Neenadhe Naa Serial: ವೇದಾ-ವಿಕ್ರಮ್‌ ಮದುವೆ ಆಯ್ತು! ಹಿಸ್ಟರಿ ರಿಪೀಟ್‌ ಆಗೋಯ್ತು!

Neenadhe Naa Kannada serial Today Episode: ಖುಷಿ ಶಿವು, ದಿಲೀಪ್‌ ಶೆಟ್ಟಿ ನಟನೆಯ ʼನೀನಾದೆ ನಾʼ ಧಾರಾವಾಹಿಯಲ್ಲಿ ರೋಚಕ ಪ್ರೋಮೋ ರಿಲೀಸ್‌ ಆಗಿದ್ದು, ಇವರಿಬ್ಬರ ಮದುವೆ ಆಗಿದೆ. ಕೊನೆಗೂ ವಿಕ್ರಮ್‌, ವೇದಾಳ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಒಟ್ಟಿನಲ್ಲಿ ಮುಂದೆ ಹೇಗೆ ಕಥೆ ಸಾಗಲಿದೆ ಎಂಬ ಕುತೂಹಲ ಶುರು ಆಗಿದೆ. 

neenadhe naa kannada serial written update march 2025 episode vikram and vedha marriage done

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼನೀನಾದೆ ನಾʼ ಧಾರಾವಾಹಿಯಲ್ಲಿ ವಿಕ್ರಮ್‌, ವೇದಾ ಮದುವೆ ಆಗಿದೆ. ಈ ಹಿಂದಿನ ಸೀಸನ್‌ನಲ್ಲಿಯೂ ಕೂಡ ವೇದಾಳ ಅನುಮತಿ ಇಲ್ಲದೆ ವಿಕ್ರಮ್‌ ತಾಳಿ ಕಟ್ಟಿದ್ದನು. ಇಲ್ಲಿಯೂ ಇದೇ ಇತಿಹಾಸ ಮರುಕಳಿಸಿದೆ. ಆದರೆ ವಿಕ್ರಮ್‌ಗೆ ಲವ್‌ ಆಗಿದೆ.

ಈ ಹಿಂದಿನ ಸೀಸನ್‌ನಲ್ಲಿ ಏನಾಗಿತ್ತು? 
ಹೌದು, ಈ ಹಿಂದಿನ ಸೀಸನ್‌ನಲ್ಲಿ ದೇವಸ್ಥಾನದಲ್ಲಿ ವೇದಾ ದೇವರ ಮುಂದೆ ನಿಂತು ಬೇಡಿಕೊಳ್ಳುತ್ತಿರುತ್ತಾಳೆ. ಆಗ ವಿಕ್ರಮ್‌ ಎಂಟ್ರಿ ಆಗುವುದು. ಮದುವೆ ಅಂದತಕ್ಷಣ ಹುಡುಗ-ಹುಡುಗಿ ಜೊತೆಗೆ ಇರಬೇಕು ಅಂತೇನಿಲ್ಲ, ತಾಳಿಗೆ ಬೆಲೆಯಿಲ್ಲ ಎಂದು ಸಾಬೀತುಪಡಿಸುವ ಭರದಲ್ಲಿ ವಿಕ್ರಮ್‌, ವೇದಾ ಕೊರಳಿಗೆ ತಾಳಿ ಕಟ್ತಾನೆ. ಮದುವೆಯಾದ ವೇದಾ, ವಿಕ್ರಮ್‌ ಮನೆಗೆ ಹೋಗಿ ಎಲ್ಲ ಕಷ್ಟಗಳನ್ನು ಎದುರಿಸುತ್ತಾಳೆ. ಕೊನೆಯಲ್ಲಿ ಇವರಿಬ್ಬರಿಗೂ ಲವ್‌ ಹುಟ್ಟುವುದು.

Neenadhe Naa Serial: ಜೀವಂತವಾಗಿ ಮಣ್ಣಾಗಿದ್ದ ವಿಕ್ರಮ್‌ ಮತ್ತೆ ಎದ್ದು ಬಂದ..! ಯಪ್ಪಾ..ಎಂಥ ಚಿತ್ರಕಥೆ!

ವಿಶ್ವ-ವೇದಾ ನಿಶ್ಚಿತಾರ್ಥ ಆಯ್ತು
ಈ ಸೀಸನ್‌ನಲ್ಲಿ ವೇದಾ ಹಾಗೂ ವಿಕ್ರಮ್‌ ಆರಂಭದಲ್ಲಿ ಶತ್ರುಗಳಾಗಿದ್ದರು, ಈಗ ಸ್ನೇಹಿತರು. ವೇದಾಳನ್ನು ವಿಕ್ರಮ್‌ ಲವ್‌ ಮಾಡುತ್ತಿದ್ದಾನೆ. ಈ ವಿಷಯ ವೇದಾಗೆ ಗೊತ್ತಿಲ್ಲ. ರೌಡಿ ವಿಕ್ರಮ್‌ ಕಂಡರೆ ವೇದಾ ಮನೆಯವರಿಗೆ ಆಗೋದೇ ಇಲ್ಲ. ವಿಶ್ವ ಈಗಾಗಲೇ ಒಂದು ಹುಡುಗಿಯನ್ನು ಪ್ರೀತಿಸಿ, ಗರ್ಭಿಣಿ ಮಾಡಿ ಅವಳಿಗೆ ಮೋಸ ಮಾಡಿಯಾಗಿದೆ. ಆದರೆ ಅವನಿಗೆ ವೇದಾ ಮೇಲೆ ಕಣ್ಣು. ಹೇಗಾದರೂ ಮಾಡಿ ಅವಳನ್ನು ಮದುವೆ ಆಗಬೇಕು ಅಂತ ಪ್ಲ್ಯಾನ್‌ ಮಾಡಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾನೆ.

ರೋಚಕ ಪ್ರೋಮೋ ರಿಲೀಸ್
ವೇದಾಗೆ ನಿಶ್ಚಿತಾರ್ಥ ಆಗಿರೋ ವಿಷಯ ವಿಕ್ರಮ್‌ಗೆ ಬೇಸರ ತಂದಿದೆ. ಈ ನಡುವೆ ವಿಶ್ವನ ಕೆಟ್ಟ ಉದ್ದೇಶ ಏನು ಎನ್ನೋದು ಅವಳಿಗೆ ಗೊತ್ತಾಗಿದೆ. ಆ ಗರ್ಭಿಣಿಯ ಜೊತೆ ವಿಶ್ವನ ಮದುವೆ ಮಾಡಿಸಬೇಕು ಅಂತ ವಿಕ್ರಮ್‌ ಫಿಕ್ಸ್‌ ಆಗಿದ್ದಾನೆ. ಇನ್ನೊಂದು ಕಡೆ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿ ವಿಕ್ರಮ್‌, ವೇದಾ ಮದುವೆ ಆಗಿರುವ ವಿಷಯ ರಿವೀಲ್‌ ಮಾಡಿದೆ.

ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ!

ವೇದಾ-ವಿಕ್ರಮ್‌ ಮದುವೆ ಆಯ್ತು! 
ದೇವಸ್ಥಾನದಲ್ಲಿ ಕಲ್ಯಾಣ ಮಹೋತ್ವವ ನಡೆಯುತ್ತದೆ. ಅಲ್ಲಿಗೆ ವಿಕ್ರಮ್‌ ಎಂಟ್ರಿ ಆಗುವುದು. “ನಾನು ವೇದಾಳನ್ನು ಪ್ರೀತಿ ಮಾಡ್ತಿದ್ದೀನಿ, ವೇದಾ ಬಿಟ್ಟು ನಾನು ಬದುಕಲ್ಲ. ವಿಕ್ರಮ್‌ ಬದುಕಿದ್ರೂ ವೇದಾ ಜೊತೆಗೆ, ಸತ್ತರೂ ವೇದಾ ಜೊತೆಗೆ, ವೇದಾ ನನ್ನ ಪ್ರೀತಿ ಮಾಡಬೇಕು” ಎಂದು ಹೇಳಿ ಅವನು ವೇದಾ ಕುತ್ತಿಗೆಗೆ ಬಲವಂತವಾಗಿ ತಾಳಿ ಕಟ್ಟುತ್ತಾನೆ. ಈ ಮದುವೆ ತಡೆಯಲು ವೇದಾ ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನ ಆಗೋದಿಲ್ಲ. ಇಷ್ಟುದಿನ ಸ್ನೇಹಿತ ಅಂದುಕೊಂಡಿದ್ದವನೇ ತನ್ನನ್ನು ಪ್ರೀತಿಸ್ತಿದ್ದ, ಈಗ ಬಲವಂತವಾಗಿ ಮದುವೆಯಾದ ಅಂತ ಅವಳು ಬೇಸರ ಮಾಡಿಕೊಳ್ಳಬಹುದು, ದ್ವೇಷ ಕೂಡ ಮಾಡಬಹುದು. ವೇದಾಳನ್ನು ವಿಕ್ರಮ್‌ ಹೇಗೆ ಸಂತೈಸ್ತಾನೆ? ವೇದಾ ಕೋಪ ಕಡಿಮೆ ಆಗತ್ತಾ? ವೇದಾ-ವಿಕ್ರಮ್‌ ಒಂದಾಗ್ತಾರಾ ಅಂತ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ನಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. 

ಪಾತ್ರಧಾರಿಗಳು
ವೇದಾ ಪಾತ್ರದಲ್ಲಿ ಖುಷಿ ಶಿವು, ವಿಕ್ರಮ್‌ ಪಾತ್ರದಲ್ಲಿ ದಿಲೀಪ್‌ ರಾಜ್‌ ಅವರು ನಟಿಸುತ್ತಿದ್ದಾರೆ. ಸದ್ಯ ಮಂಗಳೂರು ಬ್ಯಾಕ್‌ಡ್ರಾಪ್‌ನಲ್ಲಿ ಈ ಕಥೆ ಸಾಗುತ್ತಿದೆ. 
 

Latest Videos
Follow Us:
Download App:
  • android
  • ios