'ನೀನಾದೆ ನಾʼ ಧಾರಾವಾಹಿ ನಟಿ ಖುಷಿ ಶಿವು ಅವರು ಚಿತ್ರರಂಗದ ಕರಾಳ ವಿಷಯದ ಬಗ್ಗೆ ಮಾತನಾಡಿದ್ದಾರೆ. 

ಚಿತ್ರರಂಗ ನೋಡಲು ಮಾತ್ರ ಬಣ್ಣದ ಬದುಕು ಅಷ್ಟೇ. ಅಲ್ಲಿ ಸಾಕಷ್ಟು ನೋವಿದೆ, ದೌರ್ಜನ್ಯವಿದೆ ಎಂದು ಅನೇಕರು ಹೇಳಿದ್ದುಂಟು. ಈಗ ʼನೀನಾದೆ ನಾʼ ಧಾರಾವಾಹಿ ನಟಿ ಖುಷಿ ಶಿವು ಅವರು ಸಿನಿಮಾಗಳಲ್ಲಿ ಲಿಪ್‌ಲಾಕ್‌ ಸೀನ್‌ ಮಾಡುವ ಬಗ್ಗೆ ಮಾತನಾಡಿದ್ದಾರೆ.

ʼನೀನಾದೆ ನಾʼ ಧಾರಾವಾಹಿ ನಟಿ ಖುಷಿ ಶಿವು ಅವರು ʼಕರ್ನಾಟಕ ಟಿವಿʼಗೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗದ ಕರಾಳಮುಖದ ಬಗ್ಗೆ ಮಾತನಾಡಿದ್ದಾರೆ.

ಜೀರೋ ಫಿಗರ್ಸ್‌ ಬೇಕು ಅಂದ್ರು!

“ಇಂದು ಹೀರೋಯಿನ್‌ ಆಗೋಕೆ ಜೀರೋ ಫಿಗರ್ಸ್‌ ಬೇಕು ಎನ್ನುತ್ತಾರೆ. ಸೌಂದರ್ಯ, ಮಾಲಾಶ್ರೀ ಅವರನ್ನು ನೋಡಿ ಬೆಳೆದ ಹುಡುಗಿ ನಾನು. ಅವರೆಲ್ಲರೂ ಜೀರೋ ಫಿಗರ್ಸ್‌ ಆಗಿದ್ದಾರಾ? ಸೀರಿಯಲ್‌ ಸೆಟ್‌ಗೆ ಬಂದು ಊಟ ಕೇಳಿದ್ರೆ ಬಂದಕೂಡಲೇ ಊಟ ಕೇಳ್ತಾಳೆ ಅಂತ ಹೇಳಿದ್ರು. ದೂರ ಹೋದಾಗ, ನಾನೇ ದುಡ್ಡು ಕೊಡ್ತೀನಿ ಕ್ಯಾರವ್ಯಾನ್‌ ತರಿಸಿ ಅಂದ್ರೂ ತರಿಸಲಿಲ್ಲ, ಗಂಡಸರೆಲ್ಲರೂ ಇದ್ದಾರೆ, ಬಯಲಿಗೆ ಹೋಗಿ ಅಂದ್ರು. ಮ್ಯಾನೇಜರ್‌ ಮೊದಲು ಸರಿ ಇರಬೇಕು, ಒಂದು ಪ್ರೊಡಕ್ಷನ್‌ ಮ್ಯಾನೇಜರ್‌ ನನ್ನ ಬಗ್ಗೆ ನಿರ್ಮಾಪಕರಿಗೆ ಬೇಡದ ರೀತಿಯಲ್ಲಿ ಕಿವಿ ಚುಚ್ಚಿದ್ದನು” ಎಂದಿದ್ದಾರೆ.

ನನ್ನ ಬಗ್ಗೆ ಗಾಸಿಪ್‌ ಮಾಡಿದ್ರು!

“ಕಿರುತೆರೆಯಲ್ಲಿ ನಮಗೆ ಬೇಸಿಕ್‌ ಸೌಲಭ್ಯಗಳನ್ನು ಕೊಡೋದಿಲ್ಲ. ಎಷ್ಟೋ ನಟಿಯರು ವಿಧಿ ಇಲ್ಲದೆ ಅನುಭವಿಸಿಕೊಂಡು, ಹಿಂಸೆ ಪಟ್ಕೊಂಡು ನಟಿಸ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಮಂಥ್ಲೀ ಸಮಸ್ಯೆ ಇರುತ್ತದೆ, ಡಸ್ಟ್‌ಬಿನ್‌ ಕೊಡಿ ಎಂದರೂ ಕೊಡೋದಿಲ್ಲ. ಬೇಸಿಕ್‌ ಸೌಲಭ್ಯ ಕೊಡದೆ ನಮ್ಮ ಬಗ್ಗೆ ಗಾಸಿಪ್‌ ಸೃಷ್ಟಿ ಮಾಡಿ ಊರು ತುಂಬ ಹರಡುತ್ತಾರೆ” ಎಂದಿದ್ದಾರೆ ಖುಷಿ ಶಿವು.

ನಮಗೆ ಏನು ಸಿಗಬೇಕೋ ಅದು ಸಿಗುತ್ತದೆ!

“ನಾವು ಪ್ರಶ್ನೆ ಮಾಡಿದರೆ ನಮ್ಮ ಹೆಸರನ್ನು ಬೇರೆ ರೀತಿಯಲ್ಲಿ ಹೇಳುತ್ತಾರೆ. ನಾನು ದುರಹಂಕಾರಿ ಅಂತ ಹೇಳುತ್ತಾರೆ. ʼನೀನಾದೆ ನಾʼ ಧಾರಾವಾಹಿಯಲ್ಲಿ ನಟಿಸುವ ಮುಂಚೆ ಸಾಕಷ್ಟು ಧಾರಾವಾಹಿಗಳು ಬಂದರೂ ಕೂಡ ಮುಂದುವರೆಯಲೇ ಇಲ್ಲ. ಈ ಮಧ್ಯೆ ನಮಗೆ ಏನು ಬೇಕೋ ಅದು ಸಿಗುತ್ತದೆ. ʼರುಕ್ಮಿಣಿ ವಸಂತʼ ಸಿನಿಮಾದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಕಥೆ ಚೆನ್ನಾಗಿ ಇರೋದಕ್ಕಿಂತ ಧಾರಾವಾಹಿಗಿಂತ ಕಡಿಮೆ ಸಂಭಾವನೆ ಪಡೆದಿದ್ದೇನೆ” ಎಂದಿದ್ದಾರೆ ಖುಷಿ ಶಿವು.

“ನನ್ನ ಬಗ್ಗೆ ಗೊತ್ತಿಲ್ಲದೆ, ನನ್ನ ಜೊತೆ ವರ್ಕ್‌ಶಾಪ್‌ ಮಾಡದೆ ನನ್ನ ಬಗ್ಗೆ ಜಡ್ಜ್‌ಮೆಂಟ್‌ ಮಾಡ್ತಾರೆ. ನೀನು ಎಷ್ಟು ಒಳ್ಳೆಯ ಹುಡುಗಿ? ಯಾಕೆ ನಿನ್ನ ಬಗ್ಗೆ ಈ ರೀತಿ ಮಾತು ಹಬ್ಬಿದೆ ಎಂದು ʼರುಕ್ಮಿಣಿ ವಸಂತʼ ಸಿನಿಮಾದವರು ನನ್ನ ಬಳಿ ಹೇಳಿದರು. ನಮ್ಮಲ್ಲಿ ಅವಕಾಶ ಇಲ್ಲ ಅಂದಾಗ ನಾವು ಬೇರೆ ಕಡೆ ಹೋಗ್ತೀವಿ. ಆದರೆ ಇದೆಲ್ಲವೂ ನಮ್ಮ ಜನರಿಗೆ ಅರ್ಥ ಆಗೋದಿಲ್ಲ, ಸುಮ್ಮನೆ ನೆಗೆಟಿವ್‌ ಕಾಮೆಂಟ್‌ ಮಾಡ್ತಾರೆ. ನಾನು ಕೇಳಿದ ಎಲ್ಲ ಸಿನಿಮಾಗಳಲ್ಲಿಯೂ ಲಿಪ್‌ಲಾಕ್‌ ಸೀನ್‌ ಇಡುತ್ತಾರೆ. ಇದು ಅಗತ್ಯ ಇದೆಯೇ” ಎಂದು ಅವರು ಹೇಳಿದ್ದಾರೆ.

YouTube video player