ನಟಿ ಅರ್ಚನಾ ಲಕ್ಷ್ಮೀ ನರಸಿಂಹಸ್ವಾಮಿ ಅವರು ತಾಯ್ತನ, ವೃತ್ತಿಜೀವನ ಮತ್ತು ವಿದೇಶದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಬಾಣಂತನ, ಕುಟುಂಬದ ಮಹತ್ವ ಮತ್ತು ವಿದೇಶದಲ್ಲಿನ ಜೀವನದ ಬಗ್ಗೆ ಮಾತನಾಡಿದ್ದಾರೆ.

ಕನ್ನಡದಲ್ಲಿ ಸಿನಿಮಾಗಳನ್ನ ಮಾಡಿ, ಮದುವೆ ಆದ ಬಳಿಕ ವಿದೇಶಕ್ಕೆ ಹೋಗಿ, ಅಲ್ಲಿ ಕೂಡ ಎಚ್ಆರ್ ಆಗಿ ವರ್ಕ್ ಮಾಡಿ, ಈಗ ತಾಯ್ತನದ ಸಂಭ್ರಮದಲ್ಲಿರುವ ನಟಿ ಅರ್ಚನಾ ಲಕ್ಷ್ಮೀ ನರಸಿಂಹಸ್ವಾಮಿ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.

ನಿಮ್ಮ ಮಗುಗೆ ಎರಡು ವರ್ಷ ಆಗ್ತಾ ಬಂತು ಅಂತ ಅನಿಸುತ್ತದೆ.

18 ತಿಂಗಳು ಆಯ್ತು.

ಈಗ ತಾಯಿ ಆಗಿದ್ದೀರಾ ಅಂತ ಅನಿಸೋದಿಲ್ಲ.

ಅಂತ ನೀವು ತುಂಬಾ ಕೈಂಡ್ ಆಗಿದ್ದೀರಾ, ಅದಕ್ಕೆ ಹಂಗೆ ಹೇಳ್ತೀರಾ ಇಲ್ಲ. ಫಿಟ್ನೆಸ್ ಸೀಕ್ರೆಟ್ ಅಂತ ಏನಿಲ್ಲ. ಮಗು ಆಗೋಕೂ ಮುನ್ನ ತುಂಬಾ ವರ್ಕೌಟ್ ಮಾಡ್ತಾ ಇದ್ದೆ. ಆರೋಗ್ಯಕರವಾಗಿ ತಿನ್ನುತ್ತಿದ್ದೆ. ಅಮೆರಿಕದಲ್ಲಿಯೂ ಚಪಾತಿ, ದೋಸೆ ಅವಲಕ್ಕಿ ತಿನ್ಕೊಂಡು, ವರ್ಕೌಟ್ ಮಾಡ್ತಿದ್ದೆ. ಮಗು ಆದಮೇಲೆ ನನ್ನ ತಾಯಿ ಟ್ರೆಡಿಷನಲ್ ಬಾಣಂತನ ಮಾಡಿದ್ರು. ಎಂದಿಗೂ ನಾನು ಓವರ್ ಈಟ್ ಮಾಡಲ್ಲ, ಕಂಟ್ರೋಲ್ಡ್ ಈಟಿಂಗ್ ಅಷ್ಟೇ.

ವಿದೇಶದಲ್ಲಿ ಅಂದ್ರೆ ಟ್ರೆಡಿಷನಲ್ ಆಗಿ ಸೀಮಂತವನ್ನ ಮಾಡ್ಕೊಂಡ್ರಿ. ಈ ಬಗ್ಗೆ ಹೇಳಬಹುದಾ?

ನಾನು ನನ್ನ ತಾಯಿಗೆ ಯಾವಾಗ್ಲೂ ಹೇಳ್ತಾ ಇದ್ದೆ. ನಾನು ಮಗು ಮಾಡ್ಕೊಂಡ್ರೆ ನೀನು ವಿದೇಶಕ್ಕೆ ಬರಲೇಬೇಕು. ನೀನು ನನಗೆ ಸಾಂಪ್ರದಾಯಿಕವಾಗಿ ಬಾಣಂತನ ಮಾಡಬೇಕು ಅಂತ. ಹಾಗೆ ಮಾಡಿಕೊಂಡೆ. ಬಾಣಂತಿಯರಿಗೆ ಸೀರೆ ಕಟ್ಟಬೇಕು ಅಂತ ಹೇಳ್ತಾರೆ. ನಾನು ಬೆಲ್ಟ್‌ ಹಾಕಿಕೊಳ್ಳದೆ, ಸೀರೆ ಕಟ್ಟಿಕೊಂಡಿದ್ದೆ, ಇದರಿಂದಲೇ ಇಂದು ಆರೋಗ್ಯವಾಗಿದ್ದೇನೆ.

ಬೇಬಿ ಶವರ್ ಅಂತದ್ದೇ ಜಾಸ್ತಿ ಆಗ್ತಿದೆ. ವೆಸ್ಟರ್ನ್ ಕಲ್ಚರ್‌ನ ಜಾಸ್ತಿ ಫಾಲೋ ಮಾಡ್ತಾ ಇದ್ದಾರೆ.

ನಾನು ಸಾಂಪ್ರದಾಯಿಕ, ವೆಸ್ಟರ್ನ್‌ ಎಂದು ನಂದು ತುಂಬಾನೇ ಫಂಕ್ಷನ್ಸ್ ಆಗೋಯ್ತು. ಜೆಂಡರ್ ರಿವೀಲ್ ಮಾಡಿದ್ವಿ ಅದಾದಮೇಲೆ ಬೇಬಿ ಶವರ್ ಮಾಡಿದ್ವಿ ಸೀಮಂತ ಮಾಡಿದ್ವಿ. ನೀನು ಎಲ್ಲ ಇವೆಂಟ್ ಮಾಡಿ ನಾಳೆ ಯಾರು ಫಂಕ್ಷನ್‌ಗೆ ಬರ್ತಾರೋ ಇಲ್ವೋ? ನಂದು ಪಾಕೆಟ್ ಅಂತೂ ತೂತು ಬೀಳ್ತಿದೆ ಅಂದ್ರು.

ಇತ್ತೀಚೆಗೆ ಮದುವೆ ಆಗೋದಕ್ಕೆ ಯೋಚನೆ ಮಾಡ್ತಾ ಇದ್ದಾರೆ.

ಸರಿಯಾದ ಸಂಗಾತಿ ಸಿಕ್ಕರೆ ಮಾತ್ರ ಮದುವೆ ಆಗಬೇಕು. ಕೆಲವರು ತುಂಬಾ ಯಂಗ್ ಏಜ್ ಅಲ್ಲಿ ಮದುವೆ ಮಾಡ್ಕೊಂಡುಬಿಡ್ತಾರೆ, ಆಮೇಲೆ ಪಾರ್ಟ್ನರ್ ಸರಿ ಇರಲ್ಲ. ಸ್ವಲ್ಪ ನಿಧಾನವಾಧರೂ ಸರಿಯಾದ ಸಂಗಾತಿ ಹುಡುಕಿಕೊಳ್ಳಬೇಕು. ಮಗು ಮಾಡ್ಕೊಂಡ್ರೆ ಬಾಡಿ, ಹೇರ್ ಎಲ್ಲ ಹೋಗುತ್ತೆ ಅಂತ ಅಂದುಕೊಳ್ತಾರೆ. ನೀವು ಇನ್ನೊಂದು ಜೀವಕ್ಕೆ ಜೀವ ಕೊಡ್ತೀರಾ. ಟ್ರೆಡಿಷನಲ್‌ ಬಾಣಂತನದಲ್ಲಿ ನಾವು ತೂಕ ಕಳೆದುಕೊಳ್ತೀವಿ. ಮಾನಸಿಕವಾಗಿ ಕೂಡ ಒಂದಷ್ಟು ಬದಲಾವಣೆ ಆಗುತ್ತದೆ. ಆ ಟೈಮ್‌ನಲ್ಲಿ ನನಗಂತೂ ತುಂಬ ಕೋಪ ಬರ್ತಿತ್ತು, ನನ್ನ ಗಂಡನ ಮುಖ ನೋಡದ್ರೆ ಆಗ್ತಿರ್ಲಿಲ್ಲ. ಇದನ್ನೆಲ್ಲ ನನ್ನ ಗಂಡ ತುಂಬ ಚೆನ್ನಾಗಿ ಹ್ಯಾಂಡಲ್‌ ಮಾಡಿದ್ದಾನೆ.

ಮದರ್ ಆಲ್ವೇಸ್ ಎ ಮದರ್. ನಮ್ಮ ತಾಯಂದಿರು ಯಾವಾಗಲೂ ಮಕ್ಕಳ ಬಗ್ಗೆ ಯೋಚನೆ ಮಾಡ್ತಿರ್ತಾರೆ. ಹೀಗೆ ಎಲ್ಲ ತಾಯಂದರಿಗೂ ಮಕ್ಕಳ ಬಗ್ಗೆ ಯೋಚನೆ ಇರುತ್ತದೆ. ನಾನು ನನ್ನ ಮಗುವನ್ನು ನೋಡಿಕೊಳ್ಳಲು ಆಯಾದವರನ್ನು ಇಟ್ಟು ಕೆಲಸಕ್ಕೆ ಹೋಗಬಹುದು, ಆದರೆ ಆ ಮಗುವಿನ ಅಜ್ಜ-ಅಜ್ಜಿ ನೋಡಿಕೊಳ್ಳೋ ಹಾಗೆ ಆಯಾ ನೋಡಿಕೊಳ್ಳದೇ ಇರಬಹುದು. ಆದರೆ ನಾನು ನನ್ನ ಮಗಳಿಗೋಸ್ಕರ ಕೆಲಸದಿಂದ ಬ್ರೇಕ್‌ ತಗೊಂಡಿದ್ದೇನೆ. ನನ್ನ ಮಗಳಿಗೆ ಕುಟುಂಬದ ಅಟ್ಯಾಚ್‌ಮೆಂಟ್‌ ಇರಬೇಕು, ದುಡ್ಡು ಯಾವಾಗ ಬೇಕಿದ್ರೂ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಹಳ್ಳಿಯಲ್ಲಿದ್ದವರು ಬೆಂಗಳೂರಿಗೆ ಬಂದು ವಾಸ ಮಾಡಬೇಕು ಅಂತಾರೆ, ಬೆಂಗಳೂರಲ್ಲಿ ಇರೋರು ಬಹುತೇಕ ವಿದೇಶದಲ್ಲಿ ಸೆಟಲ್ ಆಗ್ಬೇಕು ಅಂತ ಹೇಳ್ತಾರೆ. ಫಾರಿನ್ ಲೈಫ್ ಹೇಗಿದೆ?

ಎಲ್ಲೇ ಇದ್ರೂ ಕೂಡ ಒಂದೊಂದು ಸಮಸ್ಯೆ ಇರುತ್ತದೆ. ಇಂದು ಭಾರತದಲ್ಲಿ ಎಲ್ಲವೂ ಸಿಗುತ್ತೆ. ಈಗ ಬೆಂಗಳೂರಲ್ಲಿ ಎಲ್ಲವೂ ಸಿಗುತ್ತದೆ. ಈಗ ಒಳ್ಳೆಯ ಕೆಲಸ ಇರಬೇಕು, ಚೆನ್ನಾಗಿ ದುಡ್ಡು ಮಾಡಬೇಕು. ದುಡ್ಡು ಕೊಟ್ರೆ ಏನಾದ್ರೂ ಸಿಗುತ್ತದೆ. ಒಬ್ಬೊಬ್ಬರಿಗೆ ಅದು ಆಸೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರಲ್ಲ ಹಾಗೆ.

YouTube video player