Karna serial : ಕರ್ಣನಿಗೆ ಮುತ್ತಿಟ್ಟ ನಿಧಿ , ಪ್ರೋಮೋ ನೋಡಿ ಕಳೆದುಹೋದ ಫ್ಯಾನ್ಸ್
Karna serial : ಕರ್ಣ ಸೀರಿಯಲ್ ಈಗ ಮತ್ತೆ ಪ್ರೀತಿ ಟ್ರ್ಯಾಕ್ ಗೆ ಬಂದಿದೆ. ಕುತಂತ್ರಿಗಳ ಕುತಂತ್ರ ವರ್ಕ್ ಆಗ್ಲಿಲ್ಲ. ಹಾಗಾಗಿ ಕರ್ಣ, ನಿಧಿ, ನಿತ್ಯಾ ಹಾಗೂ ತೇಜಸ್ ಪ್ರೀತಿಯ ಅಲೆಯಲ್ಲಿ ತೇಲ್ತಿದ್ದಾರೆ. ಕರ್ಣನ ಪ್ರೇಮ ಸಂಚಿಕೆ ಶುರುವಾಗಿದೆ.

ಹಸಿರು ಸಿರಿಯಲ್ಲಿ ಒಂದಾದ ಜೋಡಿಗಳು
ಕರ್ಣನಿಗೆ ನಿಧಿ ಸಿಕ್ಕಾಗಿದೆ. ನಿತ್ಯಾಗೆ ತೇಜಸ್ ಸಿಕ್ಕಾಗಿದೆ. ಎಲ್ಲರೂ ಒಟ್ಟಾಗಿ ಪ್ರವಾಸ ಹೊರಟಿದ್ದಾರೆ. ತೇಜಸ್ ಹಾಗೂ ನಿತ್ಯಾ ಒಂದ್ಕಡೆ ಪ್ರೇತಿಯಲ್ಲಿದ್ರೆ ಇನ್ನೊಂದು ಕಡೆ ಕರ್ಣ ಸರ್ ಜೊತೆ ನಿಧಿ ರೋಮ್ಯಾನ್ಸ್ ಶುರುವಾಗಿದೆ.
ಕರ್ಣನಿಗೆ ಮುತ್ತಿಟ್ಟ ನಿಧಿ
ಕರ್ಣ ಹಾಗೂ ನಿಧಿ ಇಬ್ಬರು ಬೆಟ್ಟದ ಮೇಲೆ, ಕಾರ್ ಮೇಲೆ ಪ್ರೇಮ ಗೀತೆ ಹಾಡ್ತಿದ್ದಾರೆ. ಜೋಡಿಗಳ ಸಂಗಮ ಕೊನೆಗೂ ಆಗಿದೆ. ಕರ್ಣನ ಹೆಗಲ ಮೇಲೆ ಕೈ ಹಾಕಿದ ನಿಧಿಯನ್ನು ಕರ್ಣ ಮೆಚ್ಚಿಕೊಂಡಿದ್ದಾನೆ. ನಿಧಿಗೆ ಛತ್ರಿ ಹಿಡಿದು ಕರ್ಣ ಹೊರಟ್ರೆ, ಕರ್ಣನ ಸೈಕಲ್ ಹಿಂದೆ ನಿಧಿ ಪ್ರೇತಿಯ ಹಾಡು ಹೇಳ್ತಿದ್ದಾಳೆ. ಕರ್ಣನ ಡ್ರೆಸ್ ಹಾಕಿ ಮಿಂಚಿರುವ ನಿಧಿ, ಕರ್ಣ ಸರ್ ಗೆ ಐ ಲವ್ ಯು ಅಂತ ಮುತ್ತಿಟ್ಟಿದ್ದಾಳೆ.
ಮತ್ತೆ ಒಂದಾದ ನಿತ್ಯಾ – ತೇಜಸ್
ಹೊಟ್ಟೆಯಲ್ಲಿ ಮಗು ಇಟ್ಕೊಂಡು, ತೇಜಸ್ ಕಳೆದುಕೊಂಡು ನೋವಿನಲ್ಲಿದ್ದ ನಿತ್ಯಾ ಹಾಗೂ ತೇಜಸ್ ಬದುಕಲ್ಲಿ ಮತ್ತೆ ಒಲವಿನ ತಂಗಾಳಿ ಬೀಸಿದೆ. ಬೆಟ್ಟದ ಮೇಲೆ ಇಬ್ಬರೂ ತಮ್ಮ ಪ್ರೀತಿ ಹಂಚಿಕೊಂಡಿದ್ದಾರೆ. ನನ್ನ ಜೊತೆಗಿರ್ತೀಯಾ ಅಲ್ವಾ ಅಂತ ನಿತ್ಯಾ, ತೇಜಸ್ ಕೇಳಿದ್ದಾಳೆ.
ಫ್ಯಾನ್ಸ್ ಫುಲ್ ಖುಷ್
ಇಷ್ಟು ದಿನ ನಿತ್ಯಾ – ಕರ್ಣನ ಮದುವೆ ಜಗ್ಗಾಟ, ತೇಜಸ್ ಹಾಗೂ ಕರ್ಣನ ತಂದೆ ರಮೇಶ್ ಕಿರಿಕ್ ವೀಕ್ಷಕರಿಗೆ ಸ್ವಲ್ಪ ಬೇಸರ ತರಿಸಿತ್ತು. ಮತ್ತೆ ಯಾವಾಗ ಇವರು ಒಂದಾಗ್ತಾರೆ ಎನ್ನುವ ಪ್ರಶ್ನೆ ಕಾಡಿತ್ತು. ಆದ್ರೆ ಈಗ ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಕರ್ಣ ಹಾಗೂ ನಿಧಿ ರೋಮ್ಯಾನ್ಸ್ ಪ್ರೋಮೋವನ್ನು ನಾಲ್ಕೈದು ಬಾರಿ ನೋಡಿದ್ದಾಗಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಕರ್ಣ ನಿಧಿ ಜೋಡಿ ನೋಡೋದೇ ಖುಷಿ
ಕರ್ಣ, ನಿಧಿ ಬಿಟ್ಟು ನಿತ್ಯಾಳನ್ನು ಮದುವೆ ಆಗ್ತಾನೆ ಎಂಬುದು ಗೊತ್ತಾದಾಗ ಫ್ಯಾನ್ಸ್ ಕೋಪಗೊಂಡಿದ್ರು. ಆದ್ರೆ ನಿರ್ದೇಶಕರು ಅದ್ರಲ್ಲಿ ಸ್ವಲ್ಪ ಟ್ವಿಸ್ಟ್ ಇಟ್ಟು ವೀಕ್ಷಕರನ್ನು ನಿರಾಳ ಮಾಡಿದ್ರು. ಕರ್ಣ, ನಿತ್ಯಾಗೆ ತಾಳಿ ಕಟ್ಟಿರಲಿಲ್ಲ. ಆದ್ರೆ ನಿತ್ಯಾ ಪ್ರೆಗ್ನೆಂಟ್ ಎಂಬ ವಿಷ್ಯ ಅವನನ್ನು ಸ್ವಲ್ಪ ಟೆನ್ಸನ್ ಗೆ ನೂಕಿತ್ತು. ಎಷ್ಟೇ ಸಮಸ್ಯೆ ಬಂದ್ರೂ ನಿತ್ಯಾ ಬೆಂಬಲಕ್ಕೆ ನಿಂತಿದ್ದ ಕರ್ಣನಿಗೆ ಈಗ ಪ್ರೀತಿ ಸಿಗುವ ಸಮಯ ಬಂದಂಗಿದೆ. ನಿತ್ಯಾಗೆ ತೇಜಸ್ ಸಿಕ್ಕಾಗಿದೆ. ಆದ್ರೆ ಕತ್ತಿ ಮಸೆಯುವವರ ಕೆಲ್ಸ ಜೋರಾಗಿ ನಡೆದಿದೆ. ತೇಜಸ್ ಗೆ ಕರ್ಣನ ಬಗ್ಗೆ, ಕರ್ಣನಿಗೆ ತೇಜಸ್ ತಂದೆ ತಾಯಿ ಬಗ್ಗೆ ತಪ್ಪು ಮಾಹಿತಿ ರವಾನೆಯಾಗಿದೆ. ಇದ್ರಿಂದ ಇಬ್ಬರೂ ಗಲಾಟೆ ಮಾಡ್ಕೊಳ್ತಾರೆ ಅಂದ್ಕೊಂಡಿದ್ದವರ ಪ್ಲಾನ್ ಸದ್ಯ ತಲೆಕೆಳಗಾಗಿದೆ.
ಮತ್ತೆ ದೂರ ಹೋಗ್ತಾನಾ ತೇಜಸ್
ನಿತ್ಯಾ ಪ್ರೆಗ್ನೆಂಟ್ ಎಂಬ ವಿಷ್ಯ ತಿಳಿದ ಮೇಲೆ ಕರ್ಣ, ನಿತ್ಯಾಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ತಿದ್ದಾನೆ. ವೈದ್ಯನಾಗಿ ತನ್ನ ಕರ್ತವ್ಯ ಮಾಡ್ತಿದ್ದಾನೆ. ಟ್ರಿಪ್ ವೇಳೆ ನಿತ್ಯಾಗಾಗಿಯೇ ಸ್ಪೇಷಲ್ ಅಡುಗೆ ಮಾಡಿ ತಂದಿದ್ದಾನೆ. ಆದ್ರೆ ಇದು ಯಾಕೋ ತೇಜಸ್ ಮನಸ್ಸನ್ನು ಘಾಸಿಗೊಳಿಸಿದಂತಿದೆ. ಕರ್ಣನ ಅತಿಯಾದ ಕಾಳಜಿಯೇ ಪ್ರೀತಿಗೆ ಮುಳುವಾಗುತ್ತಾ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

