Asianet Suvarna News Asianet Suvarna News

ಬಿಬಿK 10 ಕಪ್ ವಿನ್ನರ್ ಕಾರ್ತಿಕ್ ಮಹೇಶ್, ಮೈಸೂರಿನ ಮನೆಮನೆಯಲ್ಲಿ ಸಂಭ್ರಮ; ಅಸಲಿ ಕತೆಯೇನು?!

ಕಾರ್ತಿಕ್ ಮಹೇಶ್ ಬಿಗ್ ಬಾಸ್ ಈ 10ರ ಸೀಸನ್‌ ಗೆದ್ದು ಕಪ್ ಹಾಗೂ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದ್ದಂತೂ ಹೌದು. ಈ ಸುದ್ದಿ ತಿಳಿದ ಮೈಸೂರು ಜಿಲ್ಲೆ ಜನರು ತಮ್ಮ ಮನೆಮಗ ಗೆದ್ದಿದ್ದಾರೆ ಎಂದು ಖುಷಿಗೊಂಡು ಸಂಭ್ರಮ ಆಚರಿಸಿತೊಡಗಿದ್ದಾರೆ 

Karthik Mahesh wins Bigg Boss Kannada season 10 news goes viral in Mysuru srb
Author
First Published Jan 28, 2024, 12:07 PM IST | Last Updated Jan 28, 2024, 12:09 PM IST

ಬಿಗ್ ಬಾಸ್ ಕನ್ನಡ ಗ್ರಾಂಡ್‌ ಫಿನಾಲೆಯ ಒಂದೇ ಒಂದು ಸಂಚಿಕೆಯ ಪ್ರಸಾರ ಬಾಕಿಯಿದೆ. ಅಂದರೆ, ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಯಾರು, ಕಪ್ ಅನ್ನು ಯಾರು ತಮ್ಮ ಕೈನಲ್ಲಿ ಹಿಡಿಯಲಿದ್ದಾರೆ ಎನ್ನವುದನ್ನುನೋಡುವುದಷ್ಟೇ ಬಾಕಿಯಿದೆ. ನಿನ್ನೆಯ ಸಂಚಿಕೆಯಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ತುಕಾಲಿ ಸಂತೋಷ್ ಮನೆಯಿಂದ ಹೊರಬಿದ್ದಿದ್ದಾರೆ. ಇನ್ನು ಮನೆಯಲ್ಲಿರುವ ಸ್ಪರ್ಧಿಗಳು 5 ಜನರು ಮಾತ್ರ. ಅವರೆಂದರೆ- ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋಣ್ ಪ್ರತಾಪ್ ಹಾಗೂ ವರ್ತೂರು ಸಂತೋಷ್.

ನಿನ್ನೆಯ ಸಾಯಂಕಾಲಾದ ಹೊತ್ತಿಗೆ ಕರ್ನಾಟಕದ ತುಂಬಾ ಬಿಗ್ ಬಾಸ್ ಈ ಸೀಸನ್ ವಿನ್ನರ್ ಸಂಗೀತಾ ಶೃಂಗೇರಿ ಎಂಬ ಸುದ್ದಿ ಗಲ್ಲಿಗಲ್ಲಿಗಳಲ್ಲಿಯೂ ಸುತ್ತಾಡುತ್ತಿತ್ತು. ಆದರೆ, ಬೆಳಿಗ್ಗೆ ಹೊತ್ತಿಗೆ ಆ ಸುದ್ದಿ ಸತ್ತೇ ಹೋಗಿದ್ದು, ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿನ್ನರ್ ಎಂಬ ಸುದ್ದಿ ಎಲ್ಲಾ ಕಡೆ ಹಬ್ಬತೊಡಗಿದೆ. ಬೆಳಿಗ್ಗೆಯಿಂದ ಈ ಸುದ್ದಿ ಅದೆಷ್ಟು ಸುತ್ತುತ್ತಿದೆ ಎಂದರೆ ಕಾರ್ತಿಕ್ ಮಹೇಶ್ ಹುಟ್ಟೂರು ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ ಎನ್ನಲಾಗುತ್ತಿದೆ. ಮೈಸೂರಿನ ಗಲ್ಲಿಗಲ್ಲಿಯಲ್ಲಿ ಜನರು ಕಾರ್ತಿಕ್ ಹೆಸರು ಹೇಳಿಕೊಂಡು ಖುಷಿಯಿಂದ ಓಡಾಡುತ್ತಿದ್ದಾರೆ ಎನ್ನಲಾಗಿದೆ.

ಚೆಂದ ನೋಡಿ ಮರುಳಾಗಿ ಮದ್ವೆಯಾಗ್ಬಿಟ್ರಾ ಉಮಾಶ್ರೀ; ಎರಡು ತಿಂಗಳ ಬಸುರಿಯನ್ನೇ ಬಿಟ್ಟೋದ್ನ ಗಂಡ..?!

ಕಾರ್ತಿಕ್ ಮಹೇಶ್ ಬಿಗ್ ಬಾಸ್ ಈ 10ರ ಸೀಸನ್‌ ಗೆದ್ದು ಕಪ್ ಹಾಗೂ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದ್ದಂತೂ ಹೌದು. ಈ ಸುದ್ದಿ ತಿಳಿದ ಮೈಸೂರು ಜಿಲ್ಲೆ ಜನರು ತಮ್ಮ ಮನೆಮಗ ಗೆದ್ದಿದ್ದಾರೆ ಎಂದು ಖುಷಿಗೊಂಡು ಸಂಭ್ರಮ ಆಚರಿಸಿತೊಡಗಿದ್ದಾರೆ ಎನ್ನಲಾಗಿದೆ. ಆದರೆ, ಈ ಸುದ್ದಿ ನಿಜವೇ ಎಂಬದನ್ನು ಖಾತ್ರಿ ಪಡಿಸುವುದು ಹೇಗೆ? ಏಕೆಂದರೆ, ಸುದ್ದಿ ಕೆಲವೊಮ್ಮೆ ಸತ್ಯವೂ ಆಗಿರುತ್ತದೆ, ಕೆಲವೊಮ್ಮೆ ಸುಳ್ಳೂ ಆಗಬಹುದು. ಯಾವುದೋ ಮೂಲದಿಂದ ಸತ್ಯ ಸುದ್ದಿಯೇ ಹೊರಬಂದಿರಬಹುದು. 

ಸಂಗೀತಾ ಶೃಂಗೇರಿಯೇ ಬಿಗ್ ಬಾಸ್ ಕಪ್ ಗೆಲ್ಲೋದು; ಹಲವರ ಈ ಮಾತಿಗೆ ಏನಿದೆ ಹಿಂಟ್..!?

ಏನೇ ಆಗಲಿ, ಹೌದು, ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ, ಕಪ್ ಕೈನಲ್ಲಿ ಹಿಡಿದು ಬಹುಮಾನ ಬುಟ್ಟಿಗೆ ಹಾಕಿಕೊಂಡಿದ್ದಾರೆ ಎಂದು ಅಧಿಕೃತವಾಗಿ ಹೇಳಲು ಇಂದು ರಾತ್ರಿ (28 ಜನವರಿ 2024)ವರೆಗೆ ಕಾಯಲೇಬೇಕು. ಕಾರಣ, ವಿನ್ನರ್ ಅಧಿಕೃತ ಘೋಷಣೆ ಮಾಡಬೇಕಿರುವುದು ಆಯೋಜಿಸಿರುವ ಕಲರ್ಸ್ ಕನ್ನಡ ಚಾನೆಲ್‌. ಹೀಗಾಗಿ, ರಾತ್ರಿ ಘೋಷಣೆ ಆಗುವವರೆಗೆ ಕಾಯುವುದೇ ಸರಿಯಾದ ನಿರ್ಧಾರ. ಆದರೆ, ಕಾರ್ತಿಕ್ ಗೆದ್ದಿದ್ದು ಸುಳ್ಳು ಎನ್ನಲಾಗದು. ಕಾರಣ, ಕಾರ್ತಿಕ್ ಬಿಗ್ ಬಾಸ್ ಗೆಲ್ಲಬಲ್ಲ ಸಮರ್ಥ ವ್ಯಕ್ತಿಯಂತೂ ಹೌದು.

ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್‌ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!

Latest Videos
Follow Us:
Download App:
  • android
  • ios