ಹಲವಾರು ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಪ್ರತಿ ಭಾಷೆಯಲ್ಲೂ ಪ್ರತಿ ಸೀಸನ್‌ಗೂ ಬೇರೆ ಬೇರೆ ಲೋಗೋ ಇರುತ್ತದೆ. ಆ ವರ್ಷದ ಥೀಮ್‌ಗೆ ತಕ್ಕಂತೆ ಅದರ ಲೋಗೋ ಬದಲಾಗುತ್ತದೆ. ಹಾಗೆಯೇ ಕನ್ನಡದ 12ನೇ ಸೀಸನ್‌ನ ಲೋಗೋ ಈಗ ಪ್ರದರ್ಶನಗೊಂಡಿದೆ.
ಸ್ಪರ್ಧಿಗಳು ಯಾರು ಎಂಬ ಸಂಗತಿಯಿನ್ನೂ ಗುಟ್ಟು!
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗುವ ಕ್ಷಣ ಸನ್ನಿಹಿತವಾಗಿದೆ. ಇದೇ ತಿಂಗಳು 28ರಿಂದ (28 September 2025) ಕಲರ್ಸ್ ವಾಹಿನಿಯಲ್ಲಿ ಶುರುವಾಗಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಆದರೆ ಸ್ಪರ್ಧಿಗಳು ಯಾರು ಎಂಬ ಗುಟ್ಟನ್ನು ಸಹಜವಾಗಿಯೇ ಶೋ ನಡೆಸುವ ಟೀಂ ಗುಟ್ಟಾಗಿ ಇಟ್ಟಿದೆ. ಆದರೂ ಕೂಡ ಎಂದಿನಂತೆ, ಅವರು ಹೋಗುತ್ತಿದ್ದಾರೆ, ಇವರು ಹೋಗುತ್ತಿದ್ದಾರೆ ಎಂಬ ರೂಮರ್ ಹರಡುತ್ತಿದೆ. ನಿರೀಕ್ಷಿತ ಕಂಟೆಸ್ಟಂಟ್ ಪಟ್ಟಿಯಲ್ಲಿ ನಟಿ ಮೇಘಾ ಶೆಟ್ಟಿ (Megha Shetty) ಹೆಸರು ಕೂಡ ಇದೆ.
ಆದರೆ, ಈ ಬಗ್ಗೆ ನಟಿ ಮೇಘಾ ಶೆಟ್ಟಿ ಭಾರೀ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ನಲ್ಲಿ 'ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ.. (Guys I am not going to Bigg Boss...! Pls stop Spreding...!)' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮೇಘಾ ಶೆಟ್ಟಿಯನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 12ರಲ್ಲಿ ನೋಡುವ ಭಾಗ್ಯ ಅವರ ಅಭಿಮಾನಿಗಳಿಗೆ ಇಲ್ಲ ಎನ್ನಬಹುದು!
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಶುರುವಾಗಲಿದೆ. ಈ ಸೀಸನ್‌ಗೆ ಹೊಸ ಡೈಮಂಡ್ ಆಕಾರದ ಲೋಗೋ ಅನಾವರಣಗೊಂಡಿದ್ದು, ಹಿಡಿದು ಸ್ಕ್ರಾಲ್ ಮಾಡಿ ಎಂದು 'ಬಿಬಾ' ಟೀಂ ವೀಕ್ಷಕರಿಗೆ ಹುಳ ಬಿಟ್ಟಿದೆ.. ಏನದು ನೋಡಿ, ಕಾಮೆಂಟ್ ಮಾಡಿ..
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ ಸೆಪ್ಟೆಂಬರ್ 28ರಿಂದ ಶುರುವಾಗಲಿದೆ. ಬಿಗ್ ಬಾಸ್ ಮನೆಗೆ ಯಾರು ಪ್ರವೇಶಿಸುತ್ತಾರೆ ಎಂದು ವೀಕ್ಷಕರಿಗೆ ತಿಳಿದರೆ ಅಷ್ಟೇ ಸಾಕು ಎಂಬಂತಾಗಿದೆ. ಅಷ್ಟಕ್ಕೂ ಸ್ಪರ್ಧಿಗಳು ಈಗಾಗಲೇ ಅಂತಿಮಗೊಂಡಿದ್ದು, ಅವರ ಹೆಸರುಗಳೆಲ್ಲ ಬಹಿರಂಗವಾಗಿಲ್ಲ. ಈ ಮಧ್ಯೆ ಕೆಲವು ಹೆಸರುಗಳು ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ, ಆದರೆ ಅದು ಸತ್ಯಕ್ಕೆ ಎಷ್ಟು ಹತ್ತಿರ? ಹಾಗಾಗಿ ಯಾರು ಮನೆಗೆ ಪ್ರವೇಶಿಸುತ್ತಾರೆ ಎಂದು ನೋಡಲು 28ರವರೆಗೆ ಕಾಯಲೇಬೇಕು.
ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಹಲವು ಪ್ರೋಮೋಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಗ್ರ್ಯಾಂಡ್ ಓಪನಿಂಗ್‌ನಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಲರ್ಸ್ ಕನ್ನಡದ ಕೆಲವು ಧಾರಾವಾಹಿಗಳು ಈಗಾಗಲೇ ಮುಗಿದಿವೆ. ಕೆಲವು ಧಾರಾವಾಹಿಗಳ ಸಮಯ ಬದಲಾಗಿದ್ದರೆ, ಇನ್ನು ಕೆಲವು 1 ಗಂಟೆ ಪ್ರಸಾರ ಮಾಡಿ ಮುಗಿಸಲಾಗುತ್ತಿದೆ.
ಮೇಘಾ ಶೆಟ್ಟಿ ಹೋಗ್ತಿಲ್ಲ!
ಮಧ್ಯೆ ಕೆಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ಗಗನ್ ಶ್ರೀನಿವಾಸ್, ದೀಪಿಕಾ ಗೌಡ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ಪಾಯಲ್ ಚಂಗಪ್ಪ, ಮೇಘಾ ಶೆಟ್ಟಿ, ಗಗನ, ಅರವಿಂದ್ ರತ್ನನ್, ವರುಣ್ ಆರಾಧ್ಯ, ದೀಪಿಕಾ ಗೌಡ, ಧನುಷ್, ಅಮೃತಾ ರಾಮಮೂರ್ತಿ, ಗಾಯಕ ಸುನಿಲ್, ಬಾಲು ಬೆಳಗುಂದಿ, ತೇಜಸ್ ಗೌಡ, ಆಶ್ ಮೆಲೋ, ದಿವ್ಯಾ ವಸಂತ್, ಗೀತಾ ಹೆಸರುಗಳು ಕೇಳಿಬರುತ್ತಿವೆ. ಈ ಪಟ್ಟಿ ಬದಲಾಗುತ್ತಲೇ ಇದೆ. ಇದೀಗ ಈ ಪಟ್ಟಿಯಿಂದ ಮೇಘಾ ಶೆಟ್ಟಿ ಔಟ್ ಆಗಿದ್ದಾರೆ.
ಆದರೂ, ನಿಜವಾಗಿಯೂ ಯಾರು ಒಳಗೆ ಹೋಗುತ್ತಿದ್ದಾರೆಂದು ತಿಳಿಯಬೇಕಿದೆ. ಇದೀಗ ಕಲರ್ಸ್ ಕನ್ನಡ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್ ಬಾಸ್ 12ರ ಲೋಗೋ ನಿಮ್ಮ ಕೈಯಲ್ಲಿದೆ.. ಹಿಡಿದು ಸ್ಕ್ರಾಲ್ ಮಾಡಿ ಎಂಬ ಶೀರ್ಷಿಕೆಯಿದೆ. ಅದೇ ಈ ಬಾರಿಯ ಲೋಗೋ.
ಪ್ರತಿ ಸೀಸನ್‌ಗೂ ಬೇರೆ ಬೇರೆ ಲೋಗೋ!
ಹಲವಾರು ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಪ್ರತಿ ಭಾಷೆಯಲ್ಲೂ ಪ್ರತಿ ಸೀಸನ್‌ಗೂ ಬೇರೆ ಬೇರೆ ಲೋಗೋ ಇರುತ್ತದೆ. ಆ ವರ್ಷದ ಥೀಮ್‌ಗೆ ತಕ್ಕಂತೆ ಅದರ ಲೋಗೋ ಬದಲಾಗುತ್ತದೆ. ಹಾಗೆಯೇ ಕನ್ನಡದ 12ನೇ ಸೀಸನ್‌ನ ಲೋಗೋ ಈಗ ಪ್ರದರ್ಶನಗೊಂಡಿದೆ. ಸ್ಕ್ರಾಲ್ ಮಾಡಿ ನೋಡಿ ಎಂದಿದೆ ಚಾನೆಲ್. ಹಾಗೇನಿದೆ ನೋಡಿ?
ಅಷ್ಟಕ್ಕೂ ಈ ಬಿಗ್ ಬಾಸ್ ಕಣ್ಣಿನೊಳಗೆ ಎನೋ (!) ಬರೆದಿರುವುದನ್ನು ನೀವು ನೋಡಬಹುದು. ಇದೇ ಬಿಗ್ ಬಾಸ್ 12ರ ಸಂಕೇತ. ಈ ಲೋಗೋ ನೋಡಿಯೇ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಈ ಶೋ ಶುರುವಾಗುವುದನ್ನೇ ಕಾಯುತ್ತಿದ್ದಾರೆ.
