Asianet Suvarna News Asianet Suvarna News

ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್‌ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!

ಟೈಟಾನಿಕ್ ಸಿನಿಮಾ ಒಂದು ಅದ್ಭುತ ಕಲ್ಪನೆ ಎಂಬುದನ್ನು ಬಿಟ್ಟರೆ ಇನ್ನೇನೂ ಅಲ್ಲ. ಆದರೆ, ಸಿನಿಮಾದ ಪಾತ್ರಗಳು ಲವ್ ಸುತ್ತಲೇ ಸುತ್ತುವ ರೀತಿ ಅದು ಹೇಗೆ  ರೂಪುಗೊಂಡಿತು ಎಂಬುದು ಇಂದಿಗೂ ನನಗೆ ಅರ್ಥವಾಗದ ಸಂಗತಿ. 

James Cameron directorial Titanic movie becomes masterpiece due to its content srb
Author
First Published Jan 27, 2024, 6:35 PM IST | Last Updated Jan 27, 2024, 6:40 PM IST

ಹಾಲಿವುಡ್ ಚಿತ್ರಜಗತ್ತಿನಲ್ಲಿ ಟೈಟಾನಿಕ್ ಸಿನಿಮಾ ಮಾಡಿದ ಮೋಡಿಯನ್ನು ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. 20ನೇ ಶತಮಾನದ ಕೊನೆಯಲ್ಲಿ ತೆರೆಗೆ ಬಂದಿದ್ದ (19 December 1997) ಟೈಟಾನಿಕ್ (Titanic Movie) ಚಿತ್ರವು  ದುರಂತ ಕಥೆಯಾಗಿದ್ದರೂ ಜನರ ಮನಃಪಟಲದ ಮೇಲೆ ಅಚ್ಚಳಿಯದ ಪರಿಣಾಮ ಬೀರಿದೆ ಎನ್ನಬಹುದು. ಟೈಟಾನಿಕ್ ಕಥಾವಸ್ತು ಲವ್-ರೊಮ್ಯಾಂಟಿಕ್ (Love-Romantic)ಆಗಿದ್ದರೂ ಅತ್ಯಂತ ವಿಭಿನ್ನ ಕಲ್ಪನೆ ಮೂಲಕ ಜನರನ್ನು ತಲುಪಿ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರಿಗೆ ಕಣ್ಣಿರು ತರಿಸುವಲ್ಲಿ ಸಫಲವಾಗಿದೆ. 

ಉದ್ದೇಶಪೂರ್ವಕವಲ್ಲದ ಒಂದು ಲವ್, ಆದರೆ ಅದು ಹೇಗೆ ಒಬ್ಬರ ಬಾಳನ್ನು ಸಾವಲ್ಲಿ ಕೊನೆಯಾಗಿಸಿ ಇನ್ನೊಬ್ಬರು ಸಾಯುವವರೆಗೂ ಸತ್ತ ವ್ಯಕ್ತಿಯ ನೆನಪನ್ನು ಮನಸ್ಸಿನಲ್ಲಿ ಅಚ್ಚಳಿಯದಂತೆ ಕಾಪಾಡಿಕೊಂಡು ಇದ್ದಾರೆ' ಎಂಬ ಕಾಲ್ಪನಿಕ ಸಂಗತಿಯನ್ನು ಸಿನಿಮಾ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಲವ್ ಸುತ್ತ ಸುತ್ತುವ ಪಾತ್ರಗಳಿಗೆ ಬೇರೆ ಯಾವುದೇ ಒಂದು ವ್ಯಕ್ತಿತ್ವ ಆರೋಪಿಸದೇ, ಲವ್ (Love)ಸುತ್ತ ಸುತ್ತುತ್ತಲೇ ದುರಂತಕ್ಕೆ ಸಾಕ್ಷಿಯಾಗು ಟೈಟಾನಿಕ್ ಕಥೆ ಮಾಸ್ಟರ್ ಫೀಸ್‌ ಸಿನಿಮಾ ಆಗಿಬಿಟ್ಟಿದೆ. 

James Cameron directorial Titanic movie becomes masterpiece due to its content srb

ಟೈಟಾನಿಕ್ ನಿರ್ದೇಶಕ ಜೇಮ್ಸ್ ಕ್ಯಾಮೆರೊನ್ (James Cameron)ಹೇಳಿದಂತೆ, 'ಟೈಟಾನಿಕ್ ಸಿನಿಮಾ ಒಂದು ಅದ್ಭುತ ಕಲ್ಪನೆ ಎಂಬುದನ್ನು ಬಿಟ್ಟರೆ ಇನ್ನೇನೂ ಅಲ್ಲ. ಆದರೆ, ಸಿನಿಮಾದ ಪಾತ್ರಗಳು ಲವ್ ಸುತ್ತಲೇ ಸುತ್ತುವ ರೀತಿ ಅದು ಹೇಗೆ  ರೂಪುಗೊಂಡಿತು ಎಂಬುದು ಇಂದಿಗೂ ನನಗೆ ಅರ್ಥವಾಗದ ಸಂಗತಿ. ಟೈಟಾನಿಕ್ ಹಡಗು ಮುಳುಗುವ ಮೂಲಕ ಈ ಲವ್‌ಗೊಂದು ಅಂತ್ಯ ಕೊಡುವಲ್ಲಿ ಸಹಕಾರಿಯಾಯಿತು. ಸಿಂಪಲ್ ಕಥೆಯೊಂದು ಮಾಸ್ಟರ್‌ ಫೀಸ್‌ ಆಗಿ ಬದಲಾಗಿದ್ದು ಪ್ರೇಕ್ಷಕರ ಭಾವನೆಗೆ ಅದು ಸ್ಪಂದಿಸುವ ಮೂಲಕ ಎನ್ನುವುದು ನನ್ನ ಭಾವನೆ' ಎಂದಿದ್ದಾರೆ. 

James Cameron directorial Titanic movie becomes masterpiece due to its content srb

ಟೈಟಾನಿಕ್‌ ಸಿನಿಮಾ 'ಸಬ್ಜೆಕ್ಟ್‌'ನಲ್ಲಿ  ಒಂದು ಸೂಕ್ಷ್ಮತೆಯಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅರ್ಥವಾಗುತ್ತದೆ ಎನ್ನಬಹುದು. ಕಥಾನಾಯಕನಿಗೆ ತಾನು ಈಗಾಗಲೇ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಹುಡುಗಿಯನ್ನು ಲವ್‌ಗೆ ಆಹ್ವಾನಿಸುತ್ತಿದ್ದೇನೆ ಎಂಬ ಅರಿವಿದೆ. ಆಕೆಗೆ ಅಷ್ಟೇ, ತಾನು ಎಂಗೇಜ್‌ ಆಗಿರುವ ಹುಡುಗಿ, ಆದರೆ ಆತನ ಪ್ರಾಮಾಣಿಕ ಕೋರಿಕೆಯ ಮೇರೆಗೆ ತಾನು ಹಡಗಿನಲ್ಲಿ ಇದ್ದಷ್ಟು ಹೊತ್ತು ಅವನೊಟ್ಟಿಗೆ ಕಾಲ ಕಳೆಯುವೆ ಎಂಬ ಭಾವವಿದೆ. ಈ ಹಾಲಿವುಡ್ ಚಿತ್ರದಲ್ಲಿ ನಾಯಕರಾಗಿ ಲಿಯೋನಾರ್ಡೋ ಡಿ ಕಾಪ್ರಿಯೋ (Leonardo DiCaprio)ಮತ್ತು ನಾಯಕಿಯಾಗಿ ಕಾಟೇ ವಿನ್ಸ್‌ಲೆಟ್ ( Kate Winslet)ನಟಿಸಿದ್ದಾರೆ. 

ನಾನು ಕೈ ಬಿಟ್ಟಾಗ ದೇವರು ಕೈ ಹಿಡಿದಿದ್ದಾನೆ, ಇದು ದೈವ ಪ್ರೇರಣೆ; ಗುಟ್ಟು ಹೇಳ್ಬಿಟ್ರಾ ವಿದ್ಯಾ ಬಾಲನ್!

ಆದರೆ ಅಚ್ಚರಿ ಎನ್ನುವಂತೆ, ಈ ಕಥೆಯಲ್ಲಿ ಇನ್ನೂ ಒಂದು ಸೂಕ್ಷ್ಮತೆ ಅಡಕವಾಗಿದೆ. 'ನಾಯಕನಿಗೆ ಇವೇ ತನ್ನ ಕೊನೆಯ ಕ್ಷಣಗಳು ಎಂಬ ಅರಿವಿಲ್ಲ. ನಾಯಕಿಗೂ ಅಷ್ಟೇ, ಆತನನ್ನು ಭೇಟಿಯಾಗುವ ಮೂಲಕ ತನ್ನ ಎಂಗೇಜ್ಮೆಂಟ್ ಮುರಿದು ಬೀಳುತ್ತದೆ, ತಾನು ಮುಂದೆ ನಾಯಕನ ಪ್ರೀತಿಗೆ ಕರಗಿ ಹೋಗಿ ಆತನನ್ನು ಕಳೆದುಕೊಂಡು ಆತನ ನೆನಪಿನಲ್ಲೇ ಜೀವಿಸಿ ಸಾಯುತ್ತೇನೆ' ಎಂಬ  ಅರಿವಿಲ್ಲ. ಇಬ್ಬರೂ ತಮ್ಮಿಬ್ಬರ ಜೀವನನ್ನೇ ಕಾಲದ ಕೈಗೆ ಕೊಟ್ಟು ಕೇವಲ 'ಆ ಕ್ಷಣದ ಪ್ರೀತಿಯಲ್ಲಿ' ಬೀಳುತ್ತಾರೆ. ಡೆಸ್ಟಿನಿ ಅವರಿಬ್ಬರನ್ನು ಸೇರಿಸಬೇಕಾದ ಜಾಗಕ್ಕೆ ತಲುಪಿಸುತ್ತದೆ ಎನ್ನಬಹುದು. 

ಮತ್ತೆ ಹೆದರಿಸಲು ಬರ್ತಿದಾರೆ ಅದೇ ಜೋಡಿ; ಯಾವುದಕ್ಕೂ ಎಲ್ರೂ ಹುಶಾರಾಗಿರಿ ಆಯ್ತಾ!

ಒಟ್ಟಿನಲ್ಲಿ, ಟೈಟಾನಿಕ್ ಎಂಬ ಮಾಸ್ಟರ್‌ ಫೀಸ್‌ ಸಿನಿಮಾ 25 ವರ್ಷಗಳ ಹಿಂದೆ ತೆರೆಗೆ ಬಂದಿತ್ತಾದರೂ 2500 ವರ್ಷಗಳ ನಂತರವೂ ಕೂಡ ಜನರು ಮತ್ತೆ ಮತ್ತೆ ನೋಡಬಹುದಾದ, ಅದರ ಬಗ್ಗೆ ಮಾತನಾಡಬಹುದಾದ ಸಿನಿಮಾ ಎಂದು ಹೇಳಬಹುದು. ನಿಜವಾಗಿಯೂ ನಮ್ಮ ಭವಿಷ್ಯ ಏನೆಂದು ಗೊತ್ತಿಲ್ಲದ ನಾವೆಲ್ಲರೂ ಜೀವನದಲ್ಲಿ ಏನೆಲ್ಲವನ್ನೂ ಮಾಡುತ್ತೆವೆಯೋ ಅವೆಲ್ಲವೂ ನಮ್ಮನ್ನು ಗೊತ್ತಿಲ್ಲದಂತೆ ದೈವ ನಿರ್ಣಯದ ಒಂದು ಗುರಿಯೆಡೆಗೆ (ಡೆಸ್ಟಿನಿ) ಕರೆದುಕೊಂಡು ಹೋಗುತ್ತದೆ ಎಂದು ಹೇಳಬಹುದೇ?

ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!

Latest Videos
Follow Us:
Download App:
  • android
  • ios