ಕನ್ನಡತಿ ಸೀರಿಯಲ್ ಜನವರಿ ಕೊನೆಯಲ್ಲಿ ವೈಂಡ್ ಅಪ್ ಆಗುತ್ತಾ?
ಕನ್ನಡತಿ ಸೀರಿಯಲ್ ಮುಕ್ತಾಯದತ್ತ ಸಾಗುತ್ತಿದೆ ಅನ್ನೋದು ಬಹುದಿನಗಳಿಂದ ಕೇಳಿ ಬರ್ತಿರೋ ಮಾತು. ಇದೀಗ ಆ ಮಾತು ನಿಜವಾಗೋದ್ರಲ್ಲಿದೆ. ಜನವರಿ ಕೊನೆಯಲ್ಲಿ ಈ ಸೀರಿಯಲ್ ವೈಂಡ್ ಅಪ್ ಆಗುತ್ತೆ ಅನ್ನೋ ಮಾತು ಈಗ ಗುಟ್ಟಾಗಿ ಉಳಿದಿಲ್ಲ.
ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ಏಳೂವರೆಗೆ ಪ್ರಸಾರವಾಗ್ತಿರೋ ಸೀರಿಯಲ್ ಕನ್ನಡತಿ. ಸದ್ಯಕ್ಕೀಗ ಎಲ್ಲೆಲ್ಲೂ ಈ ಸೀರಿಯಲ್ ವೈಂಡ್‌ಅಪ್ ಆಗ್ತಿದೆ ಅನ್ನೋ ಸುದ್ದಿ ಹರಡ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆಯೂ ಕನ್ನಡತಿ ಸೀರಿಯಲ್ ಮುಕ್ತಾಯವಾಗುತ್ತೆ ಅದರ ಬದಲಿಗೆ ಹೊಸ ಸೀರಿಯಲ್‌ಗಳು ಬರುತ್ತವೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಹರ್ಷ ಭುವಿ ಮದುವೆ ಆಗಿ ಅಮ್ಮಮ್ಮ ಕೊನೆಯಾಗುತ್ತಲೇ ಅವರ ಸ್ಥಾನಕ್ಕೆ ಭುವಿ ಬಂದು ಸೀರಿಯಲ್ ಅನ್ನು ಕೊನೆಗೊಳಿಸ್ತಾರೆ ಅನ್ನೋದು ಬಹಳ ಚರ್ಚೆಯಲ್ಲಿತ್ತು. ಬಹಳ ಜನ ವೀಕ್ಷಕರು ಇದನ್ನು ಬೆಂಬಲಿಸಿದರು. ಈಗ ಈ ಸೀರಿಯಲ್ ಮತ್ತೊಂದು ಘಟ್ಟಕ್ಕೆ ಬಂದು ನಿಂತಿದೆ. ಅಮ್ಮಮ್ಮನ ಸ್ಥಾನಕ್ಕೆ ಭುವಿ ಬಂದಿದ್ದಾಳೆ. ರತ್ನಮಾಲಾ ತನ್ನೆಲ್ಲ ಆಸ್ತಿಯನ್ನೂ ಭುವಿಯ ಹೆಸರಿಗೆ ಬರೆದಿದ್ದಾರೆ. ಜೊತೆಗೆ ಷರತ್ತನ್ನೂ ವಿಧಿಸಿದ್ದಾರೆ. ಇನ್ನೂ ಐದು ವರ್ಷ ಭುವಿ ಈ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ.
ಈ ಸೀರಿಯಲ್‌ನ ಕಥೆ ಇದ್ದದ್ದೇ ಹೀಗೆ. ಬರಿಗೈಯಲ್ಲಿ ಮಹಾನಗರಕ್ಕೆ ಬಂದು ಮಾಲಾ ಕಫೆಯನ್ನು ಕಟ್ಟಿ ಬೆಳೆಸಿ ಬಹಳ ಎತ್ತರಕ್ಕೆ ಕೊಂಡೊಯ್ದು ಅದರ ಜೊತೆಗೆ ಮಾಲಾ ಶಿಕ್ಷಣ ಸಂಸ್ಥೆಗಳನ್ನೂ ಕಟ್ಟಿದವರು ರತ್ನಮಾಲಾ. ತನ್ನ ಮುಂಗೋಪಿ ಮಗ ಒಳ್ಳೆಯವನೇ ಆದರೂ ಈ ದೊಡ್ಡ ಸಾಮ್ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸೋ ಬಗ್ಗೆ ರತ್ನಮಾಲಾಗೆ ಅನುಮಾನಗಳಿದ್ದವು. ಹೀಗಾಗಿ ಅವರು ಇದಕ್ಕೆ ಯೋಗ್ಯ ವ್ಯಕ್ತಿಯನ್ನು ಹುಡುಕುತ್ತಿದ್ದರು. ಆಗ ಸಿಕ್ಕವಳೇ ತನ್ನೂರು ಹಸಿರುಪೇಟೆಯ ಹುಡುಗಿ, ಕನ್ನಡ ಟೀಚರ್ ಭುವನೇಶ್ವರಿ ಅರ್ಥಾತ್ ಸೌಪರ್ಣಿಕಾ. ಆಕೆ ತನ್ನ ಮಗನಿಗೆ ಪರಿಚಯವಾಗುವ ಮೊದಲೇ ಅದ್ಯಾವುದೋ ಧೈರ್ಯದಿಂದ ಅವಳ ಹೆಸರಿಗೆ ತನ್ನ ಸಮಸ್ತ ಆಸ್ತಿಯನ್ನೂ ಬರೆದಿದ್ದರು ರತ್ನಮಾಲಾ.
Lakshana: ನಾನು ನಕ್ಷತ್ರನ್ನ ಕೊಂದು ಸಾಧಿಸೋದಾದ್ರೂ ಏನು! ಕರಗಿ ಹೋಯ್ತು ಮೌರ್ಯನ ಸೇಡು
ಇತ್ತ ತನ್ನ ಅಮ್ಮನ ಬಳಿಕ ಆಕೆಯ ಎಲ್ಲ ಆಸ್ತಿಗೆ ತಾನೇ ವಾರಸುದಾರ ಎಂದುಕೊಂಡಿದ್ದ ರತ್ನಮಾಲಾ ಮಗ ಹರ್ಷನಿಗೆ ಈ ಆಸ್ತಿಯೆಲ್ಲ ಸೌಪರ್ಣಿಕಾ ಅನ್ನೋ ಕನ್ನಡ ಟೀಚರ್ ಹೆಸರಿಗೆ ವರ್ಗವಾಗಿದೆ ಅಂತ ಕರೆಕ್ಟಾಗಿ ಗೊತ್ತಾದಾಗ ಆತನಿಗೆ ಆ ಹುಡುಗಿಯ ಪರಿಚಯವಾಗಿ, ಸ್ನೇಹ ಪ್ರೇಮವಾಗಿ ಅವರಿಬ್ಬರ ಮದುವೆಯೂ ಆಗಿ ಬಿಟ್ಟಿತ್ತು. ಅಷ್ಟೊತ್ತಿಗೆ ರತ್ನಮಾಲಾ ಅವರೂ ಇಹಲೋಕ ತ್ಯಜಿಸಿದ್ದರು. ಇದೀಗ ಸೀರಿಯಲ್ ಮರಳಿ ಮೂಲ ಟ್ರ್ಯಾಕ್‌ಗೆ ಬಂದಿದೆ. ಮಾಲಾ ಕೆಫೆಗೆ ಭುವನೇಶ್ವರಿ ಹೊಸ ಒಡತಿ ಆಗಿದ್ದಾಳೆ. ಹರ್ಷ ತನ್ನ ಇಗೋ ಸೈಡಿಗಿಟ್ಟು ಆಕೆಗೆ ಸ್ವಾಗತ ಕೋರುತ್ತಿದ್ದಾನೆ. ಇತ್ತ ವರೂಧಿನಿ ಮತ್ತು ಸಾನ್ಯಾ ಇವರಿಬ್ಬರ ನಡುವೆ ಬಿರುಕು ತರಲು ಡಿವೋರ್ಸ್ ಪೇಪರ್ ಕಳುಹಿಸಿದ್ದಾರೆ. ಮಾಲಾ ಸಂಸ್ಥೆಗಳ ಹೊಸ ಒಡತಿಗೆ ಭರ್ಜರಿ ಸ್ವಾಗತ ಕೋರುವ ಇರಾದೆಯಲ್ಲಿದ್ದ ಹರ್ಷನಿಗೆ ಇದೀಗ ಡಿವೋರ್ಸ್ ಪೇಪರ್ ಆಘಾತ ತಂದಿದೆ.
ಕತೆ ಹೀಗೆ ಸಾಗುತ್ತಿರುವಾಗ ಈ ಸೀರಿಯಲ್ ವೈಂಡ್ ಅಪ್ ಆಗುತ್ತೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಭುವಿ ಅಧಿಕಾರ(Power)ವನ್ನು ತನ್ನ ಕೈಗೆ ತೆಗೆದುಕೊಂಡು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಾ ಹೋಗುತ್ತಾಳೆ. ಅಮ್ಮಮ್ಮನ ಸ್ಥಾನಕ್ಕೆ ಸಮರ್ಥ ಉತ್ತರಾಧಿಕಾರಿಯಾಗ್ತಾಳೆ. ಇತ್ತ ಹರ್ಷ ಮತ್ತು ಅವಳ ನಡುವೆ ಎಷ್ಟೇ ವಿಷ ಹಿಂಡುವ ಪ್ರಯತ್ನ ನಡೆದರೂ ಅವರಿಬ್ಬರದೂ ನಿಷ್ಕಲ್ಮಶ ಪ್ರೇಮ(Love)ವಾದ ಕಾರಣ ಅದು ಖಂಡಿತಾ ಮುರಿದು ಬೀಳಲ್ಲ. ಅಲ್ಲಿಗೆ ಸೀರಿಯಲ್ ವೈಂಡ್‌ಅಪ್ ಆಗುತ್ತೆ ಅನ್ನೋ ಲೆಕ್ಕಾಚಾರ ವೀಕ್ಷಕರದು.
ದೇವರು ಕೊಟ್ಟ ದೊಡ್ಡ ವರ ನನ್ನಪ್ಪ; ತಂದೆ ನೆನೆದು ಕಣ್ಣೀರಿಟ್ಟ ನಟಿ, ನಿರೂಪಕಿ ಸುಷ್ಮಾ ರಾವ್
ಊಹೆ(Guess)ಯಂತೇ ನಡೆದರೆ ಜನವರಿ ಕೊನೆ ಅಥವಾ ಫೆಬ್ರವರಿ ಮಧ್ಯಭಾಗದಲ್ಲಿ ಈ ಸೀರಿಯಲ್ ವೈಂಡ್‌ಅಪ್(Windup) ಆಗಲಿದೆ. ಆದರೆ ಉತ್ತಮ ರೆಸ್ಪಾನ್ಸ್ ಇರುವ ಈ ಸೀರಿಯಲ್‌ನ ನಿಜಕ್ಕೂ ನಿಲ್ಲಿಸ್ತಾರ ಅಥವಾ ಕಥೆಗೆ ಹೊಸ ಎಳೆ ಹುಡುಕುತ್ತಾರ ಅನ್ನೋದನ್ನು ಕಾದು ನೋಡಬೇಕಿದೆ.
ಇತ್ತ ಸೋಷಿಯಲ್ ಮೀಡಿಯಾಗಳಲ್ಲೂ ಈ ಸೀರಿಯಲ್ ಜನವರಿ ಕೊನೆಯಲ್ಲಿ ಮುಕ್ತಾಯವಾಗುತ್ತೆ ಅನ್ನೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಸೀರಿಯಲ್ ಟೀಮ್(Serial team) ಈ ಬಗ್ಗೆ ಮೌನವಾಗಿದೆ.