Asianet Suvarna News Asianet Suvarna News

ಸಂಗೀತಾ ಶೃಂಗೇರಿಯೇ ಬಿಗ್ ಬಾಸ್ ಕಪ್ ಗೆಲ್ಲೋದು; ಹಲವರ ಈ ಮಾತಿಗೆ ಏನಿದೆ ಹಿಂಟ್..!?

ತನಿಷಾ ಮನೆಯಿಂದ ಹೊರಗೆ ಬರುವ ವೇಳೆ ಅಲ್ಲಿನ್ನೂ ನಮ್ರತಾ ಇದ್ದರಾದರೂ ಅವರೂ ನಂತರ ಹೊರಗೆ ಬಂದಿದ್ದಾಯ್ತು. ಈಗ ಅಲ್ಲಿ ಉಳಿದಿರುವ ಏಕೈಕ ಮಹಿಳೆ ಎಂದರೆ ಅದು ಸಂಗೀತಾ ಶೃಂಗೇರಿ. ಹಾಗಿದ್ದರೆ, ಅವರೇ ಗೆಲ್ಲಬಹುದೇ? 

Sangeetha Sringeri is the winner of this Bigg Boss season 10 says many audience srb
Author
First Published Jan 27, 2024, 10:02 PM IST

ಬಿಗ್ ಬಾಸ್ ಗ್ರಾಂಡ್‌ ಫಿನಾಲೆ ಸಂಚಿಕೆ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಪ್ರಿಯರು ಟಿವಿ ಎದುರಿನಿಂದ ಕದಲುತ್ತಿಲ್ಲ. ಹಲವರು ಉಸಿರು ಬಿಗಿ ಹಿಡಿದು ನೋಡುತ್ತಿದ್ದರೆ ಕೆಲವರು ಕುತೂಹಲದಿಂದ ಬಿಗ್ ಬಾಸ್ ಎಪಿಸೋಡ್ ವೀಕ್ಷಿಸುತ್ತಿದ್ದಾರೆ. ಆದರೆ, ಹೇಗೇ ನೋಡಿದರೂ ಇಂದಿನ ಸಂಚಿಕೆಯಲ್ಲಿ ವಿನ್ನರ್ ಯಾರು ಎಂಬುದು ಗೊತ್ತಾಗುವುದಿಲ್ಲ. ಕಾರಣ, ವಿನ್ನರ್ ಘೋಷಣೆ ಆಗಲಿರುವುದು ನಾಳೆಯ ಸಂಚಿಕೆಯಲ್ಲಿಯೇ! ಆದರೆ, ಈ ಸೀಸನ್ ವಿನ್ನರ್ ಸಂಗೀತಾ ಶೃಂಗೇರಿ ಎಂಬ ಸುದ್ದಿ ಇಂದು 'ಟಾಕ್ ಆಫ್‌ ದಿ ಸ್ಟೇಟ್‌' ಆಗುತ್ತಿದೆ. 

ಆದರೆ, ಅಚ್ಚರಿ ಎನ್ನುವಂತೆ, ಮನೆಯಲ್ಲಿ ಉಳಿದಿರುವ ಆರು ಸ್ಪರ್ಧಿಗಳಲ್ಲಿ ಸಂಗೀತಾ ಶೃಂಗೇರಿಯ ಹೆಸರೇ ವಿನ್ನರ್‌ ಎಂದು ಕೇಳಿ ಬರುತ್ತಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಇರುವ ಏಕೈಕ ಮಹಿಳಾ ಮಣಿ ಎಂದರೆ ಅದು ಸಂಗೀತಾ ಶೃಂಗೇರಿ ಮಾತ್ರ. ಆದರೆ, ಈ ಬಾರಿ ಮಹಿಳೆಯೇ ಬಿಗ್ ಬಾಸ್ ಗೆಲ್ಲೋದು ಎಂದು ಈ ಹಲವರಿಗೆ ಹೇಳಿದವರು ಯಾರು? ಉತ್ತರ ಗೊತ್ತಿಲ್ಲ ಎನ್ನಬಹುದಾದರೂ ಅದಕ್ಕೊಂದು ಬಲವಾದ ಸಾಕ್ಷಿ ಇದೆಯಂತೆ. 

ಹಿರಿಯ ನಟಿ ಹಾಗೂ ಬಿಗ್ ಬಾಸ್ ಮೂರನೇ ಸೀಜನ್ ವಿನ್ನರ್ ಶ್ರುತಿ ಮಾತು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಾರಣ, ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಒಳಹೋಗುತ್ತಿರಲು ಆಗ ಅಲ್ಲಿಯೇ ಇದ್ದ ನಟಿ ಶ್ರುತಿ ತನಿಷಾ ವೇದಿಕೆಯಿಂದ ಒಳಹೋಗುವಾಗ 'ಈ ಬಾರಿ ಮಹಿಳಾ ಸ್ಪರ್ಧಿಯೇ ಗೆಲ್ಲಬೇಕು, ಗೆಲ್ಲಲಿ' ಎಂದಿದ್ದರು. ಆಗ ಎಲ್ಲರೂ ಅದು ತನಿಷಾರೇ ಇರಬಹುದು ಎಂದುಕೊಂಡಿದ್ದರು. ಆದರೆ, ತನಿಷಾ ಗೆಲುವಿನ ಹೊಸ್ತಿಲಲ್ಲಿ ಮನೆಯಿಂದ ಹೊರಬಂದಿದ್ದಾರೆ. 

ನಾನು ಕೈ ಚೆಲ್ಲಿದಾಗ ದೇವರು ಕೈ ಹಿಡಿದಿದ್ದಾನೆ, ಇದು ದೈವ ಪ್ರೇರಣೆ; ಗುಟ್ಟು ಹೇಳ್ಬಿಟ್ರಾ ವಿದ್ಯಾ ಬಾಲನ್!

ತನಿಷಾ ಮನೆಯಿಂದ ಹೊರಗೆ ಬರುವ ವೇಳೆ ಅಲ್ಲಿನ್ನೂ ನಮ್ರತಾ ಇದ್ದರಾದರೂ ಅವರೂ ನಂತರ ಹೊರಗೆ ಬಂದಿದ್ದಾಯ್ತು. ಈಗ ಅಲ್ಲಿ ಉಳಿದಿರುವ ಏಕೈಕ ಮಹಿಳೆ ಎಂದರೆ ಅದು ಸಂಗೀತಾ ಶೃಂಗೇರಿ. ಹಾಗಿದ್ದರೆ, ಅವರೇ ಗೆಲ್ಲಬಹುದೇ? ಶ್ರುತಿ ಮಾತಿಗೆ ಬಿಗ್ ಬಾಸ್ ಪ್ರಿಯರು ಅದೆಷ್ಟು ಫಿದಾ ಆಗಿದ್ದಾರೆಂದರೆ, ಅವರು ಸುಮ್ಮನೇ ಹೇಳಿರಲ್ಲ, ಅವರಿಗೆ ಏನೋ ಹಿಂಟ್ ಇದೆ ಎನ್ನತೊಡಗಿದ್ದಾರೆ. ಆದರೆ, ಅವರ ಮಾತು ಕೇವಲ ಊಹೆ, ಅವರು ಮಹಿಳೆ ಗೆಲ್ಲಲಿ ಎಂದು ಹಾರೈಸಿದ್ದಾರಷ್ಟೇ ಎನ್ನವವರೂ ಇದ್ದಾರೆ. 

ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್‌ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!

ಅದೇನೇ ಇದ್ದರೂ, ಈ ಬಾರಿ ಮಹಿಳೆ ಗೆಲ್ಲಬೇಕು ಎಂದರೆ ಅದು ಸಂಗೀತಾ ಶೃಂಗೇರಿಯೇ ಆಗಿದೆ. ಆದರೆ, ಇಂದಿನ ಸಂಚಿಕೆ ಹಾಗೂ ನಾಳೆಯ ಸಂಚಿಕೆ ನೋಡಿದರೆ ಯಾರು ವಿನ್ನರ್, ಯಾರು ರನ್ನರ್ ಅಪ್ ಎಂಬುದು ತಿಳಿಯಲಿದೆ. ಒಟ್ಟಿನಲ್ಲಿ, ತೀವ್ರ ಕುತೂಹಲ ಕೆರಳಿಸಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಯಾರು ಗೆಲ್ಲುವರು ಎಂಬುದನ್ನು ತಿಳಿಯಲು ನಾಳೆಯವರೆಗೆ ಕಾಯಬೇಕಷ್ಟೇ. 

ಕುವೆಂಪು 'ಕವಿ ಶೈಲ'ವನ್ನು ಪದಗಳಲ್ಲಿ ಬಣ್ಣಿಸಲು ಅಸಾಧ್ಯ; 'ರಂಗಿತರಂಗ' ನಟ ಸಾಯಿಕುಮಾರ್

Follow Us:
Download App:
  • android
  • ios