ಕ್ರಿಕೆಟರ್ ಜೊತೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಕನ್ನಡದ ನಟಿ ಅರ್ಚನಾ ಕೊಟ್ಟಿಗೆ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಖ್ಯಾತಿಯ ನಟಿ ಅರ್ಚನಾ ಕೊಟ್ಟಿಗೆ ಶೀಘ್ರದಲ್ಲೇ ಕ್ರಿಕೇಟರ್ ಶರತ್ ಬಿ ಆರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಚಂದನವನದಲ್ಲಿ ಸಖತ್ ಮನರಂಜನೆ ನೀಡಿದ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಖ್ಯಾತಿಯ ನಟಿ ಅರ್ಚನಾ ಕೊಟ್ಟಿಗೆ (Archana Kotitge)ವೈವಾಹಿಕ ಜೀವನದಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಆ ಮೂಲಕ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಲಿದ್ದಾರೆ.
ಹೌದು ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟರ್ ಆಗಿರುವ ಶರತ್ ಬಿ. ಆರ್ (Cricketor Sharath BR) ಅವರ ಜೊತೆ ಇದೇ ಏಪ್ರಿಲ್ 23ರಂದು ಹಸೆಮಣೆ ಏರಲಿದ್ದಾರೆ. ಶರತ್ ಅವರು ಅಂಡರ್ 23 ಟೀಮ್ ನಲ್ಲೂ ಆಡಿದ್ದರೂ, ಐಪಿಎಲ್ ನಲ್ಲೂ ಆಡಿದ್ದರು.
ಶರತ್ ಕರ್ನಾಟಕ ರಂಜಿ ಟ್ರೋಫಿಗಾಗಿ ಆಡಿದ್ದರು, ಅಲ್ಲದೇ ಕಳೆದ ವರ್ಷ ಐಪಿಎಲ್ ಗೆ ಗುಜರಾತ್ ಟೈಟಾನ್ (Gijarat Titan) ಮೂಲಕ ಪಾದಾರ್ಪಣೆ ಕೂಡ ಮಾಡಿದ್ದರು. ಇದೀಗ ನಟಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗುತ್ತಿದ್ದಾರೆ.
ಅಂದ ಹಾಗೇ ಶರತ್ ಹಾಗೂ ಅರ್ಚನಾ ಕೊಟ್ಟಿಗೆ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರು ಸ್ನೇಹಿತನ ಸಹಾಯದಿಂದ ಮಾತನಾಡೋದಕ್ಕೆ ಶುರು ಮಾಡಿದ್ರು ಶರತ್ ಕಾಲೇಜಿನಲ್ಲಿ ಅರ್ಚನಾ ಅವರ ಸೀನಿಯರ್ ಆಗಿದ್ದರು. 2018 ರಲ್ಲಿ, ಸ್ನೇಹಿತನ ಮೂಲಕ ಭೇಟಿಯಾದ ಈ ಜೋಡಿಗೆ ಮೊದಲ ಭೇಟಿಯಲ್ಲಿ ಪ್ರೀತಿಯ ಕಿಡಿ ಹತ್ತಿತ್ತಂತೆ.
ಸುಮಾರು ಎಂಟು ವರ್ಷಗಳಿಂದ ಒಟ್ಟಿಗೆ ಇದ್ದ ಈ ಜೋಡಿಗಳು ಇದೀಗ ಜೀವನದ ಹೊಸ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಹಾಗಾಗಿ ತಮ್ಮ ಎಂಟು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರಣ ಹಾಕಲು ರೆಡಿಯಾಗಿದ್ದಾರೆ ಈ ಮುದ್ದಾದ ಜೋಡಿ.
ವಿರುದ್ಧವಾದುದು ಪರಸ್ಪರ ಆಕರ್ಷಿಸುತ್ತೆ ಎನ್ನುವಂತೆ, ಅರ್ಚನಾ ಮಾತುಗಾರ್ತಿ, ತುಂಬಾನೆ ಮಾತನಾಡುತ್ತಾರಂತೆ, ಆದರೆ ಶರತ್, ಲಾಜಿಕ್ ಪಾಯಿಂಟ್ ಇದ್ದರೆ ಮಾತ್ರ ಮಾತನಾಡುವವರಂತೆ. ಆದರೆ ಇಬ್ಬ ನಡುವಿನ ಪ್ರೀತಿ, ನಂಬಿಕೆ ಮಾತ್ರ ಒಂದೇ ರೀತಿ ಇದೆ ಎನ್ನುತ್ತಾರೆ ಮದುವೆಯಾಗಲಿರುವ ಈ ಜೋಡಿ.
ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅರ್ಚನಾ ಕೊಟ್ಟಿಗೆ ‘ಅರಣ್ಯಕಾಂಡ’, ‘ಡಿಯರ್ ಸತ್ಯ’, ‘ಟ್ರಿಪಲ್ ರೈಡಿಂಗ್’ ಸೇರಿ ಇಲ್ಲಿಯವರೆಗೆ ಸುಮಾರು 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಹೊಂದಿಸಿ ಬರೆಯಿರಿ’ ಹಾಗೂ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddaare) ಇವರು ನಟಿಸಿರುವ ಸೂಪರ್ ಹಿಟ್ ಸಿನಿಮಾಗಳು. ಇದಲ್ಲದೇ ಶಬರಿ ಸರ್ಚಿಂಗ್ ರಾವಣ, ರಾಕ್ಷಸ ಹಾಗೂ ಅಲಂಕಾರ್ ವಿದ್ಯಾರ್ಥಿ ಸಿನಿಮಾಗಳಲ್ಲಿ ಅರ್ಚನಾ ನಟಿಸುತ್ತಿದ್ದಾರೆ.