Asianet Suvarna News Asianet Suvarna News

ಹೆಂಡ್ತಿ ಬಿಟ್ಟೊದ್ಮೇಲೆ ಆ ಹುಡುಗಿಗೆ ಮಿಸ್ ಕಾಲ್ ಕೊಟ್ಟಿದ್ದೀನಿ; ಎರಡನೇ ಮದುವೆ ಬಗ್ಗೆ ಸುಳಿವು ಕೊಟ್ಟ ವರ್ತೂರ್ ಸಂತೋಷ್?

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ವರ್ತೂರ್ ಸಂತೋಷ್. ಮಿಸ್ ಕಾಲ್ ಕೊಟ್ಟು ಮಾತನಾಡಿದ ಹುಡುಗಿ ಯಾರು?
 

Colors Kannada Bigg boss Varthur Santhosh talks about marriage and family vcs
Author
First Published Dec 1, 2023, 1:20 PM IST

ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ವರ್ತೂರ್ ಸಂತೋಷ್ 50 ದಿನಗಳನ್ನು ಪೂರೈಸಿದ್ದಾರೆ. ಈ ನಡುವೆ ಹುಲಿ ಹುಗುರು ಪ್ರಕರಣದಲ್ಲಿ ಹೊರ ಬಂದು ಜೈಲಿನಲ್ಲಿ ಇದ್ದು ಬೇಲ್ ಪಡೆದು ಮತ್ತೆ ಎಂಟ್ರಿ ಕೊಟ್ಟರು. ಇದಾದ ಮೇಲೆ ಹೊರಗಡೆ ವರ್ತೂರ್ ಮದುವೆ ವಿಚಾರ ಚರ್ಚೆ ಆಗಲು ಶುರುವಾಯ್ತು. ನಿನ್ನೆ ನಡೆದ ಎಪಿಸೋಡ್‌ನಲ್ಲಿ ಫ್ಯಾಮಿಲಿ ಬಗ್ಗೆ ರಿವೀಲ್ ಮಾಡಿದ್ದಾರೆ. 

'4 ವರ್ಷ ಇದ್ದಾಗ ತಂದೆ ಕಳೆದುಕೊಂಡ ಕಾರಣ ನಾಲ್ಕು ದೊಡ್ಡಪ್ಪಂದಿರು ತಂದೆ ಸ್ಥಾನದಲ್ಲಿ ನಿಂತರು. ಮದುವೆ ಜವಾಬ್ದಾರಿ ನನ್ನ ದೊಡ್ಡಪ್ಪ ತೆಗೆದುಕೊಂಡರು. ಅಲ್ಲಿಂದ ನಾನು ಸಪರೇಟ್ ಬಂದು ಜೀವನ ಶುರು ಮಾಡಿದೆ. ಆಸ್ತಿ ಎಲ್ಲ ಸಮವಾಗಿ ಭಾಗ ಕೊಟ್ಟರು. ನನ್ನ ತಂದೆ ಹೆಸರು ಸಂಪತ್‌ ಎಂದು....ಆಸ್ತಿ ಬಂದ ಮೇಲೆ ಕೋತಿ ಕೈಯಲ್ಲಿ ಬೆಲ್ಲ ಕೊಟ್ಟಂತೆ ಎಂದು ಊರು ತುಂಬಾ ಮಾತನಾಡಿದ್ದರು. ಸಂಪೂರ್ಣ ಆಸ್ತಿ ಮುಗಿಸುತ್ತಾನೆ ಅಂದ್ರು. ಹಾಳು ಮಾಡಿದರೂ ನಿಂದೆ ಚೆನ್ನಾಗಿ ಮಾಡಿದರೂ ನಿಂದೆ ಎಂದು ನನ್ನ ತಾಯಿ ಬಿಟ್ಟರು. ಮೊದಲು ದನ ಕರು ಅಂತ ಶುರು ಮಾಡಿದೆ ಆಗಲೂ ಜನರು ಗೇಲಿ ಮಾಡಿದ್ದರು ಇಂದು ಆ ದನ ಕರುಯಿಂದಲೇ ನಾನು ಬಿಗ್ ಬಾಸ್ ವೇದಿಕೆಗೆ ಬರಲು ಕಾರಣ ಆಯ್ತು' ಎಂದು ವರ್ತೂರ್ ಸಂತೋಷ್ ಮಾತನಾಡಿದ್ದಾರೆ.

ಶೂಟೌಟ್‌ ಆರ್ಡರ್‌ ಬಂದಿತ್ತಂತೆ, ಊಟಕ್ಕೆ ವಿಷ ಹಾಕಬೇಕಿತ್ತು; ಮಾನಸಿಕ ಅಸ್ವಸ್ಥ ಅಂತಾರೆಂದು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

'ನಾನು 100 ರೂಪಾಯಿ ಹಾಕಿದ ಕಡೆ 1000 ರೂಪಾಯಿ ಬರಲು ಆರಂಭಿಸಿತ್ತು ಆಗ ಊರಿನಲ್ಲಿ ಇದ್ರೆ ಅವನಂತೆ ಬದುಕಬೇಕು ಅನ್ನೋ ಮಾತು. ನನ್ನ ಮದುವೆ ವಿಚಾರನೂ ಬಂತು. ನನ್ನ ದೊಡ್ಡಪ್ಪ ಮದುವೆ ಅಂತ ಹೇಳಿದಾಗ...ದೊಡ್ಡಪ್ಪ ನೀನು ಹುಡುಗಿ ನೋಡಿ ಇಂತಹ ಹುಡುಗಿ ತಾಳಿ ಕಟ್ಟು ಅಂತ ಹೇಳಬೇಕು ಕಟ್ಟುತ್ತೀನಿ ಎಂದು ಮಾತುಕೊಟ್ಟೆ. ಯಾವತ್ತೂ ನಾಟಕೀಯ ಮಾತನಾಡುವವರನ್ನು ನಂಬಬೇಡಿ. ನನ್ನ ದೊಡ್ಡಪ್ಪ ಬೇಕು ಅಂತ ಮಾಡಿಲ್ಲ. ಹುಡುಗಿ ಮತ್ತು ನನ್ನ ಫೋಟೋ ಕಂಪೇರ್ ಮಾಡಿದಾಗ ರಾಜಕುಮಾರ ಮಗನಿಗೆ ಎಂತಹ ಸಂಬಂಧ ನೋಡಿದ್ಯಾ ಅಂತಾರೆ. ಮುಖ ನೋಡಬಾರದು ಕುಲ ನೋಡಬೇಕು ಎಂದು ಬಿಲ್ಡಪ್ ಕೊಟ್ಟಿದ್ದರು. ಯಾರೇ ಆಗಲಿ ಹೆಣ್ಣು ಕೊಟ್ಟು ತರಬೇಕು ಅಂದ್ರೆ ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿ' ಎಂದು ವರ್ತೂರ್ ಹೇಳುತ್ತಾರೆ.

ರಾಮೋಜಿ ಫಿಲಂ ಸಿಟಿಯಲ್ಲಿ ಶಿಡ್ಲಘಟ್ಟ ಸೆಟ್; ಸಂಜು ವೆಡ್ಸ್ ಗೀತಾ 2 ಸಸ್ಪೆನ್ಸ್‌ ಲೀಕ್

'ದಿನ ಕಳೆಯುತ್ತಿದ್ದಂತೆ ಆ ವ್ಯಕ್ತಿ ಹೇಗೆ ಅನ್ನೋದು ಗೊತ್ತಾಯಿತ್ತು. ನನ್ನ ತಾಯಿಯನ್ನು ದೂರ ನೂಕುವುದಕ್ಕೆ ಶುರು ಮಾಡಿದ್ದರು. ನಾನು ಕಟ್ಟಿರುವ ಕೋಟೆ ನಾನು ಕಟ್ಟಿರುವ ಮನೆ ನಾನು ಸಂಪಾದನೆ ಮಾಡಿರುವ ಜನರನ್ನು ಬಿಟ್ಟು ಅವರ ಹಿಂದೆ ಹೋಗೋಕೆ ನನಗೆ ಆಗಲ್ಲ. ನನ್ನ ತಾಯಿ ಹೇಳಿದಂತೆ ಕೇಳಿಕೊಂಡು ಇದ್ರೆನೇ ಈ ಮನೆಯಲ್ಲಿ ಜಾಗ ಅಂದೆ...ನನ್ನ ತಾಯಿ ಕೂಡ ಹೇಳಿದರು ಒಂದು ಹೆಣ್ಣು ಮಗಳ ಜೀವನ ಹೀಗೆ ಮಾಡಬಾರದು ಎಂದು ಆಗ ಯಾರಿಗೂ ಹೇಳದೆ ನಾನು ಕಾರು ತೆಗೆದುಕೊಂಡು ಹೋಗುತ್ತೀನಿ. ಅವರ ಮನೆ ಕೋಟಿ ರೀತಿ ಇದೆ ಅವರ ತಂದೆ ಇರುವುದಿಲ್ಲ...ತಂದೆ ಬಂದ ಮೇಲೆ ಮಾತುಕತೆ ಮಾಡುತ್ತಾರೆ. ಗೇಟ್ ಓಪನ್ ಮಾಡಿ ಅಲ್ಲಿಂದ ನನ್ನನ್ನು ಹೊರ ಹೋಗಲು ಹೇಳುತ್ತಾರೆ. ನಾಲ್ಕು ಜನರ ಮುಂದೆ ನನಗೆ ಅವಮಾನ ಮಾಡಿದ್ದೀರಾ ನಾಲ್ಕು ಸಾವಿರ ಜನರ ಮುಂದೆ ಉತ್ತರ ಕೊಡುತ್ತೀನಿ ಎಂದು ಅಲ್ಲಿಂದ ಬಂದೆ. ಇನ್ಯಾರು ಫೋನ್ ಅಥವಾ ಮಾತುಕತೆ ಅವರ ಜೊತೆ ಇರಬಾರದು ಎಂದು ಹೇಳಿದೆ. ನನ್ನ ಫ್ಯಾಮಿಲಿಗೆ ಮಾತ್ರ ಈ ವಿಚಾರ ಗೊತ್ತಿತ್ತು ಇಂದು ಇಡೀ ಕರ್ನಾಟಕದ ಜನತೆ ಜೊತೆ ಹಂಚಿಕೊಂಡೆ' ಎಂದಿದ್ದಾರೆ ವರ್ತೂರ್.

'ಒಂದು ಸುಳ್ಳಿ ಹೇಳಿದರೆ ದಿನವಿಡೀ ಬೇಸರದಲ್ಲಿ ಇರುತ್ತೀನಿ. ಈ ರೀತಿ ಘಟನೆ ನಡೆದಾಗ ಬೇಸರಲ್ಲಿ ನಾನು ಇದ್ದೆ...ಇನ್ನೊಂದು ತಿಂಗಳಿನಲ್ಲಿ ಸತ್ತು ಹೋಗುತ್ತಾನೆ ಎಂದು ಜನರು ಮಾತನಾಡಿದ್ದರು. ಆ ಸಮಯದಲ್ಲಿ ನಾನು ಒಂದು ಹುಡುಗಿಗೆ ಕಾಲ್ ಮಾಡುತ್ತೀನಿ...ಅವರ ಜೊತೆ ಮಾತನಾಡಿದರೆ ನನ್ನ ಲೈಫ್‌ ಮತ್ತೆ ಬರುತ್ತೆ ಎಂದು. ಆ ಹುಡುಗಿ ಹೆಸರು ನಾನು ಹೇಳುವುದಿಲ್ಲ ಆದರೆ ಶಿವಲಿಂಗನಾ ಎಂದು ಕರೆ ಮಾಡಿದಾಗ ಆ ಹುಡುಗಿಗೆ ಗೊತ್ತಾಗುತ್ತದೆ. ಖಂಡಿತಾ ಆ ಫ್ರಾಡ್ ಫ್ಯಾಮಿಲಿನೂ ಈಗ ನಾನು ಹೇಳುತ್ತಿರುವ ಮಾತುಗಳನ್ನು ನೋಡುತ್ತಿರುತ್ತಾರೆ. ಆ ಹುಡುಗಿಯಿಂದ ನನ್ನ ಜೀವನ ಶುರುವಾಯ್ತು. ನಿನ್ನ ಲೈಫ್‌ನಲ್ಲಿ ಏನು ನಡೆದಿದೆ ನನಗೆ ಗೊತ್ತಿದೆ ಏಕೆಂದರೆ ಆಕೆ ನನ್ನ ಸಂಬಂಧಿ. ಬೆಳಗ್ಗೆ ಊಟ ತಿಂದ್ಯಾ ಅನ್ನೋವರೆಗೂ ರಾತ್ರಿ ಮಲ್ಕೊಂಡ್ಯಾ ಅನ್ನೋವರೆಗೂ ನನಗೆ ಶಕ್ತಿಯಾಗಿ ನಿಂತಿದ್ದಾರೆ. ಸ್ವಲ್ಪ ಸ್ವಲ್ಪ ಹಿಂಟ್ ಕೊಟ್ಟೆ ನನ್ನ ತಾಯಿಗೆ ನಿನ್ನ ನಿರ್ಧಾರ ಮುಖ್ಯ ಅನ್ನೋದು ಅಮ್ಮ ಹೇಳಿದರು. ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ' ಎಂದು ವರ್ತೂರ್ ಮಾತನಾಡಿದ್ದಾರೆ. 

Follow Us:
Download App:
  • android
  • ios