Asianet Suvarna News Asianet Suvarna News

10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್‌ ಹೊಸ ಅಧ್ಯಾಯ ಶುರು

ಬಿಗ್‌ ಬಾಸ್‌ ಆರಂಭಕ್ಕೆ ಕೌಂಟ್‌ ಡೌನ್‌‌ ಶುರುವಾಗಿದ್ದು, ಈ ಮಧ್ಯೆ ಹೋಸ್ಟ್ ಯಾರು ಮಾಡೋದು ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಲೇ ಇತ್ತು. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಕಿಚ್ಚ ಸುದೀಪ್ ಅವರು ಮಾಸ್ ಡೈಲಾಗ್ ಹೊಡೆದ ನಯಾ ಬಿಗ್ ಬಾಸ್ ಪ್ರೋಮೋವೊಂದು ರಿಲೀಸ್ ಆಗಿದೆ.

bigg boss kannada season 11 from 29th september kichcha sudeep anchor gvd
Author
First Published Sep 15, 2024, 9:06 PM IST | Last Updated Sep 15, 2024, 9:26 PM IST

ಬಿಗ್‌ ಬಾಸ್‌ ಆರಂಭಕ್ಕೆ ಕೌಂಟ್‌ ಡೌನ್‌‌ ಶುರುವಾಗಿದ್ದು, ಈ ಮಧ್ಯೆ ಹೋಸ್ಟ್ ಯಾರು ಮಾಡೋದು ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಲೇ ಇತ್ತು. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಕಿಚ್ಚ ಸುದೀಪ್ ಅವರು ಮಾಸ್ ಡೈಲಾಗ್ ಹೊಡೆದ ನಯಾ ಬಿಗ್ ಬಾಸ್ ಪ್ರೋಮೋವೊಂದು ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗುತ್ತಾರೆ. ಆದರೆ ಎಲ್ಲರನ್ನೂ ನಿಯಂತ್ರಿಸುವ ಸೂತ್ರಧಾರ.. ಎಂದು ಡೈಲಾಗ್ ನಿಲ್ಲುತ್ತಿದ್ದಂತೆಯೇ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗುತ್ತಾರೆ. ಹಾಗೆಯೇ, ಸುದೀಪ್ ಪಂಚಿಂಗ್ ಆಗಿ ಒಂದಷ್ಟು ಮಾಸ್ ಡೈಲಾಗ್‌ಗಳನ್ನು ಕೂಡ ಹೇಳಿಕೊಂಡಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ. ಈಗಿಂದ ಬೇರೆನೇ ಲೆಕ್ಕ. ಇದು ಹೊಸ ಅಧ್ಯಾಯ ಎಂದು ಹೇಳಿದ್ದಾರೆ. ಅಲ್ಲಿಗೆ ಪ್ರೋಮೋ ಮುಕ್ತಾಯವಾಗಿದೆ. 

ಜೊತೆಗೆ 'ಬದಲಾವಣೆ ಜಗದ ನಿಯಮ; ಅದಕ್ಕೆ ಬಿಗ್ ಬಾಸ್‍ ಕೂಡಾ ಹೇಳೋದು ‘ಹೌದು ಸ್ವಾಮಿ’. ಆದ್ರೆ ಇವರ ವಿಚಾರದಲ್ಲಿ ಬದಲಾವಣೆ ‘ನೋ ವೇ, ಛಾನ್ಸೇ ಇಲ್ಲ’ ಎಂದು ಪ್ರೋಮೋ ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.  ಸೆ.29ರಿಂದ ಬಿಗ್ ಬಾಸ್ ಶೋ ಶುರುವಾಗಲಿದೆ ಎಂದು ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ. ಈ‌ ಮೂಲಕ ನಿರೂಪಕ ಬದಲಾಗ್ತಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ದೊಡ್ಮನೆ ಆಟಕ್ಕೆ ಇದೀಗ ಮುಹೂರ್ತ ಫಿಕ್ಸ್ ಆಗಿದ್ದು, ಯಾರೆಲ್ಲಾ ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
 

Latest Videos
Follow Us:
Download App:
  • android
  • ios