ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿದೆ. ವೈಷ್ಣವ್ ತಾಯಿಯ ವಿರುದ್ಧ ಸಾಕ್ಷಿ ಹೇಳಿದ್ದೇ ಇದಕ್ಕೆ ಕಾರಣ. ಕೃಷ್ಣ ಕಾವೇರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಕೀರ್ತಿ ಕೂಡ ಕಾವೇರಿ ಮೇಲೆ ಕಲ್ಲೆಸೆದಿದ್ದಾಳೆ. ಕೀರ್ತಿಯ ನೆನಪಿನ ಶಕ್ತಿ ಮರಳಿರುವ ಸೂಚನೆಗಳಿವೆ. ಮುಂದಿನ ವಿಲನ್ ಯಾರು ಎಂಬ ಕುತೂಹಲ ಮೂಡಿದೆ.
ಈ ವಾರ ಅತಿ ಹೆಚ್ಚು ಟಿಆರ್ಪಿ (TRP) ಪಡೆದು ಟಾಪ್ ನಲ್ಲಿರುವ ಲಕ್ಷ್ಮಿ ಬಾರಮ್ಮ ಸೀರಿಯಲ್ (Lakshmi Baramma Serial) ನಲ್ಲಿ ಕಾವೇರಿಗೆ ಕೊನೆಗೂ ಶಿಕ್ಷೆಯಾಗಿದೆ. ಕೀರ್ತಿ ಹತ್ಯೆ ಯತ್ನ ಹಾಗೂ ಮಹಾಲಕ್ಷ್ಮಿ ಹತ್ಯೆ ಯತ್ನದಲ್ಲಿ ಬಂಧಿಯಾಗಿದ್ದ ಕಾವೇರಿ, ಜೈಲಿನಿಂದ ಹೊರಗೆ ಬರಲು ತನ್ನೆಲ್ಲ ಪ್ರಯತ್ನ ನಡೆಸಿದ್ದಳು. ಆಕೆಗೆ ಲಾಯರ್ ಕೂಡ ಸಂಪೂರ್ಣ ಬೆಂಬಲ ನೀಡಿದ್ದರು. ಸಾಕ್ಷ್ಯವನ್ನು ಕಿಡ್ನಾಪ್ ಮಾಡುವ ಪ್ರಯತ್ನ ಕೂಡ ನಡೆದಿತ್ತು. ಆದ್ರೆ ಕೋರ್ಟ್ನಲ್ಲಿ ಆಗಿದ್ದೇ ಬೇರೆ. ಕಾವೇರಿಯ ಪುಟ್ಟ ವೈಷ್ಣವ್ ಅಮ್ಮನ ವಿರುದ್ಧವೇ ಸಾಕ್ಷ್ಯ (Evidence) ಹೇಳ್ತಾನೆ. ಕಾವೇರಿ ಕಿಡ್ನ್ ಮಾಡಿಸಲು ಮುಂದಾಗಿದ್ದ ಗಿರಿಜಾ ಕೋಟ್ ಗೆ ಬಂದು ಸಾಕ್ಷ್ಯ ಹೇಳಿದ್ಮೇಲೆ, ಕಾವೇರಿಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ. ಕೀರ್ತಿ ಹತ್ಯೆ ಬಗ್ಗೆ ಸೂಕ್ತ ಸಾಕ್ಷ್ಯವಿಲ್ಲ, ಆದ್ರೆ ಮಹಾಲಕ್ಷ್ಮಿ ಹತ್ಯೆ ಯತ್ನದ ಬಗ್ಗೆ ಸಂಪೂರ್ಣ ಸಾಕ್ಷ್ಯ ಸಿಕ್ಕಿದೆ ಎನ್ನುವ ಜಡ್ಜ್, ಕಾವೇರಿಯನ್ನು ಏಳು ವರ್ಷ ಜೈಲಿಗೆ ಕಳುಹಿಸಿದ್ದಾರೆ.
ಮನೆಯಲ್ಲಿ ಮೆರೆಯುತ್ತಿದ್ದ, ಎಲ್ಲರನ್ನೂ ತನ್ನ ಅಂಗೈನಲ್ಲಿಟ್ಟು ಆಡಿಸ್ತಿದ್ದ ಕಾವೇರಿಗೆ ಜೈಲಾಗಿರೋದು ಯಾರಿಗೂ ನೋವು ನೀಡಿಲ್ಲ. ಕುಟುಂಬಸ್ಥರೆಲ್ಲ ಕಾವೇರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೋರ್ಟ್ ಕಟಕಟೆಯಿಂದ ಹೊರಗೆ ಬಂದ ಕಾವೇರಿ, ಅಮ್ಮನ ಮುಂದೆ ತನ್ನನ್ನು ನಂಬು ಎಂದು ಅಂಗಲಾಚಿದ್ದಾಳೆ. ಆದ್ರೆ ಕಾವೇರಿ ಅಮ್ಮನಿಂದ ಹಿಡಿದು ಗಂಡ ಕೃಷ್ಣನವರೆಗೆ ಒಬ್ಬರೂ ಕಾವೇರಿ ಪರ ನಿಲ್ಲುತ್ತಿಲ್ಲ. ಪತಿ ಮುಂದೆ ಬಂದ ಕಾವೇರಿಗೆ ಕೃಷ್ಣ ಏಟು ನೀಡಿದ್ದಾನೆ. ಇದೇ ಮೊದಲ ಬಾರಿ ಕಾವೇರಿಗೆ ಕಪಾಳಮೋಕ್ಷ ಮಾಡಿರುವ ಕೃಷ್ಣನ ವರ್ತನೆ ನೋಡಿ ವೀಕ್ಷಕರು ಭಲೇ ಎಂದಿದ್ದಾರೆ. ಅಂತೂ ಕೃಷ್ಣನಿಗೆ ಬುದ್ಧಿ ಬಂತು ಎನ್ನುತ್ತಿದ್ದಾರೆ.
ಭಾಗ್ಯಾ ಜೀವನದಲ್ಲಿ ಮಹಾ ತಿರುವು, ದಿಟ್ಟ ಹೆಜ್ಜೆಗೆ ಫ್ಯಾನ್ಸ್ ಮೆಚ್ಚುಗೆ
ಇತ್ತ ವೈಷ್ಣವ್ ಅಮ್ಮನಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. ಇನ್ನು ಕಾವೇರಿ ಪೊಲೀಸ್ ಜೀಪ್ ಹತ್ತುತ್ತಿದ್ದಂತೆ ಕೋಪಗೊಂಡ ಕೀರ್ತಿ, ಜೀಪಿನ ಮೇಲೆ ಕಲ್ಲು ಎಸೆದಿದ್ದಾಳೆ. ಕೀರ್ತಿ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಕೀರ್ತಿಗೆ ಈಗ ನೆನಪಿನ ಶಕ್ತಿ ಮರಳಿರಬೇಕು ಎಂದು ಅಂದಾಜಿಸುತ್ತಿದ್ದಾರೆ. ಹಾಗೆಯೇ ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಂದಿನ ವಿಲನ್ ಯಾರು ಎಂಬುದು ಸದ್ಯ ಎಲ್ಲರಿಗೂ ಇರುವ ಪ್ರಶ್ನೆ.
ನಗಿಸಲು ಬರ್ತಿದೆ ಮಜಾ ಟಾಕೀಸ್ , ಒನ್ ಆಂಡ್ ಓನ್ಲಿ ವರು ಮಿಸ್ ಮಾಡ್ಕೊಳ್ತಿದ್ದಾರೆ ಫ್ಯಾನ್ಸ್
ಕೀರ್ತಿ ಹತ್ಯೆ ನಂತ್ರ ಅನುಮಾನಗೊಂಡ ಮಹಾಲಕ್ಷ್ಮಿ, ಕಾವೇರಿ ಬಾಯಿಬಿಡಿಸುವ ಎಲ್ಲ ಪ್ರಯತ್ನ ನಡೆಸಿದ್ದಳು. ಆದ್ರೆ ಕಾವೇರಿ, ಮಹಾಲಕ್ಷ್ಮಿ ಹತ್ಯೆಗೆ ಮುಂದಾಗಿದ್ದಳು. ಮಹಾಲಕ್ಷ್ಮಿ ಸತ್ತೇ ಹೋದ್ಲು ಎನ್ನುವ ನೋವಿನಲ್ಲಿದ್ದ ವೈಷ್ಣವ್ ಮುಂದೆ ಕೀರ್ತಿ ಎಂಟ್ರಿಯಾಗಿತ್ತು. ಆ ನಂತ್ರ ಕೋರ್ಟ್ ಗೆ ಮಹಾಲಕ್ಷ್ಮಿ ಕೂಡ ಬಂದಿದ್ದಾಳೆ. ಕೀರ್ತಿ ನಿಜವಾಗ್ಲೂ ಬದುಕಿದ್ದಾಳಾ? ಆಕೆ ನೆನಪಿನ ಶಕ್ತಿ ಕಳೆದುಕೊಂಡು ವಿಚಿತ್ರವಾಗಿ ಆಡ್ತಿದ್ದಾಳಾ ಅಥವಾ ಕೀರ್ತಿ, ಕೀರ್ತಿಯೇ ಅಲ್ವಾ? ಮಹಾಲಕ್ಷ್ಮಿ ಬದುಕಿ ಬಂದಿದ್ದು ಹೇಗೆ? ಈ ಎಲ್ಲ ಪ್ರಶ್ನೆಗಳು ವೀಕ್ಷಕರನ್ನು ಕಾಡ್ತಿದೆ. ಆದಷ್ಟು ಬೇಗ ಇದಕ್ಕೆಲ್ಲ ಉತ್ತರ ನೀಡಿ, ಕೀರ್ತಿ ಬದುಕಿ ಬಂದಿದ್ದನ್ನು ತೋರಿಸಿ ಎನ್ನುತ್ತಿದ್ದಾರೆ ವೀಕ್ಷಕರು. ಹಾಗೇಯೇ ತಾವೇ ಕಥೆ ಹೆಣೆಯಲು ಶುರು ಮಾಡಿದ್ದಾರೆ. ಕೀರ್ತಿಗೆ ಹಳೆ ನೆನಪು ಬರುವಂತೆ ಮಾಡೋದೇ ಮಹಾಲಕ್ಷ್ಮಿ ಮುಂದಿನ ಕೆಲಸ. ವೈಷ್ಣವ್ - ಮಹಾಲಕ್ಷ್ಮಿ ಮಧ್ಯೆ ಮತ್ತೆ ಕೀರ್ತಿಯೇ ವಿಲನ್ ಆಗ್ಬಹುದು ಎನ್ನುತ್ತಿರುವ ವೀಕ್ಷಕರು, ಯಾರಿಗೂ ಹೆದರದ ಧೈರ್ಯವಂತ ಕೀರ್ತಿಯನ್ನು ಮತ್ತೆ ತೋರಿಸಿ ಎನ್ನುತ್ತಿದ್ದಾರೆ.
