ಮಾಧವ್ ಮತ್ತು ತುಳಸಿ ಹಳ್ಳಿಗೆ ಹೋಗಿದ್ದು, ಅಲ್ಲಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಹಳ್ಳಿಯ ಸೊಗಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಒರಳು ಕಲ್ಲು ಹೋಗಿ ಮಿಕ್ಸಿ ಬಂದಿದೆ. ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗುವುದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜೀವಂತವಾಗಿದೆ. ಬಾವಿಗಳಿಗೆ ಪಂಪ್ ಬಂದು ನೀರು ಸೇಯುವುದು ಬಹುತೇಕ ನಿಂತು ಹೋಗಿದೆ... ಕೆಲವೊಮ್ಮೆ ಮನೆ ಹೆಂಗಸರಿಗೆ ಇವೆಲ್ಲಾ ತೊಂದರೆ ಎನಿಸಿದ್ದರೂ, ಅದರಲ್ಲಿ ಇರುವ ಮಜವೇ ಬೇರೆ. ಗ್ರಾಮೀಣ ಭಾಗಗಳಲ್ಲಿ ಹುಟ್ಟಿ ಬೆಳೆದು ನಗರ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ, ಇಲ್ಲವೇ ಮದುವೆಯಾಗಿ ನಗರ ಸೇರಿರುವ ಎಷ್ಟೋ ಮಹಿಳೆಯರಿಗೆ ಆ ದಿನಗಳ ನೆನಪು ಬರುತ್ತಲೇ ಇರುತ್ತದೆ. ಅಷ್ಟಕ್ಕೂ ಒರಳು ಕಲ್ಲು ಈಗ ಮತ್ತೊಮ್ಮೆ ಫೇಮಸ್ ಆಗುತ್ತಿದೆ. ಅದರಲ್ಲಿ ರುಬ್ಬಿ ಅಡುಗೆ ಮಾಡಿದರೆ ಅದರ ರುಚಿಯ ಮುಂದೆ ಯಾವ ಬ್ರ್ಯಾಂಡೆಡ್ ಮಿಕ್ಸಿಗಳಿಗೂ ಇಲ್ಲ ಎನ್ನುವುದು ಅದರ ರುಚಿಯನ್ನು ತಿಂದವರೇ ಬಲ್ಲರು.
ಇದೀಗ ಅದೇ ಗ್ರಾಮೀಣ ಸೊಗಡನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ನೋಡಬಹುದಾಗಿದೆ. ತುಳಸಿ ಮತ್ತು ಮಾಧವ್ ಟೂರ್ಗೆ ಎಂದು ಹಳ್ಳಿಗೆ ಹೋಗಿದ್ದಾರೆ. ಅಲ್ಲಿ ಒರಳು ಕಲ್ಲಿನಿಂದ ಅಡುಗೆ ಮಾಡುತ್ತಿದ್ದಾಳೆ ತುಳಸಿ, ಬಾವಿಯಿಂದ ನೀರು ಸೇದುವುದು, ಬುತ್ತಿ ತೆಗೆದುಕೊಂಡು ಹೋಗುವುದು... ಇವೆಲ್ಲಾ ಹಲವು ಆಸೆಗಳನ್ನು ಹೊತ್ತಿರೋ ತುಳಸಿಯ ಆಸೆಗಳನ್ನು ಪೂರೈಸುತ್ತಿದ್ದಾನೆ ಮಾಧವ್. ಇವರಿಬ್ಬರ ಲವ್ಸ್ಟೋರಿ ನೋಡುವುದಕ್ಕೇ ಅಂದ. ಮಾಧವ್ಗಾಗಿ ತುಳಸಿ, ತುಳಸಿಗಾಗಿ ಮಾಧವ್ ಎಂಬಂತೆ ಹೇಳಿಮಾಡಿಸಿದ ಈ ಜೋಡಿ ಈಗ ಹಳ್ಳಿಯಲ್ಲಿ ಒಂದು ರೀತಿಯ ಹನಿಮೂನ್ ಮೂಡ್ನಲ್ಲಿದೆ.
ತುಂಬಾ ಪದಗಳಿವೆ, ಆದ್ರೆ ಮಾತಿಲ್ಲ... ಪ್ರಿಯಾಳಿಗೆ ಸೀತಾ ಕೇಳಿದ ಪ್ರಶ್ನೆಗೆ ಏನಪ್ಪಾ ಉತ್ತರ?
ಅದೇ ಇನ್ನೊಂದೆಡೆ, ಶಾರ್ವರಿ ಇವರಿಬ್ಬರನ್ನೂ ಮುಗಿಸುವ ಪ್ಲ್ಯಾನ್ ಮಾಡಿದ್ದಾಳೆ. ಮಾಧವ್ ತಾನು ಮೈಸೂರಿಗೆ ಹೋಗುವುದಾಗಿ ಹೇಳಿದ್ದ. ಆದರೆ ಬಂದದ್ದು ಬೇರೆ ಕಡೆ. ಶಾರ್ವರಿ ಇವರನ್ನು ಮುಗಿಸಲು ಗೂಂಡಾಗಳನ್ನು ಬಿಟ್ಟಿದ್ದಾಳೆ. ಈ ವಿಷಯ ಮಹೇಶ್ಗೆ ತಿಳಿದಿದೆ. ಅವರು ಕೂಡ ಮಾಧವ್-ತುಳಸಿ ಮೈಸೂರಿಗೆ ಹೋಗಿದ್ದಾರೆ ಎಂದುಕೊಂಡಿದ್ದು, ಮನೆಯವರೆಲ್ಲರನ್ನೂ ಕರೆದುಕೊಂಡು ಮೈಸೂರಿಗೆ ಹೋಗುವ ಪ್ಲ್ಯಾನ್ ಮಾಡಿದ್ದಾನೆ. ಏಕೆಂದರೆ ಮೊಬೈಲ್ ಸ್ವಿಚ್ ಆಫ್ ಬಂದಿರುವುದಕ್ಕೆ.
ಮುಂದೆ ಏನು ಆಗುತ್ತದೆಯೋ ಗೊತ್ತಿಲ್ಲ. ಮಾಧವ್ ಮತ್ತು ತುಳಸಿಯ ಜೀವಕ್ಕೆ ಯಾವುದೇ ಅಪಾಯ ಆಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅದೇ ಇನ್ನೊಂದೆಡೆ ಈ ಜೋಡಿ ಹಳ್ಳಿಯಲ್ಲಿ ಸಕತ್ ಎಂಜಾಯ್ ಮಾಡುತ್ತಿದೆ. ಅಷ್ಟಕ್ಕೂ, ಮಾಧವ ಮತ್ತು ತುಳಸಿಯ ಜೋಡಿಯೆಂದರೆ ಅದು ಎಲ್ಲರಿಗೂ ಏನೋ ಒಂದು ರೀತಿಯಲ್ಲಿ ಇಷ್ಟ. ಇವರಿಬ್ಬರ ನವೀರಾದ ಪ್ರೇಮಕಥೆಗೆ ಮನಸೋತವರೇ ಸೀರಿಯಲ್ ಪ್ರೇಮಿಗಳು. ಮಕ್ಕಳ ಮದುವೆಯಾದ ಮೇಲೆ ತಾವು ಮದುವೆಯಾಗಿರುವ ಈ ಜೋಡಿಯ ಬಗ್ಗೆ ಆರಂಭದಲ್ಲಿ ಟೀಕಿಸಿದವರೂ ಇದೀಗ ಈ ಜೋಡಿಯನ್ನು ಒಪ್ಪಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮದ್ವೆಯಾಕೆ ಎಂದು ಟೀಕಿಸಿದವರಿಗೂ ಜೋಡಿ ಎಂದರೆ ಅಚ್ಚುಮೆಚ್ಚು. ಇವರಿಬ್ಬರ ಪ್ರೇಮಕ್ಕೆ ಸಾಟಿ ಯಾವುದೂ ಇಲ್ಲ. ಪ್ರೀತಿ ಎಂಬುದು ಕೇವಲ ದೈಹಿಕ ಕಾಮನೆಯಲ್ಲ, ಅದು ಮನಸ್ಸಿನ ಭಾವನೆ ಎನ್ನುವುದನ್ನು ತೋರಿಸಿಕೊಡುತ್ತಿದೆ ಈ ಜೋಡಿ.
ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ
