Asianet Suvarna News Asianet Suvarna News

ವೀರಪ್ಪನ್‌ನಿಂದ ಡಾ ರಾಜ್‌ಕುಮಾರ್ ಬಿಡಿಸಿಕೊಳ್ಳಲು 'ಸಂಗ್ರಾಮ್' ಸಂಗ್ರಹಿಸಿದ್ದ ಹಣವೆಷ್ಟು?

ಅನೇಕ ಉದ್ಯಮಿಗಳು, ನಿರ್ಮಾಪಕರು ಹಾಗು ರಾಜಕಾರಣಿಗಳು ಬಹಳಷ್ಟು ಹಣವನ್ನು ಹೊಂದಿಸಿ ಕೊಟ್ಟಿದ್ದರು ಎನ್ನಲಾಗಿದೆ. ವೀರಪ್ಪನ್‌ಗೆ ಹಣ ಹೋಗ್ತಾ ಇದೆ, ಆದರೆ, ಅತ ಅಣ್ಣಾವ್ರನ್ನು ಬಿಡುಗಡೆ ಮಾಡ್ತಾನೋ ಇಲ್ವೋ ಅನ್ನೋದು ಯಾರಿಗೂ ಖಾತ್ರಿ ಇರ್ಲಿಲ್ಲ..

Sangram collects funds to Dr Rajkumar abduction for veerappan time srb
Author
First Published Sep 15, 2024, 7:54 PM IST | Last Updated Sep 15, 2024, 7:57 PM IST

ಕರ್ನಾಟಕದ ಮೇರು ನಟ ಡಾ ರಾಜ್‌ಕುಮಾರ್ ಅವರನ್ನು ದಂತಚೋರ ವೀರಪ್ಪನ್ ಅಪಹರಿಸಿದ್ದು ಗೊತ್ತೇ ಇದೆ. ಜುಲೈ 30, 2000ರಂದು ವೀರಪ್ಪನ್ ಡಾ ರಾಜ್‌ ಅವರನ್ನು ಅವರಿದ್ದ ಗಾಜನೂರಿನ ಫಾರ್ಮ್ ಹೌಸ್‌ನಿಂದ ಮಧ್ಯರಾತ್ರಿ ಅಪಹರಣ ಮಾಡಿದ್ದ. ಬಳಿಕ 15 ನವೆಂಬರ್ 2000ರಂದು 108 ದಿನಗಳ ಬಳಿಕ, ವೀರಪ್ಪನ್ ರಾಜ್‌ಕುಮಾರ್ ಅವರನ್ನು ಕಾಡಿನಿಮದ ನಾಡಿಗೆ ಕಳುಹಿಸಿದ್ದ. ಈ ಘಟನೆ ಕರ್ನಾಟಕದ ಜನರ ಮನಸ್ಸಿನಲ್ಲಿ ಕರಾಳ ಅಧ್ಯಾಯವೆಂದೇ ದಾಖಲಾಗಿದೆ. ಅಂದು ನಡೆದಿದ್ದ ಕುತೂಹಲಕಾತಿ ಸಂಗತಿಯೊಂದು ಇಂದು ವೈರಲ್ ಆಗುತ್ತಿದೆ. 

ಹೌದು, ಡಾ ರಾಜ್‌ಕುಮಾರ್ ಅವರನ್ನು ಅಂದು ಅಪಹರಣ ಮಾಡಿದ್ದ ವೀರಪ್ಪನ್, ಬಹಳಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು ಗೊತ್ತೇ ಇದೆ. ಯಾವುದೇ ಷರತ್ತು ಇಲ್ಲದೇ, ಬೇಡಿಕೆ ಇಲ್ಲದೇ ಯಾರಾದರೂ ಯಾಕೆ ಕಿಡ್ನಾಪ್ ಮಾಡುತ್ತಾರೆ? ಈ ಸಂಗತಿ ಕಾಮನ್ ಸೆನ್ಸ್ ಇರುವ ಯಾರಿಗಾದರೂ ಅರ್ಥವಾಗುತ್ತದೆ. ಹಾಗಿದ್ದರೆ, ಡಾ ರಾಜ್‌ಕುಮಾರ್ ಅವರನ್ನು ಒತ್ತೆಯಾಳಾಗಿ ಇಟ್ಟ ವೀರಪ್ಪನ್ ಅದೆಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ? ಅಣ್ಣಾವ್ರನ್ನ ಬಿಡುಗಡೆ ಮಾಡಿಸಿಕೊಳ್ಳಲು ಉದ್ಯಮಿಗಳು ಹಾಗು ಜನರು ಅದೆಷ್ಟು ಹಣವನ್ನು ಸಂಗ್ರಹಿಸಿ ಕೊಟ್ಟಿದ್ದರಂತೆ ಗೊತ್ತೇ?

ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?

ಒಂದು ಮೂಲದ ಮಾಹಿತಿ ಪ್ರಕಾರ, ಅನೇಕ ಉದ್ಯಮಿಗಳು, ನಿರ್ಮಾಪಕರು ಹಾಗು ರಾಜಕಾರಣಿಗಳು ಬಹಳಷ್ಟು ಹಣವನ್ನು ಹೊಂದಿಸಿ ಕೊಟ್ಟಿದ್ದರು ಎನ್ನಲಾಗಿದೆ. ವೀರಪ್ಪನ್‌ಗೆ ಹಣ ಹೋಗ್ತಾ ಇದೆ, ಆದರೆ, ಅತ ಅಣ್ಣಾವ್ರನ್ನು ಬಿಡುಗಡೆ ಮಾಡ್ತಾನೋ ಇಲ್ವೋ ಅನ್ನೋದು ಯಾರಿಗೂ ಖಾತ್ರಿ ಇರ್ಲಿಲ್ಲ. ಆದರೆ, ಅಂದಿನ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನೇತೃತ್ವದ ಸರ್ಕಾರ ಈ ವಿಷಯದಲ್ಲಿ ಒಂದು ದಿಟ್ಟ ನಿರ್ಧಾರ ಇಟ್ಟಿತ್ತು. ಹಣವನ್ನು 'ಸಂಗ್ರಾಮ್ಸ್' ಮೂಲಕ ಸಂಗ್ರಹಿಸಲಾಗಿತ್ತು. 

ಹಾಗಿದ್ದರೆ ಸಂಗ್ರಾಮ್ ಹೆಸರಲ್ಲಿ, ಡಾ ರಾಜ್‌ಕುಮಾರ್ ಬಿಡುಗಡೆಗೆ ಯಾರೆಲ್ಲ ಹಣವನ್ನು ಹೊಂದಿಸಿ ಕೊಟ್ಟಿದ್ದರು ಎಂಬುದನ್ನು ನಿರ್ದೇಶಕ ಎಂಎಸ್‌ ರಮೇಶ್ ಅವರು ಒಮ್ಮೆ ಹೇಳಿದ್ದರು. 'ವೀರಪ್ಪನ್' ಸಿನಿಮಾ ಮಾಡಿರುವ ನಿರ್ದೇಶಕ ಎಂಎಸ್‌ ರಮೇಶ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ 'ಡಾ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ರಾಕ್‌ಲೈನ್ ವೆಂಕಟೇಶ್, ಡಿಕೆ ಶಿವಕುಮಾರ್, ಸಿದ್ಧಾರ್ಥ್ ಹೆಗಡೆ ಸೇರಿದಂತೆ ಬಹಳಷ್ಟು ಜನರು ಹಣವನ್ನು ಕೊಟ್ಟಿದ್ದರು ಎಂದಿದ್ದಾರೆ. ಎಲ್ಲರ ಹೆಸರನ್ನು ಹೇಳಲು ಹೋದರೆ ಅದೊಂದು ದೊಡಗಡ ಲಿಸ್ಟ್ ಆಗುತ್ತದೆ ಎಂದಿದ್ದರು. 

ರೋಡಲ್ಲಿ ಆಟೋ ಓಡಿಸುತ್ತಿರುವ ರಾಧಿಕಾ ಕುಮಾರಸ್ವಾಮಿ ನೋಡಿ ಕಂಗಾಲಾದ ಜನರು!

ಸಂಗ್ರಾಮ್ ಮೂಲಕ ಹಾಗೆ ಸಂಗ್ರಹಿಸಿದ ಹಣ ಬರೋಬ್ಬರಿ 50 ಕೋಟಿಗೂ ಮೀರಿತ್ತು ಎಂದಿದ್ದಾರೆ ಡೈರೆಕ್ಟರ್ ಎಂಎಸ್‌ ರಮೇಶ್. ಒಟ್ಟಿನಲ್ಲಿ ಅಂದು ಕರ್ನಾಟಕ ರತ್ನ ಡಾ ರಾಜ್‌ಕುಮಾರ್ ಅವರನ್ನು ದರೋಡಕೋರ ವೀರಪ್ಪನ್‌ನಿಂದ ಬಚಾವ್ ಮಾಡಲು ಬಹಳಷ್ಟು ಪ್ರಮುಖರು ಟೊಂಕ ಕಟ್ಟಿ ನಿಂತಿದ್ದರು ಎಂಬುದು ರಹಸ್ಯವೇನೂ ಅಲ್ಲ. ಆದರೆ, ಕಾಡಿನಲ್ಲಿ ಒತ್ತೆಯಾಳಾಗಿ ಇದ್ದ ಡಾ ರಾಜ್‌ ಅವರನ್ನು 108 ದಿನಗಳ ಬಳಿಕ ಬಿಡಿಸಿಕೊಂಡು ಬಂತು ಕರ್ನಾಟಕ ಸರ್ಕಾರ. ಆದರೆ, ಆ ಕರಾಳ ಅಧ್ಯಾಯವನ್ನು ಯಾರೂ ಯಾವತ್ತಿಗೂ ಮರೆಯಲು ಸಾಧ್ಯವೇ ಇಲ್ಲ. 

Latest Videos
Follow Us:
Download App:
  • android
  • ios