- Home
- Entertainment
- TV Talk
- ಬಿಗ್ ಬಾಸ್ ಕನ್ನಡ 12 ಲೋಗೋ ಔಟ್: ಆ ಕಣ್ಣಿನೊಳಗೆ ಏನೋ ಸೀಕ್ರೆಟ್ ಅಡಗಿದೆ, ನೋಡಿ ಹೇಳ್ತಿರಾ?
ಬಿಗ್ ಬಾಸ್ ಕನ್ನಡ 12 ಲೋಗೋ ಔಟ್: ಆ ಕಣ್ಣಿನೊಳಗೆ ಏನೋ ಸೀಕ್ರೆಟ್ ಅಡಗಿದೆ, ನೋಡಿ ಹೇಳ್ತಿರಾ?
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಶುರುವಾಗಲಿದೆ. ಈ ಸೀಸನ್‌ಗೆ ಹೊಸ ಡೈಮಂಡ್ ಆಕಾರದ ಲೋಗೋ ಅನಾವರಣಗೊಂಡಿದ್ದು, ಹಿಡಿದು ಸ್ಕ್ರಾಲ್ ಮಾಡಿ ನೋಡಿ ಎಂದಿದೆ. ಏನದು ನೋಡಿ..!

ಇದೇ 28ರಿಂದ ಬಿಗ್ ಬಾಸ್ ಶುರು
ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಶುರುವಾಗಲಿದೆ. ಬಿಗ್ ಬಾಸ್ ಮನೆಗೆ ಯಾರು ಪ್ರವೇಶಿಸುತ್ತಾರೆ ಎಂದು ವೀಕ್ಷಕರಿಗೆ ತಿಳಿದರೆ ಸಾಕು. ಅಷ್ಟಕ್ಕೂ ಸ್ಪರ್ಧಿಗಳು ಈಗಾಗಲೇ ಅಂತಿಮಗೊಂಡಿದ್ದು, ಅವರ ಹೆಸರುಗಳೆಲ್ಲ ಬಹಿರಂಗವಾಗಿಲ್ಲ. ಈ ಮಧ್ಯೆ ಕೆಲವು ಹೆಸರುಗಳು ಬಹಿರಂಗಗೊಂಡಿವೆ. ಹಾಗಾಗಿ ಯಾರು ಮನೆಗೆ ಪ್ರವೇಶಿಸುತ್ತಾರೆ ಎಂದು ನೋಡಲು 28ರವರೆಗೆ ಕಾಯಬೇಕು.
ಮುಗಿದ ಸೀರಿಯಲ್‌ಗಳು
ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಹಲವು ಪ್ರೋಮೋಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಗ್ರ್ಯಾಂಡ್ ಓಪನಿಂಗ್‌ನಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಲರ್ಸ್ ಕನ್ನಡದ ಕೆಲವು ಧಾರಾವಾಹಿಗಳು ಈಗಾಗಲೇ ಮುಗಿದಿವೆ. ಕೆಲವು ಧಾರಾವಾಹಿಗಳ ಸಮಯ ಬದಲಾಗಿದ್ದರೆ, ಇನ್ನು ಕೆಲವು 1 ಗಂಟೆ ಪ್ರಸಾರ ಮಾಡಿ ಮುಗಿಸಲಾಗುತ್ತಿದೆ.
ಸಂಭಾವ್ಯ ಪಟ್ಟಿ
ಈ ಮಧ್ಯೆ ಕೆಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ಗಗನ್ ಶ್ರೀನಿವಾಸ್, ದೀಪಿಕಾ ಗೌಡ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ಪಾಯಲ್ ಚಂಗಪ್ಪ, ಮೇಘಾ ಶೆಟ್ಟಿ, ಗಗನ, ಅರವಿಂದ್ ರತ್ನನ್, ವರುಣ್ ಆರಾಧ್ಯ, ದೀಪಿಕಾ ಗೌಡ, ಧನುಷ್, ಅಮೃತಾ ರಾಮಮೂರ್ತಿ, ಗಾಯಕ ಸುನಿಲ್, ಬಾಲು ಬೆಳಗುಂದಿ, ತೇಜಸ್ ಗೌಡ, ಆಶ್ ಮೆಲೋ, ದಿವ್ಯಾ ವಸಂತ್, ಗೀತಾ ಹೆಸರುಗಳು ಕೇಳಿಬರುತ್ತಿವೆ. ಈ ಪಟ್ಟಿ ಬದಲಾಗುತ್ತಲೇ ಇದೆ.
ಸತ್ಯಾಸತ್ಯತೆ ತಿಳಿಯಬೇಕಿದೆ
ಆದರೂ, ನಿಜವಾಗಿಯೂ ಯಾರು ಒಳಗೆ ಹೋಗುತ್ತಿದ್ದಾರೆಂದು ತಿಳಿಯಬೇಕಿದೆ. ಇದೀಗ ಕಲರ್ಸ್ ಕನ್ನಡ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್ ಬಾಸ್ 12ರ ಲೋಗೋ ನಿಮ್ಮ ಕೈಯಲ್ಲಿದೆ.. ಹಿಡಿದು ಸ್ಕ್ರಾಲ್ ಮಾಡಿ ಎಂಬ ಶೀರ್ಷಿಕೆಯಿದೆ. ಅದೇ ಈ ಬಾರಿಯ ಲೋಗೋ.
ಪ್ರತಿ ಸೀಸನ್‌ಗೂ ಬದಲಾವಣೆ
ಹಲವಾರು ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಪ್ರತಿ ಭಾಷೆಯಲ್ಲೂ ಪ್ರತಿ ಸೀಸನ್‌ಗೂ ಬೇರೆ ಬೇರೆ ಲೋಗೋ ಇರುತ್ತದೆ. ಆ ವರ್ಷದ ಥೀಮ್‌ಗೆ ತಕ್ಕಂತೆ ಅದರ ಲೋಗೋ ಬದಲಾಗುತ್ತದೆ. ಹಾಗೆಯೇ ಕನ್ನಡದ 12ನೇ ಸೀಸನ್‌ನ ಲೋಗೋ ಈಗ ಪ್ರದರ್ಶನಗೊಂಡಿದೆ. ಸ್ಕ್ರಾಲ್ ಮಾಡಿ ನೋಡಿ ಎಂದಿದೆ ಚಾನೆಲ್. ಹಾಗೇನಿದೆ ನೋಡಿ?
ಕಣ್ಣಿನೊಳಗೆ 12
ಅಷ್ಟಕ್ಕೂ ಈ ಬಿಗ್ ಬಾಸ್ ಕಣ್ಣಿನೊಳಗೆ ಕನ್ನಡದಲ್ಲಿ 12 ಎಂದು ಬರೆದಿರುವುದನ್ನು ನೋಡಬಹುದು. ಇದೇ ಬಿಗ್ ಬಾಸ್ 12ರ ಸಂಕೇತ. ಈ ಲೋಗೋ ನೋಡಿಯೇ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಶೋ ಶುರುವಾಗುವುದನ್ನೇ ಕಾಯುತ್ತಿದ್ದಾರೆ.