ಕನ್ನಡತಿ ನಟಿ ವರುಧಿನಿಯನ್ನು ಮಾಡರ್ನ್ ಆಗಿ ನೋಡಿದ್ದೀರಿ, ಟ್ರೆಡೀಷನಲ್ ಆಗಿ ನೋಡಿದ್ದೀರಾ ? ಸಿಂಪಲ್ ಲಂಗ ದಾವಣಿಯಲ್ಲಿ ಸಾರಾ ಎಷ್ಟು ಮುದ್ದಾಗಿ ಕಾಣ್ತಿದ್ದಾರೆ ನೋಡಿ

ಕನ್ನಡತಿ ಧಾರವಾಹಿಯಲ್ಲಿ ಸಖತ್ ಮಾಡರ್ನ್ ಆಗಿ ಕಾಣಿಸಿಕೊಳ್ಳೋ ಪಾತ್ರ ವರುಧಿನಿ ಅಂದ್ರೆ ಸಾರಾ ಅಣ್ಣಯ್ಯ. ಅಂದ ಹಾಗೆ ಸಾರಾ ಸೀರಿಯಲ್ ಮಾತ್ರವಲ್ಲ, ನಿಜ ಜೀವನದಲ್ಲೂ ಸಖತ್ ಮಾಡರ್ನ್ ಹುಡುಗಿ. ಹಾಗಂತ ಟ್ರೆಡೀಷನ್ ಇಷ್ಟಪಡದವರೇನು ಅಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ನಟಿಯ ಲಂಗ-ದಾವಣಿಯ ಸಿಂಪಲ್ ಫೋಟೋ ಒಂದು ನೆಟ್ಟಿಗರ ಮನ ಗೆದ್ದಿದೆ. ಈ ಮೂಲಕ ಬಿಕಿನಿಗೂ ಸೈ, ಸೀರೆಗೂ ಸೈ ಅನಿಸಿಕೊಂಡಿದ್ದಾರೆ ಈಕೆ.

View post on Instagram

ನಟಿ ಬಿಕಿನಿ ಫೋಟೋ ಶೇರ್ ಮಾಡಿದಾಗೆಲ್ಲ ಬಹುತೇಕ ನೆಗೆಟಿವ್ ಕಮೆಂಟ್‌ಗಳೇ ಬರುತ್ತವೆ. ಆದರೆ ಈಗಿನ ದಾವಣಿ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಬೇಸಗೆ ಬಿಸಿ ಹೆಚ್ಚಿಸ್ತಿದ್ದಾರೆ ಸಾರಾ..! ಸನ್‌ಶೈನ್ ಎಲ್ರಿಗೂ ಇಷ್ಟ ಎಂದ ವರುಧಿನಿ

ಕಪ್ಪು ಲಂಗ, ನೇರಳೆ ಬ್ಲೌಸ್ ಅದಕ್ಕೊಂದು ಚಿನ್ನದ ಬಣ್ನದ ದಾವಣಿ. ಸಿಂಪಲ್ ಆಗೊಂದು ಸರ, ಪುಟ್ಟದೊಂದು ಝುಮುಕಿ, ಕಿರುನಗೆ ಸಾರಾ ಲುಕ್ ಕಂಪ್ಲೀಟ್ ಮಾಡಿದೆ.