ನಿರೂಪಕಿ ಅನುಶ್ರೀ ತಾಯಂದಿರ ದಿನದಂದು ತಾಯಿಗೆ ಸ್ವತಃ ತಯಾರಿಸಿದ ರವೆ ರೊಟ್ಟಿಯನ್ನು ಉಡುಗೊರೆಯಾಗಿ ನೀಡಿದರು. ಮೊದಲ ರೊಟ್ಟಿ ಆಕಾರ ಕೆಟ್ಟರೂ, ಎರಡನೆಯದಕ್ಕೆ ಹೃದಯದ ಆಕಾರ ನೀಡಿ ತಾಯಿಗೆ ಉಣಬಡಿಸಿದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡದ ಪ್ರಸಿದ್ಧ ನಿರೂಪಕಿ ಅನುಶ್ರೀ (Kannada Famous anchor Anushree), ಮದರ್ಸ್ ಡೇ (Mother's Day ) ಯನ್ನು ಅಮ್ಮನ ಜೊತೆ ಪ್ರೀತಿಯಿಂದ ಆಚರಿಸಿಕೊಂಡಿದ್ದಾರೆ. ಅನುಶ್ರೀಗೆ ಅವರ ಅಮ್ಮನೇ ಸರ್ವಸ್ವ. ಮೇ 11ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಯ್ತು. ವಿಶ್ವದೆಲ್ಲೆಡೆ ಮಕ್ಕಳು ತಾಯಂದಿರಿಗೆ ವಿಶ್ ಮಾಡಿ, ಉಡುಗೊರೆ ನೀಡಿ ತಾಯಂದಿರ ದಿನವನ್ನು ಆಚರಿಸಿಕೊಂಡ್ರು. ಇದಕ್ಕೆ ಖ್ಯಾತ ನಿರೂಪಕಿ ಅನುಶ್ರೀ ಕೂಡ ಹೊರತಾಗಿಲ್ಲ. ಅನುಶ್ರೀ ಈ ಶುಭ ದಿನದಂದು ತಮ್ಮ ಅಮ್ಮನಿಗೆ ಸ್ಪೇಷಲ್ ಗಿಫ್ಟ್ ನೀಡಿದ್ದಾರೆ. ತಾವೇ ಸ್ವತಃ ಅಡುಗೆ ಮಾಡಿ ಅಮ್ಮನಿಗೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಇದ್ರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅನುಶ್ರೀ ಮಾಡಿದ ರೊಟ್ಟಿ ನೋಡಿ ಅಮ್ಮ ನೀಡಿದ ರಿಯಾಕ್ಷನ್ ಕೂಡ ಸೆರೆ ಹಿಡಿಯಲಾಗಿದೆ.

ಅನುಶ್ರೀ ಅಮ್ಮನಿಗಾಗಿ ರವೆ ರೊಟ್ಟಿ (Rava Rotti)ಯನ್ನು ಮಾಡಿದ್ದಾರೆ. ಆರಂಭದ ಮೊದಲ ರೊಟ್ಟಿ ಆಕಾರ ಕೆಟ್ಟಿತ್ತು. ಎರಡನೇ ರೊಟ್ಟಿಗೆ ಕಷ್ಟಪಟ್ಟು ಹಾರ್ಟ್ ಆಕಾರ ನೀಡಿದ್ರು ಅನುಶ್ರೀ. ಅದನ್ನು ಅಮ್ಮನಿಗೆ ನೀಡಿ, ಮದರ್ಸ್ ಡೇ ವಿಶ್ ಮಾಡಿದ್ದಾರೆ. ಅನುಶ್ರೀ ತಮ್ಮ ಇನ್ಸ್ಟಾ ಖಾತೆಯಲ್ಲಿ ಹ್ಯಾಪಿ ಮದರ್ಸ್ ಡೇ ಶೀರ್ಷಿಕೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. 

ಜನ್ಮಕೊಟ್ಟ ತಂದೆಯೇ ನನಗೆ ವೇಶ್ಯೆ ಅಂತ ಕರೆದಿದ್ರು: ಜನಪ್ರಿಯ ಕಿರುತೆರೆ ನಟಿಯ ಕರಾಳ ಬದುಕಿನ ಅಂತರಂಗವಿದು!

ಮದರ್ಸ್ ಡೇಗೆ ರವೆ ರೊಟ್ಟಿ ಮಾಡಿದ ಅನುಶ್ರೀ : ಮದರ್ಸ್ ಡೇ ಆಗಿರೋದ್ರಿಂದ ಬೆಳಿಗ್ಗೆ ತಿಂಡಿಯನ್ನು ಮಾಡೋಣ ಅಂದ್ಕೊಂಡೆ. ನಮ್ಮ ಮನೆಯಲ್ಲಿ ರವೆ ರೊಟ್ಟಿ ಸ್ಪೇಷಲ್. ಹಾಗಾಗಿ ಅದನ್ನೇ ಮಾಡ್ತೇನೆ ಎಂದ ಅನುಶ್ರೀ ಮೊದಲ ರೌಂಡ್ ನಲ್ಲಿ ಸೂಪರ್ ಪ್ಲಾಪ್ ಆದೆ. ಆದ್ರೆ ಪ್ರಯತ್ನ ಬಿಡಲಿಲ್ಲ. ಎರಡನೇ ರೌಂಡ್ ನಲ್ಲಿ ಪ್ರಯತ್ನಪಟ್ಟು ರೊಟ್ಟಿಗೆ ಹಾರ್ಟ್ ಶೇಪ್ ನೀಡಿದ್ದೆನೆ ಎನ್ನುತ್ತಾರೆ ಅನುಶ್ರೀ. ಪ್ಲೇಟ್ ನಲ್ಲಿ ರೊಟ್ಟಿ ಇಟ್ಟು, ಅದನ್ನು ಅಮ್ಮನಿಗೆ ಸರ್ವ್ ಮಾಡಿದ ಅನುಶ್ರೀ ಹ್ಯಾಪಿ ಮದರ್ಸ್ ಡೇ ಅಂತ ವಿಶ್ ಮಾಡ್ತಾರೆ. ಅಮ್ಮ, ಥ್ಯಾಂಕ್ಯೂ, ಇವತ್ತು ಮದರ್ಸ್ ಡೇನಾ ಅಂತ ತುಳುವಿನಲ್ಲಿ ಕೇಳಿದ್ದಾರೆ. ಹೌದು ಎಂದ ಅನುಶ್ರೀ, ಹಾರ್ಟ್ ಶೇಪ್ ನಲ್ಲಿ ರೊಟ್ಟಿ ಮಾಡಿದ್ದೇನೆ ಹೇಗಿದೆ ಎನ್ನುತ್ತಾರೆ. ಅದಕ್ಕೆ ಚೆನ್ನಾಗಿದೆ ಅಂತ ರಿಯಾಕ್ಷನ್ ನೀಡುವ ಅನುಶ್ರೀ ಅಮ್ಮ, ತಿಂದು ನೋಡ್ತೇನೆ ಎನ್ನುತ್ತಾರೆ. ಅಮ್ಮನ ರಿಯಾಕ್ಷನ್ ಇಷ್ಟೇ ಇರುತ್ತೆ ಅಂತ ಅನುಶ್ರೀ ವಿಡಿಯೋದಲ್ಲಿ ಹೇಳೋದನ್ನು ನೀವು ಕೇಳ್ಬಹುದು. ಅನುಶ್ರೀ ಈ ವಿಡಿಯೋಕ್ಕೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಹಾರ್ಟ್ ಎಮೋಜಿ ಎಲ್ಲ ಕಡೆ ರಾರಾಜಿಸ್ತಿದೆ. ಅಮ್ಮ ಮತ್ತು ನಿಮ್ಮ ಪ್ರೀತಿ ಹೀಗೆ ಇರಲಿ ಎಂದ ಫ್ಯಾನ್ಸ್, ಇದು ರೊಟ್ಟಿನಾ ಅಂತ ಪ್ರಶ್ನೆ ಕೂಡ ಕೇಳಿದ್ದಾರೆ. 

ಅನುಶ್ರೀ ಮದುವೆ ಯಾವಾಗಾ? : ರಿಯಾಲಿಟಿ ಶೋಗಳಲ್ಲಿ ಅನುಶ್ರೀ ಬ್ಯುಸಿಯಿದ್ದಾರೆ. ಜನರಿಗೆ ಮಾತ್ರ ಅನುಶ್ರೀ ಮದುವೆ ಮೇಲೆಯೇ ಗಮನ ಇದೆ. ಈ ವರ್ಷ ಅಂದ್ರೆ 2025ರಲ್ಲಿ ಮದುವೆ ಆಗ್ತೇನೆ ಎಂದು ಅನುಶ್ರೀ ಹೇಳಿದ್ದರು. ಹಾಗಾಗಿ ಅಭಿಮಾನಿಗಳು, ಅನುಶ್ರೀ ಯಾವಾಗ ಗುಡ್ ನ್ಯೂಸ್ ನೀಡ್ತಾರೆ, ಹುಡುಗ ಯಾರು ಎನ್ನವು ಪ್ರಶ್ನೆಗಳನ್ನು ಕೇಳ್ತಾನೆ ಇದ್ದಾರೆ. ಈ ಮಧ್ಯೆ ಅನುಶ್ರೀ ಆಗಸ್ಟ್ 15ಕ್ಕೆ ಮದುವೆ ಆಗ್ತಿದ್ದಾರೆ ಎನ್ನುವ ಸುದ್ದಿ ವೇಗವಾಗಿ ಹಬ್ಬುತ್ತಿದೆ. ಅನುಶ್ರೀ ಆಗಸ್ಟ್ 15ರಂದು ಮಂಗಳೂರಿನಲ್ಲಿ ಮದುವೆ ಆಗ್ತಿದ್ದಾರೆ, ಸಂಗೀತ ನಿರ್ದೇಶಕರ ಸಂಗೀತ ಕಚೇರಿ ಇರಲಿದೆ, ಮದುವೆಗೆ ಈಗಾಗಲೇ ಛತ್ರ ಬುಕ್ ಆಗಿದೆ ಎಂಬೆಲ್ಲ ಸುದ್ದಿ ಹರಡಿದ್ದು, ಅನುಶ್ರೀ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. 

View post on Instagram