ಲಕ್ಷ್ಮೀ ನಿವಾಸ ಸೀರಿಯಲ್‌ನ ಚಿನ್ನುಮರಿ ಅಂತಲೇ ಮನೆಮಾತಾಗಿರುವ ಚಂದನಾ ಅನಂತಕೃಷ್ಣಗೆ ವಾರದ ಕೆಳಗಷ್ಟೇ ಮದುವೆ ಆಗಿದೆ. ಕೈಯಲ್ಲಿ ಮೆಹೆಂದಿ ಬಣ್ಣ ಗಾಢವಾಗಿರುವಾಗಲೇ ಹೊಸ ತಾಳಿಯಲ್ಲಿ ಸ್ಕ್ರೀನ್‌ ಮೇಲೆ ಬಂದೇ ಬಿಟ್ಟಿದ್ದಾರೆ ನೋಡಿ!

ಲಕ್ಷ್ಮೀ ನಿವಾಸ ಸೀರಿಯಲ್‌ನ ಚಿನ್ನುಮರಿ ಅಂದರೆ ಸೀರಿಯಲ್‌ ಪ್ರಿಯರ ನೆಚ್ಚಿನ ಪಾತ್ರ. ಈ ಪಾತ್ರವನ್ನು ನಿರ್ವಹಿಸುತ್ತಿದ್ದವರು ಪ್ರತಿಭಾವಂತ ನಟಿ ಚಂದನಾ ಅನಂತಕೃಷ್ಣ. ನವೆಂಬರ್ 28ರಂದು ಪ್ರತ್ಯಕ್ಷ್ ಜೊತೆಗೆ ಚಂದನಾ ದಾಂಪತ್ಯದ ಬದುಕಿಗೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಇಬ್ಬರ ಮದುವೆಯು ನಡೆದಿದ್ದು, ಬಂಧು-ಮಿತ್ರರು, ಕಿರುತೆರೆ ಲೋಕದ ಸೆಲೆಬ್ರಿಟಿಗಳು ಶುಭ ಹಾರೈಸಿದ್ದರು. ಇದು ಅರೆಂಜ್ಡ್ ಮ್ಯಾರೇಜ್ ಆಗಿದ್ದು, ಎರಡೂ ಕುಟುಂಬದ ಹಿರಿಯರೆಲ್ಲಾ ಸೇರಿ ಈ ಮದುವೆಯನ್ನು ನಿಶ್ಚಯಿಸಿದ್ದರು. ಬಹಳ ಶಾಸ್ತ್ರೋಕ್ತವಾಗಿ ಚಂದನಾ ಮದುವೆಯು ನೆರವೇರಿದ್ದು, ಅವರ ಅಭಿಮಾನಿಗಳು ಶುಭಾಶಯ ತಿಳಿಸಿದ್ದರು. ಚಂದನಾ ಮದುವೆ ಆಗಿರುವ ವರ ಪ್ರತ್ಯಕ್ಷ್‌ ಮೂಲತಃ ಸಿನಿಮಾ ಕುಟುಂಬದವರು. ಆದರೆ ಅವರಿಗೆ ಬಣ್ಣದ ಲೋಕದ ನಂಟಿಲ್ಲ. ಹೌದು, ಕನ್ನಡದಲ್ಲಿ ತೆರೆಕಂಡ ‘ಅಗ್ನಿಪರ್ವ’, ‘ಶುಭ ಮಿಲನ’, ‘ಜಯಭೇರಿ’, ‘ಉದ್ಭವ’, ‘ಉಂಡು ಹೋದ ಕೊಂಡು ಹೋದ’, ‘ಅಮೃತ ಬಿಂದು’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಉದಯ್ ಹುತ್ತಿನಗದ್ದೆ ಅವರ ಪುತ್ರನೇ ಈ ಪ್ರತ್ಯಕ್ಷ್. ತಂದೆ ಮಾತ್ರವಲ್ಲ, ಪ್ರತ್ಯಕ್ಷ್ ತಾಯಿ ಲಲಿತಾಂಜಲಿ ಕೂಡ ನಟಿಯೇ. ಹಲವು ಸಿನಿಮಾಗಳು ಸೇರಿದಂತೆ 'ಕಿನ್ನರಿ', 'ಒಲವಿನ ನಿಲ್ದಾಣ' ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದವರು.

ಚಂದನಾ ಮೂಲತಃ ತುಮಕೂರಿನವರು. ಬಾಲ್ಯದ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ ಅವರು ಆನಂತರ ಆಳ್ವಾಸ್‌ನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಇನ್ನು, ಪ್ರತ್ಯಕ್ಷ್ ಅವರು ಚಿಕ್ಕಮಗಳೂರಿನವರು. ಎಂಟೆಕ್ ಪದವಿ ಪಡೆದುಕೊಂಡಿರುವ ಪ್ರತ್ಯಕ್ಷ್ ಅವರು, ಸದ್ಯ ಉದ್ಯಮಿಯಾಗಿದ್ದಾರೆ. ತಂದೆ ಉದಯ್ ಹುತ್ತಿನಗದ್ದೆ ಅವರು ಕಾಫಿ ಎಸ್ಟೇಟ್‌ನ ಮಾಲೀಕರಾಗಿದ್ದರು. ಅದನ್ನೇ ಈಗ ಪ್ರತ್ಯಕ್ಷ್‌ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಚಂದನಾ ಮತ್ತು ಪ್ರತ್ಯಕ್ಷ್ ಅವರ ಮದುವೆ ಫೋಟೋಗಳ ಜೊತೆಗೆ ಇವರ ಪ್ರೀ-ವೆಡ್ಡಿಂಗ್ ವಿಡಯೋ ಸಖತ್ ವೈರಲ್ ಆಗಿತ್ತು. ರೆಟ್ರೋ ಶೈಲಿಯಲ್ಲಿದ್ದ ಈ ಪ್ರಿ ವೆಡ್ಡಿಂಗ್ ವೀಡಿಯೋವನ್ನು ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಶೂಟ್ ಮಾಡಲಾಗಿದತ್ತು. 'ಗೀತಾ' ಸಿನಿಮಾದ ಹಾಡನ್ನು ಹಿನ್ನೆಲೆಯಲ್ಲಿ ಬಳಸಲಾಗಿತ್ತು. 

ಜೈಲು ಪಾಲಾದ ಕಾವೇರಿ, ಮುಂದಿನ ವಿಲನ್ ಯಾರು?

 ಸೀರಿಯಲ್ ಶೂಟ್‌ ಅಂದರೆ ಎಷ್ಟೇ ಬ್ಯಾಂಕಿಂಗ್ ಎಪಿಸೋಡ್‌ಗಳಿದ್ದರೂ ನಿತ್ಯ ಪ್ರಸಾರ ಆಗೋ ಸೀರಿಯಲ್‌ಗಳಿಗೆ ಆಗಾಗ ಶೂಟಿಂಗ್ ಮಾಡೋದು ಅನಿವಾರ್ಯ. ಚಂದನಾ ಅನಂತಕೃಷ್ಣ ಮದುವೆಯ ಮೆಹೆಂದಿ ರಂಗು ಇನ್ನೂ ಗಾಢವಾಗಿರುವಾಗಲೇ ಶೂಟಿಂಗ್‌ ಸೆಟ್ ಸೇರಿದ್ದಾರೆ. ಸೀರಿಯಲ್‌ನಲ್ಲೂ ಅವರ ಕೈಯ ರಂಗೋಲೆಯ ದರ್ಶನ ಆಗಿದೆ. ಅದೇ ರೀತಿ ಹೊಸ ತಾಳಿ, ಕರಿಮಣಿ ಸರವೂ ಕಾಣಿಸಿಕೊಂಡಿದೆ. ಇದನ್ನು ಈ ಸೀರಿಯಲ್ ನೋಡುವವರೂ ಗಮನಿಸಿದ್ದಾರೆ. ಆಕೆಯನ್ನು ಮತ್ತೆ ಸೀರಿಯಲ್‌ಗೆ ವೆಲ್‌ಕಂ ಮಾಡಿದ್ದಾರೆ. ನವ ವಿವಾಹಿತೆ ಸೀರಿಯಲ್‌ನಲ್ಲಿ ಕಲರ್‌ಫುಲ್ ಆಗಿ ಕಾಣಿಸ್ತಿದ್ದಾರೆ. 

ನಮ್ಮ ಮನೆ ತುಂಬಾ ಚಿಕ್ಕದು ಎನ್ನುತ್ತಲೇ 'ನಗುವಿನೊಡೆಯ'ನ ಪರಿಚಯಿಸಿದ ಆ್ಯಂಕರ್ ಅನುಶ್ರೀ

ಇನ್ನು ಸೀರಿಯಲ್ ವಿಚಾರಕ್ಕೆ ಬಂದರೆ ಇಲ್ಲಿ ಜಯಂತ ಚಿನ್ನುಮರಿಯನ್ನು ಗೋಳು ಹೊಯ್ಕೊಳ್ಳೋದನ್ನು ಮುಂದುವರಿಸಿದ್ದಾನೆ. ತನ್ನ ಮನೆಯಿಂದ ಯಾರೋ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿ ಚಿಕ್ಕ ಮಗುವಿನ ಹಾಗೆ ಕಾಯ್ತಿರೋ ಚಿನ್ನುಮರಿಗೆ ಜಯಂತ ಕೀಟಲೆ ಮಾಡುತ್ತಿದ್ದಾನೆ. ಇನ್ನೊಂದೆಡೆ ಅಜ್ಜಿ ತಿಂಡಿ ಗಿಂಡಿ ಮಾಡ್ಕೊಂಡು ಮೊಮ್ಮಗಳ ಆರೈಕೆಗೆ ಹೊರಟು ನಿಂತಿದ್ದಾರೆ. ಸದ್ಯ ಹೊರಬಿಟ್ಟಿರೋ ಈ ಸೀರಿಯಲ್ ಪ್ರೋಮೋದಲ್ಲಿ ಒಂದೆಡೆ ಅಜ್ಜಿ ಮೊಮ್ಮಗಳು ಜಾಹ್ನವಿಗೆ ಅಂತ ತಿಂಡಿ ರೆಡಿ ಮಾಡಿ ಹೊರಡೋದಕ್ಕೆ ರೆಡಿ ಆಗ್ತಿದ್ರೆ ಇನ್ನೊಂದೆಡೆ ವೆಂಕಿ ಅಜ್ಜಿ ಮಾಡಿರೋ ತಿಂಡಿಯನ್ನೆಲ್ಲ ಹೆಂಡತಿಗಾಗಿ ಎತ್ತಿಕೊಂಡು ಹೋಗ್ತಿದ್ದಾನೆ. ಇದನ್ನು ಕಂಡು ವೀಕ್ಷಕರು ಕೆಂಡಕಾರುತ್ತಿದ್ದಾರೆ. ಇನ್ನೊಂದು ಕಡೆ ಜಾನುವಿಗೆ ಕಾಟ ಕೊಡ್ತಿರೋ ಜಯಂತನ ಬಗ್ಗೆಯೂ ಅವರ ಅಸಹನೆ ಇದೆ. ಆದರೆ ಹೊಸ ಮದುಮಗಳ ಸೀನ್‌ಗೆ ಸಾಕಷ್ಟು ಶಹಭಾಸ್‌ಗಿರಿ ಸಿಕ್ಕಿದೆ. ಆಕೆಯ ವೃತ್ತಿಪರತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

View post on Instagram