ಸೀತಾರಾಮ ಪ್ರಿಯಾ-ಅಶೋಕ್​ ಭರ್ಜರಿ ರೀಲ್ಸ್ ಮಾಡಿದ್ದು, ಅಭಿಮಾನಿಗಳಿಂದ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಅವರು ಹೇಳ್ತಿರೋದೇನು? 

ಸೀತಾರಾಮ ಸೀರಿಯಲ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಅಶೋಕ್​ ಮತ್ತು ಪ್ರಿಯಾ ಪಾತ್ರ. ಸ್ನೇಹಿತ ರಾಮ್​ಗಾಗಿ ಪ್ರಾಣವನ್ನೂ ಕೊಡಲು ಸಿದ್ಧನಿರೋ ಗೆಳೆಯ ಅಶೋಕ್​ ಪಾತ್ರ ಮತ್ತು ಅವನ ಪತ್ನಿಯಾದ ಪ್ರಿಯಾ ಪಾತ್ರ ಬಹಳ ಮೆಚ್ಚುಗೆ ಗಳಿಸಿದೆ. ಸೀತಾರಾಮ ಸೀರಿಯಲ್​ನಲ್ಲಿ ರಾಮ್​ ಮತ್ತು ಸೀತಾಳ ಮದುವೆಗೆ ನೂರೆಂಟು ವಿಘ್ನಗಳು ಬಂದರೂ ಅಶೋಕ್​ ಮತ್ತು ಪ್ರಿಯಾ ಮದುವೆಯಾಗಿ ಎಷ್ಟೋ ದಿನಗಳಾಗಿ ಹೋಗಿವೆ. ಈಗ ಅವರ ಸಹಾಯದಿಂದ ರಾಮ್​ ಮತ್ಉ ಸೀತಾ ಮದುವೆಯೂ ನಿರ್ವಿಘ್ನವಾಗಿ ನಡೆದಿದೆ. ಅಶೋಕ್ ಮತ್ತು ಪ್ರಿಯಾ ಇಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದು, ಆಗಾಗ್ಗೆ ರೀಲ್ಸ್​ ಮಾಡುತ್ತಿರುತ್ತಾರೆ. ಇದೀಗ ಈ ಜೋಡಿ ನಗುವ ನಯನಾ ಮಧುರ... ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಇದರ ವಿಡಿಯೋ ಭಾರಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಭೇಷ್​ ಭೇಷ್​, ಸೂಪರ್​ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಅದೇನೋ ಸರಿ... ರಸಕಾವ್ಯ ಒಮ್ಮೆಯೂ ತೋರಿಸ್ಲೇ ಇಲ್ವಲ್ಲಾ ಎನ್ನುತ್ತಿದ್ದಾರೆ. 

ಅಭಿಮಾನಿಗಳು ಅಂದ್ರೆ ಹಾಗೇ ಅಲ್ವಾ? ಒಂದು ಸೀರಿಯಲ್​ನಲ್ಲಿ ನಾಯಕ-ನಾಯಕಿ ಅಥವಾ ಒಂದು ಜೋಡಿ ಸೂಪರ್​ ಹಿಟ್​ ಆಯ್ತು ಅಂದ್ರೆ ಸಾಕು, ನಿಜ ಜೀವನದಲ್ಲಿಯೂ ಒಂದಾಗಿ ಅನ್ನುತ್ತಾರೆ. ಸೀತಾ ಮತ್ತು ರಾಮ್​ ಪಾತ್ರಧಾರಿಗಳಿಗೂ ಈ ಮಾತನ್ನು ಅದೆಷ್ಟೋ ಬಾರಿ ವೀಕ್ಷಕರಿಂದ ಕೇಳಿಬಂದಿರುವುದು ಇದೆ. ಇದೀಗ ಅಶೋಕ್​ ಮತ್ತು ಪ್ರಿಯಾ ಪಾತ್ರವನ್ನು ಅಭಿಮಾನಿಗಳು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಎಂದರೆ, ನಿಜ ಜೀವನದಲ್ಲಿಯೂ ಇಬ್ಬರೂಮದುವೆಯಾಗಿ ಪ್ಲೀಸ್​, ನಿಮ್ಮ ಜೋಡಿ ಸೂಪರ್​ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ತುಂಬಾ ಪದಗಳಿವೆ, ಆದ್ರೆ ಮಾತಿಲ್ಲ... ಪ್ರಿಯಾಳಿಗೆ ಸೀತಾ ಕೇಳಿದ ಪ್ರಶ್ನೆಗೆ ಏನಪ್ಪಾ ಉತ್ತರ?

ಅಂದಹಾಗೆ ಅಶೋಕ್​ ಅವರ ನಿಜವಾದ ಹೆಸರು ಕೂಡ ಅಶೋಕ್​ ಶರ್ಮಾ ಆಗಿದೆ. ಅಶೋಕ್ ಅವರ ನಿಜವಾದ ಹೆಸರು ಅಶೋಕ್​ ಶರ್ಮಾ. ಅವರು ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ. ಇವರಿಗೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ಪ್ರಿಯಾ ಪಾತ್ರಧಾರಿ ಹೆಸರು ಮೇಘನಾ ಶಂಕರಪ್ಪ. ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.


ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ. ಅಂದಹಾಗೆ ಮೇಘನಾ ಶಂಕರಪ್ಪ ಹಾಗೂ ಅಶೋಕ್ ಶರ್ಮಾ ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಹಾಗೂ ಅಶೋಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೇಘನಾ ಭರತನಾಟ್ಯ ಕಲಾವಿದೆ, ನಟಿ, ನಿರೂಪಕಿಯಾಗಿದ್ದರೆ, ಅಶೋಕ್ ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ.

ಒರಳು ಕಲ್ಲಲ್ಲಿ ರುಬ್ಬಿ ತಿನ್ನೋ ರುಚಿ, ಬುತ್ತಿ ಹಿಡಿದು ಹೊಲಕ್ಕೆ ಹೋಗೋ ಖುಷಿ ಇದ್ಯಲ್ಲಾ.... ಆಹಾಹಾ...