ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಿಶಿರ್ ತಮ್ಮ ಜೀವನಕ್ಕೆ ಬರುವ ಮುನ್ನ ತನಗಾದ ಬ್ರೇಕಪ್ ಬಗ್ಗೆ ಐಶ್ವರ್ಯ ಮುಕ್ತವಾಗಿ ಮಾತನಾಡಿದ್ದಾರೆ. ಇವರ ನಿಶ್ಚಿತಾರ್ಥದ ಉಂಗುರಗಳು ಶಿವ-ಪಾರ್ವತಿ ಥೀಮ್ ಹೊಂದಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿವೆ.

Bigg Boss ಖ್ಯಾತಿಯ ಶಿಶಿರ್​ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಬಂದು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಇದೇ ವೇಳೆ ಐಶ್ವರ್ಯ (Aishwarya Shindogi) ಅವರು ಈ ಹಿಂದೆ ತಮ್ಮ ಬ್ರೇಕಪ್​ ಬಗ್ಗೆ ಮಾತನಾಡಿದ್ದ, ಅದೂ ಶಿಶಿರ್​ ಅವರ ಮುಂದೆಯೇ ಮುಚ್ಚು ಮರೆ ಇಲ್ಲದೇ ಎಲ್ಲವನ್ನೂ ಓಪನ್​ ಆಗಿಯೇ ಹೇಳಿದ್ದ ವಿಡಿಯೋ ಒಂದು ಇದೀಗ ವೈರಲ್​ ಆಗುತ್ತಿದೆ. ಶಿಶಿರ್​ ಶಾಸ್ತ್ರಿ ತಮ್ಮ ಜೀವನಕ್ಕೆ ಎಂಟ್ರಿ ಕೊಡುವ ಮೊದಲು ಅರ್ಥಾತ್​ Bigg Boss 11ನೇ ಸೀಸನ್​ಗೂ ನಾಲ್ಕು ತಿಂಗಳ ಮುನ್ನ ಬೇರೊಬ್ಬನ ಜೊತೆ ತಮಗೆ ಬ್ರೇಕಪ್​ ಆಗಿರುವ ವಿಷಯವನ್ನು ನಟಿ ಐಶ್ವರ್ಯ ಅವರು ತಿಳಿಸಿದ್ದಾರೆ.

ನಾನು ಆತನನ್ನೇ ಮದುವೆಯಾಗುವುದು ಅಂತ ಫಿಕ್ಸ್​ ಆಗಿತ್ತು. ಇಬ್ಬರ ಮನೆಯಲ್ಲಿಯೂ ಓಕೆ ಆಗಿತ್ತು. ನಾವಿಬ್ಬರೂ ಅಷ್ಟು ಜೆಲ್​ ಆಗಿಬಿಟ್ಟಿದ್ವಿ. ಆತ ತುಂಬಾ ಒಳ್ಳೆಯ ವ್ಯಕ್ತಿನೇ. ಆತ ದೂರವಾದ ಎಂದ ಮಾತ್ರಕ್ಕೆ ಅವನ ಬಗ್ಗೆ ನೆಗೆಟಿವ್​ ಹೇಳಲು ನನಗೆ ಇಷ್ಟವಿಲ್ಲ. ನಾವಿಬ್ಬರೂ ತುಂಬಾ ಇಷ್ಟಪಟ್ಟಿದ್ವಿ. ಆದರೆ ಆಗಿದ್ದೇ ಬೇರೆ. ಅದೊಂದು ತುಂಬಾ ಮಹತ್ವದ ಟೈಮ್​ನಲ್ಲಿ ಅವನು ನನ್ನ ಪರವಾಗಿ ನಿಲ್ಲಲಿಲ್ಲ. ಈಗಲೇ ಹೀಗಾದರೆ ಮದುವೆಯಾದ ಮೇಲೆ ಇನ್ನೇನು ಎಂದು ನನಗೆ ಅನ್ನಿಸಿತು. ಅದೇ ಲಾಸ್ಟ್​. ಬ್ರೇಕಪ್​ ಆಯಿತು ಎಂದು ನ್ಯೂಸೋ ನ್ಯೂಸ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಐಶ್ವರ್ಯ ಹೇಳಿದ್ದಾರೆ. ಐಶ್ವರ್ಯ ಮತ್ತು ಶಿಶಿರ್​ ಅವರ ಮದುವೆ ಫಿಕ್ಸ್ ಆದ ಮೇಲೆ ಈಚೆಗೆ ನಡೆದಿರುವ ಸಂದರ್ಶನದಲ್ಲಿ ಅವರು ಎಲ್ಲವನ್ನೂ ರಿವೀಲ್​ ಮಾಡಿದ್ದಾರೆ.

ನಾನೇ ಹಿಂದೆ ಹಿಂದೆ ಹೋಗ್ತಿದ್ದೆ

ನಾನೇ ಅವನ ಹಿಂದೆ ಓಡಿ ಓಡಿ ಹೋಗುತ್ತಿದ್ದೆ. ಆದರೆ ಆತ ತಿರುಗಿ ನೋಡಲಿಲ್ಲ. ನನಗೆ ಬೇಕಾದಾಗ ನನ್ನ ಪರ ನಿಲ್ಲಲಿಲ್ಲ. ಹಾಗೆಂದು ಆತ ತುಂಬಾ ಒಳ್ಳೆಯ ವ್ಯಕ್ತಿ. ಆದರೆ ನನ್ನ ಪರವಾಗಿ ನಿಲ್ಲದವನನ್ನು ಮದುವೆಯಾದರೆ ತುಂಬಾ ಕಷ್ಟ ಎನ್ನಿಸಿತು. ಅದಾದ ಮೇಲೆ ಬ್ರೇಕಪ್​ ಆಯಿತು. ಬಿಗ್​ಬಾಸ್ ಶುರುವಾಯಿತು. ಶಿಶಿರ್​ ಶಾಸ್ತ್ರಿ (Shishir Shastry) ನನ್ನ ಜೀವನಕ್ಕೆ ಎಂಟ್ರಿ ಕೊಟ್ಟರು ಎಂದು ಐಶ್ವರ್ಯ ಸಿಂಧೋಗಿ ಅವರು ಎಲ್ಲವನ್ನೂ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಜೀವನದಲ್ಲಿ ನಡೆದಿರುವ ಇಂಥ ಘಟನೆಗಳು ಭಾವಿ ಪತಿಗೆ ತಿಳಿದಿರಲೇಬೇಕು, ಇದರಿಂದ ದಾಂಪತ್ಯ ಜೀವನ ಹಾಳಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ಐಶ್ವರ್ಯ ಅವರು ಎಲ್ಲವನ್ನೂ ಓಪನ್​ ಆಗಿ ಹೇಳಿದ್ದು ತುಂಬಾ ಸಂತೋಷದ ಸಂಗತಿ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಎಂಗೇಜ್​ಮೆಂಟ್ ರಿಂಗ್​ ವಿಶೇಷತೆ

ಇಂದು ಇಬ್ಬರ ಎಂಗೇಜ್​ಮೆಂಟ್​ ಆಗಿದೆ. ಇದರಲ್ಲಿ ಎಂಗೇಜ್​ಮೆಂಟ್​ ರಿಂಗ್​ನ ಮಹತ್ವವನ್ನು ಜೋಡಿ ಹೇಳಿದೆ. ಐಶ್ವರ್ಯ ಅವರು ರಿಂಗ್​ ಶಿವ-ಪಾರ್ವತಿಯ ಥೀಮ್​ನಲ್ಲಿ ಹೇಳಲಾಗಿದ್ದು, ಅದರಲ್ಲಿ ಶಿಶಿರ್​ ಅವರ ಎಸ್​ ಎನ್ನುವ ಹೆಸರನ್ನು ಕೆತ್ತಲಾಗಿದೆ. ಅದೇ ರೀತಿ ಶಿಶಿರ್​ ಅವರು ತಮ್ಮ ರಿಂಗ್​ ಕೂಡ ನೀಲಿ-ಕೆಂಪು ಹರಳುಗಳಿಂದ ಶಿವ-ಪಾರ್ವತಿ ಥೀಮ್​ ಹೊಂದಿದ್ದು, ಅದರಲ್ಲಿ ಎ ಎಂದು ಐಶ್ವರ್ಯ ಅವರ ಹೆಸರನ್ನು ಸೇರಿಸಲಾಗಿದೆ. ಜೊತೆಗೆ ರಿಂಗ್ ಒಳಗಡೆ ನಮ್ಮ ಎಂಗೇಜ್​ಮೆಂಟ್​ ಆಗಿರುವ ಡೇಟ್​ ಸಂಪೂರ್ಣವಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದಾರೆ.