ಅಣ್ಣಯ್ಯ ಧಾರಾವಾಹಿಯ ಮಾದಪ್ಪನ ಕುಟುಂಬದಲ್ಲಿ ಅತ್ತೆ-ಸೊಸೆ ಒಟ್ಟಿಗೆ ಗರ್ಭಿಣಿಯಾಗಿದ್ದು, ಕಥೆಗೆ ಹೊಸ ತಿರುವು ಸಿಕ್ಕಿದೆ. ಇದರ ನಡುವೆ ಜಿಮ್ ಸೀನನಿಗೆ ರಶ್ಮಿ ಮೇಲೆ ಅನುಮಾನ ಶುರುವಾಗಿದೆ ಹಾಗೂ ಪಿಂಕಿ ಮತ್ತೆ ಎಂಟ್ರಿ ಕೊಟ್ಟಿದ್ದಾಳೆ.
Annayya Serial: ಅಣ್ಣಯ್ಯ ಸೀರಿಯಲ್ನ ಮಾದಪ್ಪನ ಕುಟುಂಬದಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಸೀರಿಯಲ್ನಲ್ಲಿ ಅತ್ತೆ-ಸೊಸೆ ಒಟ್ಟಿಗೆ ಗರ್ಭಿಣಿಯಾಗಿದ್ದು, ಕಥೆಗೆ ಹೊಸ ತಿರುವು ನೀಡಿದೆ. ಅಣ್ಣಯ್ಯ ಸೀರಿಯಲ್ ಕಲಾವಿದರು, ಬಿಡುವಿನ ಸಮಯದಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ಮಾದಪ್ಪನ ಕುಟುಂಬದ ಸದಸ್ಯರೆಲ್ಲರೂ ಟ್ರೆಂಡಿಂಗ್ ಮ್ಯೂಸಿಕ್ಗೆ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ನೋಡಿದ ಕಲಾವಿದರ ಅಭಿಮಾನಿಗಳು, ವಿಡಿಯೋವನ್ನು ಧಾರಾವಾಹಿ ಕತೆಗೆ ಹೋಲಿಸಿ ತಮಾಷೆ ಮಾಡುತ್ತಿದ್ದಾರೆ. ಡಬಲ್ ಸಂಭ್ರಮದಲ್ಲಿರುವ ಮಾದಪ್ಪನ ಫ್ಯಾಮಿಲಿ ಕುಣಿದು ಕುಪ್ಪಳಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ರಶ್ಮಿ ಪಾತ್ರಧಾರಿ ಪ್ರತೀಕ್ಷಾ ಶ್ರೀನಾಥ್, ಜಿಮ್ ಸೀನ ಖ್ಯಾತಿಯ ನಿದರ್ಶನ, ಮಾದಪ್ಪ ಪಾತ್ರದಲ್ಲಿ ನಟಿಸುತ್ತಿರುವ ಕುಮಾರ್, ಲೀಲಾ ಆಗಿರೋ ಶೃತಿ ಮತ್ತು ಜಿಮ್ ಸೀನನ ತಂಗಿ ಬಾನು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಟ್ರೆಂಡಿಂಗ್ ಮಿಸ್ ಮಾಡೋದಾದ್ರು ಹೇಗೆ ಎಂದು ಹೇಳಿ ಚೆಂದದ ರೀಲ್ಸ್ ಮಾಡಿದ್ದಾರೆ.
ಅಣ್ಣಯ್ಯ ಕತೆ ಏನು?
ಸದ್ಯ ಸೀರಿಯಲ್ ಗುಡ್ನ್ಯೂಸ್ನಿಂದ ತುಂಬಿದೆ. ಮಾರಿಗುಡಿ ಶಿವು ತಂಗಿಯರಾದ ರತ್ನಾ ಮತ್ತು ಗುಂಡಮ್ಮ ಗರ್ಭಿಣಿಯಾಗಿದ್ದಾರೆ. ಮತ್ತೊಂದೆಡೆ ಗುಂಡಮ್ಮಾಳ ಅತ್ತೆ ಸಹ ಲೀಲಾ ಗರ್ಭಿಣಿಯಾಗಿದ್ದಾಳೆ. ಮೊಮ್ಮಕ್ಕಳನ್ನು ಆಟವಾಡಿಸುವ ವಯಸ್ಸಿನಲ್ಲಿ ಪೋಷಕರಾಗುತ್ತಿರೋದಕ್ಕೆ ಲೀಲಾ ಮತ್ತು ಮಾದಪ್ಪ ತೀವ್ರ ಮುಜುಗರಕ್ಕೊಳಗಾಗಿದ್ದರು. ಈ ಸಮಯದಲ್ಲಿ ಶಿವು ಮತ್ತು ಪಾರು ಜೊತೆಯಾಗಿ ಇಬ್ಬರಿಗೂ ಧೈರ್ಯ ತುಂಬಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಮಾದಪ್ಪ ಮತ್ತು ಲೀಲಾ ಊರು ಬಿಡಲು ಸಿದ್ಧರಾಗಿದ್ದರು. ಇದು ಮಾಕಳವ್ವ ಆಶೀರ್ವಾದ ಎಂದು ಮಾದಪ್ಪನಿಗೆ ಶಿವು ಹೇಳುತ್ತಾನೆ. ಇತ್ತ ತಾಯ್ತನ ಅನುಭವಿಸುವಂತೆ ಲೀಲಾಗೆ ಸಲಹೆ ನೀಡಿದ್ದಾಳೆ. ಈ ಎಲ್ಲದರ ನಡುವೆ ಜಿಮ್ ಸೀನನಿಗೆ ರಶ್ಮಿ ಮೇಲೆ ಅನುಮಾನ ಮೂಡಿದೆ.
ರಶ್ಮಿ ಮೇಲೆ ಜಿಮ್ ಸೀನನಿಗೆ ಅನುಮಾನ
ಮೊದಲರಾತ್ರಿಯಂದು ಗಿಡಮೂಲಿಕೆ ಮಿಶ್ರಿತ ಹಾಲು ಕುಡಿದ ಸೀನನಿಗೆ ಏನಾಯ್ತು ಎಂಬುವುದು ನೆನಪಿಲ್ಲ. ಹೀಗಾಗಿ ರಶ್ಮಿಯೇ ಮೇಲೆ ಅನುಮಾನಗೊಂಡಿದ್ದಾನೆ. ಒಂದು ವೇಳೆ ಎಲ್ಲರ ಮುಂದೆ ತನ್ನ ಅನುಮಾನ ಹೇಳಿಕೊಂಡ್ರೆ ಮಾದಪ್ಪ ಮತ್ತು ಶಿವು ಕೋಪಕ್ಕೆ ತುತ್ತಾಗಬೇಕೆಂಬ ಭಯದಲ್ಲಿ ಸೀನ ಸಿಲುಕಿದ್ದಾನೆ.
ಮತ್ತೊಂದೆಡೆ ಪಿಂಕಿ ಮತ್ತೆ ಸೀನನ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ರಶ್ಮಿಯನ್ನು ಮುಟ್ಟದಂತೆ ಸೀನನಿಗೆ ಪಿಂಕಿ ಎಚ್ಚರಿಕೆ ನೀಡಿದ್ದಳು. ಆದ್ರೆ ಇದೀಗ ರಶ್ಮಿ ಗರ್ಭಿಣಿಯಾಗಿರೋ ವಿಷಯ ತಿಳಿದು ಪಿಂಕಿ ಏನ್ ಮಾಡ್ತಾಳೆ ಅನ್ನೋದು ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.















