- Home
- Entertainment
- TV Talk
- ಜೋಗುಳ ಹಾಡಲು ರೆಡಿಯಾದ ವಾಸುಕಿ ವೈಭವ್, ಬೃಂದಾ ವಿಕ್ರಮ್! Bigg Boss Kannada ಸ್ಪರ್ಧಿ ಮನೇಲಿ ಹರ್ಷವೋ ಹರ್ಷ!
ಜೋಗುಳ ಹಾಡಲು ರೆಡಿಯಾದ ವಾಸುಕಿ ವೈಭವ್, ಬೃಂದಾ ವಿಕ್ರಮ್! Bigg Boss Kannada ಸ್ಪರ್ಧಿ ಮನೇಲಿ ಹರ್ಷವೋ ಹರ್ಷ!
ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ, ಗಾಯಕ, ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ವಾಸುಕಿ ವೈಭವ್ ಅವರು ʼತಾಯಂದಿರ ದಿನʼಕ್ಕೆ ಗುಡ್‌ನ್ಯೂಸ್ ನೀಡಿದ್ದಾರೆ.

ಹೌದು, ವಾಸುಕಿ ವೈಭವ್ ಹಾಗೂ ಅವರ ಪತ್ನಿ ಬೃಂದಾ ವಿಕ್ರಮ್ ಅವರು ಆದಷ್ಟು ಬೇಗ ಪಾಲಕರಾಗಿ ಬಡ್ತಿ ಪಡೆಯಲಿದ್ದಾರೆ, ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಎಲ್ಲಾ ಸುಂದರ ಮಹಿಳೆಯರಿಗೆ ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೆ ಈ ಜಗತ್ತು ಅಸ್ತಿತ್ವದಲ್ಲಿರುತ್ತಿರಲಿಲ್ಲ. ಈ ತಾಯಂದಿರ ದಿನ ನನಗೆ ವಿಶೇಷವಾಗಿದೆ. ನಿಮ್ಮೆಲ್ಲರಿಗೂ ಹೊಸ 'ತಾಯಿ ಆಗುವವರನ್ನು ಪರಿಚಯಿಸುತ್ತಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಪ್ರೀತಿ, ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ಬಯಸುತ್ತೇನೆ” ಎಂದು ವಾಸುಕಿ ವೈಭವ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ʼರಾಮಾ ರಾಮ ರೇʼ, ʼಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡುʼ, ʼಬಡ ರಾಸ್ಕಲ್ʼ ಸೇರಿದಂತೆ ಕೆಲ ಸಿನಿಮಾಗಳಿಗೆ ವಾಸುಕಿ ವೈಭವ್ ಅವರು ಸಂಗೀತ ಸಂಯೋಜನೆ ಮಾಡಿದ್ದರು.
ರಂಗಭೂಮಿಯಿಂದಲೂ ಬೃಂದಾ ವಿಕ್ರಮ್ ಹಾಗೂ ವಾಸುಕಿ ವೈಭವ್ ಅವರು ಸ್ನೇಹಿತರು. ವಾಸುಕಿ ವೈಭವ್ ಅವರ ಕಷ್ಟದ ದಿನಗಳಲ್ಲಿ, ಆರಂಭದ ದಿನಗಳಲ್ಲಿ ಬೃಂದಾ ಅವರು ಸಾಥ್ ನೀಡಿದ್ದರು. ಮದುವೆವರೆಗೂ ಈ ಜೋಡಿಯು ಎಲ್ಲಿಯೂ ಪ್ರೀತಿ ವಿಷಯವನ್ನು ಹೇಳಿಕೊಂಡಿರಲಿಲ್ಲ.
ಬಿಗ್ ಬಾಸ್ ಮನೆಯಿಂದ ಇನ್ನಷ್ಟು ಜನಪ್ರಿಯತೆ ಪಡೆದಿದ್ದ ವಾಸುಕಿ ವೈಭವ್ ಅವರ ಜೊತೆ ಕೆಲವು ನಟಿಯರ ಹೆಸರು ಥಳುಕು ಹಾಕಿಕೊಂಡಿತ್ತು, ಆಗಲೂ ಇವರು ಪ್ರತಿಕ್ರಿಯೆ ಕೊಟ್ಟಿರಲಿಲ್ಲ.
ಬೃಂದಾ ವಿಕ್ರಮ್ ಅವರು ಟೀಚರ್ ಆಗಿದ್ದು, ಹಾಡು ಕೂಡ ಹಾಡುತ್ತಾರೆ, ಡ್ಯಾನ್ಸ್ ಮಾಡುತ್ತಾರೆ, ನಟಿಸುತ್ತಾರೆ. 2023 ನವೆಂಬರ್‌ನಲ್ಲಿ ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಅವರು ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ನಡೆದ ಈ ಮದುವೆಗೆ ಚಿತ್ರರಂಗದ ಸಾಕಷ್ಟು ಗಣ್ಯರು ಆಗಮಿಸಿದ್ದರು.