Karna Serial Update: ಕರ್ಣ ಧಾರಾವಾಹಿಯಲ್ಲಿ ತೇಜಸ್ ಹಾಗೂ ನಿತ್ಯಾ ಮದುವೆ ಸಂಭ್ರಮದ ನಡುವೆ ನಿಧಿಗೆ ಅಪಾಯ ಆಗಿದೆ. ನಿಧಿ ಪಾತ್ರ ಏನಾದರೂ ಮುಗಿಯಲಿದೆಯಾ ಎಂದು ಕಾದು ನೋಡಬೇಕಿದೆ. ಸದ್ಯ ಸೀರಿಯಲ್‌ನಲ್ಲಿ ಒಂದಾದ ಮೇಲೆ ಒಂದರಂತೆ ಟ್ವಿಸ್ಟ್ ನೀಡುತ್ತಿದ್ದಾರೆ.
Karna Serial Episode Update: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುವ ಕರ್ಣ ಧಾರಾವಾಹಿಯಲ್ಲಿ ಒಂದು ಕಡೆ ತೇಜಸ್, ನಿತ್ಯಾ ಮದುವೆ ತಯಾರಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಇವರನ್ನು ಬಲಿ ತೆಗೆಯಲು ನಯನತಾರಾ ರೆಡಿ ಆಗಿದ್ದಾಳೆ. ಇದರ ಪರಿಣಾಮ ನಿಧಿ ಬಲಿಯಾಗುವುದಾ?
ಅಂದುಕೊಂಡಿದ್ದೊಂದು!
ಹೌದು, ಕರ್ಣ, ನಿತ್ಯಾ ಹನಿಮೂನ್ ಎಂದು ಹೊರಗಡೆ ಬಂದಿದ್ದಾರೆ. ಅಲ್ಲಿ ನಿತ್ಯಾ, ತೇಜಸ್ ಮದುವೆಗೆ ಎಲ್ಲ ತಯಾರಿ ಆಗಿದೆ. ಇವರಿಬ್ಬರ ಮದುವೆ ಆದರೆ ನಿಧಿ-ಕರ್ಣ ಬದುಕು ಕೂಡ ಸುಸೂತ್ರ ಆಗುತ್ತದೆ ಎನ್ನೋ ಲೆಕ್ಕಾಚಾರವಿದೆ. ಹೀಗಿರುವಾಗ ಒಂದು ಅವಘಡ ಸಂಭವಿಸಿದೆ.
ನಿಧಿಗೆ ಅಪಘಾತ ಆಯ್ತು!
ಸದ್ಯ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಕರ್ಣ, ನಿಧಿ ಇಬ್ಬರೂ ಫಲೂದಾ ತಿನ್ನಲು ರೆಡಿ ಆಗುತ್ತಾರೆ. ಆಗ ನಿಧಿ ಕಾರ್‌ನೊಳಗಡೆ ಇರುತ್ತಾಳೆ, ಅತ್ತ ಕರ್ಣ ಮಾತ್ರ ಫಲೂದಾ ತರಲು ಹೊರಗಡೆ ಬಂದಿರುತ್ತಾನೆ. ಆಗ ನಯನತಾರಾ ಹೇಳಿ ಕಳಿಸಿದ ಗೂಂಡಾ, ಲಾರಿಯಿಂದ ಆ ಕಾರ್‌ಗೆ ಆಕ್ಸಿಡೆಂಟ್ ಮಾಡಲು ನೋಡಿದ್ದಾನೆ. ಆಕ್ಸಿಡೆಂಟ್ ಮಾಡಲು ಲಾರಿ ತಂದು ಕಾರ್‌ಗೆ ಗುದ್ದಿದ್ದಾನೆ. ಆಗ ಕಾರ್‌ನಲ್ಲಿದ್ದ ನಿಧಿಗೆ ಏನಾಯ್ತೋ ಏನೋ ಎಂದು ಕರ್ಣ ಓಡಿ ಬಂದು ನೋಡಿದ್ದಾನೆ. ಅಲ್ಲಿಗೆ ಪ್ರೋಮೋ ಎಂಡ್ ಆಗಿದೆ.
ನಿಧಿಗೆ ಏನಾಗುವುದು?
ಆ ಸಮಯಕ್ಕೆ ನಿಧಿ ಕಾರ್‌ನಿಂದ ಇಳಿದಿರಬಹುದು. ಈಗಾಗಲೇ ತೇಜಸ್, ನಿತ್ಯಾ ಹಸೆಮಣೆ ಏರಿದ್ದು, ಕರ್ಣ-ನಿಧಿ ಅದನ್ನು ನೋಡಿ ಖುಷಿಪಟ್ಟ ಪ್ರೋಮೋ ಕೂಡ ಔಟ್ ಆಗಿದೆ. ಹೀಗಾಗಿ ನಿಧಿ ಬಚಾವ್ ಆಗಿರುತ್ತಾಳೆ. ನಿಧಿಗೆ ಏನೂ ಆಗಿರೋದಿಲ್ಲ.
ಮುಂದೆ ಏನಾಗುವುದು?
ತೇಜಸ್, ನಿತ್ಯಾ ಹಸೆಮಣೆ ಏರಿದರೂ ಕೂಡ ಈ ಮದುವೆ ನಡೆಯೋದು ಡೌಟ್ ಎಂದು ಕಾಣುತ್ತಿದೆ. ನಿತ್ಯಾ ಅವಕಾಶ ಸಿಕ್ಕಾಗೆಲ್ಲ ಕರ್ಣನನ್ನು ಹೊಗಳುತ್ತಾಳೆ, ನಿತ್ಯಾಗೆ ಅಪಾಯ ಆದರೆ ಸಾಕು, ಕರ್ಣ ಓಡಿ ಬರುತ್ತಾನೆ. ಇದನ್ನೆಲ್ಲ ನೋಡಿ ತೇಜಸ್‌ಗೆ ಅಸೂಯೆ, ಹೊಟ್ಟೆಕಿಚ್ಚು ಶುರುವಾಗಿದೆ. ಹೀಗಾಗಿ ಅವನೇ ಈ ಮದುವೆಗೆ ಅಡ್ಡಿ ಮಾಡಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಕರ್ಣ ಹಾಗೂ ನಿಧಿ ಸುಲಭಕ್ಕೆ ಒಂದಾಗೋದಿಲ್ಲ, ಇವರಿಬ್ಬರು ಒಂದಾಗಲು ಇನ್ನಷ್ಟು ಸಮಸ್ಯೆ ಆಗುವುದು. ಇನ್ನು ತೇಜಸ್, ನಿತ್ಯಾ ಮದುವೆ ಕೂಡ ಈಗ ಆಗೋದು ಡೌಟ್ ಎನ್ನಬಹುದು.
ಪಾತ್ರಧಾರಿಗಳು
ನಿತ್ಯಾ- ನಮ್ರತಾ ಗೌಡ
ಕರ್ಣ-ಕಿರಣ್ ರಾಜ್
ತೇಜಸ್-ಚೇತನ್ ರಾಜ್
ನಿಧಿ-ಭವ್ಯಾ ಗೌಡ


