Asianet Suvarna News Asianet Suvarna News

ವರ್ತೂರ್ ಸಂತೋಷ್ ಮೈ ಮೇಲೆ 400 ಗ್ರಾಂ ಚಿನ್ನ ಇದೆ: ಗೌರೀಶ್ ಅಕ್ಕಿ ಮಾತಿಗೆ ಹುಡುಗಿಯರು ಶಾಕ್

ವರ್ತೂರ್ ಸಂತೋಷ್ ಧರಿಸುವ ಚಿನ್ನದ ಮೇಲೆ ಹೆಣ್ಣು ಮಕ್ಕಳ ಕಣ್ಣು. ಎಷ್ಟು ಗ್ರಾಂ ಇದೆ ಅಂತ ಕೇಳಿ ಶಾಕ್ ಆಗ್ಬೇಡಿ....

Colors Kannada Bigg boss Varthur Santhosh wears 400 grams gold says Gaurish akki vcs
Author
First Published Dec 5, 2023, 12:29 PM IST

ಬಿಗ್ ಬಾಸ್ ಸೀಸನ್ 10ರಲ್ಲಿ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಸ್ಪರ್ಧಿಸುತ್ತಿದ್ದಾರೆ. ಆರಂಭದಿಂದಲೂ ಸಖತ್ ಸೈಲೆಂಟ್ ಆಗಿರುವ ವರ್ತೂರ್ ಹುಲಿ ಉಗುರು ಘಟನೆ ನಂತರ ಸ್ಟ್ರಾಂಗ್ ಆಟ ಶುರು ಮಾಡಿದ್ದಾರೆ. ಏನೇ ಇದ್ದರೂ ಧ್ವನಿ ಎತ್ತಿ ಮಾತನಾಡಲು ಶುರು ಮಾಡಿದ್ದಾರೆ. ವರ್ತೂರ್ ಬದಲಾವಣೆ ಅಭಿಮಾನಿಗಳಲಿಗೆ ಇಷ್ಟವಾಗಿದೆ. ಅಲ್ಲದೆ ಹುಲಿ ಉಗುರು ಘಟನೆ ನಡೆದ ಮೇಲೂ ವರ್ತೂರ್ ಮೈ ಮೇಲೆ ಅಷ್ಟೋಂದು ಚಿನ್ನಾಭರಣ ಇರುವುದು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ವಾರ ವಾರವೂ ವರ್ತೂರ್ ಡಿಫರೆಂಟ್ ಆಗಿರುವ ಚಿನ್ನಾಭರಣ ಧರಿಸುತ್ತಾರೆ ನೋಡಲು ಯಾವುದೂ ಕಡಿಮೆ ಗ್ರಾಂ ರೀತಿ ಕಾಣಿಸುವುದಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದು ಎಲಿಮಿನೇಟ್ ಆಗಿ ಹೊರ ಬಂದಿರುವ ಗೌರೀಶ್ ಅಕ್ಕಿ ಈ ಹಿಂದೆ ನಡೆದ ಸಂದರ್ಶನದಲ್ಲಿ ವರ್ತೂರ್ ಮೇಲೆ ಎಷ್ಟು ಗ್ರಾಂ ಚಿನ್ನ ಇದೆ ಎಂದು ರಿವೀಲ್ ಮಾಡಿದ್ದರು. ಈ ಸಂದರ್ಶನ ಬಹುಷ ಹುಲಿ ಉಗುರು ಸಮಯದಲ್ಲಿ ನಡೆದಿದೆ.

ಹೆಂಡ್ತಿ ಬಿಟ್ಟೊದ್ಮೇಲೆ ಆ ಹುಡುಗಿಗೆ ಮಿಸ್ ಕಾಲ್ ಕೊಟ್ಟಿದ್ದೀನಿ; ಎರಡನೇ ಮದುವೆ ಬಗ್ಗೆ ಸುಳಿವು ಕೊಟ್ಟ ವರ್ತೂರ್ ಸಂತೋಷ್?

'ವರ್ತೂರ್ ಸಂತೋಷ್‌ನ ತುಂಬಾ ಹತ್ತಿರದಿಂದ ನೋಡಿದ್ದೀನಿ ಅವರ ಜೊತೆ 15 ದಿನಗಳ ಕಾಲ ಒಟ್ಟಿಗೆ ಇದ್ದ ಕಾರಣ ಸ್ವಲ್ಪ ಗೊತ್ತಿದೆ. ಕಡಿಮೆ ವೋಟ್‌ ಬಂದ ಕಾರಣ ಅಸಮರ್ಥರಾಗಿ ವರ್ತೂರ್ ಸಂತೋಷ್ ಬಿಗ್ ಬಾಸ್‌ ಮನೆಗೆ ಕಾಲಿಟ್ಟರು. ನಾನು ಸಮರ್ಥರಾಗಿ ಎಂಟ್ರಿ ಕೊಟ್ಟಿದ್ದೆ. ಹೀಗಾಗಿ ವರ್ತೂರ್ ಸಂತೋಷ್ 7 ದಿನಗಳ ಕಾಲ ಆರೇಂಜ್‌ ಬಣ್ಣದ ಡ್ರೆಸ್‌ನಲ್ಲಿದ್ದರು ಹಾಗೆ ಚೇರ್ ಮೇಲೆ ಕುಳಿತುಕೊಳ್ಳುವಂತೆ ಇರಲಿಲ್ಲ ಸೋಫ ಬಳಸುವಂತೆ ಇರಲಿಲ್ಲ ಹಾಸಿಗೆ ಮೇಲೆ ಮಲಗುವಂತೆ ಇರಲಿಲ್ಲ ಎಲ್ಲರೂ ಊಟ ಮಾಡಿದ ಮೇಲೆ ಊಟ ಮಾಡಬೇಕಿತ್ತು..ಎಲ್ಲರಿಗೂ ಅಡುಗೆ ಮಾಡಬೇಕಿತ್ತು, ಬಾತ್‌ರೂಮ್ ತೊಳೆಯಬೇಕಿತ್ತು. ಇದಾದ ಮೇಲೆ ಸಮರ್ಥರಾಗಿ ಬದಲಾದರು ಆ ಫೇಸ್‌ ಜರ್ನಿಯನ್ನು ನೋಡಿರುವೆ' ಎಂದು ವರ್ತೂರ್ ಬಗ್ಗೆ ಗೌರೀಶ್ ಅಕ್ಕ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮದುವೆ ದಿನ ಡ್ರಗ್ಸ್‌ ಮಾಡ್ಕೊಂಡು ಬಂದಿದ್ದ ವರ್ತೂರ್ ಸಂತೋಷ್, ಎರಡೇ ದಿನಕ್ಕೆ ಡಿವೋರ್ಸ್ ಅಂತಾರೆ; ಮಾವ ಕಣ್ಣೀರು

'ನಾನು ನೋಡಿರುವ ಪ್ರಕಾರ ವರ್ತೂರ್ ಸಂತೋಷ್ ತುಂಬಾ ಡೀಸೆಂಟ್ ವ್ಯಕ್ತಿ. ಕಾನೂನಿನ ಬಗ್ಗೆ ಭಯ ಇರುವ ವ್ಯಕ್ತಿ, ರೈತರ ಬಗ್ಗೆ ಕಾಳಜಿ ಇರುವ ವ್ಯಕ್ತಿ. ರೈತಾಪಿ ಕುಟುಂಬಕ್ಕೆ ಸೇರಿ ರೈತನಾಗಿದ್ದು ಕೋಟಿ ಕೋಟಿ ದುಡ್ಡು ಮಾಡಿದ್ದಾರೆ. ಅದನ್ನು ಶೋ ಆಫ್‌ ಕೂಡ ಮಾಡುತ್ತಾರೆ. ಶೋ ಆಫ್ ಮಾಡಲು ಹೋಗಿ ಹುಲಿ ಉಗುರು ಪ್ರಕರಣದಲ್ಲಿ ಸಿಲುಕಿಕೊಂಡರು. ವರ್ತೂರ್ ಬಂಗಾರ ಹಾಕುವುದನ್ನು ನೋಡಿರುವೆ ಆದರೆ ಹುಲಿ ಉಗುರು ಗಮನದಲ್ಲಿ ಇರಲಿಲ್ಲ. ವರ್ತೂರ್ ಧರಿಸಿರುವ ಬಂಗಾರ ಎಷ್ಟು ಇದೆ ಎಂದು ಒಮ್ಮೆ ಪ್ರಶ್ನೆ ಮಾಡಿದೆ ಆಗ 400 ಗ್ರಾಂ ಧರಿಸಿರುವೆ ಅಂದ್ರು. ಲೆಕ್ಕ ಮಾಡಿದರೆ ಅರ್ಧ ಕೆಜಿ ಬಂಗಾರ ಮೈ ಮೇಲೆ ಇರುತ್ತದೆ. ಮನೆಯಲ್ಲಿದ್ದ ಯಾವ ಸದಸ್ಯರು ಅವರ ಬಳಿ ಇದ್ದ ಹುಲಿ ಉಗುರನ್ನು ಗಮನಿಸಿರಲಿಲ್ಲ.  ಆಮೇಲೆ ನೋಡಿದರೆ ಹುಲಿ ಉಗುರು ಅವರಿಗೆ ಪರಿಚುವಂತೆ ಆಗಿ ಜೈಲಿಗೆ ಹೋಗುವ ಪರಿಸ್ಥಿತಿ ಬಂತು' ಎಂದು ಗೌರೀಶ್ ಹೇಳಿದ್ದಾರೆ. 

'ಒಂದು ತಿಂಗಳ ಕಾಲ ಬಿಗ್ ಬಾಸ್‌ ಮನೆಯಲ್ಲಿ ಇರಲೇ ಬೇಕು ಎಂದು ವರ್ತೂರ್ ಸಂತೋಷ್ ಮನಸ್ಸು ಮಾಡಿದ್ದರು. ಕುಟುಂಬ ಮನೆ ಮಿಸ್ ಮಾಡಿಕೊಳ್ಳುತ್ತಿದ್ದರು' ಎಂದಿದ್ದಾರೆ ಗೌರೀಶ್. 

Follow Us:
Download App:
  • android
  • ios