Asianet Suvarna News Asianet Suvarna News

ಕನ್ನಡತಿ ಸೀರಿಯಲ್: ಶಿಕ್ಷಣದ ಬಗ್ಗೆ ಅರಿವು ಮೂಡಿಸೋ ಭುವಿ ಮಾತು ಸಿಕ್ಕಾಪಟ್ಟೆ ವೈರಲ್‌!

ಕನ್ನಡತಿ ಸೀರಿಯಲ್‌ನಲ್ಲಿ ಶಿಕ್ಷಣದ ಬಗ್ಗೆ, ಕನ್ನಡದ ಬಗ್ಗೆ ಅರಿವು ಮೂಡಿಸುವ ಎಪಿಸೋಡ್ ಪ್ರಸಾರವಾಗಿದೆ. ಇದಕ್ಕೆ ಸೋಷಿಯಲ್ ಮೀಡಿಯಾ್ಲ್ಲಿ ಸಿಕ್ಕಾಪಟ್ಟೆ ಒಳ್ಳೆ ಕಮೆಂಟ್ಸ್ ಬಂದಿವೆ.

Kannadathi serial getting good response
Author
First Published Jan 7, 2023, 1:35 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಕನ್ನಡತಿ ಸೀರಿಯಲ್‌ ಗೆ ಆರಂಭದಿಂದಲೂ ದೊಡ್ಡ ಸಂಖ್ಯೆಯ ವೀಕ್ಷಕರು ಇದ್ದಾರೆ. ಈಗ ಈ ಸೀರಿಯಲ್ ಮುಕ್ತಾಯದತ್ತ ಸಾಗುತ್ತಿದೆ. ಜನವರಿ ಕೊನೆ ಅಥವಾ ಫೆಬ್ರವರಿ ಆರಂಭದ ವಾರದಲ್ಲಿ ಈ ಸೀರಿಯಲ್ ಮುಕ್ತಾಯವಾಗಲಿದೆ. ಈ ಸೀರಿಯಲ್ ಮುಕ್ತಾಯ ಮಾಡ್ತಿರೋದು ವೀಕ್ಷಕರಿಗೆ ಒಂಚೂರೂ ಇಷ್ಟ ಇಲ್ಲ. ಇಷ್ಟೊಳ್ಳೆ ಸೀರಿಯಲ್‌ ಅನ್ನು ನಿಲ್ಲಿಸಬೇಡಿ ಅಂತ ಜನ ಮನವಿ ಮಾಡ್ತಾನೇ ಇದ್ದಾರೆ. ಆದರೆ ಈ ಸೀರಿಯಲ್‌ನಲ್ಲಿ ಭುವಿ ಪಾತ್ರ ಮಾಡೋ ರಂಜನಿ ರಾಘವನ್ ಹೇಳುವಂತೆ ಸೀರಿಯಲ್‌ ಉತ್ತಮ ಪ್ರತಿಕ್ರಿಯೆ ಬರುತ್ತಿರುವಾಗಲೇ ನಿಂತರೆ ಒಳ್ಳೆಯದು. ಬಹುಶಃ ಈ ಸೀರಿಯಲ್ ಟೀಮ್ ನಿರ್ಧಾರವೂ ಅದೇ ಏನೋ. ಸ್ವೀಟು ಮುಗೀತಿರುವಾಗಲೇ ಜಾಸ್ತಿ ರುಚಿ ಅಂತಾರಲ್ವಾ, ಹಾಗೇ ಸೀರಿಯಲ್‌ ಮುಕ್ತಾಯದ ಹಂತಕ್ಕೆ ಬರುತ್ತಿರುವಾಗ ಒಳ್ಳೊಳ್ಳೆ ಅಂಶಗಳ ಮೂಲಕ ಗಮನ ಸೆಳೀತಿದೆ. ಇದೀಗ ಇವತ್ತಿನ ಶಿಕ್ಷಣದ ಸ್ಥಿತಿ ಬಗ್ಗೆ ಬೆಳಕು ಚೆಲ್ಲೋ ಪ್ರಯತ್ನವನ್ನ ಈ ಸೀರಿಯಲ್ ಮಾಡಿದೆ. ಇಂಥಾ ಗಂಭೀರ ವಿಷಯಗಳನ್ನು ಸೀರಿಯಲ್‌ನಲ್ಲಿ ತಂದು, ಅದನ್ನ ಬಹಳ ಇಂಟರೆಸ್ಟಿಂಗ್ ಆಗಿ ಹೇಳಿರೋ ರೀತಿ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಇಷ್ಟೊಳ್ಳೆ ಅಂಶಗಳನ್ನು ಮೊದಲೇ ತರಬಾರದಿತ್ತಾ ಅನ್ನೋ ಪ್ರಶ್ನೆಗಳೂ ಕೇಳಿ ಬರ್ತಿವೆ.

ಕನ್ನಡತಿ ಸೀರಿಯಲ್‌ನಲ್ಲಿ ಅಷ್ಟಕ್ಕೂ ಶಿಕ್ಷಣದ ಬಗ್ಗೆ ಭುವಿ ಹೇಳೋ ಸನ್ನಿವೇಶ ಏನು ಅದೂ ಇಂಟರೆಸ್ಟಿಂಗ್. ಭುವನೇಶ್ವರಿ ಅಥವಾ ಸೌಪರ್ಣಿಕಾ ಈಗ ಮಾಲಾ ಸಂಸ್ಥೆಗಳ ಮುಖ್ಯಸ್ಥೆ. ತಾನು ಪ್ರೀತಿಸಿ ಮದುವೆ ಆದ ಹುಡುಗ ಹರ್ಷ, ಹಸಿರುಪೇಟೆಯ ಈ ಪ್ರಬುದ್ದ ಹುಡುಗಿಗೆ ತನ್ನ ಸಮಸ್ತ ಆಸ್ತಿಯನ್ನೂ ಧಾರೆ ಎರೆದ ಮಾಲಾ ಸಂಸ್ಥೆಗಳ ಒಡತಿ ರತ್ನಮಾಲಾರ ಪ್ರೀತಿಪಾತ್ರಳು. ಇದೀಗ ರತ್ನಮಾಲಾ ಕೊನೆಯುಸಿರೆಳೆದ ಮೇಲೆ ಅವರ ಸಂಸ್ಥೆಗಳನ್ನು ಭುವಿಯೇ ಮುನ್ನಡೆಸುತ್ತಿದ್ದಾಳೆ. ಹರ್ಷ ತನ್ನ ಪ್ರೀತಿಯ ಹುಡುಗಿಗೆ ಬೆಂಗಾವಲಾಗಿ ನಿಂತಿದ್ದಾನೆ. ಭುವಿ ಮಾಲಾ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವಾಗ ಅಲ್ಲಿ ಕಾಲೇಜಿನ ಸಿಬ್ಬಂದಿ ಹೆಚ್ಚಿನ ಸಂಬಳ ಬೇಕು, ಹೆಚ್ಚಿನ ಸ್ಥಾನ ಬೇಕು ಅಂತ ಒತ್ತಾಯಿಸಿ ಪ್ರತಿಭಟನೆ ಮಾಡ್ತಿದ್ದಾರೆ. ಅಂಥವರ ಬಳಿ ಹೋಗಿ ಭುವಿ ಅವರ ಸಬ್ಜೆಕ್ಟ್ ಬಗ್ಗೆ ಕೇಳಿದರೆ ಅವರಿಗೆ ಆ ಬಗ್ಗೆ ಯಾವ ಜ್ಞಾನವೂ ಇಲ್ಲ. ಅವರಿಗೆ ಟೆಸ್ಟ್ ನೀಡಿ ಅವರು ಅದರಲ್ಲಿ ಪಾಸಾದ್ರೆ ಮಾತ್ರ ಅವರು ಕೇಳ್ತಿರೋ ಸವಲತ್ತು ನೀಡೋದಾಗಿ ಭುವಿ ಹೇಳಿದ್ದಾಳೆ.

ಕನ್ನಡತಿ ಸೀರಿಯಲ್ ಜನವರಿ ಕೊನೆಯಲ್ಲಿ ವೈಂಡ್ ಅಪ್ ಆಗುತ್ತಾ?

ಇಂಥಾ ಸಮಯದಲ್ಲಿ ಕುಮಾರವ್ಯಾಸನ ಬಗ್ಗೆ ಸೊಗಸಾಗಿ ಪಾಠ ಮಾಡಿದ್ದಾಳೆ ಭುವಿ. ಅವಳ ಜ್ಞಾನ(Knowladge) ಕಂಡು ಎಲ್ಲರೂ ಒಂದು ಕಡೆ ದಂಗಾದರೆ ಈ ಕಾಲೇಜಿನ ಪ್ರಾಂಶುಪಾಲೆ ಮಾತ್ರ ತನ್ನ ಹಠಿಮಾರಿತನವನ್ನು ತೋರಿಸಿದ್ದಾರೆ. ಈಗ ಮನೆಪಾಠ ಮಾಡೋದ್ರಿಂದಲೇ ಟೀಚರ್ಸ್ ಹೆಚ್ಚಿನ ದುಡ್ಡು ಮಾಡ್ತಾರೆ, ಟೆಸ್ಟ್ ಅಂತೆಲ್ಲ ಇಟ್ಟರೆ ಎಲ್ಲರೂ ಕಾಲೇಜು ಬಿಟ್ಟು ಹೋಗ್ತಾರೆ. ಯಾವ್ದೋ ಹಳ್ಳಿಯಲ್ಲಿ ಕನ್ನಡ ಪಾಠ ಮಾಡ್ತಿದ್ದವರಿಗೆ ಇದೆಲ್ಲ ಅರ್ಥ ಆಗಲ್ಲ ಅಂತ ಭುವಿಯನ್ನು ಬೆದರಿಸಿದ್ದಾರೆ. ಪರೋಕ್ಷವಾಗಿ ಆಕೆಗೆ ವ್ಯಂಗ್ಯವಾದ ಉತ್ತರವನ್ನೂ ನೀಡಿದ್ದಾರೆ. ಅವರ ಮನಸ್ಥಿತಿ, ವಾಸ್ತವ ಸ್ಥಿತಿ ಕಂಡು ಭುವಿಗೆ ಆಘಾತ ಆಗಿದೆ. ಆಕೆಯ ಮುಂದಿನ ನಿರ್ಧಾರ ಏನು ಅನ್ನೋದಕ್ಕೆ ಜನ ಕಾದು ನೋಡ್ತಿದ್ದಾರೆ.

ಈ ಎಪಿಸೋಡ್ ಬಗ್ಗೆ ಸೋಷಿಯಲ್ ಮೀಡಿಯಾ(Social media)ದಲ್ಲಿ ಜನ ಬಹಳ ಪ್ರಜ್ಞಾವಂತಿಕೆಯಿಂದ ಕಾಮೆಂಟ್ ಮಾಡ್ತಿದ್ದಾರೆ. ಒಂದು ಕಡೆ ಈ ಸೀರಿಯಲ್(Serial) ನಿಲ್ಲಿಸಬೇಡಿ ಅಂದರೆ ಇನ್ನೊಂದು ಕಡೆ ಇಂಥಾ ಎಪಿಸೋಡ್‌ಗಳು ಮೊದಲೇ ಬರ್ಬೇಕಿತ್ತು. ಮಾಮೂಲಿ ಸೀರಿಯಲ್‌ಗಳ ರೀತಿ ಡ್ರಾಮಾ ತರೋ ಬದಲು ಇಂಥಾ ಸಂಗತಿಗಳನ್ನೂ ಅಲ್ಲಲ್ಲಿ ತರಬಹುದಿತ್ತು ಅನ್ನೋ ರೀತಿಯ ಮಾತುಗಳೂ ಕೇಳಿಬರುತ್ತಿವೆ.

ರಂಜನಿ ರಾಘವನ್ ಈ ಸೀರಿಯಲ್‌ನಲ್ಲಿ ಭುವಿಯ ಪಾತ್ರ ನಿರ್ವಹಿಸಿದ್ದಾರೆ. ಅವರ ನಟನೆಗೂ ಪ್ರಶಂಸೆ ವ್ಯಕ್ತವಾಗಿದೆ. ಕಿರಣ್ ರಾಜ್ ಹರ್ಷನಾಗಿ ಮೋಡಿ ಮಾಡಿದ್ದಾರೆ. ರತ್ನಮಾಲಾ ಪಾತ್ರದಲ್ಲಿ ಚಿತ್ಕಳಾ ಬಿರಾದಾರ್ ನಟಿಸಿದ್ದಾರೆ. ಯಶವಂತ್ ಪಾಂಡು ನಿರ್ದೇಶನ, ವಿಕಾಸ್ ನೇಗಿಲೋಣಿ ಚಿತ್ರಕಥೆ ಈ ಸೀರಿಯಲ್‌ಗಿದೆ.

ಟ್ರಿಡೆಷನಲ್ ಡ್ರೆಸ್ಸಲ್ಲೂ ಕನ್ನಡತಿಯ ವರೂಧಿನಿ ಎಷ್ಚು ಚೆಂದ ಕಾಣಿಸ್ತಾರೋ ನೋಡಿ!

Follow Us:
Download App:
  • android
  • ios