Lakshana serial: ಮೌರ್ಯ ಜೊತೆ ಶ್ವೇತಾ ಮದುವೆ ನಡೆಯುತ್ತಾ? ಇನ್ನೊಂದು ಟ್ವಿಸ್ಟ್!
ತಂದೆ ತಾಯಿಯನ್ನೇ ಕೊಲ್ಲಲು ಮುಂದಾದ ಶ್ವೇತಾಳಿಗೆ ಈಗ ರಕ್ಷಣೆ ನೀಡಲು ಮುಂದಾಗಿರುವವಳು ಶಕುಂತಲಾದೇವಿ. ಮೌರ್ಯನ ಜೊತೆಗೆ ಆಕೆಯ ಮದುವೆ ಮಾಡಲು ಅವರು ಮುಂದಾಗಿದ್ದಾರೆ. ಇದರಿಂದ ಸೀರಿಯಲ್‌ನ ಸಂಬಂಧಗಳಲ್ಲಿ ಇನ್ನಷ್ಟು ರೋಚಕತೆ, ವ್ಯಗ್ರತೆ ಸೃಷ್ಟಿಯಾಗಲಿದೆಯಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ (Lakshana) ಕೂಡ ಒಂದು. ಇದೂ ಕೂಡ ಸಂಬಂಧಗಳು ಬದಲಾಗುವ, ನಿಗದಿಯಾದ ವಧು- ವರ ಮದುವೆಯಾಗದೆ ಬೇರೆಯವರನ್ನು ಮದುವೆಯಾಗುವ, ಅದರಿಂದ ಹುಟ್ಟುವ ಇಕ್ಕಟ್ಟು ಬಿಕ್ಕಟ್ಟುಗಳ ಕತೆ. ಈಗ ಮತ್ತೊಂದು ರೋಚಕ ತಿರುವು ಎದುರಾಗಿದೆ. ಶ್ವೇತಾ ಜೊತೆ ಮೌರ್ಯನ ಮದುವೆ ನೆರವೇರಿಸಲು ಶಕುಂತಲಾ ದೇವಿ ಪ್ಲಾನ್ ಮಾಡಿಕೊಂಡಿದ್ದಾರೆ. ಮಕ್ಕಳು ಹುಟ್ಟಿದ ಕೂಡಲೇ ಅದಲು ಬದಲಾಗುವ ಕಥೆ ಈ ಸೀರಿಯಲ್‌ನದು. ಈ ಕಾರಣಕ್ಕೆ ಶ್ರೀಮಂತ ದಂಪತಿಗಳ ಮಗಳಾಗಿದ್ದರೂ ಕೆಳ ಮಧ್ಯಮ ವರ್ಗದಲ್ಲಿ ಬೆಳೆಯ ಬೇಕಾದ ನಕ್ಷತ್ರಾ, ಅವಳ ಬದಲಾಗಿ ಶ್ರೀಮಂತರ ಮನೆಯಲ್ಲಿ ಬೆಳೆಯುವ ಶ್ವೇತಾ ಇವರಿಬ್ಬರ ಕಥೆ ಈ ಸೀರಿಯಲ್‌ನಲ್ಲಿ ಮುಖ್ಯವಾದದ್ದು.
ಒಂದು ಹಂತದಲ್ಲಿ ಇವರಿಬ್ಬರೂ ಭೂಪತಿಯನ್ನೇ ಬಯಸಿದರೂ ಶ್ವೇತಾ ಜೊತೆಗೆ ಭೂಪತಿ ಮದುವೆ ನಿಗದಿಯಾಗುತ್ತೆ. ಮುಂದೆ ವಿಧಿಯಾಟದಲ್ಲಿ ಈ ಮದುವೆ ನಕ್ಷತ್ರಾ ಜೊತೆಗೇ ನಡೆಯುತ್ತೆ. ಇದಕ್ಕೂ ಮುನ್ನ ಘಟಿಸುವ ಬೆಳವಣಿಗೆಯಲ್ಲಿ ಇವರಿಬ್ಬರ ಜನ್ಮವೃತ್ತಾಂತವೂ ಬಯಲಾಗುತ್ತೆ. ಶ್ವೇತಾ ತನ್ನ ಮಗಳಲ್ಲ ಎಂದು ಗೊತ್ತಿದ್ದರೂ ಅವಳನ್ನು ಮನೆಯಲ್ಲಿಟ್ಟುಕೊಳ್ಳಲು ಚಂದ್ರಶೇಖರ್ ದಂಪತಿ ಸಮ್ಮತಿಸಿದರೂ ಅವಳು ತನ್ನನ್ನು ಸಾಕಿದ ತಂದೆ - ತಾಯಿಯನ್ನೇ ಕೊಲ್ಲಲು ಮುಂದಾಗುತ್ತಾಳೆ. ಇದು ಗೊತ್ತಾದ್ಮೇಲೆ ಆಕೆಯನ್ನ ಆರತಿ ಹಾಗೂ ಚಂದ್ರಶೇಖರ್ ಅವಳನ್ನು ಮನೆಯಿಂದ ಹೊರ ಹಾಕುತ್ತಾರೆ. ಆಗ ಅವಳು ಬೇರೆ ದಾರಿಯಿಲ್ಲದೆ ತನ್ನ ಸ್ವಂತ ತಂದೆ ತುಕಾರಾಂ ಮನೆ ಸೇರುತ್ತಾಳೆ.
'ಯಾವತ್ತಿದ್ದರೂ ನೀನೇ ನನ್ನ ಮನೆಯ ಸೊಸೆ’ ಅಂತ ಶ್ವೇತಾಗೆ ಶಕುಂತಲಾ ದೇವಿ ಮಾತು ಕೊಟ್ಟಿದ್ದರು. ಮಾತನ್ನ ಉಳಿಸಿಕೊಳ್ಳಲು ಮೌರ್ಯನ ಜೊತೆ ಶ್ವೇತಾ ಮದುವೆ ನೆರವೇರಿಸಲು ಶಕುಂತಲಾ ದೇವಿ ಮುಂದಾಗಿದ್ದಾರೆ. ಅಸಲಿಗೆ ಶ್ವೇತಾಳನ್ನ ಭೂಪತಿ ಮದುವೆಯಾಗಬೇಕಿತ್ತು. ಇನ್ನೇನು ಮದುವೆ ಮಂಟಪಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಭೂಪತಿ - ನಕ್ಷತ್ರ ಮದುವೆ ನಡೆಯಬೇಕು ಎಂದು ಚಂದ್ರಶೇಖರ್ ಹಠ ಹಿಡಿದರು. ಭೂಪತಿ - ನಕ್ಷತ್ರ ಮದುವೆ ನಡೆಯದೇ ಹೋದರೆ, ಆಕ್ಸಿಡೆಂಟ್ ಕೇಸ್‌ನಲ್ಲಿ ಸಿಲುಕಿರುವ ಮೌರ್ಯನನ್ನ ಬಚಾವ್ ಮಾಡುವುದಿಲ್ಲ ಎಂದು ಚಂದ್ರಶೇಖರ್ ಬ್ಲಾಕ್ ಮೇಲ್ ಮಾಡಿದರು. ಮೌರ್ಯನನ್ನ ಉಳಿಸಲು ಭೂಪತಿ - ನಕ್ಷತ್ರ ಮದುವೆಗೆ ಶಕುಂತಲಾ ದೇವಿ ಸಮ್ಮತಿ ನೀಡಿದರು.
Kannadathi : ಚಿತ್ಕಳಾ ನಿಜ ಹೆಸರು ಊರ್ಮಿಳಾ, ಅದ್ಯಾಕೆ ಹೆಸರು ಬದಲಿಸಿದ್ರು?
ಭೂಪತಿ - ನಕ್ಷತ್ರ ಮದುವೆ ನೆರವೇರಿದ ಬಳಿಕ ‘ಯಾವತ್ತಿದ್ದರೂ ನೀನೇ ನನ್ನ ಸೊಸೆ’ ಎಂದು ಶ್ವೇತಾಗೆ ಶಕುಂತಲಾ ದೇವಿ ಭರವಸೆ ನೀಡಿದ್ದರು. ಆನಂತರ ನಕ್ಷತ್ರಗೆ ವಿಚ್ಛೇದನ ನೀಡುವಂತೆ ಭೂಪತಿಗೆ ಶಕುಂತಲಾ ದೇವಿ ಸೂಚಿಸಿದ್ದರು. ಆದರೆ, ‘ನಾನು ಮದುವೆಯಾಗಿದ್ದೇನೆ ಅಷ್ಟೇ. ಜೀವನ ಪೂರ್ತಿ ಅವಳ ಜೊತೆಗೇ ಇರ್ತೀನಿ. ಆದರೆ, ಇನ್ನೊಂದು ಮದುವೆ ಮಾತ್ರ ಆಗಲ್ಲ’ ಎಂದು ತಾಯಿ ಶಕುಂತಲಾ ದೇವಿಗೆ ಭೂಪತಿ ಕಡ್ಡಿತುಂಡು ಮಾಡಿದ ಹಾಗೆ ಹೇಳಿದ್ದಾನೆ.
ಭೂಪತಿ ಹೀಗೆ ಹೇಳಿದ್ಮೇಲೆ, ಮೌರ್ಯನ ಜೊತೆ ಶ್ವೇತಾ ಮದುವೆ ನೆರವೇರಿಸಲು ಶಕುಂತಲಾ ದೇವಿ ನಿರ್ಧರಿಸಿದ್ದಾರೆ. ಆದರೆ ಆಸ್ತಿಗೆ ಆಸೆ ಪಟ್ಟು ಮೌರ್ಯನನ್ನು ಮದುವೆಯಾಗೋಕೆ ಶ್ವೇತಾ ಒಪ್ಪಿಕೊಳ್ತಾಳಾ? ಶ್ವೇತಾಗೆ ಮೌರ್ಯ ಇಷ್ಟವಾಗುತ್ತಾನಾ? ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.
ನಕ್ಷತ್ರ ಹಾಗೂ ಭೂಪತಿಗೆ ತೊಂದರೆ ಕೊಡುತ್ತಿದ್ದೇ ಮೌರ್ಯ ಎಂಬ ಸತ್ಯ ಇನ್ನೂ ಯಾರಿಗೂ ತಿಳಿದಿಲ್ಲ. ಮೌರ್ಯನೇ ವಿಲನ್ ಅಂತ ಭೂಪತಿಗೆ ಗೊತ್ತಾದರೆ ಏನಾಗಲಿದೆಯೋ ತಿಳಿಯದು. ಅಂತೂ ಹಲವಾರು ಪ್ರಶ್ನೆಗಳು ವೀಕ್ಷಕರನ್ನು ಕಾಡುವುದಂತೂ ನಿಜ. ‘ಲಕ್ಷಣ’ ಧಾರಾವಾಹಿಯಲ್ಲಿ ಶ್ವೇತಾ ಆಗಿ ಸುಕೃತಾ ನಾಗ್ (Sukrutha Nag), ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್ (Jagannath), ನಕ್ಷತ್ರ ಆಗಿ ವಿಜಯಲಕ್ಷ್ಮಿ (Vijayalakshmi), ಶಕುಂತಲಾ ದೇವಿ ಅಗಿ ಸುಧಾ ಬೆಳವಾಡಿ (Sudha Belawadi), ಮೌರ್ಯ ಆಗಿ ಅಭಿಷೇಕ್ ಶ್ರೀಕಾಂತ್ (Abhishek Srikanth) ಅಭಿನಯಿಸುತ್ತಿದ್ದಾರೆ.
Ramachari serial: ರಾಮಾಚಾರಿ ಮದುವೆ ಠುಸ್ ಪಟಾಕಿ, ವೀಕ್ಷಕರನ್ನು ಫೂಲ್ ಮಾಡಿದ್ರಾ?