Asianet Suvarna News Asianet Suvarna News

ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್​ ಕನ್ನಡ ಇಲ್ಲ; ಹೌದು ಸ್ವಾಮಿ!

ಇದೀಗ ಬಿಡುಗಡೆ ಆಗಿರುವ ಹೊಸ ಪ್ರೋಮೋದಲ್ಲಿ ಸುದೀಪ್​ ಅವರು ಕಾಣಿಸಿಕೊಂಡು ಈ ಮೊದಲು ಎದ್ದಿದ್ದ ಎಲ್ಲ ಅಂತೆ-ಕಂತೆಗಳಿಗೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ...ಕೆಲವರು 'ನಾವು ಬಿಗ್​ ಬಾಸ್​ ನೋಡುವುದೇ ಸುದೀಪ್​ ಅವರಿಗೋಸ್ಕರ' ಎಂದಿದ್ದರೆ ಇನ್ನೂ ಕೆಲವರು 'ಹೌದು ಸ್ವಾಮಿ'..

kichcha sudeep lead bigg boss kannada season 11 starts from 29 september srb
Author
First Published Sep 16, 2024, 11:57 AM IST | Last Updated Sep 16, 2024, 12:03 PM IST

ನಿರೀಕ್ಷೆ ನಿಜವಾಗಿಸುವ ನಿಟ್ಟಿನಲ್ಲಿ ಕಲರ್ಸ್ ಕನ್ನಡ ವಾಹಿನಿ (Colors Kannada) ದೊಡ್ಡ ಹೆಜ್ಜೆ ಇಟ್ಟಿದೆ. ಕೆಲವೇ ಸಮಯದ 'ಬಿಗ್​ ಬಾಸ್​ ಕನ್ನಡ ಸೀಸನ್​ 11' ಪ್ರೋಮೋ (Bigg Boss Kannada Season 11) ಹೊರಬಿದ್ದಿದೆ. ಪ್ರೋಮೋ ನೋಡಿದ ಕಿರುತೆರೆ ವೀಕ್ಷಕರು ವಿಭಿನ್ನ ರೀತಿಯಲ್ಲಿ ಕಾಮೆಂಟ್​ ಮಾಡತೊಡಗಿದ್ದಾರೆ. ನಿರೀಕ್ಷೆಯಂತೆ ವೈರಲ್ ಪ್ರೋಮೋದಲ್ಲಿ ಅತಿ ಹೆಚ್ಚು ಹೈಲೈಟ್​ ಆಗಿರುವುದು ಹೋಸ್ಟ್ ಕಿಚ್ಚ ಸುದೀಪ್. ಈ ಬಾರಿ ಆ್ಯಂಕರ್ ಚೇಂಗ್ ಆಗುತ್ತಾರೆ ಎಂಬ ಬಗ್ಗೆ ಗುಮಾನಿಗೆ ಇಂಬು ಕೊಡುವಂತೆ ಮೊದಲು ಬಂದಿದ್ದ ಪ್ರೋಮೋ ಇತ್ತು. ಆದರೆ ಸುದೀಪ್ (Kichcha Sudeep) ಫಿಕ್ಸ್ ಆಗಿದ್ದಾರೆ.

ಆದರೆ ಇದೀಗ ಬಿಡುಗಡೆ ಆಗಿರುವ ಹೊಸ ಪ್ರೋಮೋದಲ್ಲಿ ಸುದೀಪ್​ ಅವರು ಕಾಣಿಸಿಕೊಂಡು ಈ ಮೊದಲು ಎದ್ದಿದ್ದ ಎಲ್ಲ ಅಂತೆ-ಕಂತೆಗಳಿಗೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ. 'ಬಿಗ್ ಬಾಸ್ ಕನ್ನಡ  11' ಪ್ರೋಮೋ ನೋಡಿದ ಜನರು ತಮಗನ್ನಿಸಿದ ರೀತಿಯಲ್ಲಿ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಕಿಚ್ಚ ಸುದೀಪ್ ಬಗ್ಗೆಯೇ ಬಹಳಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಲರ್ಸ್​ ಕನ್ನಡ ತನ್ನ ಅಧೀಕೃತ ಸೋಷಿಯಲ್​ ಮೀಡಿಯಾದಲ್ಲಿ 'ಬಿಗ್​ ಬಾಸ್​ ಕನ್ನಡ ಸೀಸನ್​ 11'ರ ಪ್ರೋಮೋವನ್ನು ಹಂಚಿಕೊಂಡಿದೆ. ಅದಕ್ಕೆ ಅಸಂಖ್ಯಾತ ಮಂದಿ ಕಮೆಂಟ್​ ಮಾಡುತ್ತಲೇ ಇದ್ದಾರೆ. 

10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್‌ ಹೊಸ ಅಧ್ಯಾಯ ಶುರು

'ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ; ಕಿಚ್ಚ ಸುದೀಪ್ ಅವರಿಲ್ಲದೇ ಬಿಗ್ ಬಾಸ್​ ಕನ್ನಡ ಇಲ್ಲ' ಎಂಬ ಸ್ಲೋಗನ್‌ ಕೂಡ ಬಂದಿದೆ. ಹೀಗಂತ ಒಬ್ಬರು ಫ್ಯಾನ್ಸ್​ ಅಭಿಪ್ರಾಯ ತಿಳಿಸಿ ಕಾಮೆಂಟ್ ಮಾಡಿದ್ದಾರೆ. 'ಕಿಚ್ಚ ಸುದೀಪ್​ ಅವರೇ ನಿರೂಪಕರು​ ಎಂಬುದನ್ನು ತಿಳಿದು ಈಗ ಸಮಾಧಾನ ಆಗಿದೆ' ಎಂದು ಅನೇಕರು ತಮ್ಮ ಅಭಿಪ್ರಾಯ ಶೇರ್ ಮಾಡಿದ್ದಾರೆ.

ಕೆಲವರು 'ನಾವು ಬಿಗ್​ ಬಾಸ್​ ನೋಡುವುದೇ ಸುದೀಪ್​ ಅವರಿಗೋಸ್ಕರ' ಎಂದಿದ್ದರೆ ಇನ್ನೂ ಕೆಲವರು 'ಹೌದು ಸ್ವಾಮಿ' ಕಾಮೆಂಟ್​ ಮಾಡಿದ್ದಾರೆ. 'ಬದಲಾವಣೆ ಜಗದ ನಿಯಮ' ಎಂದಾಗ ಬಿಗ್ ಬಾಸ್‍ ಹೇಳೋದು 'ಹೌದು ಸ್ವಾಮಿ'. 'ಆದರೆ ಇವರ ವಿಚಾರದಲ್ಲಿ ಬದಲಾವಣೆ ನೋ ವೇ, ಚಾನ್ಸೇ ಇಲ್ಲ' ಎಂದು ಈ ಪ್ರೋಮೋಗೆ ಕ್ಯಾಪ್ಷನ್​ ನೀಡಲಾಗಿದೆ. ಈ ಮಾತನ್ನು ಸುದೀಪ್​ ಫ್ಯಾನ್ಸ್ ಕೂಡ 'ನಿಜ..ನಿಜ..' ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಲವರು 'ಇನ್ಮೇಲೆ ಕಲರ್ಸ್​ ಕನ್ನಡ ಚಾನೆಲ್ ನಂಬರ್​ 1 ಆಗುತ್ತೆ ನೋಡ್ತಾ ಇರಿ..' ಎಂದು ಭವಿಷ್ಯ ನುಡಿದಿದ್ದಾರೆ. ಇದು 11ನೇ ಸೀಸನ್, ಈ ಬಾರಿ ಬಿಗ್​ ಬಾಸ್​ ಶೋ ಬಹಳಷ್ಟು ಸ್ಪೆಷಲ್​ ಆಗಿರಲಿದೆ ಎಂಬ ನಿರೀಕ್ಷೆ ಕಿರುತೆರೆ ವೀಕ್ಷಕರಲ್ಲಿ ಇದೆ ಎನ್ನಬಹುದು. ಅದು ಖಂಡಿತ ಹೌದು ಎಂಬಂತೆ ಪ್ರೋಮೋದಲ್ಲಿ ಸುದೀಪ್​ ಅವರು 'ಇದು ಹೊಸ ಅಧ್ಯಾಯ' ಎಂದು ಹೇಳಿದ್ದಾರೆ. ಹೊಸ ನಿರೀಕ್ಷೆ, ಹೊಸ ಕ್ರೇಜ್‌ನೊಂದಿಗೆ ಬಿಗ್ ಬಾಸ್ ಕನ್ನಡ 11 ಈ ತಿಂಗಳ ಅಂತ್ಯದಲ್ಲಿ ಶುರುವಾಗಲಿದೆ. 

ವೀರಪ್ಪನ್‌ನಿಂದ ಡಾ ರಾಜ್‌ಕುಮಾರ್ ಬಿಡಿಸಿಕೊಳ್ಳಲು 'ಸಂಗ್ರಾಮ್' ಸಂಗ್ರಹಿಸಿದ್ದ ಹಣವೆಷ್ಟು?

ಹೌದು, ಸೆಪ್ಟೆಂಬರ್​ 29ರಂದು (29 September 2024) 'ಬಿಗ್ ಬಾಸ್​ ಕನ್ನಡ ಸೀಸನ್​ 11' ಪ್ರಾರಂಭ ಆಗಲಿದೆ. ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು 'ಬರುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ. ಇನ್ನು, ನಟ ಕಿಚ್ಚ ಸುದೀಪ್​ ಅವರು ತಮ್ಮ 'ಮ್ಯಾಕ್ಸ್' ಸಿನಿಮಾದ ಬಿಡುಗಡೆ, ಪ್ರಚಾರದ ಕೆಲಸಗಳಲ್ಲೂ ನಿರತರಾಗಿದ್ದಾರೆ. ಈ ನಡುವೆ ಅವರು ಬಿಗ್​ ಬಾಸ್​ ಕನ್ನಡದ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಕಿರುತೆರೆ ವೀಕ್ಷಕರು ಖುಷಿಯಾಗಿದ್ದಾರೆ, ಕಾಯುತ್ತಿದ್ದಾರೆ. 

Latest Videos
Follow Us:
Download App:
  • android
  • ios