ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಳುಹಿಸಿದ್ದಾರೆ ಕಿಚ್ಚ ಸುದೀಪ್‌. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದಾರೆ. 

ಮುದ್ದೆಯೂಟದ ನಂತರ ಬಿಗ್‌ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಡಿಸ್‌ಕನೆಕ್ಟ್‌ ಆಗಿದ್ದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿಕೊಂಡೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಅಸಮಧಾನವೂ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ ಸಿಕ್ಕಿದೆ. ಆ ಸರ್ಪೈಸ್‌ ಏನು ಎಂಬುದು JioCinema ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಜಾಹೀರಾಗಿದೆ.

ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಇದೆಯೇ? ಆ ಖುಷಿಯಂತೂ ಬಿಗ್‌ಬಾಸ್ ಸದಸ್ಯರಿಗೆ ಸಿಕ್ಕೇ ಸಿಕ್ಕಿದೆ. ಆದರೆ ಸ್ಪೆಷಲ್‌ ಸರ್ಪೈಸ್ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನದು. ಊಟ ಎಷ್ಟು ಮುಖ್ಯವೋ ಎಷ್ಟೋ ಸಲ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತದೆ? ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಸಿಕ್ಕ ಅಡುಗಡೆ ಅಷ್ಟು ಸ್ಪೆಷಲ್ ಆಗಿದ್ದು! ಹಾಗಾದರೆ ಯಾರು ಅಡುಗೆ ಮಾಡಿದ್ದು?

ಮತ್ಯಾರೂ ಅಲ್ಲ, ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಳುಹಿಸಿದ್ದಾರೆ ಕಿಚ್ಚ ಸುದೀಪ್‌. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದಾರೆ. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ. ‘ಇದು ಸರ್ಪೈಸ್‌. ಈವತ್ತಿನ ಅಡುಗೆ, ಕಿಚ್ಚನ ಕೈಯಡುಗೆ’ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೊದಲ್ಲಿ ಸೆರೆಯಾಗಿವೆ. 

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್‌ ಪೊಲಿಟಿಕ್ಸ್, ನಗೆಬುಗ್ಗೆ ಕರಗಿ ಏಳುತ್ತಿದೆಯಾ ಅಸಮಾಧಾನದ ಹೊಗೆ!

ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದಾಡಿದ್ದಾರೆ. ಒಬ್ಬೊಬ್ಬರೂ ಕ್ಯಾಮೆರಾ ಎದುರಿಗೆ ಬಂದು ಥ್ಯಾಂಕ್ಸ್ ಹೇಳಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲ ಸ್ಪರ್ಧಿಗಳೂ ಅನಿಸಿದೆ. ಇಷ್ಟು ಹೊತ್ತು ಹಸಿದುಕೊಂಡಿದ್ದಕ್ಕೂ ಸಾರ್ಥಕವಾಯ್ತು ಎಂದೂ ಅನಿಸಿರಬೇಕು.

ಬಿಗ್ ಬಾಸ್ ಮನೆಯಲ್ಲಿ ಕ್ಲಾಸ್ ಕಲರವ, ವರ್ತೂರ್‍ ಕ್ಲಾಸ್‌ನಲ್ಲಿ ಎಲಿಮಿನೇಷನ್‌ ಪ್ರಾಣ ಸಂಕಟ!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.