ಕಾಯಂ ಉಳಿದರೆ ಏನರ್ಥ ಎನ್ನುವುದು ಅವರ ಮಾತು. ಇನ್ನೇನು ತನ್ನ ಮಗಳಿಗೆ ಗಂಡನ ಮನೆಯಲ್ಲಿ ಪ್ರಾಣಕ್ಕೆ ಕುತ್ತು ಇದೆ ಎನ್ನುವುದೂ ಇಲ್ಲಿಲ್ಲ. ತಾಂಡವ್​ ಬಿಟ್ಟು ಎಲ್ಲರೂ ಕುಸುಮಾಳನ್ನು ಜೀವಕ್ಕೆ ಜೀವ ಕೊಟ್ಟು ನೋಡಿಕೊಳ್ಳುತ್ತಿದ್ದಾರೆ. ಸೊಸೆಗಾಗಿ ಅತ್ತೆ ತನ್ನ ಹೆತ್ತ ಮಗನನ್ನೇ ವಿರೋಧಿಸುತ್ತಿದ್ದಾಳೆ. ಹೀಗಿರುವಾಗ ಗಂಡನನ್ನು ಮನೆಯಲ್ಲಿ ಬಿಟ್ಟು ಹೀಗೆ ಮಗಳ ಮನೆಯಲ್ಲಿ ಇರುವುದು ಸರಿಯಲ್ಲ ಎನ್ನುವುದು ಅವರ ಮಾತು. 

ನಗುವ... ನಯನ... ಎಂದ ಪ್ರಿಯಾ-ಅಶೋಕ್​: ರಸಕಾವ್ಯ ತೋರಿಸಿ ಮತ್ತೆ ಎಂದ ನೆಟ್ಟಿಗರು