Asianet Suvarna News Asianet Suvarna News

ಕುತೂಹಲಕರ ಘಟ್ಟ ತಲುಪಿದ ಪವಾಡ ಪುರುಷ; ನೋಡಲು ಮರೆಯದಿರಿ

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ವಿಶೇಷ ಧಾರಾವಾಹಿ ‘ಪವಾಡ ಪುರುಷ’ ಈಗ ಕುತೂಹಲಕರ ಘಟ್ಟ ತಲುಪಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 2:30ಕ್ಕೆ ಪ್ರಸಾರವಾಗುತ್ತಿರುವ ಸಂತ ಬಾಳೂ ಮಾಮನ ಬದುಕಿನ ಕಥಾನಕ ‘ಪವಾಡ ಪುರುಷ’ ಈಗಾಗಲೇ ಜನಮನವನ್ನು ಗೆದ್ದಿದೆ.  ಒಂದು ವೇಳೆ ಈ ಧಾರಾವಾಹಿಯನ್ನು ಇದುವರೆಗೂ ನೋಡಲೇ ಇಲ್ಲವಾದರೆ ಈಗ ಶುರುಮಾಡಲು ಇದೇ ಸುಸಮಯವಾಗಿದೆ. ಯಾಕೆಂದರೆ ಬಾಲಕ ಬಾಳೂ ವಯಸ್ಕನಾಗುವ ಈ ಹಂತದಲ್ಲಿ ಕತೆ ಮತ್ತಷ್ಟು ಕುತೂಹಲಕರವಾಗಲಿದೆ.

most interesting stage of Pavada Purusha serial in colors Kannada sgk
Author
Bengaluru, First Published Aug 11, 2022, 12:30 PM IST

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ವಿಶೇಷ ಧಾರಾವಾಹಿ ‘ಪವಾಡ ಪುರುಷ’ ಈಗ ಕುತೂಹಲಕರ ಘಟ್ಟ ತಲುಪಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 2:30ಕ್ಕೆ ಪ್ರಸಾರವಾಗುತ್ತಿರುವ ಸಂತ ಬಾಳೂ ಮಾಮನ ಬದುಕಿನ ಕಥಾನಕ ‘ಪವಾಡ ಪುರುಷ’ ಈಗಾಗಲೇ ಜನಮನವನ್ನು ಗೆದ್ದಿದೆ.  ಒಂದು ವೇಳೆ ಈ ಧಾರಾವಾಹಿಯನ್ನು ಇದುವರೆಗೂ ನೋಡಲೇ ಇಲ್ಲವಾದರೆ ಈಗ ಶುರುಮಾಡಲು  ಇದೇ ಸುಸಮಯವಾಗಿದೆ. ಯಾಕೆಂದರೆ ಬಾಲಕ ಬಾಳೂ ವಯಸ್ಕನಾಗುವ ಈ ಹಂತದಲ್ಲಿ ಕತೆ ಮತ್ತಷ್ಟು ಕುತೂಹಲಕರವಾಗಲಿದೆ.

ಯಾರೀ ಬಾಳೂ ಮಾಮ ಎಂದು ನೀವು ಕೇಳಬಹುದು. ಇದೇ ಮಣ್ಣಿನಲ್ಲಿ ಬಾಳಿ ಬದುಕಿದ ಈ ಪವಾಡಪುರುಷನನ್ನು ಜನ ಶಿವನ ಅವತಾರ ಅನ್ನುತ್ತಾರೆ. ಸಂತ ಬಾಳೂ ಮಾಮ ಬೇರೆ ಪವಾಡ ಪುರುಷರಂತಲ್ಲ. ಅಗತ್ಯವಿಲ್ಲದೆ ಪವಾಡ ಮಾಡಿ ಜನರನ್ನು ಮರುಳುಮಾಡೋ ಬಾಬಾಗಳಂತಲ್ಲ.
ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಬಾಳೂ ಮಾಮ ತನ್ನ ಬಳಿ ಸಹಾಯ ಬೇಡಿ ಬಂದವರನ್ನು ಉದ್ದಾರ ಮಾಡುತ್ತಿದ್ದುದು ನಿಜ. ಅವನ್ನು ಪವಾಡ ಎಂದು ಜನ ನಂಬುತ್ತಿದ್ದದ್ದೂ ನಿಜ. ಕುರಿ ಹಾಲಿನಿಂದ ಜನರ ಕಣ್ಣು ಬರಿಸಿದ್ದು ಬಾಳೂ ಮಾಮ. ಪ್ರವಾಹದ ಭೀತಿ ಎದುರಾದಾಗ ತಮ್ಮ ಕಂಬಳಿಯಿಂದ ಅದನ್ನು ಓಡಿಸಿದ್ದು ಬಾಳೂ ಮಾಮ. ಭೂತದ ಕಾಟವನ್ನು ಕಾಲಿನಿಂದ ಮೆಟ್ಟಿ ಪರಿಹರಿಸಿದವರು ಬಾಳೂ ಮಾಮ. ಜನ ಅವರನ್ನು ಪವಾಡ ಪುರುಷ ಎಂದು ನಂಬಿದ್ದರಲ್ಲಿ ಆಶ್ಚರ್ಯವಿಲ್ಲ.

ಗೂಗಲ್‌ ಸೀರೆಯಲ್ಲಿ ಮಿಂಚಿದ ಕನ್ನಡತಿ ರಂಜನಿ ರಾಘವನ್‌

ಇಂಥ ಸಂತ ಬಾಳೂ ಮಾಮ ಕನ್ನಡದವರು ಎನ್ನುವುದು ವಿಶೇಷ. ಕರ್ನಾಟಕದ ಚಿಕ್ಕೋಡಿ ಬಳಿಯಿರುವ ಹಳ್ಳಿಯೊಂದರಲ್ಲಿ ಜನಿಸಿದ ಅವರು ದೇಹತ್ಯಾಗ ಮಾಡಿದ್ದು ಮಹಾರಾಷ್ಟ್ರದ ಅದಮಾಪುರದಲ್ಲಿ.  ಹಾಗಾಗಿ ಬಾಳೂ ಮಾಮನಿಗೆ ಕರ್ನಾಟಕ, ಮಹಾರಾಷ್ಟ್ರಗಳೆರಡರಲ್ಲೂ ಭಕ್ತರಿದ್ದಾರೆ. 

ಅದಮಾಪುರ ಕರ್ನಾಟಕದ ನಿಪ್ಪಾಣಿಯ ಸಮೀಪವೇ ಇರುವ ಕೊಲ್ಹಾಪುರ ಜಿಲ್ಲೆಯಲ್ಲಿದೆ. ಅಲ್ಲಿ ಭಕ್ತರೇ ಬಾಳೂಮಾಮನಿಗಾಗಿ ಗುಡಿಯೊಂದನ್ನು ನಿರ್ಮಿಸಿದ್ದಾರೆ. ಅಲ್ಲಿ ಪ್ರತಿವರ್ಷವೂ ಬಾಳೂ ಮಾಮನ ಜಾತ್ರೆ ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರಗಳಷ್ಟೇ ಅಲ್ಲದೆ ಆಂಧ್ರದಿಂದಲೂ ಸಾವಿರಾರು ಭಕ್ತರು ಬಾಳೂಮಾಮನನ್ನು ನಂಬಿ ಅಲ್ಲಿಗೆ ಬರುತ್ತಾರೆ.

Lakshana serial: ಮೌರ್ಯ ಜೊತೆ ಶ್ವೇತಾ ಮದುವೆ ನಡೆಯುತ್ತಾ? ಇನ್ನೊಂದು ಟ್ವಿಸ್ಟ್!

ನಿತ್ಯವೂ ಅಲ್ಲಿ ಅನ್ನದಾಸೋಹ ನಡೆಯುತ್ತದೆ. ಯಾಕೆಂದರೆ ಹತ್ತು ಜನರಿಗಾಗುವ ಅಡುಗೆಯನ್ನು ಹತ್ತು ಸಾವಿರ ಜನಕ್ಕೆ ಬಡಿಸಿದ ಪವಾಡವನ್ನೂ ಬಾಳೂ ಮಾಮ ಮಾಡಿದ್ದರೆನ್ನುವುದು ನಂಬಿಕೆ.
ಹೀಗೆ ಕಷ್ಟದಲ್ಲಿರುವವರ ಉದ್ದಾರಕ್ಕೆಂದು ಅಯಾ ಕಾಲಕ್ಕೆ ಅಗತ್ಯವಾದ ಪವಾಡಗಳನ್ನು ಮಾಡಿದ ಬಾಳೂ ಮಾಮ ಈ ನೆಲದಲ್ಲಿ ಹುಟ್ಟಿ ಬದುಕಿದ ಸಂತ. ಅವರ  ಬದುಕು ಒಂದು ಹಲವು ಕುತೂಹಲಕರ ತಿರುವುಗಳಿರುವ ಕಥಾನಕ. ಅದೆಲ್ಲವನ್ನೂ ಸ್ವಾರಸ್ಯವಾಗಿ ಹೇಳುವ ಧಾರಾವಾಹಿ ‘ಪವಾಡ ಪುರುಷ’. ಕನ್ನಡ ಮಣ್ಣಲ್ಲಿ ಹುಟ್ಟಿದ ಪವಾಡಪುರುಷನ ಬಗ್ಗೆ ನಮಗೇ ಗೊತ್ತಿಲ್ಲದಿದ್ದರೆ ಏನು ಚೆಂದ ಅಲ್ಲವೆ? ಹಾಗಾದರೆ ಇವತ್ತೇ ನೋಡಲು ಶುರುಮಾಡಿ.  ಕಲರ್ಸ್ ಕನ್ನಡದಲ್ಲಿ ಮಧ್ಯಾಹ್ನ 2:30ಕ್ಕೆ ಎಂಬುದನ್ನು ನೆನಪಿಡಿ.
 

Follow Us:
Download App:
  • android
  • ios