ವೀಣಾ -ಮೀನಾರಂತ ಸೊಸೆ ಪ್ರತಿ ಮನೆಯಲ್ಲೂ ಇದ್ರೆ ಆ ಮನೆಗೆ ನಂದಗೋಕುಲ ಅಂತಿದ್ದಾರೆ ಜನ
ಸೋಶಿಯಲ್ ಮೀಡಿಯಾದಲ್ಲಿ ಮೀನಾ ಮತ್ತು ವೀಣಾ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇವರಂಥ ಸೊಸೆ ಎಲ್ಲಾ ಮನೆಯಲ್ಲಿದ್ದರೆ ಆ ಮನೆ ನಂದ ಗೋಕುಲ ಆಗೋದು ಖಚಿತಾ.

ನಮ್ಮ ಸಮಾಜದಲ್ಲಿ ಏನಾಗಿದೆ ಅಂದ್ರೆ ಅತ್ತೆ ಹೇಗೆ ಬೇಕಾದರೂ ಇರಲಿ, ಆದರೆ ಮನೆಗೆ ಬರುವ ಸೊಸೆ ಮಾತ್ರ ತಾನು ಹೇಳಿದಂತೆ ಕೇಳಬೇಕು. ಒಳ್ಳೆಯ ಸೊಸೆಯಾಗಿರಬೇಕು ಅನ್ನೋದು, ಆದರೆ ಎಲ್ಲರಿಗೂ ಒಳ್ಳೆಯ ಸೊಸೆ ಸಿಗುತ್ತಾರಾ? ಖಂಡಿತಾ ಇಲ್ಲ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social media) ಕನ್ನಡ ಕಿರುತೆರೆಯ ಇಬ್ಬರು ಸೊಸೆಯರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದ್ದರೆ ಇಂತಹ ಸೊಸೆ ಇರಬೇಕು. ಇವರಂತಹ ಸೊಸೆಯಂದಿರು ಮನೆಯಲ್ಲಿ ಇದ್ದರೆ, ಆ ಮನೆ ನಂದಗೋಕುಲ ಆಗೋದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ.
ಇವರಲ್ಲಿ ಒಬ್ಬರು ಝೀ ಕನ್ನಡದ ಲಕ್ಷ್ಮೀ ನಿವಾಸ (Lakshmi nivasa) ಧಾರಾವಾಹಿಯ ಸೊಸೆ ವೀಣಾ. ಮತ್ತೊಬ್ಬರು ಕಲರ್ಸ್ ಕನ್ನಡದ ನಂದಗೋಕುಲ ಧಾರಾವಾಹಿಯ ಸೊಸೆ ಮೀನಾ. ಹೊಸದಾಗಿ ಬಂದ ಸೊಸೆಯನ್ನು ಜನರು ತುಂಬಾನೆ ಇಷ್ಟ ಪಟ್ಟಿದ್ದಾರೆ.
ಲಕ್ಷ್ಮೀ ನಿವಾಸದ ವೀಣಾ ತನ್ನ ಅತ್ತೆ ಮಾವನಲ್ಲಿ ತನ್ನ ತಂದೆ ತಾಯಿಯನ್ನು ಕಾಣುತ್ತಾಳೆ. ಮಗನೇ ಅಪ್ಪ ಅಮ್ಮನನ್ನು ಮನೆಯಿಂದ ಹೊರ ಹೋಗುವ ಹಾಗೇ ಮಾಡಿದರೆ, ಸೊಸೆಯಾದವಳು ಸದಾ ಅತ್ತೆ -ಮಾವನ ಬೆಂಬಲಕ್ಕೆ ನಿಂತು ಮಾತನಾಡುತ್ತಾಳೆ.
ವೀಣಾ ಪಾತ್ರವನ್ನು ನೋಡಿ ಹಲವರು ನಮ್ಮ ಮನೆಯಲ್ಲಿ ವೀಣಾ ಅವರಂತಹ ಸೊಸೆ ಬೇಕು. ಇಂಥಹ ಸೊಸೆ ಇದ್ದರೆ, ಮನೆಯಲ್ಲಿ ಯಾವುದೇ ಸಮಸ್ಯೆ ಬರೋದಕ್ಕೆ ಸಾಧ್ಯವಿಲ್ಲ. ಎನ್ನುತ್ತಲಿದ್ದರು. ಅದು ನಿಜಾ ಕೂಡ, ಅತ್ತೆ ಮಾವನನ್ನು ಅಷ್ಟೊಂದು ಪ್ರೀತಿ ಮಾಡುವಾ ಸೊಸೆ ಇದ್ದರೆ ಮತ್ತೆ ಮನೆಯಲ್ಲಿ ಸಮಸ್ಯೆ ಹೇಗೆ ಬರುತ್ತೆ.
ಇದೀಗ ನಂದಗೋಕುಲ (Nandagokula) ಧಾರಾವಾಹಿಯಲ್ಲಿ ಮೀನಾ ಕೂಡ ಉತ್ತಮ ಸೊಸೆ. ಪ್ರೀತಿಸಿ ಮದುವೆಯಾಗುವುದನ್ನು ವಿರೋಧಿಸಿದ ನಂದ ಕುಮಾರ್ ನ ಮಗ ಕೇಶವ , ಅಪ್ಪನಿಗೆ ಇಷ್ಟವೇ ಇಲ್ಲದ ಹುಡುಗಿ ಮೀನಾಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ.
ಮೀನಾಳನ್ನು ನೋಡಿ ಕಿಡಿ ಕಾರುತ್ತಿದ್ದ ನಂದ, ಆಕೆಯ ಒಳ್ಳೆಯ ನಡತೆ, ಗುಣಗಳಿಂದಾಗಿ ಆಕೆಯನ್ನು ಕೊಂಚ ಕೊಂಚವೇ ಇಷ್ಟಪಡೋದಕ್ಕೆ ಶುರು ಮಾಡಿದ್ದಾನೆ. ಮಾವ ಮತ್ತು ಅತ್ತೆಯ ಮನ ಪರಿವರ್ತನೆಯಾಗೋದನ್ನು ನೋಡಿ ಮೀನಾ ಕೂಡ ಖುಷಿ ಪಟ್ಟಿದ್ದಾರೆ.
ಪ್ರೀತಿಸಿ ಮದುವೆಯಾಗಿ ಮನೆಗೆ ಬಂದ ಹುಡುಗಿ, ಅತ್ತೆ ಮಾವನನ್ನು ಮೆಚ್ಚಿಸಲು ಹರಸಾಹಸ ಪಡೋದನ್ನು ನೋಡಿದ್ರೆ, ಛೇ ಇಂಥಹಾ ಹುಡುಗಿ ನಮ್ಮ ಮನೆಗೂ ಸೊಸೆಯಾಗಿ ಬರಬಾರದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನ ಹೇಳ್ತಿದ್ದಾರೆ.