Asianet Suvarna News Asianet Suvarna News

ಹಳ್ಳಿಕಾರ್ ಒಡೆಯ ಯಾರೂ ಇಲ್ಲ, ಅವನಿಗೆ ಯೋಗ್ಯತೆನೇ ಇಲ್ಲ: ವರ್ತೂರ್ ಸಂತೋಷ್ ವಿರುದ್ಧ ಕಿಡಿ!

ಹಳ್ಳಿಕಾರ್ ಒಡೆಯ ಟೈಟಲ್‌ಗೆ ಆಕ್ಷೇಪಾ. ಬಿರುದು ಕೊಟ್ಟಿದ್ದು ಯಾರು? ವರ್ತೂರ್ ಬಂದ್ಮೇಲೆ ಕಾನೂನು ಹೋರಾಟ ಶುರು ಎಂದು ರೈತರು. 

Karnataka Desi gow committee farmers against Bigg boss Varthur Santhosh for Hallikar Odaya title vcs
Author
First Published Dec 12, 2023, 10:01 AM IST

ಹಳ್ಳಿಕಾರ್ ಒಡೆಯ, ರೈತ ಎಂದು ಸಾಕಷ್ಟು ಹೆಸರು ಮಾಡಿರುವ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಯಶಸ್ವಿಯಾಗಿ 10 ವಾರ ಪೂರೈಸಿದ್ದಾರೆ. ಹುಲಿ ಉಗುರು ಪ್ರಕರಣದಲ್ಲಿ ಹೊರ ಬಂದು ಕೆಲವು ದಿನಗಳ ಕಾಲ ಜೈಲಿನಲ್ಲಿ ಇದ್ದು ಬೇಲ್‌ ಮೇಲೆ ಹೊರ ಬಂದು ಮತ್ತೊಮ್ಮೆ ಮನೆ ಪ್ರವೇಶ ಮಾಡಿದ್ದಾರೆ. ಈ ನಡುವೆ ವರ್ತೂರ್ ವಿರುದ್ಧ ತಮ್ಮ ಮಾವ ಧ್ವನಿ ಎತ್ತಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕದ ಹೆಮ್ಮೆಯ ದೇಸಿ ತಳಿ ರೈತ ಸದಸ್ಯರು ಸಭೆ ಮಾಡಿ ವರ್ತೂರ್ ವಿರುದ್ಧ ಕಿಡಿ ಕಾರಿದ್ದಾರೆ.

'ಇಲ್ಲಿ ಯಾರೂ ಹಳ್ಳಿಕಾರ್ ಒಡೆಯ ಇಲ್ಲ. ಹಳ್ಳಿಕಾರ್ ಒಡೆಯ ಆಗಲು ಡಿಪಾರ್ಟ್‌ಮೆಂಟ್‌ನಿಂದಲೇ ಹೆಸರು ಬಿರುದು ಕೊಡಬೇಕು. ಯಾರೂ 10 ಜನ ಗುಂಪು ಮಾಡಿಕೊಂಡು ಕರೆದ ಹಳ್ಳಿಕಾರ್ ಒಡೆಯ ಆಗಲು ಸಾಧ್ಯವಿಲ್ಲ. ಶಿವಕುಮಾರ್ ಮಹಾಸ್ವಾಮಿಜೀ ಅವರು ಒಂದು ಮಾತು ಹೇಳಿದ್ದರು ನನ್ನ ಡಾಕ್ಟರೇಟ್ ವಾಪಸ್‌ ತೆಗೆದುಕೊಳ್ಳಬೇಕು. ಅದ್ಯಾರೋ ಹೆಸರು ಕೇಳಿದರೆ ಅವರಿಗೆ ಕೊಡಬೇಕು ಏನೂ ಮಾಡದೆ ನನಗೆ ಕೊಟ್ಟಿದ್ದಾರೆ ಅಂತ ಆಗ ಹೇಳಿಕೆ ನೀಡಿದ್ದರು. ಈ ಒಡೆಯ ಅನ್ನೋ ಬಿರುದು ಪಡೆಯಲು ವರ್ತೂರ್ ಸಂತೋಷ್ ಅರ್ಹನೂ ಅಲ್ಲ ಅದನ್ನು ತೆಗೆದುಕೊಳ್ಳುವ ಯೋಗ್ಯತೆನೂ ಇಲ್ಲ.' ಎಂದು ಮಾಗಡಿ ರೈತ ಜಯರಾಮ್ ಖಾಸಗಿ ನ್ಯೂಸ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ವರ್ತೂರ್ ಸಂತೋಷ್ ಮೈ ಮೇಲೆ 400 ಗ್ರಾಂ ಚಿನ್ನ ಇದೆ: ಗೌರೀಶ್ ಅಕ್ಕಿ ಮಾತಿಗೆ ಹುಡುಗಿಯರು ಶಾಕ್

'ವರ್ತೂರ್ ಸಂತೋಷ್ ಯಾರು? ಆತನನ್ನು ಹಳ್ಳಿಕಾರ್ ಒಡೆಯ ಮಾಡಿದ್ದು ಯಾರು? ಅವನೊಬ್ಬ ಸಿಳ್ಳಿ. ನಾವು ಆತನನ್ನು ಒಪ್ಪಿಕೊಳ್ಳುವುದಿಲ್ಲ. ಆತ ಉತ್ತಮನಾದರೆ ಅವನೇ ಯುಟ್ಯೂಬ್ ಅವರಿಗೆ ಹೇಳಬೇಕು ಹಳ್ಳಿಕಾರ್ ಒಡೆಯ ಅನ್ನೋದು ತೆಗೆಸಬೇಕು. 80 ವರ್ಷದಿಂದ ದನ ಮೇಯಿಸುತ್ತಿದ್ದಾರೆ ಒಬ್ಬ ಮುದುಕನಿಗೆ ಹಳ್ಳಿಕಾರ್ ಒಡೆಯ ಅಂತ ಬಿರುದು ಕೊಡಲಿ ಒಪ್ಪಿಕೊಳ್ಳುತ್ತೀನಿ ಇವನಿಗೆ ಯಾಕೆ ಕೊಡಬೇಕು?. ವರ್ತೂರ್ ಅವರ ಮಾವ ಒಂದು ಮಾತು ಹೇಳಿದ್ದಾರೆ...ಅವನೊಬ್ಬ ದೊಡ್ಡ ಕಳ್ಳ ಅಂತ ಹೇಳಿದ್ದಾರೆ..ಅದಕ್ಕಿಂತ ದೊಡ್ಡ ಸಾಕ್ಷಿ ಬೇಕಾ. ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೀವಿ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಸ್ಪಷ್ಟನೆ ತೆಗೆದುಕೊಂಡು ಕೋರ್ಟ್‌ ಮೆಟ್ಟಿಲು ಏರುತ್ತೀವಿ ಎಂದು ಮಾಗಡಿ ಜಯರಾಮ್ ಹೇಳಿದ್ದಾರೆ.

ಹೆಂಡ್ತಿ ಬಿಟ್ಟೊದ್ಮೇಲೆ ಆ ಹುಡುಗಿಗೆ ಮಿಸ್ ಕಾಲ್ ಕೊಟ್ಟಿದ್ದೀನಿ; ಎರಡನೇ ಮದುವೆ ಬಗ್ಗೆ ಸುಳಿವು ಕೊಟ್ಟ ವರ್ತೂರ್ ಸಂತೋಷ್?

ಒಂದಾದ ಮೇಲೊಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿರುವ ವರ್ತೂರ್ ಸಂತೋಷ್ ತುಂಬಾ ತಾಳ್ಮೆ ಮತ್ತು ಸಮಾಧಾನದಿಂದ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅತಿ ಹೆಚ್ಚು ವೋಟ್ ಪಡೆದು ಸೇವ್ ಆಗುತ್ತಿರುವ ಮೊದಲ ಸ್ಪರ್ಧಿ ಕೂಡ ಹೌಡು. ವರ್ತೂರ್ ಹೊರ ಬರುತ್ತಿದ್ದಂತೆ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಎಂದು ಕಾದು ನೋಡಬೇಕಿದೆ. 

Follow Us:
Download App:
  • android
  • ios